logo
ಕನ್ನಡ ಸುದ್ದಿ  /  ಮನರಂಜನೆ  /  Barroz Trailer: ಭೂತ -ವರ್ತಮಾನದ ನಡುವಿನ ಕಾಲ್ಪನಿಕ ಕಥೆ; ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ನಟಿಸಿ, ನಿರ್ದೇಶಿಸಿದ ಬರೋಜ್‌ ಸಿನಿಮಾ

Barroz Trailer: ಭೂತ -ವರ್ತಮಾನದ ನಡುವಿನ ಕಾಲ್ಪನಿಕ ಕಥೆ; ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ನಟಿಸಿ, ನಿರ್ದೇಶಿಸಿದ ಬರೋಜ್‌ ಸಿನಿಮಾ

Dec 14, 2024 07:27 AM IST

google News

ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ಬರೋಜ್‌ ಸಿನಿಮಾ

    • ಮೋಹನ್‌ ಲಾಲ್‌ ನಟಿಸಿ, ನಿರ್ದೇಶಿಸಿದ ಬರೋಜ್‌ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಝಲಕ್‌ಗಳ ಮೂಲಕವೇ ಸುದ್ದಿಯಾಗಿದ್ದ ಈ ಸಿನಿಮಾ, ಈಗ ಟ್ರೇಲರ್‌ ಹೊತ್ತು ಬಂದಿದೆ. ಇದೇ ಮಾಸಾಂತ್ಯಕ್ಕೆ ಗ್ರ್ಯಾಂಡ್‌ ಆಗಿ ಈ ಸಿನಿಮಾ ರಿಲೀಸ್‌ ಆಗಲಿದೆ. 
ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ಬರೋಜ್‌ ಸಿನಿಮಾ
ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ಬರೋಜ್‌ ಸಿನಿಮಾ

Barroz 3D -Guardian of Treasures Trailer: ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಈಗ ಬರೋಜ್‌ ಸಿನಿಮಾ ಮೂಲಕ ಎದುರಾಗುತ್ತಿದ್ದಾರೆ. ಅಂದರೆ, 40 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಮೊದಲ ಸಲ ನಿರ್ದೇಶಕನ ಕ್ಯಾಪ್‌ ಧರಿಸಿ, ಬರೋಜ್‌ ಅನ್ನೋ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಮೇಕಿಂಗ್‌ ಮತ್ತು ಕಂಟೆಂಟ್‌ ಮೂಲಕವೇ ಎಲ್ಲರ ಗಮನ ಸೆಳೆದ ಈ ಸಿನಿಮಾ ಈಗ ಬಿಡುಗಡೆಯ ಸನಿಹ ಬಂದಿದೆ. ಅಂದರೆ, ಇದೇ ಮಾಸಾಂತ್ಯಕ್ಕೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಅದೂ 3Dಯಲ್ಲಿ. ಈಗ ಇದೇ ಚಿತ್ರದ ಕನ್ನಡ ಟ್ರೇಲರ್‌ ಹೊರಬಂದಿದೆ. ರಿಷಬ್‌ ಶೆಟ್ಟಿ ಟ್ರೇಲರ್ ಹಂಚಿಕೊಂಡಿದ್ದಾರೆ. ಕನ್ನಡದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಮೋಹನ್‌ಲಾಲ್‌ ತಮ್ಮ ವೃತ್ತಿ ಜೀವನದ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದಾರೆ. ಈ ವರೆಗೂ ಸುಮಾರು 40 ವರ್ಷಗಳ ಸುದೀರ್ಘ ಪಯಣ ಮತ್ತು 360ಕ್ಕೂ ಹೆಚ್ಚು ಚಿತ್ರಗಳೊಂದಿಗೆ, ಎಲ್ಲ ಪ್ರಕಾರದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಮೂಲಕವೇ ಗಮನ ಸೆಳೆದ ಇದೇ ನಟ ಬರೋಜ್‌ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಕಾಲ್ಪನಿಕ ಲೋಕವೇ ಧರೆಗಿಳಿದಂತೆ ಈ ಸಿನಿಮಾವನ್ನು ಅವರು ಕಟ್ಟಿಕೊಟ್ಟಿದ್ದಾರೆ.

ಏನಿದೆ ಟ್ರೇಲರ್‌ನಲ್ಲಿ?

ವಾಸ್ಕೋಡಗಾಮಾ ಅರಮನೆಯೊಳಗೆ ಬರೋಜ್ ಎಂಬ ಭೂತವಿದೆ ಎಂದು ಟ್ರೇಲರ್ ಆರಂಭವಾಗುತ್ತದೆ. ಆ ಬರೋಜ್‌ 100 ವರ್ಷಗಳಿಂದ ಅಲ್ಲಿನ ನಿಧಿಯನ್ನು ಕಾವಲು ಕಾಯುತ್ತಿದ್ದಾನೆ. ಹೀಗೆ ತೆರೆದುಕೊಳ್ಳುವ ಟ್ರೇಲರ್‌, ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಅಚ್ಚರಿಯ ಲೋಕವನ್ನು ಪ್ರೇಕ್ಷಕನ ಮುಂದೆ ಬಿಚ್ಚಿಡುತ್ತದೆ. ಭೂತ ಮತ್ತು ವರ್ತಮಾನದ ನಡುವೆ ಟ್ರೈಮ್‌ ಟ್ರಾವೆಲಿಂಗ್‌ ಜಾನರ್‌ನಲ್ಲಿ ಈ ಸಿನಿಮಾ ಸಿದ್ಧವಾಗಿದೆ.

ಪ್ಯಾನ್‌ ಇಂಡಿಯನ್‌ ಸಿನಿಮಾ

ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ ಸಿನಿಮಾಗಳು ಮೂಲ ಮಲಯಾಳಿ ಮಾತ್ರವಲ್ಲದೆ, ಭಾರತದ ಇತರ ಭಾಷೆಗಳಿಗೂ ಡಬ್‌ ಆಗಿ ಬಿಡುಗಡೆ ಆಗುತ್ತಿವೆ. ಅದರಂತೆ, ಬರೋಜ್‌ ಸಿನಿಮಾ ಸಹ ಮೂಲ ಮಲಯಾಳಂ ಜತೆಗೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ, 3ಡಿಯಲ್ಲಿ ಬಿಡುಗಡೆ ಆಗಲಿದೆ.

ಡಿಸೆಂಬರ್‌ 25ಕ್ಕೆ ತೆರೆಗೆ

ಅಕ್ಷಯ್ ಕುಮಾರ್ ಅವರ ಸಮ್ಮುಖದಲ್ಲಿ ಇದೇ ಚಿತ್ರದ ಹಿಂದಿ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಇದೀಗ ಕನ್ನಡದಲ್ಲಿಯೂ ಟ್ರೇಲರ್‌ ಮೋಡಿ ಮಾಡುತ್ತಿದೆ. ಕಾಲ್ಪನಿಕ ಕಥೆಯ ಮೂಲಕವೇ ವಿಶಿಷ್ಟ ಮೇಕಿಂಗ್‌ನಿಂದಲೂ ಟ್ರೇಲರ್‌ ಶ್ರೀಮಂತವಾಗಿದೆ. ಈ ಚಿತ್ರವು ಡಿಸೆಂಬರ್ 25ರ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಆಶೀರ್ವಾದ್ ಸಿನಿಮಾಸ್‌ ಬ್ಯಾನರ್‌ನಲ್ಲಿ ಆಂಟೋನಿ ಪೆರುಂಬವೂರ್ ಬರೋಜ್‌ ಸಿನಿಮಾವನ್ನು ನಿರ್ಮಿಸಿದ್ದಾರೆ. ಪಿವಿಆರ್ ಪಿಕ್ಚರ್ಸ್ ಈ ಸಿನಿಮಾವನ್ನು ವಿತರಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ