ಭಾಗ್ಯಾಗೆ ನಿಜ ಹೇಳಲು ಬಂದ ಶ್ರೇಷ್ಠಾಳನ್ನು ಸ್ಟೋರ್ ರೂಮ್‌ನಲ್ಲಿ ಕಟ್ಟಿಹಾಕಿದ ಪೂಜಾ, ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ
Oct 03, 2024 10:07 AM IST
ಭಾಗ್ಯಾಗೆ ನಿಜ ಹೇಳಲು ಬಂದ ಶ್ರೇಷ್ಠಾಳನ್ನು ಸ್ಟೋರ್ ರೂಮ್‌ನಲ್ಲಿ ಕಟ್ಟಿಹಾಕಿದ ಪೂಜಾ, ಸುಂದ್ರಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 2ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಭಾಗ್ಯಾಗೆ ನಿಜ ಹೇಳಲು ದೇವಸ್ಥಾನಕ್ಕೆ ಹೊರಡುತ್ತಾಳೆ. ಅವಳನ್ನು ಹಿಡಿದು ಸುಂದ್ರಿ, ಪೂಜಾ ಸ್ಟೋರ್ ರೂಮ್‌ನಲ್ಲಿ ಕಟ್ಟಿ ಹಾಕುತ್ತಾರೆ. ಇತ್ತ ತಾಂಡವ್, ಭಾಗ್ಯಾ ಪ್ರಶ್ನೆಗೆ ಉತ್ತರಿಸದೆ ಅವಳ ಮಾತುಗಳಿಗೆ ಕೋಪಗೊಳ್ಳುತ್ತಾನೆ.
Bhagyalakshmi Kannada Serial: ನಾನು ಹಾಗೂ ತಾಂಡವ್ ಪ್ರೀತಿಸುತ್ತಿದ್ದೇವೆ, ಇಬ್ಬರೂ ಮದುವೆ ಆಗುತ್ತಿದ್ದೇವೆ ಎಂಬ ಸತ್ಯವನ್ನು ಭಾಗ್ಯಾಗೆ ಹೇಳಲು ಶ್ರೇಷ್ಠಾ ಇಬ್ಬರು ಜೊತೆಗೆ ಇರುವ ಫೋಟೋ ಹಿಡಿದು ಮನೆಗೆ ಬರುತ್ತಾಳೆ. ಹೊರಗಿನಿಂದಲೇ ಭಾಗ್ಯಾ ಭಾಗ್ಯಾ ಎಂದು ಕೂಗುತ್ತಾ ಬರುತ್ತಾಳೆ. ಶ್ರೇಷ್ಠಾಳನ್ನು ಅಲ್ಲಿ ನೋಡಿದ ಕುಸುಮಾ, ಭಾಗ್ಯಾ ಗಾಬರಿ ಆಗುತ್ತಾರೆ.
ಭಾಗ್ಯಾಳನ್ನು ಭೇಟಿ ಮಾಡಲು ದೇವಸ್ಥಾನಕ್ಕೆ ಹೊರಟ ಶ್ರೇಷ್ಠಾ
ಮತ್ತೇನು ಕಿತಾಪತಿ ಮಾಡಲು ಬಂದೆ ಎಂದು ಪೂಜಾ, ಶ್ರೇಷ್ಠಾಗೆ ಪ್ರಶ್ನಿಸುತ್ತಾಳೆ. ಸತ್ಯ ಹೇಳಲು ಬಂದಿದ್ದೇನೆ. ನನ್ನ ತಾಂಡವ್ ವಿಚಾರ ಭಾಗ್ಯಾಗೆ ಗೊತ್ತಾಗಬೇಕು. ಆಗ ನಾನು ಅವಳ ರಿಯಾಕ್ಷನ್ ನೋಡಬೇಕು. ಅನಾವಶ್ಯಕವಾಗಿ ನನ್ನ ವೈಯಕ್ತಿಕ ವಿಚಾರಕ್ಕೆ ನೀವೆಲ್ಲಾ ತಲೆ ಹಾಕಿದ್ದೀರಿ, ನನ್ನ ಮದುವೆ ನಿಲ್ಲಿಸಿದ್ದೀರಿ ನಿಮಗೆಲ್ಲ್ ಬುದ್ಧಿ ಕಲಿಸುತ್ತೇನೆ ಎಂದು ಶ್ರೇಷ್ಠಾ ದುರಹಂಕಾರದ ಮಾತುಗಳನ್ನು ಆಡುತ್ತಾಳೆ. ಎಷ್ಟು ಕರೆದರೂ ನಿಮ್ಮ ಸೊಸೆ ಬರ್ತಾನೇ ಇಲ್ಲ, ಇದೇನಾ ನೀವು ಅವಳಿಗೆ ಕಲಿಸಿರೋ ಸಂಸ್ಕಾರ, ಮನೆಗೆ ಯಾರೋ ಅತಿಥಿ ಬಂದಿದ್ದಾರೆ, ಆದರೆ ನಿಮ್ಮ ಸೊಸೆ ಹೊರಗೆ ಬರ್ತಾನೆ ಇಲ್ಲ ಎನ್ನುತ್ತಾಳೆ. ಭಾಗ್ಯಾ ನಿನ್ನಂತ ಹುಡುಗಿ ಅಲ್ಲ, ಎಲ್ಲರಿಗೂ ಒಳ್ಳೆಯದಾಗಲಿ, ಮನೆಯವರು ಸಂತೋಷವಾಗಲಿ ಎಂದು ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋಗುತ್ತಾಳೆ ಎಂದು ಸುಂದ್ರಿ ಹೇಳುತ್ತಾಳೆ.
ಹಾಗಾದರೆ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲೇ ಅವಳನ್ನು ಭೇಟಿ ಮಾಡಿ ನಿಜ ವಿಚಾರ ತಿಳಿಸುತ್ತೇನೆ ಎಂದು ಶ್ರೇಷ್ಠಾ ಹೊರಡಲು ಮುಂದಾಗುತ್ತಾಳೆ. ಶ್ರೇಷ್ಠಾ ವರ್ತನೆ ಕಂಡು ಕುಸುಮಾಗೆ ಭಯ ಕಾಡುತ್ತದೆ. ಯಾವುದೇ ಕಾರಣಕ್ಕೂ ಭಾಗ್ಯಾಗೆ ನಿಜ ಗೊತ್ತಾಗಬಾರದೆಂದು ನಿಂತಲ್ಲೇ ದೇವರ ಮೊರೆ ಹೋಗುತ್ತಾಳೆ. ಪೂಜಾ ಹಾಗೂ ಸುಂದ್ರಿ ಶ್ರೇಷ್ಠಾಳನ್ನು ಹಿಂಬಾಲಿಸುತ್ತಾರೆ. ಸುಂದರಿ ಕೈ ಮುಗಿದು ಶ್ರೇಷ್ಠಾಗೆ ಮನವಿ ಮಾಡುತ್ತಾಳೆ. ಇವಳಿಗೇಕೆ ಮನವಿ ಮಾಡುವೆ, ಒಳ್ಳೆ ಮಾತಿನಲ್ಲಿ ಹೇಳಿದರೆ ಅರ್ಥ ಮಾಡಿಕೊಳ್ಳುವುದಿಲ್ಲ, ಎಂದು ಅವಳನ್ನು ಹಿಡಿದು ಸ್ಟೋರ್ ರೂಮ್‌ಗೆ ಹೋಗಿ ಕಟ್ಟಿ ಹಾಕುತ್ತಾರೆ. ಅದನ್ನು ನೋಡಿ ಕುಸುಮಾ ಗಾಬರಿ ಆಗುತ್ತಾಳೆ. ಇವಳನ್ನು ಹೋಗಲು ಬಿಟ್ಟರೆ ಭಾಗ್ಯಕ್ಕನಿಗೆ ಎಲ್ಲಾ ನಿಜ ಹೇಳಿಬಿಡುತ್ತಾಳೆ, ಇವಳಿಗೆ ಇದೇ ಸರಿ ಎಂದು ಪೂಜಾ ಹೇಳುತ್ತಾಳೆ.
ಶ್ರೇಷ್ಠಾಳನ್ನು ಹಿಡಿದು ಸ್ಟೋರ್ ರೂಮ್‌ನಲ್ಲಿ ಕಟ್ಟಿಹಾಕುವ ಸುಂದ್ರಿ, ಪೂಜಾ
ಇತ್ತ ತಾಂಡವ್ ಜೊತೆ ದೇವಸ್ಥಾನಕ್ಕೆ ಹೋಗುವ ಭಾಗ್ಯಾ, ನನ್ನ ಮೇಲೆ ನಿಮಗೆ ಕೋಪ ಏಕೆ ಎಂದು ಕೇಳುತ್ತಾಳೆ. ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ ಎನ್ನುತ್ತಾನೆ. ಹಾಗಾದರೆ ನಿಮಗೆ ಶ್ರೇಷ್ಠಾ ಜೊತೆ ಇರಲು ಖುಷಿ ಆಗುತ್ತಾ? ಕೆಲಸ ಬಿಟ್ಟು ಯಾವಾಗಲೂ ಶ್ರೇಷ್ಠಾ ಜೊತೆ ಇರುತ್ತಿದ್ರಿ ಅವಳಿಗೂ ನಿಮಗೂ ಏನು ಸಂಬಂಧ ಎಂದು ಕೇಳುತ್ತಾಳೆ. ಇದಕ್ಕೆ ಉತ್ತರಿಸುವ ತಾಂಡವ್, ನಿನ್ನ ಪ್ರಶ್ನೆಗೆ ನಾನು ಉತ್ತರಿಸಲು ಸಾಧ್ಯವಿಲ್ಲ. ಒಂದು ತಿಂಗಳು ತಡಿ , ನಂತರ ನಿನಗೇ ಎಲ್ಲಾ ಗೊತ್ತಾಗುತ್ತೆ, ನನಗೆ ಹೇಳಲು ಅಭ್ಯಂತರವಿಲ್ಲ, ಆದರೆ ನಾನು ನಿನ್ನ ಅತ್ತೆ ಕುಸುಮಾಗೆ ಭಾಷೆ ಕೊಟ್ಟಿದ್ದೇನೆ ಎನ್ನುತ್ತಾನೆ. ಈ ಮಾತು ಕೇಳುತ್ತಿದ್ದಂತೆ ಭಾಗ್ಯಾಗೆ ಶಾಕ್ ಆಗುತ್ತದೆ. ಅದನ್ನು ಕೇಳಲು ಮನೆಗೆ ಹೋಗುತ್ತಾಳೆ.
ಸುಂದ್ರಿ, ಪೂಜಾ, ಕುಸುಮಾ ಸ್ಟೋರ್ ರೂಮ್‌ನಲ್ಲಿ ಶ್ರೇಷ್ಠಾ ಬಗ್ಗೆ ಮಾತನಾಡುವಾಗ ಭಾಗ್ಯಾ ಬರುತ್ತಾಳೆ. ಅವಳ ದನಿ ಕೇಳಿ ಕುಸುಮಾ ಗಾಬರಿ ಆಗುತ್ತಾಳೆ. ಎಲ್ಲಾ ಹೊರಗೆ ಬರುತ್ತಾರೆ. ಅವರನ್ನು ನೋಡಿ ಭಾಗ್ಯಾ ಅನುಮಾನ ವ್ಯಕ್ತಪಡಿಸುತ್ತಾಳೆ. ಎಲ್ಲರೂ ಸ್ಟೋರ್ ರೂಮ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್