logo
ಕನ್ನಡ ಸುದ್ದಿ  /  ಮನರಂಜನೆ  /  Malayalee From India: ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದ ಒಟಿಟಿ ದಿನಾಂಕ ಪ್ರಕಟ; ನಿವಿನ್‌ ಪೌಲಿ ಸಿನಿಮಾವನ್ನು ಮನೆಯಲ್ಲೇ ನೋಡಿ

Malayalee From India: ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದ ಒಟಿಟಿ ದಿನಾಂಕ ಪ್ರಕಟ; ನಿವಿನ್‌ ಪೌಲಿ ಸಿನಿಮಾವನ್ನು ಮನೆಯಲ್ಲೇ ನೋಡಿ

Praveen Chandra B HT Kannada

Jun 21, 2024 03:13 PM IST

google News

Malayalee From India: ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದ ಒಟಿಟಿ ದಿನಾಂಕ ಪ್ರಕಟ

    • Malayalee From India OTT Release: ನಿವಿನ್‌ ಪೌಲಿ ನಟನೆಯ "ಮಲಯಾಳಿ ಫ್ರಮ್‌ ಇಂಡಿಯಾ" ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಜುಲೈ 5ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಧ್ಯಾನ್ ಶ್ರೀನಿವಾಸನ್, ಅನಸ್ವರ ರಾಜನ್, ದೀಪಕ್ ಜೇಥಿ, ಮತ್ತು ಶೈನ್ ಟಾಮ್ ಚಾಕೋ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Malayalee From India: ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದ ಒಟಿಟಿ ದಿನಾಂಕ ಪ್ರಕಟ
Malayalee From India: ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದ ಒಟಿಟಿ ದಿನಾಂಕ ಪ್ರಕಟ

ಬೆಂಗಳೂರು: ಒಟಿಟಿಯಲ್ಲಿ ಮಲಯಾಳ ಸಿನಿಮಾಗಳಿಗೆ ದೊಡ್ಡಮಟ್ಟದ ಪ್ರೇಕ್ಷಕರಿದ್ದಾರೆ. ಮಲಯಾಳಂ ಭಾಷೆಯ ಸಿನಿಮಾಗಳ ಕ್ರೇಜ್‌ ಹೆಚ್ಚುತ್ತಲೇ ಇದೆ. ಇತ್ತೀಚಿಗೆ ಹಲವು ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾಗಳು ಸಿನಿರಸಿಕರನ್ನು ರಂಜಿಸಿವೆ. ಆವೇಶಂ, ಮಂಜುಮ್ಮೇಲ್‌ ಬಾಯ್ಸ್‌ ಸೇರಿದಂತೆ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದ್ದವು. ಇತ್ತೀಚೆಗೆ ಮಲಯಾಳಂನ ಪ್ರಮುಖ ನಟ ನಿವಿನ್‌ ಪೌಲಿಯ "ಮಲಯಾಳಿ ಫ್ರಮ್‌ ಇಂಡಿಯಾ" ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಥಿಯೇಟರ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆಯದೆ ಇದ್ದರೂ ಸುಮಾರು 20 ಕೋಟಿ ರೂಪಾಯಿ ಬಾಚಿಕೊಳ್ಳಲು ಯಶಸ್ವಿಯಾಗಿತ್ತು.

ಮಲಯಾಳಿ ಫ್ರಮ್‌ ಇಂಡಿಯಾ ಒಟಿಟಿ ಬಿಡುಗಡೆ ದಿನಾಂಕ

ಇದೀಗ ಈ ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾವು ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಇದರಿಂದ ನಿವಿನ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋನಿ ಲಿವ್‌ನಲ್ಲಿ ಜುಲೈ 5ರಂದು ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ. ದಿಜೊ ಜೋಸ್‌ ಆಂಟನಿ ನಿರ್ದೇಶನದ ಈ ಸಿನಿಮಾ ವೀಕ್ಷಕರಿಗೆ ಇಷ್ಟವಾಗಿತ್ತು. ಆದರೆ, ದೊಡ್ಡಮಟ್ಟದಲ್ಲಿ ಕಲೆಕ್ಷನ್‌ ಮಾಡಿರಲಿಲ್ಲ. ನಿವಿನ್‌ ಪೌಲಿಯ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಮಲಯಾಳಿ ಫ್ರಮ್‌ ಇಂಡಿಯಾದ ಕಲೆಕ್ಷನ್‌ ಕಡಿಮೆಯಾಗಿತ್ತು.

ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾದಲ್ಲಿ ನಿವಿನ್‌ ಪೌಲಿ ಅವರು ನಾಯಕ ಪಾತ್ರದಲ್ಲಿ ನಟಿಸಿದ್ದರು. ಧ್ಯಾನ್ ಶ್ರೀನಿವಾಸನ್, ಅನಸ್ವರ ರಾಜನ್, ದೀಪಕ್ ಜೇಥಿ, ಮತ್ತು ಶೈನ್ ಟಾಮ್ ಚಾಕೋ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಿ ಫ್ರಮ್‌ ಕೇರಳ ಸಿನಿಮಾದ ಕಥೆಯನ್ನು ಸರಳವಾಗಿ ಹೀಗೆ ಹೇಳಬಹುದು. ಕೇರಳದ ಮಲ್ಲಕರದ ನಿವಾಸಿ ಅಲ್ಪರಂಬಿಲ್‌ ಗೋಪಿಯ ಕಥೆ ಇದಾಗಿದೆ. ಈತ ಕ್ರಿಕೆಟ್‌ ಆಗರ. ಈತನ ಸ್ನೇಹಿತ ಮಲ್ಬೋಷ್‌ ರಾಷ್ಟ್ರೀಯವಾದಿ ಪಕ್ಷಕಕ್ಕಾಗಿ ಪ್ರಚಾರ ಮಾಡುತ್ತಿದ್ದಾನೆ. ಗೋಪಿಯನ್ನು ಮರುಭೂಮಿಯ ಕೆಲಸಕ್ಕಾಗಿ ವಿದೇಶಕ್ಕೆ ಕಳುಹಿಸಿದ ಬಳಿಕ ಸಿನಿಮಾದ ಕಥೆ ತಿರುವು ಪಡೆಯುತ್ತದೆ.

ಈ ಸಮಯದಲ್ಲಿ ಗೋಪಿಗೆ ಪಾಕಿಸ್ತಾನದ ಸೂಪರ್‌ವೈಸರ್‌ ಸಾಹಿಬ್‌ ಜತೆ ಆತ್ಮೀಯತೆ ಬೆಳೆಯುತ್ತದೆ. ಇದಾದ ಬಳಿಕ ಸಾಹಿದ್‌ ಕೊರೊನಾದಿಂದ ಮೃತಪಡುತ್ತಾನೆ. ಬೇಸರಗೊಂಡ ಗೋಪಿ ಸಾಹಿದ್‌ನ ಕುಟುಂಬ ಇರುವ ರಾವಲ್ಪಿಂಡಿಗೆ ಭೇಟಿ ನೀಡುತ್ತಾನೆ. ಈ ಸಮಯದಲ್ಲಿ ಆತ ಏನು ಮಾಡುತ್ತಾನೆ? ಈತನಿಗೆ ಏನೇಲ್ಲ ಸವಾಲುಗಳು ಎದುರಾಗುತ್ತವೆ? ಇತ್ಯಾದಿಗಳನ್ನು ತಿಳಿಯಲು ಒಟಿಟಿಗೆ ಆಗಮಿಸಿದ ಬಳಿಕ ಮಲಯಾಳಿ ಫ್ರಮ್‌ ಇಂಡಿಯಾ ಸಿನಿಮಾವನ್ನು ನೋಡಬಹುದು.

ಇತ್ತೀಚಿನ ಮಲಯಾಳಂ ಸಿನಿಮಾಗಳು

ಇತ್ತೀಚೆಗೆ ಹಲವು ಮಲಯಾಳಂ ಸಿನಿಮಾಗಳು ಬಿಡುಗಡೆಯಾಗಿವೆ. ಫಹಾದ್‌ ಫಾಸಿಲ್‌ ನಟನೆಯ ಆವೇಶಂ, ಅಚ್ಚಕ್ಕಲ್ಲಕೊಕ್ಕಮ್‌, ಧೂಮಮ್‌, ಅಬ್ರಾಹಂ ಓಜ್ಲಾರ್‌, ರೋಮಾಚನಂ, ದಿ ಪ್ಲೇ, ಭೀಷ್ಮ ಪರ್ವಂ, ನೀರು, ಕಣ್ಣೂರು ಸ್ಕ್ವಾಡ್‌, ಪ್ರೇಮಲು, ಹೃದಯಂ, ಕಥಲ, ದಿ ಕೇರಳ ಸ್ಟೋಡಿ, ಒ ಬೇಬಿ, ಮಂಜುಮ್ಮೇಲ್‌ ಬಾಯ್ಸ್‌, ಆಂಟೋನಿ, ಕುಂಬಲಂಗಿ ನೈಟ್ಸ್‌, ಕಲ್ಕಿ, ಟ್ರಾನ್ಸ್‌, ಕೂಮನ್‌, ಮಲ್ಲಿಕ್‌, ಸೂಪರ್‌ ಶರಣ್ಯ ಸೇರಿದಂತೆ ಹಲವು ಸಿನಿಮಾಗಳು ಇತ್ತೀಚಿನ ತಿಂಗಳುಗಳಲ್ಲಿ ಬಿಡುಗಡೆಯಾಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ