logo
ಕನ್ನಡ ಸುದ್ದಿ  /  ಮನರಂಜನೆ  /  ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Sep 11, 2024 09:30 AM IST

google News

ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಂಗಳವಾರದ ಸಂಚಿಕೆ. ಮುದ್ದಾದ ಮಕ್ಕಳು, ಚಿನ್ನದಂಥ ಸೊಸೆ ಇದ್ದರೂ ಮಗ 2ನೇ ಮದುವೆ ಆಗಲು ಹೊರಟಿರುವ ವಿಚಾರ ತಿಳಿದು ಕುಸುಮಾ ಗಾಬರಿ ಆಗುತ್ತಾಳೆ. ಮದುವೆ ಹೇಗೆ ನಿಲ್ಲಿಸುವುದು ಎಂದು ತಿಳಿಯದೆ ಕುಸುಮಾ ಪೇಚಾಡುತ್ತಾಳೆ. 

ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಮಗನ ಅಸಲಿ ಮುಖ ಕುಸುಮಾಗೆ ಗೊತ್ತಾಗಿದೆ. ಸೊಸೆಯೊಂದಿಗೆ ಮನೆಗೆ ಬಂದು ಅವಳಿಗೆ ಧೈರ್ಯ ಹೇಳಿ ರೂಮ್‌ಗೆ ಬರುವ ಕುಸುಮಾ ಕಪಾಟಿನಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆ ನೋಡಿ ಅದನ್ನು ಸರಿ ಮಾಡಲು ಹೋಗುತ್ತಾಳೆ. ಸೀರೆ ಮಡಚುವಾಗ ಅದರ ಒಳಗಿದ್ದ ಆಹ್ವಾನ ಪತ್ರಿಕೆ ಕಂಡು ಗಾಬರಿ ಆಗುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿರುವುದು ತಾಂಡವ್‌ನನ್ನು ಎಂದು ತಿಳಿದು ದುಃಖ ಪಡುತ್ತಾಳೆ.

ಮಗನ ನಾಟಕ ನೆನೆದು ಕುಸುಮಾಗೆ ಆಘಾತ

ಯಾರು ಏನು ಹೇಳಿದರೂ ನಾನು ನಂಬಲಿಲ್ಲ. ನನ್ನ ಮಗ ಸಂಸ್ಕಾರವಂತ ಎಂದು ನಾನು ನಂಬಿದ್ದೆ ಆದರೆ ನಾನು ನಿನ್ನ ಮೇಲೆ ಇಟ್ಟಿದ್ದ ಎಲ್ಲಾ ನಂಬಿಕೆಯನ್ನು ನೀನು ಸುಳ್ಳು ಮಾಡಿದ್ದೀಯ. ಏಕೆ ಈ ರೀತಿ ಮಾಡಿದೆಯೋ ರಾಜ ಎಂದು ಕುಸುಮಾ ಗೋಳಾಡುತ್ತಾಳೆ. ತಾಂಡವ್‌ ಪದೇ ಪದೆ ಭಾಗ್ಯಾ ಮೇಲೆ ಸಿಟ್ಟಾಗುವುದು, ಭಾಗ್ಯಾಳನ್ನು ಹೊಡೆಯುವುದು, ಶ್ರೇಷ್ಠಾ, ರಘು ಜೊತೆಗಿನ ಮದುವೆಯನ್ನು ಧಿಕ್ಕರಿಸಿ ಮನೆಗೆ ಬಂದು ತಾಂಡವ್‌ನನ್ನು ತಬ್ಬಿಕೊಂಡು ಅತ್ತಿದ್ದು, ಬೀಗತಿ ಸುನಂದಾ ಅಳಿಯನ ಬಗ್ಗೆ ಹೇಳಿಕೊಂಡು ಗೋಳಾಡಿದ್ದು, ಭಾಗ್ಯಾ ಮನೆಯವರನ್ನೆಲ್ಲಾ ಪ್ರೀತಿಯಿಂದ ಕಾಣುವುದು ಎಲ್ಲವು ಕುಸುಮಾ ಕಣ್ಮುಂದೆ ಬರುತ್ತದೆ. ಚಿನ್ನದಂಥ ಸೊಸೆಗೆ ಮಗ ಮೋಸ ಮಾಡುತ್ತಿರುವುದನ್ನು ನೆನೆದು ಕುಸುಮಾ ಆಘಾತಗೊಳ್ಳುತ್ತಾಳೆ.

ಆ ಶ್ರೇಷ್ಠಾಳೇ ನನ್ನ ಮಗನನ್ನು ತನ್ನ ಕಡೆಗೆ ಸೆಳೆದಿದ್ದಾಳೆ ಎಂದು ಬೇಸರಗೊಳ್ಳುವ ಕುಸುಮಾ, ಅವಳು ಆ ರೀತಿ ಮಾಡಿದರೂ ತಾಂಡವ್‌ ಏಕೆ ಅವಳ ಬಲೆಯಲ್ಲಿ ಬೀಳಬೇಕಿತ್ತು ಎಂದು ತನಗೆ ನಾನೇ ಪ್ರಶ್ನಿಸಿಕೊಳ್ಳುತ್ತಾ ಅಳುತ್ತಾಳೆ. ಇವತ್ತೇ ಮದುವೆ, ಹೇಗಾದರೂ ಮಾಡಿ ಈ ಮದುವೆಯನ್ನು ತಡೆಯಲೇಬೇಕು ಎಂದುಕೊಳ್ಳುತ್ತಾಳೆ. ಆದರೆ ಆ ಸಮಯದಲ್ಲಿ ಏನು ಮಾಡುವುದು ಅಂತ ಕುಸುಮಾಗೆ ತೋಚುವುದಿಲ್ಲ. ಕೂಡಲೇ ಯಶೋಧಾಗೆ ಕರೆ ಮಾಡುವ ಕುಸುಮಾ, ನಿಮ್ಮ ಮಗ , ಅಳಿಯನ ಫೋಟೋ ಕಳಿಸಿ ಎಂದು ಕೇಳುತ್ತಾಳೆ. ಇಷ್ಟು ಹೊತ್ತು ಮದುವೆ ನಿಂತರೆ ಸಾಕು ಎನ್ನುತ್ತಿದ್ದ ಕುಸುಮಾ ಈಗ ಮಗಳು, ಅಳಿಯನ ಜೋಡಿ ನೋಡಬೇಕು ಎಂದು ಕೇಳುತ್ತಿರುವುದು ಯಶೋಧಾ, ಶ್ರೀವರ ಇಬ್ಬರಿಗೂ ಆಶ್ಚರ್ಯ ಎನಿಸುತ್ತದೆ. ಆದರೂ ಅದರ ಬಗ್ಗೆ ಹೆಚ್ಚು ಯೋಚಿಸದೆ ಫೋಟೋ ಕ್ಲಿಕ್‌ ಮಾಡಿ ಕಳಿಸುತ್ತಾಳೆ.

ಸೊಸೆಯಿಂದ ಸತ್ಯ ಮುಚ್ಚಿಟ್ಟ ಕುಸುಮಾ

ಶ್ರೇಷ್ಠಾ ಜೊತೆ ನಗು ನಗುತ್ತಾ ಮದುವೆ ಶಾಸ್ತ್ರದಲ್ಲಿ ಕುಳಿತ ಮಗನನ್ನು ಕಂಡು ಕುಸುಮಾ ದುಃಖ ಇನ್ನಷ್ಟು ಹೆಚ್ಚಾಗುತ್ತದೆ. ಆ ನೋವಿನಲ್ಲಿ ತನಗೇ ಅರಿವಿಲ್ಲದಂತೆ ಟೇಬಲ್‌ ಮೇಲಿದ್ದ ಗಾಜಿನ ಹೂದಾನಿಯನ್ನು ಕುಸುಮಾ ಕೆಳಗೆ ಬೀಳಿಸುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಅತ್ತೆಗೆ ಕಾಫಿ ಹಿಡಿದು ತರುತ್ತಾಳೆ. ಸೊಸೆ ಬರುವುದನ್ನು ನೋಡಿದ ಕುಸುಮಾ, ಆಹ್ವಾನ ಪತ್ರಿಕೆಯನ್ನು ಬಚ್ಚಿಟ್ಟು ಕಣ್ಣೀರು ಒರೆಸಿಕೊಳ್ಳುತ್ತಾಳೆ. ಒಳಗೆ ಬಂದ ಭಾಗ್ಯಾ ಕುಸುಮಾ ಮುಖ ನೋಡಿ ಏಕೆ ಅಳುತ್ತಿದ್ದೀರ ಎಂದು ಕೇಳುತ್ತಾಳೆ. ಇಲ್ಲ ನಾನು ಅಳುತ್ತಿಲ್ಲ, ಸ್ವಲ್ಪ ಸುಸ್ತಾಗಿದೆ ಅಷ್ಟೇ ಎನ್ನುತ್ತಾಳೆ. ಗಾಜಿನಿ ಹೂದಾನಿ ಬಿದ್ದಿರುವುದನ್ನು ನೋಡಿ ಭಾಗ್ಯಾ ಅದನ್ನು ತೆಗೆಯುತ್ತಾಳೆ. ಅತ್ತೆ ನೀವು ಕಾಫಿ ಕುಡಿದು ರೆಸ್ಟ್‌ ಮಾಡಿ ಎನ್ನುತ್ತಾಳೆ. ಸೊಸೆಯ ಕಾಳಜಿ ಕಂಡು ಕುಸುಮಾಗೆ ಮಗನ ಮೋಸ ನೆನಪಿಸಿಕೊಂಡು ಇನ್ನಷ್ಟು ಬೇಸರವಾಗುತ್ತದೆ.

ಇತ್ತ ಪೂಜಾ, ಮಹೇಶನ ಸುಪರ್ದಿಯಲ್ಲಿದ್ದಾಳೆ. ಪೂಜಾ ಕಿಡ್ನಾಪ್‌ ಆಗಿದ್ಧಾಳೆ ಎಂಬ ವಿಚಾರ ಸುಂದ್ರಿಗೆ ಗೊತ್ತಾಗುತ್ತದೆ. ದಯವಿಟ್ಟು ಅವಳನ್ನು ಬಿಟ್ಟುಬಿಡು, ಪೂಜಾ ಇಲ್ಲಿಗೆ ಬರುವುದು ಬಹಳ ಮುಖ್ಯ ಎಂದು ಸುಂದ್ರಿ ಮನವಿ ಮಾಡಿಕೊಳ್ಳುತ್ತಾಳೆ. ಆದರೆ ಮಹೇಶ ಯಾವುದಕ್ಕೂ ಬಗ್ಗುವುದಿಲ್ಲ. ನನಗೆ ಬೇಕಿರುವುದು ಹಣ, ಶ್ರೇಷ್ಠಾ ಏಕೆ ಕಾಲ್‌ ರಿಸೀವ್‌ ಮಾಡುತ್ತಿಲ್ಲ ಕೇಳು. ನನಗೆ ಹಣ ದೊರೆಯದೆ ಇವಳನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಪೋನ್‌ ಡಿಸ್ಕನೆಕ್ಟ್‌ ಮಾಡುತ್ತಾನೆ.

ಪೂಜಾಳನ್ನು ಬಿಡಿಸಲು ಸುಂದ್ರಿ ಏನು ಮಾಡುತ್ತಾಳೆ? ಕುಸುಮಾ ತಾನೇ ಹೋಗಿ ಮದುವೆ ನಿಲ್ಲಿಸುತ್ತಾಳಾ? ಭಾಗ್ಯಾಗೆ ವಿಷಯ ತಿಳಿಯುವುದಾ ಕಾದು ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ