logo
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಬಡವರಿಗೆ ಬದುಕುವಷ್ಟೂ ಸರ್ಕಾರ ನೀಡಬಾರದೇ? ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆಗೆ ಇದೆಂಥ ಅನ್ಯಾಯ ಎಂದ ಚೇತನ್‌ ಅಹಿಂಸಾ

Chetan Ahimsa: ಬಡವರಿಗೆ ಬದುಕುವಷ್ಟೂ ಸರ್ಕಾರ ನೀಡಬಾರದೇ? ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆಗೆ ಇದೆಂಥ ಅನ್ಯಾಯ ಎಂದ ಚೇತನ್‌ ಅಹಿಂಸಾ

Dec 01, 2023 02:48 PM IST

Chetan Ahimsa: ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆಗೆ ಇದೆಂಥ ಅನ್ಯಾಯ ಎಂದ ಚೇತನ್‌ ಅಹಿಂಸಾ

    • ಸರ್ಕಾರ ಜನರಿಗೆ ಉಚಿತ ಸೇವೆಗಳನ್ನು ನೀಡಬಾರದೆಂಬ ಹೇಳಿಕೆಗೆ ಸಂಬಂಧಿಸಿಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ತಿರುಗೇಟು ನೀಡಿದ್ದಾರೆ. 
Chetan Ahimsa: ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆಗೆ ಇದೆಂಥ ಅನ್ಯಾಯ ಎಂದ ಚೇತನ್‌ ಅಹಿಂಸಾ
Chetan Ahimsa: ಇನ್ಫೋಸಿಸ್‌ ನಾರಾಯಣ ಮೂರ್ತಿ ಹೇಳಿಕೆಗೆ ಇದೆಂಥ ಅನ್ಯಾಯ ಎಂದ ಚೇತನ್‌ ಅಹಿಂಸಾ

Chethan Ahimsa: ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ತಮ್ಮ ನೇರ ನಿಲುವಿನ ಹೇಳಿಕೆಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ, ಸಿನಿಮಾ ಸೇರಿ ನಿತ್ಯದ ಆಗುಹೋಗುಗಳನ್ನು ತಮ್ಮದೇ ಶೈಲಿಯಲ್ಲಿ ವಿಡಂಬನೆ ಮಾಡಿ, ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಿರುವಾಗಲೇ ಇತ್ತೀಚಿನ ಕಳೆದ ಕೆಲವು ತಿಂಗಳುಗಳಿಂದ ಇನ್ಫೂಸಿಸ್‌ನ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಹೇಳಿಕೆಗಳ ಬಗ್ಗೆ ಅಪಸ್ವರ ಎತ್ತುತ್ತಲೇ ಇರುತ್ತಾರೆ ಚೇತನ್.‌ ಇದೀಗ ಅದು ಮತ್ತೆ ಮುಂದುವರಿದಿದೆ.‌

ಟ್ರೆಂಡಿಂಗ್​ ಸುದ್ದಿ

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

ಪೂಜಾ ಹೆಗ್ಡೆ ತುಳು ಹುಡುಗನ ಮದುವೆಯಾಗ್ತಾರ, ಕನ್ನಡ ಸಿನಿಮಾದಲ್ಲಿ ನಟಿಸ್ತಾರ? ಕಣಜಾರು ದೇಗುಲಕ್ಕೆ ಭೇಟಿ ನೀಡಿದ ತುಳುನಾಡಿನ ನಟಿ ಹೀಗಂದ್ರು

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್‌; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು

ಈ ಹಿಂದೆ ದೇಶದ ಅಭಿವೃದ್ಧಿ ಮತ್ತು ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಸಲಹೆ ನೀಡಿದ್ದರು. ಹೀಗೆ ನೀಡಿದ್ದ ಸಲಹೆ ವಿರುದ್ಧವೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ತಿರುಗಿ ಬಿದ್ದಿದ್ದರು. ಯುವಕರು ಹೆಚ್ಚೆಚ್ಚು ಕೆಲಸ ಮಾಡಿದಷ್ಟು ನಿಮ್ಮ ಬ್ಯಾಂಕ್‌ ಬ್ಯಾಲನ್ಸ್‌ ಸಹ ಏರಿಕೆ ಕಾಣಲಿದೆ ಅಲ್ವಾ? ಎಂದು ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಉಚಿತ ಯೋಜನೆಗಳ ಬಗ್ಗೆ ಮಾತನಾಡಿದ್ದ ನಾರಾಯಣ್ ಮೂರ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ.‌

ನಾರಾಯಣ್‌ ಮೂರ್ತಿ ಅವರ ಹೇಳಿಕೆ ಏನು?

ಇತ್ತೀಚೆಗಷ್ಟೇ ಬೆಂಗಳೂರು ಟೆಕ್ ಸಮ್ಮಿಟ್ 2023ರಲ್ಲಿ ಇನ್ಫೋಸಿಸ್ ಸಹಸಂಸ್ಥಾಪಕರಾದ ನಾರಾಯಣ ಮೂರ್ತಿ ಸಹ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸರ್ಕಾರಗಳು ರಾಜ್ಯದ ಜನತೆಗೆ ಉಚಿತ ಯೋಜನೆಗಳನು ನೀಡುತ್ತಿವೆ. ಈ ಯೋಜನೆ ಮತ್ತು ಸಬ್ಸಿಡಿಗಳಿಗೆ ನನ್ನ ವಿರೋಧವಿಲ್ಲ. ಆದರೆ, ಹಾಗೆ ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆದುಕೊಂಡವರು, ಸಮಾಜಕ್ಕೂ ಏನಾದರೂ ಕೊಡುವಂತಿರಬೇಕು. ಆಗ ಆ ಉಚಿತ ಸ್ಕೀಮ್‌ಗಳಿಗೆ ಅರ್ಥ ಸಿಗುತ್ತದೆ. ಒಂದು ವೇಳೆ ಸರ್ಕಾರ ಕೊಡುವ ಉಚಿತಗಳನ್ನು ಪಡೆದುಕೊಂಡು, ಸರ್ಕಾರಕ್ಕೆ ಏನೂ ಕೊಡಲು ಆಗದಿದ್ದರೂ, ತಮ್ಮ ಮಕ್ಕಳಿಗಾದರೂ ಒಳ್ಳೆಯ ಶಿಕ್ಷಣ ಕೊಡಿಸಿ ಎಂದಿದ್ದಾರೆ.

ಚೇತನ್‌ ಅಹಿಂಸಾ ಮಾತೇನು?

ನಾರಾಯಣ ಮೂರ್ತಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಚೇತನ್, "ನಾರಾಯಣ ಮೂರ್ತಿ ಹೇಳುತ್ತಾರೆ: 'ಉಚಿತವಾಗಿ ಏನನ್ನೂ ಸರ್ಕಾರ ನೀಡಬಾರದು’. ನಾರಾಯಣ ಮೂರ್ತಿಯವರೇ, ನಿಮಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ದಶಕಗಳಿಂದ ಸರ್ಕಾರದಿಂದ ಸಾವಿರಾರು ಕೋಟಿ ಮೌಲ್ಯದ ತೆರಿಗೆ ವಿನಾಯಿತಿ ಮತ್ತು ಭೂಮಿ/ ವಿದ್ಯುತ್/ ನೀರಿನ ಸಬ್ಸಿಡಿಗಳನ್ನು ನಿಮಗೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಬಡವರಿಗೆ ಅವರು ಬದುಕುವಷ್ಟು ಉಚಿತವಾಗಿ ಏನನ್ನು ಕೂಡ ನೀಡಬಾರದೇ? ಈ ಹೇಳಿಕೆಯು ಶ್ರೀಮಂತರನ್ನು ಸಂತೋಷಪಡಿಸುವುದು/ ಓಲೈಕೆ ಮಾಡುವುದು ಮತ್ತು ಬಡವರನ್ನು ನಿರ್ಲಕ್ಷಿಯಿಸುವುದಾಗಿದೆ. ಇದು ಎಂತಹ ಅನ್ಯಾಯ" ಎಂದಿದ್ದಾರೆ ಚೇತನ್.‌

70 ಗಂಟೆ ಕೆಲಸ ಮಾಡಿ ಎಂಬ ಮಾತಿಗೂ ವಿರೋಧ

ದೇಶದ ಅಭಿವೃದ್ಧಿ ಮತ್ತು ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಈ ಹಿಂದೆ ಸಲಹೆ ನೀಡಿದ್ದರು. ಹೀಗೆ ನೀಡಿದ್ದ ಸಲಹೆ ವಿರುದ್ಧವೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ತಿರುಗಿ ಬಿದ್ದಿದ್ದರು.

"ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಾರಾಯಣ ಮೂರ್ತಿ ಬಯಸುತ್ತಾರೆ. ಆ ತರ್ಕದ ಪ್ರಕಾರ, ಯುವಕರು 140 ಗಂಟೆಗಳ ಕಾಲ ಕೆಲಸ ಮಾಡಿದರೆ ಭಾರತೀಯ ಉತ್ಪಾದಕತೆ ಇನ್ನೂ ಹೆಚ್ಚಾಗುವುದಿಲ್ಲವೇ ಸಹಜವಾಗಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಇದು ಎಂತಹ ಸಮಯ ವ್ಯರ್ಥ! ಅಲ್ವಾ? ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಬೆಳೆಯಲಿ, ಅಲ್ವಾ? ಇದು ನಾರಾಯಣ ಮೂರ್ತಿಯವರ ಇಂತಹ ಸಮಸ್ಯಾತ್ಮಕ, ಅತಿ ಬಂಡವಾಳಶಾಹಿ ಸಲಹೆ" ಎಂದು ಟೀಕೆ ಮಾಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು