logo
ಕನ್ನಡ ಸುದ್ದಿ  /  ಮನರಂಜನೆ  /  ‘ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು, ರಾಮ ಹಿಡಿದು ಕೂರಿಸಿದ’; ಅಯೋಧ್ಯೆಯಲ್ಲಿ ರಕ್ಷಿತ್‌ ಶೆಟ್ಟಿ

‘ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು, ರಾಮ ಹಿಡಿದು ಕೂರಿಸಿದ’; ಅಯೋಧ್ಯೆಯಲ್ಲಿ ರಕ್ಷಿತ್‌ ಶೆಟ್ಟಿ

Mar 06, 2024 07:56 PM IST

google News

‘ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು, ರಾಮ ಹಿಡಿದು ಕೂರಿಸಿದ’; ಅಯೋಧ್ಯೆಯಲ್ಲಿ ರಕ್ಷಿತ್‌ ಶೆಟ್ಟಿ

    • ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸದ್ದಿಲ್ಲದೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಈ ದಿವ್ಯ ಅನುಭೂತಿಯ ಬಗ್ಗೆ ಸುದೀರ್ಘ ಬರಹವೊಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 
‘ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು, ರಾಮ ಹಿಡಿದು ಕೂರಿಸಿದ’; ಅಯೋಧ್ಯೆಯಲ್ಲಿ ರಕ್ಷಿತ್‌ ಶೆಟ್ಟಿ
‘ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು, ರಾಮ ಹಿಡಿದು ಕೂರಿಸಿದ’; ಅಯೋಧ್ಯೆಯಲ್ಲಿ ರಕ್ಷಿತ್‌ ಶೆಟ್ಟಿ

Rakshit shetty at Ayodhya Ram mandir: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಬರೀ ಓರ್ವ ನಟ, ನಿರ್ದೇಶಕ, ನಿರ್ಮಾಪಕನಲ್ಲ. ಅದರಾಚೆಗೆ ಅವರಲ್ಲೊಂದು ದೈವಿಕ ಮನಸ್ಸಿದೆ. ಅಧ್ಯಾತ್ಮ, ದೇವರು, ಗುಂಡಿ ಗುಂಡಾರ.. ಹೀಗೆ ಈ ವಿಚಾರದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಉಡುಪಿಯಲ್ಲಿ ಆಗಾಗ ಭೂತಕೋಲದಲ್ಲಿ ಸೇರಿ ತುಳುನಾಡಿನ ಆಚರಣೆಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಇದೀಗ ಇದೇ ರಕ್ಷಿತ್‌ ಶೆಟ್ಟಿ, ಕೊನೆಗೂ ಬಹುದಿನಗಳ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಆಪ್ತರ ಜತೆಗೆ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿದ್ದಾರೆ. ವಿಶೇಷ ಬರಹವನ್ನೂ ಹಂಚಿಕೊಂಡಿದ್ದಾರೆ.

ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ

"ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮನನ್ನು ನೇರವಾಗಿ ನೋಡುವ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು. ರಾಮನ ಕಣ್ಣುಗಳು ನಿಜವೆಂದು ನಾನು ಕಂಡುಕೊಂಡಿದ್ದೇನೆ. ಏಕೆಂದರೆ ಅವು ಆ ಮಟ್ಟಿಗೆ ನೈಜವಾಗಿವೆ. ಹಾಗಾಗಿ ನನ್ನ ಫೋನ್‌ನಲ್ಲಿಯೇ ಆತನ ಕಣ್ಣುಗಳನ್ನೇ ಎಷ್ಟೋ ಝೂಮ್‌ ಮಾಡಿ ಮಾಡಿ ನೋಡಿದ್ದೇನೆ. ಆ ಕಣ್ಣುಗಳಲ್ಲಿ ನೈಜತೆಯ ಬಿಂಬ ಎದ್ದು ಕಾಣಿಸಲು ಅದರ ಶಿಲ್ಪಿಯ ಕೈಚಳಕವೂ ಅಗಾಧವಾದುದು. ಕಣ್ಣಿನ ಬಿಳಿ ಭಾಗದ ಕೆತ್ತನೆಗೆ ಕೊಂಚ ಭಿನ್ನ ಕುಸುರಿಯನ್ನೇ ಬಳಸಲಾಗಿದೆ. ಏಕೆಂದರೆ, ಅಷ್ಟು ಸುಲಭಕ್ಕೆ ಆ ನೈಜತೆ ತೇಜಸ್ಸು ಅಲ್ಲಿ ಕಾಣಿಸದು" ಎಂದಿದ್ದಾರೆ.

ನನ್ನ ಜೀವನದಲ್ಲಿ ಇದೇ ಮೊದಲು..

"ಇದೀಗ ನಾನು ರಾಮನನ್ನು ತುಂಬ ಹತ್ತಿರದಿಂದಲೇ ಕಣ್ತುಂಬಿಕೊಂಡೆ. ನಿಜಕ್ಕೂ ನಾನು ಅದೃಷ್ಟವಂತ ಎಂದೆನಿಸಿತು. ನಾನು ಸರಿ ಸುಮಾರು ಅರ್ಧ ಗಂಟೆಯಷ್ಟೊತ್ತು ಶ್ರೀರಾಮನ ಮುಂದೆಯೇ ಕುಳಿತುಕೊಂಡೆ. ಅವನನ್ನೇ ದಿಟ್ಟಿಸುತ್ತ ಆರಾಧಿಸುತ್ತ ಕುಳಿತೆ. ನನ್ನ ಜೀವನದಲ್ಲಿ ಯಾವ ವಿಗ್ರಹದ ಮುಂದೆಯೂ ಇಷ್ಟೊತ್ತು ಕೂತವನಲ್ಲ. ಆದರೆ, ಇಲ್ಲಿ ಬೇರೆಯ ದೈವಿಭಾವ ನನ್ನೊಳಗೆ ಮೂಡಿದೆ, ಸಾಮಾನ್ಯವಾಗಿ ನಾನು ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ. ಆದರೆ ಶ್ರೀರಾಮನ ಮುಂದೆ ಕುಳಿತಾದ ಆದ ಅನುಭವವೇ ವಿಭಿನ್ನವಾಗಿದೆ. ಪ್ರಾಯಶಃ ರಾಮನೇ ಇದನ್ನೆಲ್ಲ ನಮ್ಮಿಂದ ಮಾಡಿಸಿದ್ದಿರಬೇಕು"

ತಲೆ ತಲೆಮಾರಿಗೂ ಉಳಿಯಲಿದೆ ನೆನಪು..

"ಶ್ರೀರಾಮ ಕೇವಲ ದೇವರಾಗಿ, ಪೂಜಿಸುವ ವಿಗ್ರಹವಾಗಿ ಕಾಣಲಿಲ್ಲ. ಆತ ಒಂದು ವಿಶೇಷ ದೈವಿಕ ಕಲೆಯಂತೆ ಕಂಡ. ಈ ವಿಚಾರದಲ್ಲಿ ಮೂರ್ತಿ ನಿರ್ಮಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಜೀವಂತ ದಂತಕಥೆಯಾಗಿ ಉಳಿದಿದ್ದಾರೆ. ತಲೆ ತಲೆಮಾರುಗಳಿಗೂ ಅವರು ನೆನಪಿನಲ್ಲಿ ಉಳಿಯುತ್ತಾರೆ. ನಾನು ಯೋಗಿರಾಜ್‌ ಅವರ ಈ ದೈವಿಕ ಕೆಲಸವನ್ನು ನೋಡಿದಾಗ, ಅವರನ್ನು ಭೇಟಿ ಮಾಡಿ ನಮ್ಮ ಆರಾಧ್ಯ ದೈವ ರಾಮನನ್ನು ಕೆತ್ತಿದ ಬಗೆ ಮತ್ತವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್" ಎಂದಿದ್ದಾರೆ.

ಪದಗಳಲ್ಲಿ ವರ್ಣಿಸಲಾಗದ ಅನುಭವ

"ಲಾಕ್‌ಡೌನ್ ಸಮಯದಲ್ಲಿ, 504 ಚಂದ್ರನ ಪರಿಭ್ರಮಣೆಯನ್ನು ಲೆಕ್ಕಹಾಕಿ ಇಟ್ಟಿದ್ದೆ. ಆದರೆ, ದಿನಕಳೆದಂತೆ, ನಾನು ಆ ದಿನಾಂಕವನ್ನು ಸಂಪೂರ್ಣವಾಗಿ ಮರೆತಿದ್ದೆ. ಅದಾದ ಬಳಿಕ ಕಾಕತಾಳೀಯವೆಂಬಂತೆ, ಅದೇ ದಿನ ನಾನು ಕೃಷ್ಣ ಪಕ್ಷ ದಶಮಿಯಂದು ಪ್ರಯಾಗ್‌ರಾಜ್‌ನಲ್ಲಿದ್ದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾ ಕಾಶಿಗೆ ಭೇಟಿ ನೀಡಿದ್ದೆ. ಮರುದಿನ, ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಉತ್ಸವ ಮೂರ್ತಿಯ ಮುಂದೆ ಕೂತು ನನ್ನ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಸಂಕಲ್ಪ ಮಾಡಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ"

ಜೈ ಆಂಜನೇಯ.. ಜೈ ಶ್ರೀರಾಮ್‌

"ಆವತ್ತೇ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡುವುದು ಕೂಡ ಒಂದು ಸುಂದರ ಅನುಭವ. ಅಲ್ಲಿನ ಟ್ರಸ್ಟಿಗಳಿಂದಲೂ ಒಳ್ಳೆಯ ಸ್ವಾಗತ ಸಿಕ್ಕಿತು. ಈ ಅನುಭವಕ್ಕಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಮಹೇಶ್ ಠಾಕೂರ್ ಅವರಿಗೆ ಧನ್ಯವಾದಗಳು. ಈ ಸುಂದರ ಪ್ರವಾಸದಲ್ಲಿ ನನ್ನ ಜೊತೆಗಿದ್ದ ನನ್ನ ಸಹೋದರ ರಂಜಿತ್, ಸೋದರ ಸಂಬಂಧಿ ಶ್ರೀನಿಶ್ ಮತ್ತು ನನ್ನ ಸ್ನೇಹಿತರಾದ ಸಂದೇಶ್ ಅಣ್ಣ ಮತ್ತು ದೇವಿ ಚರಣ್ ಕಾವಾ ಅವರಿಗೂ ಧನ್ಯವಾದಗಳು. ಇದು ನಿಜವಾಗಿಯೂ ವಿಶೇಷ ಕ್ಷಣ. ಜೈ ಆಂಜನೇಯ... ಜೈ ಶ್ರೀ ರಾಮ್" ಎಂದು ಬರೆದುಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ