logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ ಸೀಸನ್‌ 11: ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ಪಂಚಾಯ್ತಿ ಮಾಡಲು ಬಂದ ವಿಕಟಕವಿ ಯೋಗರಾಜ್‌ ಭಟ್‌

ಬಿಗ್‌ಬಾಸ್‌ ಕನ್ನಡ ಸೀಸನ್‌ 11: ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ಪಂಚಾಯ್ತಿ ಮಾಡಲು ಬಂದ ವಿಕಟಕವಿ ಯೋಗರಾಜ್‌ ಭಟ್‌

Rakshitha Sowmya HT Kannada

Oct 26, 2024 10:48 AM IST

google News

Bigg Boss Kannada 11: ಈ ವಾರ ಪಂಚಾಯ್ತಿ ಮಾಡಲು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ನಿರ್ದೇಶಕ ಯೋಗರಾಜ ಭಟ್‌

  • Bigg Boss Kannada 11: ಸುದೀಪ್‌ ತಾಯಿ ಸರೋಜಾ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುದೀಪ್‌ ತಾಯಿ ಅಗಲಿದ ದುಃಖದಲ್ಲಿದ್ದು ಈ ಬಾರಿ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಇದೇ ಕಾರಣಕ್ಕೆ ಈ ಬಾರಿ ಸ್ಯಾಂಡಲ್‌ವುಡ್‌ ನಿರ್ದೇಶಕ ಯೋಗರಾಜ ಭಟ್‌, ಪಂಚಾಯ್ತಿ ಮಾಡಲು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

Bigg Boss Kannada 11: ಈ ವಾರ ಪಂಚಾಯ್ತಿ ಮಾಡಲು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ನಿರ್ದೇಶಕ ಯೋಗರಾಜ ಭಟ್‌
Bigg Boss Kannada 11: ಈ ವಾರ ಪಂಚಾಯ್ತಿ ಮಾಡಲು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ನಿರ್ದೇಶಕ ಯೋಗರಾಜ ಭಟ್‌ (PC: Colors Kannada Facebook)

Bigg Boss Kannada 11: ಬಿಗ್‌ಬಾಸ್‌ ಸೀಸನ್‌ 11 ನಾಲ್ಕನೇ ವಾರದ ಕೊನೆಯ ಹಂತದಲ್ಲಿದೆ. ಯಮುನಾ ಶ್ರೀನಿಧಿ, ರಂಜಿತ್‌, ಲಾಯರ್‌ ಜಗದೀಶ್‌ ಮನೆಯಿಂದ ಹೊರ ಹೋಗಿದ್ದಾರೆ. ಈ ಬಾರಿ ಯಾರು ಮನೆಯಿಂದ ಹೋಗಬಹುದು ಎಂಬ ಕುತೂಹಲಕ್ಕೆ ಒಂದು ದಿನದಲ್ಲಿ ತೆರೆ ಬೀಳಲಿದೆ. ಈ ನಡುವೆ ಬಿಗ್‌ಬಾಸ್‌ ಮನೆಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಯೋಗರಾಜ್‌ ಭಟ್‌ ಎಂಟ್ರಿ ಆಗಿದೆ.

ಪಂಚಾಯ್ತಿ ಮಾಡಲು ಕಿಚ್ಚನ ಬದಲಿಗೆ ಯೋಗರಾಜ್‌ ಭಟ್

ಪ್ರತಿ ಶನಿವಾರ ಹಾಗೂ ಭಾನುವಾರ ಬಿಗ್‌ಬಾಸ್‌ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ನಡೆಯುತ್ತದೆ. ಆದರೆ ಈ ಬಾರಿ ಸುದೀಪ್‌ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಇತ್ತೀಚೆಗಷ್ಟೇ ಸುದೀಪ್‌ ತಾಯಿ ಸರೋಜಾ ಸಂಜೀವ್‌ ಅನಾರೋಗ್ಯದಿಂದ ನಿಧನರಾಗಿದ್ದರು. ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದ ಲಾಯರ್‌ ಜಗದೀಶ್‌, ರಂಜಿತ್‌ ಕೂಡಾ ಸುದೀಪ್‌ ತಾಯಿಯ ಅಂತಿಮ ದರ್ಶನ ಪಡೆದಿದ್ದರು. ಸುದೀಪ್‌, ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಸುದೀಪ್‌ ಪಂಚಾಯ್ತಿ ನಡೆಸಿಕೊಡುತ್ತಿಲ್ಲ. ಅದರ ಬದಲಿಗೆ ವಿಕಟಕವಿ, ನಿರ್ದೇಶಕ ಯೋಗರಾಜ್‌ ಭಟ್‌ ದೊಡ್ಮನೆಯಲ್ಲಿ ಪಂಚಾಯ್ತಿ ಮಾಡಲಿದ್ದಾರೆ.‌

ಕಲರ್ಸ್‌ ಕನ್ನಡ ವಾಹಿನಿಯು ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಯೋಗರಾಜ್‌ ಭಟ್‌ ವ್ಯವಸ್ಥೆಗಳು, ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ. ಯೋಗರಾಜ್‌ ಭಟ್ರನ್ನು ನೋಡಿ ಸ್ಪರ್ಧಿಗಳು ಖುಷಿಯಾಗುತ್ತಾರೆ. ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳು ಭಟ್ರನ್ನು ಸ್ವಾಗತಿಸಿದರೆ, ಅವರೂ ಕೂಡಾ ಸ್ಪರ್ಧಿಗಳಿಗೆ ಕೈ ಮುಗಿದು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹನುಮಂತನನ್ನು ಮಾತನಾಡಿಸುವ ಯೋಗರಾಜ್‌ ಭಟ್‌ ನೀನು ಕಂಟೆಸ್ಟಂಟಾ ಆಡಿಯನಾ? ಎನ್ನುತ್ತಾರೆ. ಇಲ್ಲಿ ಇರುವವರೆಲ್ಲಾ ಕುರಿಗಳು ಎಂದು ತಿಳಿದುಕೋ, ಎಲ್ಲರ ಬಗ್ಗೆ ಒಂದೊಂದು ಮಾತು ಹೇಳು ಎನ್ನುತ್ತಾರೆ.

ಮಾನಸಾ ಕಾಲೆಳೆದು ಸಾರಿ ಕೇಳಿದ ವಿಕಟಕವಿ

ಸುರೇಶ್‌ ಕಳ್ಳ ಟಗರು, ಧರ್ಮ ಕೋಡು ಇಲ್ಲದ ಟಗರು ಎಂದು ಹನುಮಂತ ಹೇಳುತ್ತಾರೆ. ಗಂಡಸರಲ್ಲಿ ಮಾನಸಾ ಬಗ್ಗೆ ಕೂಡಾ ಸ್ವಲ್ಪ ಹೇಳು ಎಂದು ಮಾನಸಾ ಕಾಲು ಎಳೆಯುವ ಭಟ್ಟರು ನಂತರ ಸಾರಿ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಮಾನಸಾ, ಎಲ್ಲರೂ ಹಾಗೆ ಹೇಳುತ್ತಾರೆ ಸರ್‌ ಎನ್ನುತ್ತಾರೆ. ಒಟ್ಟಿನಲ್ಲಿ ಈ ಬಾರಿ ಭಟ್ಟರು ಮನೆಯೊಳಗೆ ಕಾಲಿಟ್ಟಿದ್ದು ಮನೆಯ ವಾತಾವರಣ ಬದಲಾಗಿದೆ. ಯೋಗರಾಜ್‌ ಭಟ್ಟರು ಯಾವ ರೀತಿ ಪಂಚಾಯ್ತಿ ಮಾಡುತ್ತಾರೆ. ಈ ಬಾರಿ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂದು ತಿಳಿಯಲು ಭಾನುವಾರದ ಎಪಿಸೋಡ್‌ವರೆಗೂ ಕಾದು ನೋಡಬೇಕು. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ