logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ; ನಾನು ಈ ಮನೆಯ ಯಾವ ನಿಯಮವನ್ನೂ ಫಾಲೋ ಮಾಡಲ್ಲ ಎಂದ ಚೈತ್ರಾ ಕುಂದಾಪುರ

Bigg Boss Kannada 11: ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ; ನಾನು ಈ ಮನೆಯ ಯಾವ ನಿಯಮವನ್ನೂ ಫಾಲೋ ಮಾಡಲ್ಲ ಎಂದ ಚೈತ್ರಾ ಕುಂದಾಪುರ

Suma Gaonkar HT Kannada

Dec 14, 2024 07:01 AM IST

google News

ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ

    • ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ವಾರಾಂತ್ಯಕ್ಕೆ ಒಬ್ಬರು ಕಳಪೆ ಪಡೆದುಕೊಂಡು ಜೈಲಿಗೆ ಹೋಗಲೇಬೇಕು. ಆದರೆ ಈ ಬಾರಿ ಇಬ್ಬರಿಗೆ ಕಳಪೆ ಪಟ್ಟ ಸಿಕ್ಕಿದೆ. ಹಾಗಾಗಿ ತ್ರಿವಿಕ್ರಂ ಮತ್ತು ಚೈತ್ರಾ ಕುಂದಾಪುರ ಒಟ್ಟಿಗೆ ಜೈಲಿಗೆ ಹೋಗಿದ್ದಾರೆ. 
ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ
ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ

ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ವಾರಾಂತ್ಯಕ್ಕೆ ಒಬ್ಬರು ಕಳಪೆ ಪಡೆದುಕೊಂಡು ಜೈಲಿಗೆ ಹೋಗಲೇಬೇಕು. ಮನೆಯವರೆಲ್ಲ ಸೇರಿ ಅದನ್ನು ನಿರ್ಧಾರ ಮಾಡಬೇಕು. ಯಾರು ಈ ವಾರ ಚೆನ್ನಾಗಿ ಆಟ ಆಡಿಲ್ಲ ಎನ್ನುವುದನ್ನು ನಿರ್ಧರಿಸಿ ಒಬ್ಬರನ್ನು ಜೈಲಿಗೆ ಕಳಿಸಬೇಕಿತ್ತು. ಆದರೆ ಈ ಬಾರಿ ಇಬ್ಬರಿಗೆ ಕಳಪೆ ಸ್ಥಾನ ಸಿಕ್ಕಿದೆ. ನಾಲ್ಕು ಜನ ಒಬ್ಬರ ಹೆಸರನ್ನು ಸೂಚಿಸಿದರೆ ಇನ್ನು ನಾಲ್ಕು ಜನ ಬೇರೊಬ್ಬನ ಹೆಸರು ಸೂಚಿಸಿದ್ದಾರೆ. ಅದರಲ್ಲಿ ಒಬ್ಬರು ಚೈತ್ರಾ ಕುಂದಾಪುರ, ಇನ್ನೊಬ್ಬರು ತ್ರಿವಿಕ್ರಂ.

ಹೀಗಿರುವಾಗ ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಆದರೆ ಕಳಪೆ ಸ್ಥಾನ ಪಡೆದುಕೊಂಡಿರುವುದು ಇವರಿಗೆ ಸಮಾಧಾನ ಇಲ್ಲ. ಇಬ್ಬರನ್ನೂ ಜೈಲಿಗೆ ಕಳಿಸಲಾಗಿದೆ. ಸುರೇಶ್ ಅವರು ತ್ರಿವಿಕ್ರಂ ಅವರನ್ನು ಕಳಪೆ ಎಂದು ಹೇಳುತ್ತಾರೆ. ಅದನ್ನೆ ಪದೇ ಪದೇ ಹೇಳಲು ಆರಂಭಿಸಿದಾಗ ತ್ರಿವಿಕ್ರಂ ಅವರಿಗೆ ಕೋಪ ಬರುತ್ತದೆ. ಯಾಕೆ ಈ ರೀತಿ ಮಾಡ್ತಾ ಇದ್ದೀರಿ? ಎಂದು ಪ್ರಶ್ನೆ ಮಾಡುತ್ತಾರೆ. ಮತ್ತು ಈ ರೀತಿ ಅದನ್ನೆ ಹೇಳ್ತಾ ಇರೋದು ಸರಿ ಅಲ್ಲ ಎಂದು ಹೇಳುತ್ತಾರೆ.

ಶಿಶಿರ್ ಅವರು ಈ ಬಾರಿ ಕಳಪೆ ಕೊಡುವಾಗ ತ್ರಿವಿಕ್ರಂ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ವಾರ ತ್ರಿವಿಕ್ರಂ ಅವರಲ್ಲಿ ಎನರ್ಜಿ ಇರಲಿಲ್ಲ ಎಂದು ಅವರು ಕಾರಣ ನೀಡಿದ್ದಾರೆ. ಹನುಮಂತು ಅವರು ಚೈತ್ರಾ ಅವರಿಗೆ ನೀಡಿದ್ದಾರೆ. ಇನ್ನು ಉಗ್ರಂ ಮಂಜು ಅವರು ಸಹ ಚೈತ್ರಾ ಅವರಿಗೆ ಕಳಪೆ ನೀಡಿದ್ದಾರೆ. ನನಗೆ ಗೊತ್ತು ನೀವೆಲ್ಲ ಪ್ಲ್ಯಾನ್ ಮಾಡಿಕೊಂಡೇ ನನಗೆ ಈ ರೀತಿ ಮಾಡ್ತಾ ಇದ್ದೀರಾ ಎಂದು ಚೈತ್ರಾ ರಾಂಗ್ ಆಗಿದ್ದಾರೆ.

ಜೈಲಿಗೆ ಹೋಗುವ ಸಂದರ್ಭದಲ್ಲಿ ನಾನು ಈ ಮನೆಯ ಎಲ್ಲ ರೂಲ್ಸ್‌ಗಳನ್ನು ಬ್ರೇಕ್ ಮಾಡ್ತೀನಿ ನೋಡ್ತಾ ಇರಿ. ಯಾವ ನಿಯಮವನ್ನೂ ಫಾಲೋ ಮಾಡೋದಿಲ್ಲ ಎಂದು ಹೇಳಿದ್ದಾರೆ.

ಹೀಗಿತ್ತು ಜನರ ಅಭಿಪ್ರಾಯ

ಮೋಕ್ಷಿತ ಕಳಪೆ ಆಗ್ಬೇಕಿತ್ತು ಎರಡು ಆಟದಲ್ಲಿ ಅವಳ ಆಟ ಚೆನ್ನಾಗಿರಲಿಲ್ಲ

ಸರಿಯಾಗಿ ನೋಡಿದ್ರೆ ಈ ಸಲ ದೊಡ್ಡ ಕಳಪೆ ಬಿಗ್ ಬಾಸ್

ನಿಜವಾದ ಕಳಪೆ ಮೋಕ್ಷಿತಾ. ಪಾಪ ಬಾಯೀ ಸ್ವಲ್ಪ ಜಾಸ್ತಿ ಅಂತ ಆ ಚೈತ್ರಗೆ ಕೊಡೋದು ಯಪ್ಪಾ ದೇವ್ರೇ
ಇವೆಲ್ಲವೂ ಪ್ರೋಮೋಗಳಿಗೆ ವೀಕ್ಷಕರಿಂದ ಬಂದ ಕಾಮೆಂಟ್ಸ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ