ಡ್ಯಾನ್ಸ್‌ ಮಾಡುವಾಗ ಜಾರಿಬಿದ್ದ ವಿದ್ಯಾ ಬಾಲನ್, ತಕ್ಷಣ ಮಾಧುರಿ ದೀಕ್ಷಿತ್‌ ನೀಡಿದ್ರು ಸಾಥ್‌; ಅಮೋಘ, ಕಣ್ತುಂಬಿ ಬಂತು ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಡ್ಯಾನ್ಸ್‌ ಮಾಡುವಾಗ ಜಾರಿಬಿದ್ದ ವಿದ್ಯಾ ಬಾಲನ್, ತಕ್ಷಣ ಮಾಧುರಿ ದೀಕ್ಷಿತ್‌ ನೀಡಿದ್ರು ಸಾಥ್‌; ಅಮೋಘ, ಕಣ್ತುಂಬಿ ಬಂತು ಅಂದ್ರು ಫ್ಯಾನ್ಸ್‌

ಡ್ಯಾನ್ಸ್‌ ಮಾಡುವಾಗ ಜಾರಿಬಿದ್ದ ವಿದ್ಯಾ ಬಾಲನ್, ತಕ್ಷಣ ಮಾಧುರಿ ದೀಕ್ಷಿತ್‌ ನೀಡಿದ್ರು ಸಾಥ್‌; ಅಮೋಘ, ಕಣ್ತುಂಬಿ ಬಂತು ಅಂದ್ರು ಫ್ಯಾನ್ಸ್‌

Vidya Balan falling stage: ವೇದಿಕೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಾಗ ಆಕಸ್ಮಿಕವಾಗಿ ಜಾರಿಬಿದ್ದ ವಿದ್ಯಾ ಬಾಲನ್‌ ತಕ್ಷಣ ಸಾವರಿಸಿಕೊಂಡು ನೃತ್ಯ ಮುಂದುವರೆಸಿದರು. ಈ ಸಂದರ್ಭ ಮಾಧುರಿ ದೀಕ್ಷಿತ್‌ ನೀಡಿದ ಬೆಂಬಲವೂ ಅಭಿಮಾನಿಗಳ ಹೃದಯ ತುಂಬುವಂತೆ ಮಾಡಿತು.

ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದ ವಿದ್ಯಾ ಬಾಲನ್, ತಕ್ಷಣ ಮಾಧುರಿ ದೀಕ್ಷಿತ್‌ ನೀಡಿದ್ರು ಸಾಥ್‌
ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದ ವಿದ್ಯಾ ಬಾಲನ್, ತಕ್ಷಣ ಮಾಧುರಿ ದೀಕ್ಷಿತ್‌ ನೀಡಿದ್ರು ಸಾಥ್‌

ಮುಂಬೈನ ಐಕಾನಿಕ್‌ ರಾಯಲ್‌ ಒಪೇರಾ ಹೌಸ್‌ನ ಸ್ಟೇಜ್‌ನಲ್ಲಿ ಶುಕ್ರವಾರ ನಟಿ ವಿದ್ಯಾ ಬಾಲನ್‌ ಮತ್ತು ಮಾಧುರಿ ದೀಕ್ಷಿತ್‌ ಡ್ಯಾನ್ಸ್‌ ಮಾಡುತ್ತಿದ್ದರು. ಅಮಿ ಜೆ ತೋಮರ್ 3.0 ಪ್ರದರ್ಶನದ ಸಮಯದಲ್ಲಿ ಎಲ್ಲರೂ ಸಮ್ಮೋಹನಗೊಂಡವರಂತೆ ನೃತ್ಯ ಪ್ರದರ್ಶನ ವೀಕ್ಷಿಸುತ್ತಿದ್ದರು. ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಡೆದ ಒಂದು ಘಟನೆ ವಿದ್ಯಾ ಬಾಲನ್‌ ಮತ್ತು ಮಾಧುರಿ ದೀಕ್ಷಿತ್‌ ಅಭಿಮಾನಿಗಳ ಹೃದಯ ಗೆದ್ದಿದೆ. ಆದದ್ದಿಷ್ಟು. ನೃತ್ಯ ಮಾಡುವಾಗ ವಿದ್ಯಾ ಬಾಲನ್‌ ಆಕಸ್ಮಿಕವಾಗಿ ಬಿದ್ದರು. ಆಕಸ್ಮಿಕವಾಗಿ ಬಿದ್ದಲ್ಲಿಂದಲೇ ಸಮಚಿತ್ತತೆ, ಸಮರ್ಪನಾ ಮನೋಭಾವನೆಯಿಂದ ಏನೂ ನಡೆದಿಲ್ಲ ಎಂಬಂತೆ ಡ್ಯಾನ್ಸ್‌ ಮುಂದುವರೆಸಿದರು. ವಿದ್ಯಾ ಬಾಲನ್‌ ಬಿದ್ದಾಗ ಡ್ಯಾನ್ಸ್‌ ಸ್ಟೆಪ್‌ ಬದಲಾದರೂ ಅದಕ್ಕೆ ತಕ್ಕಂತೆ ಮಾಧುರಿ ದೀಕ್ಷಿತ್‌ ಕೂಡ ಸಾಥ್‌ ನೀಡಿದರು. ಈ ಎರಡು ದೃಶ್ಯಗಳು ಅಭಿಮಾನಿಗಳ ಹೃದಯದಲ್ಲಿ ನವಿರಾದ ಭಾವ ಮೂಡಿಸಿತ್ತು. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಮಾಧುರಿ ದೀಕ್ಷಿತ್‌ ಟ್ರೆಂಡಿಂಗ್‌ನಲ್ಲಿದ್ದಾರೆ.

ಬಿದ್ದರೂ ಡ್ಯಾನ್ಸ್‌ ಮುಂದುವರೆಸಿದ ವಿದ್ಯಾ ಬಾಲನ್‌

ಆಕಸ್ಮಿಕವಾಗಿ ಬಿದ್ದರೂ ತಕ್ಷಣ ಸಾವರಿಸಿಕೊಂಡು ಎದ್ದು ನೃತ್ಯ ಮುಂದುವರೆಸಿದರು. ಬಿದ್ದಲ್ಲಿಂದಲೇ ಕೈಯಲ್ಲಿ ನೃತ್ಯ ಪಟುವನ್ನು ತೋರಿಸಿ ಅದೊಂದು ಸಹಜ ಲಯ ಎಂಬಂತೆ ತೋರಿಸಲು ಯತ್ನಿಸಿದ್ದು ಎಲ್ಲರ ಮನ ಗೆದ್ದಿದೆ. ಈ ಸಮಯದಲ್ಲಿ ಈ ನೃತ್ಯ ನೋಡುತ್ತಿದ್ದವರು ಮೆಚ್ಚುಗೆಯ ಚಪ್ಪಾಳೆ ನೀಡಿದರು. ಈ ವಿಡಿಯೋ ಕ್ಲಿಪ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿದ್ಯಾ ಬಾಲನ್‌ ಅವರ ಪ್ರತಿಭೆ ಮತ್ತು ಸಮಚಿತ್ತತೆಗೆ ಎಲ್ಲರೂ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

 

ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರ

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಬೀಳುವುದು ಸಹಜ, ಎದ್ದೇಳುವುದು ಸಾಧನೆ" "ಜೀವನದಲ್ಲಿ ಏಳುಬೀಳು ಇರುವುದು ನಿಜ. ಜೀವನದಲ್ಲಿ ಕುಸಿದಾಗ ಬೇಸರಪಡಬಾರದು, ಸ್ಪೂರ್ತಿದಾಯಕ ಕ್ಷಣ" "ವಿದ್ಯಾ ಮೇಡಂಗೆ ಬೆಂಬಲ ನೀಡಿದ್ದಕ್ಕೆ ನಿಮಗೆ ಧನ್ಯವಾದ ಮಾಧುರಿ ಮೇಡಂ" "ಸ್ಕ್ರಿಪ್ಟ್‌ನಲ್ಲಿ ಇರದ ನೃತ್ಯದ ಹೆಜ್ಜೆಗಳಿಗೆ ಇನ್ನೊಬ್ಬ ನಟಿ ನೀಡುವ ಬೆಂಬಲವನ್ನು ನೋಡಿ, ಕಣ್ತುಂಬಿಬಂತು" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ತಾನು ಬಿದ್ದು ಚೇತರಿಸಿಕೊಂಡು ಡ್ಯಾನ್ಸ್‌ ಮುಂದುವರೆಸಿದಾಗ ಬೆಂಬಲ ನೀಡಿದ ಮಾಧುರಿ ದೀಕ್ಷಿತ್‌ಗೆ ವಿದ್ಯಾ ಬಾಲನ್‌ ಮೆಚ್ಚುಗೆಯ ನೋಟ ನೀಡಿದ್ದಾರೆ. ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆಗೆ ವಿದ್ಯಾ ಬಾಲನ್‌ ಪ್ರತಿಕ್ರಿಯೆ ನೀಡಿದ್ದಾರೆ. "ಇಂದು ನನ್ನ ಕನಸೊಂದು ನನಸಾಗಿದೆ. ಏಕ್‌ ದೋ ತೀನ್‌ ಡ್ಯಾನ್ಸ್‌ ನೋಡಿದಾಗ ನನಗೂ ಅವಳಂತೆ ಕುಣಿಯಬೇಕು ಎಂಬ ಆಸೆ ಇತ್ತು. ಇಂದು ಅವಳ ಜತೆ ನಟಿಸಿದೆ. ಖಂಡಿತಾ, ನಾನು ಬಿದ್ದೆ. ಆದರೆ, ಅವಳು ನನ್ನನ್ನು ನಿಭಾಯಿಸಿದ ರೀತಿ ವಾಹ್‌" ಎಂದು ಮಾಧುರಿ ದೀಕ್ಷಿತ್‌ ಕುರಿತು ವಿದ್ಯಾ ಬಾಲನ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Whats_app_banner