ಕಾಮಿಡಿಯಿಂದ ಸೈಕಲಾಜಿಕಲ್ ಥ್ರಿಲ್ಲರ್ ವರೆಗೆ.. ಈ ವಾರಾಂತ್ಯ ಒಟಿಟಿಗೆ ಲಗ್ಗೆ ಇಟ್ಟ ಹತ್ತು ಹಲವು ಸಿನಿಮಾ, ವೆಬ್‌ಸಿರೀಸ್‌ಗಳು ಹೀಗಿವೆ
Dec 14, 2024 08:27 PM IST
ಕಾಮಿಡಿಯಿಂದ ಸೈಕಲಾಜಿಕಲ್ ಥ್ರಿಲ್ಲರ್ ವರೆಗೆ.. ಈ ವಾರಾಂತ್ಯ ಒಟಿಟಿಗೆ ಲಗ್ಗೆ ಇಟ್ಟ ಹತ್ತು ಹಲವು ಸಿನಿಮಾ, ವೆಬ್‌ಸಿರೀಸ್‌ಗಳು ಹೀಗಿವೆ
- OTT Releases This Week: ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಹತ್ತು ಹಲವು ಬೇರೆ ಬೇರೆ ಜಾನರ್‌ನ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಅದರಲ್ಲೂ ಆಯ್ದ ಒಂದಷ್ಟು ಸಿನಿಮಾಗಳು ಇಲ್ಲಿವೆ. ಈ ವಾರಾಂತ್ಯಕ್ಕೆ ನಿಮ್ಮ ಲಿಸ್ಟ್‌ನಲ್ಲಿ ಈ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳಿರಲಿ.
OTT Releases This Week: ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಹತ್ತು ಹಲವು ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಆ ಪೈಕಿ ಒಂದಷ್ಟು ಬೇರೆ ಬೇರೆ ಭಾಷೆಗಳ ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿ ಪ್ರಸಾರ ಆರಂಭಿಸಿವೆ. ಕ್ರೈಂ ಥ್ರಿಲ್ಲರ್ ಸಿನಿಮಾಗಳಿಂದ ಹಿಡಿದು, ಸೈಕಲಾಜಿಕಲ್ ಥ್ರಿಲ್ಲರ್, ಆಕ್ಷನ್ ಸಿನಿಮಾಗಳೂ ಈ ವಾರ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ ಇವೆ. ಹಾಗಾದರೆ ಆ ಸಿನಿಮಾಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ.
ಮೆಕ್ಯಾನಿಕ್ ರಾಕಿ
ವಿಶ್ವಕ್ ಸೇನ್ ನಟನೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ ಮೆಕ್ಯಾನಿಕ್ ರಾಕಿ ಮೂಲ ತೆಲುಗು ಜತೆಗೆ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಡಿಸೆಂಬರ್ 13 ರಿಂದಲೇ ಮೆಕ್ಯಾನಿಕ್ ರಾಕಿ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸಿದೆ.
ಹರಿಕಥಾ ವೆಬ್ ಸಿರೀಸ್
ತೆಲುಗು ಪೌರಾಣಿಕ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಹರಿಕಥೆ ಡಿಸೆಂಬರ್ 13 ರಿಂದಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಸ್ಟ್ರೀಮಿಂಗ್ ಆಗುತ್ತಿದೆ. ಬಿಗ್ ಬಾಸ್ ದಿವಿ ಅಭಿನಯದ ಹರಿಕಥೆ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ರೋಟಿ ಕಪಡಾ ರೊಮ್ಯಾನ್ಸ್ ಒಟಿಟಿ
ತೆಲುಗಿನ ರೋಟಿ ಕಪಡಾ ರೊಮ್ಯಾನ್ಸ್ ಬೋಲ್ಡ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಡಿಸೆಂಬರ್ 12 ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವು ಈಟಿವಿ ವಿನ್ ಒಟಿಟಿಯಲ್ಲಿ ಲಭ್ಯವಿದೆ.
ಬೊಗೆನ್ವಿಲ್ಲಾ ಒಟಿಟಿ
ಮಲಯಾಳಂನಲ್ಲಿ ತಯಾರಾದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಬೊಗೆನ್ವಿಲ್ಲಾ. ಈ ಸಿನಿಮಾ ಡಿಸೆಂಬರ್ 13 ರಿಂದ ಸೋನಿ ಲೈವ್ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ಈ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಬ್ಯಾಂಡಿಶ್ ಬ್ಯಾಂಡಿಟ್ಸ್ 2
ಬ್ಯಾಂಡಿಶ್ ಬ್ಯಾಂಡಿಟ್ಸ್ 2 ಹಿಂದಿಯ ರೊಮ್ಯಾಂಟಿಕ್ ಡ್ರಾಮಾ ವೆಬ್ ಸರಣಿಯಾಗಿದೆ. ಡಿಸೆಂಬರ್ 13 ರಿಂದ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಬ್ಯಾಂಡಿಶ್ ಬ್ಯಾಂಡಿಟ್ಸ್ 2 ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದು.
ಮಿಸ್ ಮ್ಯಾಚ್ಡ್ 3
ಹಿಂದಿ ರೊಮ್ಯಾಂಟಿಕ್ ವೆಬ್ ಸರಣಿ ಮಿಸ್ ಮ್ಯಾಚ್ಡ್ ಸೀಸನ್ 3 ಡಿಸೆಂಬರ್ 13 ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮಿಸ್ ಮ್ಯಾಚ್ಡ್ 3 ಹಿಂದಿ, ತೆಲುಗು, ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲಿ ಒಟಿಟಿಯಲ್ಲಿ ಲಭ್ಯವಿರುತ್ತದೆ.
ಕ್ಯಾರಿ ಆನ್ ಒಟಿಟಿ
ಆಕ್ಷನ್ ಥ್ರಿಲ್ಲರ್ ಕ್ಯಾರಿ ಆನ್ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಡಿಸೆಂಬರ್ 13ರಂದು ಬಿಡುಗಡೆಯಾದ ಕ್ಯಾರಿ ಆನ್ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ವೀಕ್ಷಿಸಬಹುದು.
ಅಮೆಜಾನ್ ಪ್ರೈಮ್ ಒಟಿಟಿ
ರೆಡ್ ಒನ್ (ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾದ ಇಂಗ್ಲಿಷ್ ಆಕ್ಷನ್ ಕಾಮಿಡಿ ಚಲನಚಿತ್ರ) - ಡಿಸೆಂಬರ್ 12
ಹೌ ಟು ವಿನ್ ಎ ಪ್ರಿನ್ಸ್ (ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಲಭ್ಯವಿರುವ ಇಂಗ್ಲಿಷ್ ಚಿತ್ರ) - ಡಿಸೆಂಬರ್ 12
ಹಲೋ ಅಗೇನ್ (ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿರುವ ತೈವಾನ್ ವೆಬ್ ಸರಣಿ) - ಡಿಸೆಂಬರ್ 12