Annayya Serial: ಮದುವೆ ಮನೆಯಿಂದ ಓಡಿ ಹೋದ ಪಾರುಗೆ ಸಿಗಲಿಲ್ಲ ಸಿದ್ದಾರ್ಥ್; ಊರವರ ಮುಂದೆ ಮರ್ಯಾದೆ ಕಳೆದುಕೊಂಡ ವೀರಭದ್ರ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮದುವೆ ಮನೆಯಿಂದ ಓಡಿ ಹೋದ ಪಾರುಗೆ ಸಿಗಲಿಲ್ಲ ಸಿದ್ದಾರ್ಥ್; ಊರವರ ಮುಂದೆ ಮರ್ಯಾದೆ ಕಳೆದುಕೊಂಡ ವೀರಭದ್ರ

Annayya Serial: ಮದುವೆ ಮನೆಯಿಂದ ಓಡಿ ಹೋದ ಪಾರುಗೆ ಸಿಗಲಿಲ್ಲ ಸಿದ್ದಾರ್ಥ್; ಊರವರ ಮುಂದೆ ಮರ್ಯಾದೆ ಕಳೆದುಕೊಂಡ ವೀರಭದ್ರ

ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ಮನೆಯಲ್ಲಿ ಎಲ್ಲರಿಗೂ ಗಾಬರಿ ಆಗಿದೆ. ಜೊತೆಗೆ ಶಿವು ಕೂಡ ಹೋಗಿದ್ದಾನೆ. ಆದರೆ ಇತ್ತ ವೀರಭದ್ರನ ಮರ್ಯಾದೆ ಹೋಗಿದೆ. ಮಗಳು ಓಡಿ ಹೋಗಿದ್ದಾಳೆ ಎಂದರೆ ಅದಕ್ಕಿಂತ ಅವಮಾನ ಬೇಕೆ? ಎಂದು ಅವನು ಆಲೋಚಿಸಿ ಸಿಟ್ಟಾಗಿದ್ದಾನೆ.

ಮದುವೆ ಮನೆಯಿಂದ ಓಡಿ ಹೋದ ಪಾರುಗೆ ಸಿಗಲಿಲ್ಲ ಸಿದ್ದಾರ್ಥ್
ಮದುವೆ ಮನೆಯಿಂದ ಓಡಿ ಹೋದ ಪಾರುಗೆ ಸಿಗಲಿಲ್ಲ ಸಿದ್ದಾರ್ಥ್ (Zee Kannada)

ಅಣ್ಣಯ್ಯ ಧಾರಾವಾಹಿಯ ಮಹಾ ತಿರುವಿಗೆ ಜನ ಕಾದು ಕುಳಿತಿದ್ದಾರೆ. ಪಾರು ಯಾರನ್ನು ಮದುವೆ ಆಗ್ತಾಳೆ ಅನ್ನೋದೇ ಈಗ ತುಂಬಾ ಗೊಂದಲ ಆಗಿದೆ. ಸೋಮೇಗೌಡನನ್ನು ಮದುವೆ ಆಗ್ತಾಳಾ? ಸಿದ್ದಾರ್ಥ್‌ನ ಮದುವೆ ಆಗ್ತಾಳಾ? ಕೊನೆಗೆ ಯಾರನ್ನೂ ಆಗದೆ ಶಿವುನೇ ಮದುವೆ ಆಗ್ತಾಳಾ? ಅನ್ನೋದು ಈಗ ಎಲ್ಲರಲ್ಲಿರುವ ಪ್ರಶ್ನೆ. ಶಿವುಗೆ ಅವಳ ಮೇಲೆ ಪ್ರೀತಿ ಇದ್ದರೂ ಅವಳಿಗೆ ಮಾತ್ರ ಸಿದ್ದಾರ್ಥ್‌ನ ಕಂಡ್ರೆನೇ ತುಂಬಾ ಇಷ್ಟ. ಹಾಗಾಗಿ ಅವಳು ಶಿವುನಾ ಮದುವೆ ಆಗಲು ಒಪ್ಪೋದಿಲ್ಲ ಎಂದು ಅನಿಸುತ್ತದೆ. ಹೀಗಿರುವಾಗ ಕಥೆ ಮುಂದೆ ಯಾವ ರೀತಿ ತಿರುವುದು ಪಡೆದುಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಪಾರು ನಾಪತ್ತೆ

ಇಂದಿನ ಎಪಿಸೋಡ್‌ನಲ್ಲಿ ಪಾರು ತಾಯಂದಿರು ಅವಳ ಕೋಣೆಗೆ ಹೋಗಿ ನೋಡಿದ್ದಾರೆ. ಬೆಳಿಗ್ಗೆ ಅವಳನ್ನು ಬೇಗ ಎಬ್ಬಿಸಿ ರೆಡಿ ಮಾಡಬೇಕು ಎಂದು ಅವರು ಅಂದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆಗಿದ್ದೇ ಬೇರೆ. ಹಾಸಿಗೆ ಮೇಲೆ ದಿಂಬನ್ನು ಸಾಲಾಗಿ ಜೋಡಿಸಿಟ್ಟು ಪಾರು ಅಲ್ಲಿಂದ ನಾಪತ್ತೆ ಆಗಿರುತ್ತಾಳೆ. ಅವಳು ಅಲ್ಲಿ ಇಲ್ಲದೇ ಇರುವುದನ್ನು ನೋಡಿ ಶಾಕ್ ಆಗಿ ಅವಳ ತಾಯಿ ಒಳಗಡೆಯೇ ಕುಸಿದು ಕುಳಿತಿರುತ್ತಾಳೆ. ನಂತರ ಶಿವು ತಂಗಿಯರು ಬರುತ್ತಾರೆ.

ಕಾಲ ಮಿಂಚಿ ಹೋಗಿದೆ

ಅವರು ಬಂದು ಏನಾಯ್ತು ಅತ್ತೆ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಅಲ್ಲಿ ಪಾರು ಕಾಣ್ತಾ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಾಗುತ್ತದೆ. ಇನ್ನು ಶಾಸ್ತ್ರಗಳೆಲ್ಲ ಶುರುವಾಗುವ ಸಮಯಕ್ಕೆ ವೀರಭದ್ರ ಕೇಳ್ತಾನೆ ತನ್ನ ಮಗಳು “ಪಾರು ಎಲ್ಲಿ” ಎಂದು. ಆದರೆ ಅವಳು ಅಲ್ಲಿಲ್ಲ ಎಂಬ ವಿಷಯವನ್ನು ಹೇಳಲು ಯಾರಿಗೂ ಧೈರ್ಯ ಸಾಲುವುದಿಲ್ಲ. ಕಾಲ ಮಿಂಚಿ ಹೋದ ಕಾರಣ ಪಾರು ತಾಯಿ ಸತ್ಯ ಹೇಳುತ್ತಾಳೆ.

ಆ ಮಾತನ್ನು ಕೇಳಿದ ತಕ್ಷಣ ವೀರಭದ್ರನಿಗೆ ಅವಮಾನ ಆಗುತ್ತದೆ. ಅದನ್ನು ಅಜ್ಜಿ ಕೂಡ ಕೇಳಿಸಿಕೊಳ್ಳುತ್ತಾರೆ “ಈ ಮನೆ ಮಗಳು ಓಡಿ ಹೋಗಿದ್ದಾಳೆ” ಎಂದು ದೊಡ್ಡದಾಗಿ ಕೂಗುತ್ತಾರೆ. ಅದರಿಂದ ಸುದ್ದಿ ಹಬ್ಬುತ್ತದೆ.

ಇನ್ನು ಇತ್ತ ಪಾರು ಮತ್ತು ಶಿವು ಸಿದ್ದಾರ್ಥ್‌ ಮನೆಗೆ ಹೋಗಿರುತ್ತಾರೆ. ಆ ರಾತ್ರಿ ಹೋಗಿ ಅವನ ಮನೆ ಬಾಗಿಲು ಬಡಿಯುತ್ತಾರೆ. ಆದರೆ ಅಲ್ಲಿ ಯಾರೂ ಇರೋದಿಲ್ಲ. ಈ ಮನೆಯವರು ಮನೆ ಖಾಲಿ ಮಾಡಿದ್ದಾರೆ. ನಿಮಗೆ ವಿಷಯ ತಿಳಿಸಿಲ್ವಾ? ಅಂತ ಪಕ್ಕದ ಮನೆಯವರು ಹೇಳುತ್ತಾರೆ. ಅದನ್ನು ಕೇಳಿ ಪಾರುಗೆ ಶಾಕ್ ಆಗಿದೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner