ಶ್ರೇಷ್ಠಾ ಹೊಸ ಆಟ ಶುರು, ಮಾವನಿಗೆ ಹೊಡೆಯಲು ಕೈ ಎತ್ತಿದ ಡ್ಯಾನ್ಸ್‌ ಟೀಚರ್‌ ತಡೆದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ ಹೊಸ ಆಟ ಶುರು, ಮಾವನಿಗೆ ಹೊಡೆಯಲು ಕೈ ಎತ್ತಿದ ಡ್ಯಾನ್ಸ್‌ ಟೀಚರ್‌ ತಡೆದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಹೊಸ ಆಟ ಶುರು, ಮಾವನಿಗೆ ಹೊಡೆಯಲು ಕೈ ಎತ್ತಿದ ಡ್ಯಾನ್ಸ್‌ ಟೀಚರ್‌ ತಡೆದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Seria: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 25ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಅವಮಾನ ಮಾಡಲು ಶ್ರೇಷ್ಠಾ, ಹೊಸ ಗೇಮ್‌ ಪ್ಲ್ಯಾನ್‌ ಮಾಡುತ್ತಾಳೆ. ಸೆಕ್ಯೂರಿಟಿ ಎಂದು ಧರ್ಮರಾಜ್‌ಗೆ ಹೊಡೆಯಲು ಡ್ಯಾನ್ಸ್‌ ಟೀಚರನ್ನು ಭಾಗ್ಯಾ ತಡೆಯುತ್ತಾಳೆ.

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 25ರ ಸಂಚಿಕೆಯಲ್ಲಿ ಮಾವನ ಮೇಲೆ ಕೈ ಎತ್ತಿದ ಡ್ಯಾನ್ಸ್‌ ಟೀಚರ್‌ ತಡೆದ ಭಾಗ್ಯಾ
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 25ರ ಸಂಚಿಕೆಯಲ್ಲಿ ಮಾವನ ಮೇಲೆ ಕೈ ಎತ್ತಿದ ಡ್ಯಾನ್ಸ್‌ ಟೀಚರ್‌ ತಡೆದ ಭಾಗ್ಯಾ (PC: Jio Cinema)

Bhagyalakshmi Kannada Serial: ಭಾಗ್ಯಾ ಈಗ ಹೊಸ ಹೊಸ ವಿದ್ಯೆ ಕಲಿಯುತ್ತಿದ್ದಾಳೆ. ಇಷ್ಟು ದಿನಗಳ ಕಾಲ ಮನೆ, ಅತ್ತೆ, ಮಾವ ಗಂಡ ಮಕ್ಕಳು ಎಂದು ನಾಲ್ಕು ಗೋಡೆಗಳ ನಡುವೆ ಇದ್ದ ಭಾಗ್ಯಾ ಈಗ ಹೋಟೆಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಡ್ಯಾನ್ಸ್‌ ಕ್ಲಾಸ್‌ಗೆ ಹೋಗುತ್ತಿದ್ದಾಳೆ. ಕಾರ್‌ ಡ್ರೈವಿಂಗ್‌ ಕಲಿಯುತ್ತಿದ್ದಾಳೆ.

ಸುಂದ್ರಿ, ಪೂಜಾಗೆ ಅಡುಗೆ ಜವಾಬ್ದಾರಿ

ಭಾಗ್ಯಾ ಬ್ಯುಸಿ ಇರುವುದಕ್ಕೆ ಅಡುಗೆ ಜವಾಬ್ದಾರಿ ಪೂಜಾ, ಸುಂದ್ರಿ ಹೆಗಲೇರಿದೆ. ಇಬ್ಬರಿಗೂ ಕುಸುಮಾ ಅಡುಗೆ ಪಾಠ ಮಾಡುತ್ತಿದ್ದಾಳೆ. ಡ್ಯಾನ್ಸ್‌ ಕ್ಲಾಸ್‌ಗೆ ಹೋಗಲು ರೆಡಿ ಆದ ತಾಂಡವ್‌, ಮನೆ ಮುಂದೆ ಕಾರು ಕಾಣದೆ ಅಮ್ಮನ ಬಳಿ ಬಂದು ಕೇಳುತ್ತಾನೆ. ನಾನು ಡ್ಯಾನ್ಸ್‌ ಕ್ಲಾಸ್‌ಗೆ ಹೋಗಬೇಕು, ಇವರಿಬ್ಬರೂ ಇನ್ನೂ ಬಂದಿಲ್ಲ ಎಂದು ಗೋಳಾಡುತ್ತಾನೆ. ಕಾರ್‌ ತೆಗೆದುಕೊಂಡು ಹೋಗಿರುವುದು ನಿನ್ನ ಅಪ್ಪ, ಡ್ರೈವಿಂಗ್‌ ಕ್ಲಾಸ್‌ ಮುಗಿಸಿ ನಿನ್ನ ಅಪ್ಪ ಭಾಗ್ಯಾಳನ್ನು ಡ್ಯಾನ್ಸ್‌ ಕ್ಲಾಸ್‌ಗೆ ಬಿಟ್ಟು ಬರುತ್ತಾರೆ, ನೀನು ನಿನ್ನ ಅಪ್ಪನ ಸ್ಕೂಟರ್‌ ತೆಗೆದುಕೊಂಡು ಹೋಗು ಎಂದು ಕುಸುಮಾ ಹೇಳುತ್ತಾಳೆ. ನಾನು ಸ್ಕೂಟರ್‌ನಲ್ಲಿ ಹೋಗಬೇಕಾ? ಆಗೊದಿಲ್ಲ ಎನ್ನುತ್ತಾನೆ. ನೀನು ಇಷ್ಟೆಲ್ಲಾ ಓದಿ ಕೆಲಸ ಪಡೆದಿದ್ದೀಯಲ್ಲ, ಅದೆಲ್ಲಾ ಬಂದಿದ್ದು ನಿನ್ನ ಅಪ್ಪನಿಂದ, ಅದೇ ಸ್ಕೂಟರ್‌ನಲ್ಲಿ ಅವರು ಪೋಸ್ಟ್‌ ಆಫೀಸಿಗೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ಕುಸುಮಾ ಹೇಳಿದಾಗ ತಾಂಡವ್‌ ವಿಧಿ ಇಲ್ಲದೆ ಸ್ಕೂಟರ್‌ನಲ್ಲಿ ಡ್ಯಾನ್ಸ್‌ ಕ್ಲಾಸ್‌ಗೆ ಹೊರಡುತ್ತಾನೆ.

ಸ್ಕೂಟರ್‌ನಲ್ಲಿ ಡ್ಯಾನ್ಸ್‌ ಕ್ಲಾಸ್‌ಗೆ ಹೋಗಲು ತಾಂಡವ್‌ಗೆ ಮುಜುಗರ

ಸ್ಕೂಟರ್‌ ಸ್ಟಾರ್ಟ್‌ ಮಾಡಲಾಗದೆ ತಾಂಡವ್‌ ಒದ್ದಾಡುತ್ತಾನೆ. ಕೊನೆಗೂ ಸ್ಕೂಟರ್‌ ಸ್ಟಾರ್ಟ್‌ ಆಗಿದ್ದಕ್ಕೆ ಖುಷಿಯಾಗುತ್ತಾನೆ. ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಶ್ರೇಷ್ಠಾ ಕರೆ ಮಾಡುತ್ತಾಳೆ. ಡ್ಯಾನ್ಸ್‌ ಕ್ಲಾಸ್‌ನಲ್ಲಿ ಏನೆಲ್ಲಾ ನಡೆಯಿತು ಎಂದು ನಿನ್ನೆ ನೀನು ಹೇಳಿದ್ದನ್ನು ಕೇಳಿ ನನಗೆ ಬೇಸರವಾಯ್ತು. ಡ್ಯಾನ್ಸ್‌ ಕ್ಲಾಸ್‌ ಯಾವುದು ಎಂದು ನೋಡುವಾಗ ಅದು ನನ್ನ ಫ್ರೆಂಡ್‌ದು ಅಂತ ಗೊತ್ತಾಯ್ತು. ಭಾಗ್ಯಾಗೆ ಪಾಠ ಕಲಿಸಲು ಇದು ಒಳ್ಳೆ ಅವಕಾಶ. ನಿನ್ನೆ ಹೀರೋಯಿನ್‌ ರೀತಿ ಇದ್ದ ಭಾಗ್ಯಾಗೆ ಇಂದು ಹೇಗೆ ಅನುಮಾನವಾಗುತ್ತದೆ ನೋಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಅದನ್ನು ಕೇಳಿ ತಾಂಡವ್‌ ಖುಷಿಯಿಂದ ಡ್ಯಾನ್ಸ್‌ ಕ್ಲಾಸ್‌ಗೆ ಹೋಗುತ್ತಾನೆ.

ಗೆಳತಿ ಮೂಲಕ ಭಾಗ್ಯಾಗೆ ಮತ್ತೆ ಟಾರ್ಚರ್‌ ಕೊಡಲು ಶ್ರೇಷ್ಠಾ ಪ್ಲ್ಯಾನ್

ಇತ್ತ ಧರ್ಮರಾಜ್‌, ಭಾಗ್ಯಾಳನ್ನು ಡ್ಯಾನ್ಸ್‌ ಕ್ಲಾಸ್‌ ಬಳಿ ಬಿಟ್ಟು ಹೊರಡುವಷ್ಟರಲ್ಲಿ ಗೇಟ್‌ ಹೊರಗೆ ಕಾರಿನ ಹಾರ್ನ್‌ ಸದ್ದು ಕೇಳುತ್ತದೆ. ಸೆಕ್ಯೂರಿಟಿ ಇಲ್ಲದಿರುವುದರಿಂದ ಧರ್ಮರಾಜ್‌ ತಾನೇ ಗೇಟ್‌ ಬಾಗಿಲು ತೆರೆಯುತ್ತಾನೆ. ಆತನೇ ಸೆಕ್ಯೂರಿಟಿ ಎಂದು ತಿಳಿದು ಶ್ರೇಷ್ಠಾ ಗೆಳತಿ (ಡ್ಯಾನ್ಸ್‌ ಟೀಚರ್‌) ಕಾರಿನಿಂದ ಇಳಿದು, ಕೆಲಸ ಸರಿಯಾಗಿ ಮಾಡಲು ಆಗದಿದ್ದರೆ ಏಕೆ ಕೆಲಸಕ್ಕೆ ಬರುತ್ತೀರಿ ಎಂದು ಕೇಳುತ್ತಾಳೆ. ಮೇಡಂ ಸ್ವಲ್ಪ ಗೌರವ ಕೊಟ್ಟು ಮಾತನಾಡಿ ಎಂದು ಧರ್ಮರಾಜ್‌ ಹೇಳುತ್ತಾನೆ. ಮಾಡ್ತಿರೋದು ಸೆಕ್ಯೂರಿಟಿ ಕೆಲಸ, ಅಂತದ್ದರಲ್ಲಿ ನನಗೆ ಎದುರು ಮಾತನಾಡುತ್ತೀಯ, ಜೊತೆಗೆ ಇಂಗ್ಲೀಷ್‌ ಶೋಕಿ ಬೇಕಾ ಎಂದು ಧರ್ಮರಾಜ್‌ ಮೇಲೆ ಕೈ ಮಾಡಲು ಹೋಗುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಬಂದು ಅವಳನ್ನು ತಡೆಯುತ್ತಾಳೆ.‌

ಡ್ಯಾನ್ಸ್‌ ಟೀಚರ್‌ ವರ್ತನೆಗೆ ಭಾಗ್ಯಾ ಬೇಸರ

ಅವರು ನನ್ನ ಮಾವ, ಹಿರಿಯರ ಮೇಲೆ ಕೈ ಮಾಡಲು ನಿಮಗೆ ಎಷ್ಟು ಧೈರ್ಯ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಸೆಕ್ಯೂರಿಟಿ ಬಂದು ಸಾರಿ ಮೇಡಂ ವಾಶ್‌ ರೂಮ್‌ಗೆ ಹೋಗಿದ್ದೆ ಎನ್ನುತ್ತಾನೆ. ನಿನಗೆ ಕೆಲಸ ಮಾಡಲು ಬರುವುದಿಲ್ಲ, ಇನ್ಮುಂದೆ ನೀನು ಕೆಲಸಕ್ಕೆ ಬೇಡ ಎನ್ನುತ್ತಾಳೆ. ಇದನ್ನು ನೋಡಿದ ಭಾಗ್ಯಾ ಮಾಡದ ತಪ್ಪಿಗೆ ಅವರನ್ನು ಏಕೆ ಕೆಲಸದಿಂದ ತೆಗೆಯುತ್ತಿದೀರಿ? ಎಂದು ಪ್ರಶ್ನಿಸುತ್ತಾಳೆ. ಅದನ್ನು ಕೇಳಲು ನೀನು ಯಾರು? ಇದು ನನ್ನ ಸ್ಟುಡಿಯೋ, ನನ್ನಿಷ್ಟ ಎನ್ನುತ್ತಾಳೆ.

ಗೆಳತಿ ಮೂಲಕ ಶ್ರೇಷ್ಠಾ ಮತ್ತೆ ಭಾಗ್ಯಾಗೆ ಅವಮಾನ ಮಾಡುತ್ತಾಳಾ? ಅಥವಾ ಭಾಗ್ಯಾ, ಆಕೆಗೂ ಬುದ್ಧಿ ಕಲಿಸುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner