logo
ಕನ್ನಡ ಸುದ್ದಿ  /  ಮನರಂಜನೆ  /  ಊಟ ಕೊಡಲು ಹೋದ ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ನಿಂದ ಎಸ್ಕೇಪ್‌ ಆದ ಶ್ರೇಷ್ಠಾ, ಮುಂದೇನು ಗತಿ?; ಭಾಗ್ಯಲಕ್ಷ್ಮೀ ಧಾರಾವಾಹಿ

ಊಟ ಕೊಡಲು ಹೋದ ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ನಿಂದ ಎಸ್ಕೇಪ್‌ ಆದ ಶ್ರೇಷ್ಠಾ, ಮುಂದೇನು ಗತಿ?; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Oct 09, 2024 10:18 AM IST

google News

ಊಟ ಕೊಡಲು ಹೋದ ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ನಿಂದ ಎಸ್ಕೇಪ್‌ ಆದ ಶ್ರೇಷ್ಠಾ, ಮುಂದೇನು ಗತಿ?; ಭಾಗ್ಯಲಕ್ಷ್ಮೀ ಧಾರಾವಾಹಿ

    • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 
    • ಅಕ್ಟೋಬರ್‌ 8ರ ಎಪಿಸೋಡ್‌ನಲ್ಲಿ ಊಟ ಕೊಡಲು ಕುಸುಮಾ ಸ್ಟೋರ್‌ ರೂಮ್‌ಗೆ ಹೋದಾಗ ಶ್ರೇಷ್ಠಾ, ಅವಳನ್ನು ತಳ್ಳಿ ಅಲ್ಲಿಂದ ಎಸ್ಕೇಪ್‌ ಆಗುತ್ತಾಳೆ. 
    • ಶ್ರೇಷ್ಠಾ, ಭಾಗ್ಯಾ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ಪೂಜಾ, ಸುಂದ್ರಿ ಅವಳನ್ನು ತಡೆದು ಮತ್ತೆ ಕಟ್ಟುತ್ತಾರೆ.
ಊಟ ಕೊಡಲು ಹೋದ ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ನಿಂದ ಎಸ್ಕೇಪ್‌ ಆದ ಶ್ರೇಷ್ಠಾ, ಮುಂದೇನು ಗತಿ?; ಭಾಗ್ಯಲಕ್ಷ್ಮೀ ಧಾರಾವಾಹಿ
ಊಟ ಕೊಡಲು ಹೋದ ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ನಿಂದ ಎಸ್ಕೇಪ್‌ ಆದ ಶ್ರೇಷ್ಠಾ, ಮುಂದೇನು ಗತಿ?; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Kannada Serial: ಮಗ ಸೊಸೆಯನ್ನು ಮತ್ತೆ ಒಂದು ಮಾಡಲು ಕುಸುಮಾ ಹರ ಸಾಹಸ ಮಾಡುತ್ತಿದ್ದಾಳೆ. ಮೊಮ್ಮಮ್ಮಕ್ಕಳ ಸಹಾಯ ಪಡೆದು ಅಪ್ಪ‌ ಅಮ್ಮ ಇಬ್ಬರೂ ಜೊತೆ ಸೇರಿ ಹೋಂ ವರ್ಕ್‌ ಮಾಡುವಂತೆ ಮಾಡುತ್ತಾಳೆ. ತಾಂಡವ್‌ ಕೂಡಾ ಖುಷಿಯಾಗಿ ಮಗನಿಗೆ ಹೋಂ ವರ್ಕ್‌ ಮಾಡಿಸುತ್ತಾನೆ.

ಸ್ಟೋರ್‌ ರೂಮ್‌ನಿಂದ ತಪ್ಪಿಸಿಕೊಂಡ ಶ್ರೇಷ್ಠಾ

ಮರುದಿನ ಕುಸುಮಾ ಶ್ರೇಷ್ಠಾಗೆ ತಿಂಡಿ ಕೊಡಲು ಹೋದಾಗ ಅಲ್ಲಿ ಶ್ರೇಷ್ಠಾ ಇರದಿದ್ದನ್ನು ಕಂಡು ಗಾಬರಿ ಆಗುತ್ತಾಳೆ. ಹಿಂದೆ ಅವಿತಿದ್ದ ಶ್ರೇಷ್ಠಾ , ಕುಸುಮಾ ಬಳಿ ಬಂದು ನೀವು ಏನು ಮಾಡಿದರೂ ನನ್ನನ್ನು ತಡೆಯಲು ಸಾಧ್ಯವಿಲ್ಲ, ಭಾಗ್ಯಾಗೆ ಎಲ್ಲಾ ನಿಜ ಹೇಳುತ್ತೇನೆ ಎನ್ನುತ್ತಾಳೆ. ತಿಂಡಿ ಕೊಡಲು ಹೋದಾಗ ಅದನ್ನು ಕೆಳಗೆ ಎಸೆಯುತ್ತಾಳೆ. ಎಷ್ಟೋ ಜನರು ಒಂದು ಹೊತ್ತಿನ ಊಟಕ್ಕಾಗಿ ಕಷ್ಟಪಡುತ್ತಿದ್ದಾರೆ. ಆದರೆ ನೀನು ತಿಂಡಿ ಮೇಲೆ ದುರಹಂಕಾರ ತೋರುತ್ತಿದ್ದೀಯ ಎಂದು ಕುಸುಮಾ ಕೋಪಗೊಳ್ಳುತ್ತಾಳೆ. ಕುಸುಮಾಳನ್ನು ತಳ್ಳಿ ಸ್ಟೋರ್‌ ರೂಮ್‌ ಬಾಗಿಲು ಹಾಕಿ ಶ್ರೇಷ್ಠಾ, ಅಲ್ಲಿಂದ ಎಸ್ಕೇಪ್‌ ಆಗುತ್ತಾಳೆ. ಭಯ, ಗಾಬರಿಯಿಂದ ಕುಸುಮಾ ಬಾಗಿಲು ತಟ್ಟುತ್ತಾಳೆ. ದೇವರೇ ಭಾಗ್ಯಾಗೆ ನಿಜ ಗೊತ್ತಾಗಬಾರದು ಎಂದು ಪ್ರಾರ್ಥಿಸುತ್ತಾಳೆ.

ಭಾಗ್ಯಾ ಬಳಿ ಹೋಗುತ್ತಿದ್ದ ಶ್ರೇಷ್ಠಾಳನ್ನು ತಡೆದ ಸುಂದ್ರಿ, ಪೂಜಾ

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಾಳನ್ನು ಶ್ರೇಷ್ಠಾ ನೋಡುತ್ತಾಳೆ. ಅವಳ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ಪೂಜಾ, ಸುಂದ್ರಿ ಶ್ರೇಷ್ಠಾ ಬಾಯಿ ಮುಚ್ಚಿ ಅಲ್ಲಿಂದ ಎಳೆದುಕೊಂಡು ಹೋಗುತ್ತಾರೆ. ಭಾಗ್ಯಾಗೆ ನಾನು ಇಲ್ಲಿ ಇರುವುದು ಗೊತ್ತಾಗಲಿ ಎಂದು ಶ್ರೇಷ್ಠಾ, ಪಕ್ಕದಲ್ಲೇ ಇದ್ದ ದೊಡ್ಡ ಹೂವಿನ ವಾಸ್‌ ಒದೆಯುತ್ತಾಳೆ. ಒದ್ದ ರಭಸಕ್ಕೆ ಅದು ಬಿದ್ದು ಒಡೆಯುತ್ತದೆ. ಅದನ್ನು ನೋಡುವ ಭಾಗ್ಯಾ ಇದು ಹೇಗೆ ಕೆಳಗೆ ಬಿತ್ತು ಎಂದುಕೊಳ್ಳುತ್ತಾಳೆ. ಅಲ್ಲಿಗೆ ಬರುವಷ್ಟರಲ್ಲಿ ಪೂಜಾ, ಸುಂದ್ರಿ ಶ್ರೇಷ್ಠಾಳನ್ನು ಮೇಲೆ ಎಳೆದೊಯ್ಯುತ್ತಾರೆ.

ಕುಸುಮಾ ಗಾಬರಿಯಾಗಿದ್ದನ್ನು ಕಂಡು ಧರ್ಮರಾಜ್‌ಗೆ ಅನುಮಾನ

ಇತ್ತ ಕುಸುಮಾ ಸ್ಟೋರ್‌ ರೂಮ್‌ನಲ್ಲಿ ಅರಚುವುದನ್ನು ಕಂಡ ಧರ್ಮರಾಜ್‌, ಬಾಗಿಲು ತೆಗೆದು ಏನಾಯ್ತು? ಯಾರು ನಿನ್ನನ್ನು ಇಲ್ಲಿ ಕೂಡಿ ಹಾಕಿದ್ದು? ಏಕೆ ಗಾಬರಿ ಆಗಿದ್ದೀಯ ಎಂದು ಕೇಳುತ್ತಾರೆ. ನಾನು ಏನೋ ತೆಗೆದುಕೊಳ್ಳಲು ಇಲ್ಲಿಗೆ ಬಂದೆ, ಅಷ್ಟರಲ್ಲಿ ಯಾರೋ ಗೊತ್ತಿಲ್ಲದೆ ಬಾಗಿಲು ಹಾಕಿಕೊಂಡು ಹೋಗಿದ್ದಾರೆ ಎನ್ನುತ್ತಾಳೆ. ಅಷ್ಟರಲ್ಲಿ ಪೂಜಾ , ಸುಂದ್ರಿ ಮತ್ತೆ ಶ್ರೇಷ್ಠಾಳನ್ನು ಸ್ಟೋರ್‌ ರೂಮ್‌ ಬಳಿ ಕರೆತರುತ್ತಾರೆ. ಅಲ್ಲಿ ಧರ್ಮರಾಜ್‌ ಇರುವುದನ್ನು ನೋಡಿ ಗಾಬರಿ ಆಗುತ್ತಾರೆ. ಆತ ತಿರುಗಿ ನೋಡುವಷ್ಟರಲ್ಲಿ ಮರೆ ಆಗುತ್ತಾರೆ. ಇಲ್ಲಿ ನಿಲ್ಲುವುದು ಬೇಡವೆಂದು ಕುಸುಮಾ, ಧರ್ಮರಾಜ್‌ ಕೈ ಹಿಡಿದು ಅಲ್ಲಿಂದ ಕರೆದೊಯ್ಯುತ್ತಾಳೆ.

ಮತ್ತೆ ಸ್ಟೋರ್‌ ರೂಮ್‌ನಲ್ಲಿ ಬಂಧಿಯಾದ ಶ್ರೇಷ್ಠಾ 

ಅವರು ಹೋಗುತ್ತಿದ್ದಂತೆ ಪೂಜಾ ಸುಂದ್ರಿ ಮತ್ತೆ ಶ್ರೇಷ್ಠಾಳನ್ನು ಸ್ಟೋರ್‌ ರೂಮ್‌ಗೆ ಕರೆತಂದು ಕಟ್ಟಿಹಾಕುತ್ತಾರೆ. ನೀನು ಅಷ್ಟು ಸುಲಭವಾಗಿ ಭಾಗ್ಯಾಗೆ ನಿಜ ಹೇಳಲು ಸಾಧ್ಯವಿಲ್ಲ , ಹೇಳಲು ನಾವು ಬಿಡುವುದೂ ಇಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ನಾವು ಹೇಳಿದಂತೆ ಕೇಳು, ಭಾಗ್ಯಾ ಸುದ್ದಿಗೆ ಬರುವುದಿಲ್ಲ ಎಂದು ನೀನು ಪ್ರಮಾಣ ಮಾಡಿದರೆ ನಾನು ಬಿಟ್ಟುಬಿಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ನೋವು ಅನುಭವಿಸಬೇಕು, ತಾಂಡವ್‌ ನನ್ನವನಾಗಬೇಕು ಅದೇ ನನ್ನ ಗುರಿ ಎನ್ನುತ್ತಾಳೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ