logo
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪು ಕ್ರೇಜ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಬಂತಾ?; ಪವರ್‌ ಹೌಸ್‌ ಸೇರಿದ ದುಬಾರಿ ಬೆಲೆಯ ಕಾರು, ಏನಿದರ ವಿಶೇಷತೆ ?

ಅಪ್ಪು ಕ್ರೇಜ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಬಂತಾ?; ಪವರ್‌ ಹೌಸ್‌ ಸೇರಿದ ದುಬಾರಿ ಬೆಲೆಯ ಕಾರು, ಏನಿದರ ವಿಶೇಷತೆ ?

Mar 31, 2024 12:36 PM IST

google News

ಅಪ್ಪು ಕ್ರೇಜ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಬಂತಾ?; ಪವರ್‌ ಹೌಸ್‌ ಸೇರಿದ ದುಬಾರಿ ಬೆಲೆಯ ಐಶಾರಾಮಿ ಕಾರು, ಏನಿದರ ವಿಶೇಷತೆ?

    • ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಅಪ್ಪುಗೂ ಕಾರ್‌, ಬೈಕ್ ಕ್ರೇಜ್‌ ಜಾಸ್ತಿ ಇತ್ತು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಇವೆ. ಆ ಕಾರುಗಳ ಜತೆಗೆ ಇದೀಗ ಆಡಿ ಕ್ಯೂ 7 (Audi Q7) ಕಾರು ಪವರ್‌ ಹೌಸ್‌ ಸೇರಿದೆ.
ಅಪ್ಪು ಕ್ರೇಜ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಬಂತಾ?; ಪವರ್‌ ಹೌಸ್‌ ಸೇರಿದ ದುಬಾರಿ ಬೆಲೆಯ ಐಶಾರಾಮಿ ಕಾರು, ಏನಿದರ ವಿಶೇಷತೆ?
ಅಪ್ಪು ಕ್ರೇಜ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಬಂತಾ?; ಪವರ್‌ ಹೌಸ್‌ ಸೇರಿದ ದುಬಾರಿ ಬೆಲೆಯ ಐಶಾರಾಮಿ ಕಾರು, ಏನಿದರ ವಿಶೇಷತೆ?

Ashwini Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಟ್ಟಿದ್ದ ಕನಸಿನ ಹಾದಿಯಲ್ಲಿಯೇ ಅವರ ಪತ್ನಿ ಅಶ್ವಿನಿ ಪುನೀತ್ ಸಹ ಸಾಗುತ್ತಿದ್ದಾರೆ. ಅಪ್ಪು ನಿರ್ಮಾಣ ಮಾಡಿ ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳನ್ನು ಮುಂದೆ ನಿಂತು, ಅವುಗಳ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಕಂಪ್ಲೀಟ್ ಮಾಡಿ ರಿಲೀಸ್ ಕೂಡ ಮಾಡುತ್ತಿದ್ದಾರೆ. ಜತಗೆ ಹೊಸಬರಿಗಾಗಿ ಸಿನಿಮಾಗಳನ್ನು ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ. ಈಗ ಅಪ್ಪು ಅವರ ಹಾಗೆ ಮತ್ತೊಂದು ಹವ್ಯಾಸವನ್ನು ಅಶ್ವಿನಿ ಬೆಳಸಿಕೊಂಡಿರೋದು ಅಭಿಮಾನಿಗಳಿಗೆ ಗೊತ್ತಾಗಿದೆ.

ಪುನೀತ್ ರಾಜ್‌ಕುಮಾರ್‌ಗೆ ಕಾರುಗಳ ಬಗ್ಗೆ ತುಂಬಾ ಕ್ರೇಜ್‌. ಮಾರುಕಟ್ಟೆಗೆ ಬರುವ ಹೊಸ ಹೊಸ ಮಾದರಿಯ ಕಾರುಗಳನ್ನು ಖರೀದಿ ಮಾಡುತ್ತಿದ್ದರು. ಹಾಗೆ ಖರೀದಿಸಿದ ಕಾರ್‌ಗಳನ್ನು ನಿಲ್ಲಿಸಲೆಂದೇ ಅವರ ಮನೆಯಲ್ಲಿ ಪ್ರತ್ಯೇಕ ಶೆಡ್‌ ಸಹ ಇದೆ. ‌ಈಗ ಆ ಐಷಾರಾಮಿ ಕಾರುಗಳ ಲಿಸ್ಟ್‌ಗೆ ಮತ್ತೊಂದು ಕಾರ್ ಸೇರಿಕೊಂಡಿದೆ. ವಿಶೇಷ ಏನೆಂದರೆ, ಇಲ್ಲಿಯವರಗೂ ಕಾರ್‌ಗಳನ್ನು ಪುನೀತ್‌ ಖರೀದಿಸುತ್ತಿದ್ದರು. ಈ ಸಲ ಅಶ್ವಿನಿ ಪುನೀತ್ ರಾಜ್‍ಕುಮಾರ್ ಖರೀದಿ ಮಾಡಿದ್ದಾರೆ. ಈ ಮೂಲಕ ಅಪ್ಪು ಅವರಿಗಿದ್ದ ಕಾರ್ ಕ್ರೇಜ್ ಅನ್ನು ತಾವು ಕೂಡ ಮೈಗೂಡಿಸಿಕೊಂಡಿದ್ದಾರೆ.

ಖರೀದಿಸಿದ ಕಾರ್‌ ಯಾವುದು, ಬೆಲೆ ಎಷ್ಟು?

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಅಪ್ಪುಗೂ ಕಾರ್‌, ಬೈಕ್ ಕ್ರೇಜ್‌ ಜಾಸ್ತಿ ಇತ್ತು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಇವೆ. ಆ ಕಾರುಗಳ ಜತೆಗೆ ಇದೀಗ ಆಡಿ ಕ್ಯೂ 7 (Audi Q7) ಕಾರು ಪವರ್‌ ಹೌಸ್‌ ಸೇರಿದೆ. ಹಾಗಾದರೆ ಈ ಕಾರಿನ ಬೆಲೆ ಎಷ್ಟು, ಏನಿದರ ವಿಶೇಷತೆ? ಹೀಗಿದೆ ಮಾಹಿತಿ. Audi Q7 ಬೇಸ್‌ ಕಾರಿನ ಬೆಲೆ 86.92 ಲಕ್ಷ ರೂಪಾಯಿ. ಇದೇ Audi Q7 ಕಾರಿನ ಹೈ ಎಂಡ್‌ ಟಾಪ್ ಮಾಡೆಲ್‌ ಕಾರಿಗೆ ಬರೋಬ್ಬರಿ 94.45 ಲಕ್ಷ ರೂಪಾಯಿದೆ.

ಕಾರ್‌ನ ವಿಶೇಷತೆಗಳೇನು?

ಈಗ ಈ ಪೈಕಿ ಟಾಪ್‌ ಎಂಡ್‌ ಮಾಡೆಲ್‌ನ ಕಾರನ್ನು ಅಶ್ವಿನಿ ಖರೀಸಿದ್ದಾರೆ. ಅದೂ ಇದೂ, ಟ್ಯಾಕ್ಸ್‌ ಎಂದೆಲ್ಲ ಲೆಕ್ಕ ಹಾಕಿದರೆ ಈ ಕಾರಿನ ಬೆಲೆ ಬರೋಬ್ಬರಿ ಕೋಟಿ ದಾಟುತ್ತದೆ. ಇದೇ ಕಾರ್‌ನ ವಿಶೇಷತೆಗಳ ಬಗ್ಗೆ ನೋಡುವುದಾದರೆ, 2995 ಸಿಸಿವುಳ್ಳ ಎಂಜಿನ್‌ ಹೊಂದಿರುವ ಈ ಕಾರ್‌, 500 ಎನ್‌ ಎಂ ಟಾರ್ಕ್‌, ಪ್ರತಿ ಗಂಟೆಗೆ 250 ಕಿಮಿ ಸಾಗುತ್ತದೆ. ಪೆಟ್ರೋಲ್‌ ಎಂಜಿನ್‌ ಈ ಕಾರ್‌ನಲ್ಲಿದ್ದು, ಎಸ್‌ಯುವಿ ಬಾಡಿ ಟೈಪ್‌ನ ಈ ಕಾರಿನಲ್ಲಿ ಏಳು ಜನ ಪ್ರಯಾಣಿಸಬಹುದಾಗಿದೆ.

ಅಪ್ಪು ಅಗಲಿದ ಬಳಿಕ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಜವಾಬ್ದಾರಿಯನ್ನು ಪುನೀತ್‌ ಸ್ಥಾನದಲ್ಲಿ ನಿಂತು ಅಶ್ವಿನಿ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿಆರ್‌ಕೆ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುವ ಕೆಲಸಗಳೂ ಆಗುತ್ತಿವೆ. ಸದ್ಯ ಹೊಸಬರಿಗಾಗಿ ಸಿನಿಮಾ ನಿರ್ಮಾಣ ಮಾಡೋ ಪ್ಲಾನ್‌ಗಳನ್ನು ಅಶ್ವಿನಿ ನೇತೃತ್ವದ ಪಿಆಆರ್‌ಕೆ ಬ್ಯಾನರ್ ಹಾಕಿಕೊಂಡಿದೆ. ಈಗಾಗಲೇ ಒಂದಷ್ಟು ವಿಭಿನ್ನ ಕತೆಗಳನ್ನು ಕೂಡ ಅಶ್ವಿನಿ ಕೇಳಿದ್ದಾರೆ. ಸದ್ಯದಲ್ಲೇ ಈ ಬ್ಯಾನರ್‌ನಿಂದ ಹೊಸ ಸಿನಿಮಾ ಅನೌನ್ಸ್ ಆಗಲಿದೆ.

ಈ ನಡುವೆ ಇತ್ತೀಚಿಗೆ ಹೊಸಪೇಟೆಯಲ್ಲಿ ನಡೆದ ಯುವ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಪ್ಪು ಪ್ರೀತಿಯ ಹುಡುಗ ಯವರಾಜ್ ಕುಮಾರ್‌ಗೆ ಆಶೀರ್ವಾದ ಮಾಡಿದ್ದರು.

ವರದಿ: ಮನೋಜ್ ವಿಜಯೀಂದ್ರ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ