logo
ಕನ್ನಡ ಸುದ್ದಿ  /  ಮನರಂಜನೆ  /  Madhuri Dixit Mother Death: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಮಾತೃವಿಯೋಗ

Madhuri Dixit Mother Death: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಮಾತೃವಿಯೋಗ

HT Kannada Desk HT Kannada

Mar 12, 2023 12:35 PM IST

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಮಾತೃವಿಯೋಗ

    • ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರ ತಾಯಿ ಸ್ನೇಹಲತಾ 90ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.
ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಮಾತೃವಿಯೋಗ
ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ಗೆ ಮಾತೃವಿಯೋಗ

Madhuri Dixit Mother Death: ಬಾಲಿವುಡ್‌ನಲ್ಲೀಗ ಮತ್ತೊಂದು ಸಾವಾಗಿದೆ. ಹಿರಿಯ ಹಾಸ್ಯ ಕಲಾವಿದ ಸತೀಶ್ ಕೌಶಿಕ್‌ ಸಾವಿನ ಬಳಿಕ ಇದೀಗ ನಟಿ ಮಾಧುರಿ ದೀಕ್ಷಿತ್‌ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಮಾಧುರಿ ಅವರ ತಾಯಿ 90 ವರ್ಷದ ಸ್ನೇಹಲತಾ ಇಂದು (ಮಾರ್ಚ್ 12) ಬೆಳಗ್ಗೆ 8.40ರ ಸುಮಾರಿಗೆ ಮುಂಬೈನ ಮನೆಯಲ್ಲಿ ನಿಧನರಾಗಿದ್ದಾರೆ. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರಿಂದ ಸ್ನೇಹಲತಾ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಗಂಡಸರಿಗೆ ಶರಣಾದರೆ, ಸಿನಿಮಾರಂಗದಲ್ಲಿ ನೀವು ಏನು ಬೇಕಾದರೂ ಸಾಧಿಸಬಹುದು!; ಮಂಚದ ವಿಷ್ಯ ಹೇಳಿದ ರಮ್ಯಾ ಕೃಷ್ಣನ್

ತಾಯಿ ಸ್ನೇಹಲತಾ ಅವರಿಗೆ ಅಜಿತ್‌ ದೀಕ್ಷಿತ್‌, ಮಾಧುರಿ ದೀಕ್ಷಿತ್‌, ಭಾರತಿ ದೀಕ್ಷಿತ್‌ ಮತ್ತು ರೂಪಾ ದೀಕ್ಷಿತ್‌ ನಾಲ್ವರು ಮಕ್ಕಳಿದ್ದಾರೆ. ಇಂದು ಮಧ್ಯಾಹ್ನ 3.40ರ ಸುಮಾರಿಗೆ ಮುಂಬೈನ ವರ್ಲಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜೂನ್‌ನಲ್ಲಿ ಅಮ್ಮನ ಬರ್ತ್‌ಡೇ ಮಾಡಿದ್ದ ಮಾಧುರಿ..

ಕಳೆದ ವರ್ಷ ಜೂನ್‌ನಲ್ಲಿ ತನ್ನ ತಾಯಿಯ 90 ನೇ ಹುಟ್ಟುಹಬ್ಬವನ್ನು ಮಾಧುರಿ ದೀಕ್ಷಿತ್‌ ಆಚರಿಸಿದ್ದರು. ತಾಯಿಯ ಬರ್ತ್‌ಡೇಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಮಾಧುರಿ ಹಂಚಿಕೊಂಡಿದ್ದರು. "ಜನ್ಮದಿನದ ಶುಭಾಶಯಗಳು ಅಮ್ಮ! ತಾಯಿಯಾದವಳು ಮಗಳ ಆತ್ಮೀಯ ಸ್ನೇಹಿತೆ ಎಂದು ಹೇಳಲಾಗುತ್ತದೆ. ಅದು ನಿಜಕ್ಕೂ ಸತ್ಯ. ನೀನು ನನಗಾಗಿ ಮಾಡಿದ್ದೆಲ್ಲವೂ, ನೀನು ನನಗೆ ಕಲಿಸಿದ ಪಾಠ, ಎಲ್ಲವೂ ನೀನು ನನಗೆ ನೀಡಿದ ದೊಡ್ಡ ಕೊಡುಗೆ" ಎಂದು ಮಾಧುರಿ ಬರೆದುಕೊಂಡಿದ್ದರು.

ಸಿನಿಮಾ ಸಂಬಂಧಿತ ಈ ಸುದ್ದಿಗಳನ್ನೂ ಓದಿ

Oscar 2023 Live Telecast: ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಎಷ್ಟೊತ್ತಿಗೆ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

Oscar 2023: 95ನೇ ಆಸ್ಕರ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಮೆರಿಕಾದ ಲಾಸ್‌ಏಂಜಲಸ್‌ನಲ್ಲಿ ಈ ಕಲರ್‌ಫುಲ್‌ ಸಮಾರಂಭಕ್ಕೆ ಬೃಹತ್‌ ವೇದಿಕೆ ಸಿದ್ಧವಾಗಿದ್ದು, ಭಾರತೀಯರ ಪಾಲಿಗೆ ಈ ಸಲದ ಆಸ್ಕರ್‌ ಮತ್ತಷ್ಟು ಮಗದಷ್ಟು ವಿಶೇಷ ಎನಿಸಿದೆ. ಅದಕ್ಕೆ ಕಾರಣ ಪ್ರಶಸ್ತಿ ಸುತ್ತಿಗೆ ಭಾರತದಿಂದ ಮೂರು ಚಿತ್ರಗಳು ನಾಮನಿರ್ದೇಶನಗೊಂಡಿವೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Sushmita Sen: ಹೃದಯಾಘಾತದಿಂದ ಚೇತರಿಸಿಕೊಂಡು ಫ್ಯಾಷನ್‌ ಶೋದಲ್ಲಿ ರ‍್ಯಾಂಪ್ ವಾಕ್‌ ಮಾಡಿದ ಸುಶ್ಮಿತಾ ಸೇನ್‌ VIDEO

Sushmita Sen: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಇತ್ತೀಚೆಗಷ್ಟೇ ತಮಗೆ ಹೃದಯಾಘಾತವಾದ ಬಗ್ಗೆ ಹೇಳಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದರು. ಈ ಸುದ್ದಿ ತಿಳಿದ ಅವರ ಅಭಿಮಾನಿಗಳೂ ನಟಿಯ ಚೇತರಿಕೆಗೆ ಹಾರೈಸಿದ್ದರು. ಇದೀಗ ಹೃದಯಾಘಾತದಿಂದ ಚೇತರಿಸಿಕೊಂಡ ಒಂದೇ ವಾರಕ್ಕೆ ಮತ್ತೆ ಎಂದಿನಂತೆ ಕೆಲಸಕ್ಕೆ ಮರಳಿದ್ದಾರೆ. ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ರ‍್ಯಾಂಪ್ ವಾಕ್‌ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು