Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಇಷ್ಟಕ್ಕೆಲ್ಲ ಕಾರಣ ಗೌತಮಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಇಷ್ಟಕ್ಕೆಲ್ಲ ಕಾರಣ ಗೌತಮಿ

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಇಷ್ಟಕ್ಕೆಲ್ಲ ಕಾರಣ ಗೌತಮಿ

Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಕ್ಯಾಪ್ಟನ್ ಆಗುವ ಬಯಕೆ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ತನಗೆ ಮೋಸ ಆಗುತ್ತಿದೆ ಎಂದು ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ. ಗೌತಮಿ ಆಟ ಆಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ. ನನಗೆ ಈ ಮನೆಯಲ್ಲಿ ಆಟ ಆಡೋಕೇ ಬಿಡೋದಿಲ್ಲ ಎಂದು ಹೇಳಿದ್ದಾರೆ. ಅದೂ ಅಲ್ಲದೇ ಈ ಬಾರಿ ನಾಮಿನೇಟ್‌ ಆಗಿ ಎಲಿಮಿನೇಷನ್ ಅಂದ್ರೆ ಏನು ಅನ್ನೋದನ್ನು ಸ್ವತಃ ಅನುಭವಿಸಿ ಬಂದಿದ್ದೇನೆ ಎಂದೂ ಸಹ ಹೇಳಿದ್ದಾರೆ. ಹೀಗಿರುವಾಗ ಗೌತಮಿ ಅವರ ಕ್ಯಾಪ್ಟನ್ಸಿಯಲ್ಲಿ ಚೈತ್ರಾ ಅವರಿಗೆ ಆಟ ಆಡಲು ಕೊಟ್ಟಿಲ್ಲ ಎಂದು ಅವರು ಅತ್ತಿದ್ದಾರೆ. ಎಲ್ಲರೂ ಚೈತ್ರಾ ಅವರಿಗೆ ಸಮಾಧಾನ ಮಾಡಿದ್ದಾರೆ.

ಇದು ಗೌತಮಿ ನಿರ್ಧಾರ

ಈ ಮನೆಯಲ್ಲಿ ಯಾರು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂದು ಪ್ರಶ್ನೆ ಕೇಳಿದರೆ ನನ್ನ ಹೆಸರನ್ನೇ ಕೊಡುತ್ತಾರೆ. ಆದರೆ ಆಟ ಆಡಲು ಅವಕಾಶವನ್ನೇ ಕೊಡೋದಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಈಗ ಈ ವಾರ ಯಾರು ಕ್ಯಾಪ್ಟನ್ ಆಗುತ್ತಾರೆ ಎಂದು ನೋಡಲು ಆಟ ಆಡಿಸಲಾಗುತ್ತಿದೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ ಆಟದಿಂದ ಯಾರನ್ನಾದರೂ ಹೊರಗಿಡಿ ಎಂದಾಗ ಗೌತಮಿ ಚೈತ್ರಾ ಅವರನ್ನೇ ಹೊರಗಿಟ್ಟಿದ್ದಾರೆ.

ನೀವು ಈ ಆಟದ ಉಸ್ತುವಾರಿಯಾಗಿ ಎಂದು ಗೌತಮಿ ಹೇಳಿದ್ದರು. ಆಗ ಇಲ್ಲ ನಾನು ಆಟವನ್ನು ಆಡಬೇಕು ಎಂದು ಚೈತ್ರಾ ಕೇಳಿಕೊಂಡಿದ್ದರು. ಗೌತಮಿ ಅವರು ತಮ್ಮ ಕ್ಯಾಪ್ಟನ್ಸಿಯಲ್ಲಿ ತಮ್ಮ ವಿವೇಚನೆಗೆ ತಕ್ಕ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಚೈತ್ರಾ ಕುಂದಾಪುರ ಅಷ್ಟು ಕೇಳಿಕೊಂಡರೂ ಅವರಿಗೆ ಒಂದು ಅವಕಾಶವನ್ನೂ ಮಾಡಿಕೊಟ್ಟಿಲ್ಲ ಎಂದು ಅವರಿಗೆ ಬೇಸರ ಆಗಿದೆ.

ಹೀಗಿದೆ ಜನಾಭಿಪ್ರಾಯ

ಪಾಪ ಅವಳಿಗು ಒಂದು ಚಾನ್ಸ್ ಕೂಡಿ ಆಟ ಆಡೋಕೆ ಯಾಕೆ ಬರೀ ಉಸ್ತುವಾರಿ ಕೂಡುತಿರ ಎಲ್ಲರೂ ಬೇಗ ಮನಗೆ ಕಳಿಸೂಣ ಅಂತನಾ ಎಂದು ನಾಗು ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಮೊದಲು ಆ ಪಾಸಿಟಿವ್ನ ಹೊರಗೆ ಹಾಕಿ ಆ ಫೇಕ್ ನಗುನಾ ನೋಡೋಕೆ ಆಗ್ತಾ ಇಲ್ಲ ಬಿಗ್ ಬಾಸ್ ಪ್ಲೀಸ್ ಇದು ನನ್ನ ಅಂಬಲ್ ರಿಕ್ವೆಸ್ಟ್ ಯಾರಿಗೆಲ್ಲ ಗೌತಮಿ ಕಂಡರೆ ಇಷ್ಟ ಇಲ್ಲ ಎಂದು ಹರೀಶ್ ಕಾಮೆಂಟ್ ಮಾಡಿದ್ದಾರೆ.

ಗೌತಮಿ ನೀನು ಮಾಡೋದು ಸರಿ ಇಲ್ಲ. ಅವರಿಗೂ ಅವಕಾಶ ಕೊಡಿ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಿಯ ಅವಕಾಶ ಇದ್ದಾಗ ಕೊಡಲ್ಲ ಅದೇಗೆ ನೀವು ಹೇಳ್ತೀರಾ. ಅವಕಾಶ ಕೊಟ್ಟರೆ ಅಲ್ವಾ ಅವ್ರು ಆಟಕ್ಕೆ ಇದರೋ ಲೆಕ್ಕಕ್ಕೆ ಇದರೂ ಅಂತ ಗೊತ್ತಾಗೋದು ಎಂದು ಸೂರ್ಯ ನಾಯ್ಕ್‌ ಕಾಮೆಂಟ್ ಮಾಡಿದ್ದಾರೆ.

Whats_app_banner