ಶಕುಂತಲಾದೇವಿಯ ಮನೆಹಾಳ ಗೆಳತಿಯರಿಗೆ ಭೂಮಿಕಾಳ ಪ್ರೆಗ್ನೆನ್ಸಿ ಚಿಂತೆ, ಅಮೃತಧಾರೆಯಲ್ಲಿ ಸೀಮಂತ ಸಂಭ್ರಮ
Sep 18, 2024 09:47 AM IST
ಶಕುಂತಲಾದೇವಿಯ ಮನೆಹಾಳ ಗೆಳತಿಯರಿಗೆ ಭೂಮಿಕಾಳ ಪ್ರೆಗ್ನೆನ್ಸಿ ಚಿಂತೆ, ಅಮೃತಧಾರೆ ಸೀರಿಯಲ್
- ಅಮೃತಧಾರೆಯಲ್ಲಿ ಸೀಮಂತ ಸಂಭ್ರಮ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ಮಲ್ಲಿಯ ಸೀಮಂತ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ಭೂಮಿಕಾಳ ಮನಸ್ಸಿಗೆ ನೋವಾಗುವಂತಹ ಹಲವು ಸಂಗತಿಗಳು ನಡೆದಿವೆ. ಶಕುಂತಲಾದೇವಿಯ ಮನೆಹಾಳ ಸ್ನೇಹಿತೆಯರು ಮನೆಗೆ ಬಂದಿದ್ದು, ವಟವಟ ಎನ್ನುತ್ತಿದ್ದಾರೆ.
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ಮಲ್ಲಿಯ ಸೀಮಂತ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ಭೂಮಿಕಾಳ ಮನಸ್ಸಿಗೆ ನೋವಾಗುವಂತಹ ಹಲವು ಸಂಗತಿಗಳು ನಡೆದಿವೆ. ಭೂಮಿಕಾ ನೀಡಿರುವ ಸಲಹೆಯನ್ನು ಪಾರ್ಥ ಪಾಲಿಸಿದ್ದಾನೆ. "ಹೆಂಡತಿಗೆ ಸುಳ್ಳು ಹೇಳಿದ್ರೆ ಖುಷಿಯಾಗ್ತಾರೆ. ಒಟ್ಟಿನಲ್ಲಿ ನೆಮ್ಮದಿಯಾಗಿರೋದು ಮುಖ್ಯ" ಎಂದು ಪಾರ್ಥ ಅಂದುಕೊಂಡಿದ್ದಾನೆ. ಅಪೇಕ್ಷಾಳೂ ಖುಷಿಯಾಗಿದ್ದಾಳೆ. ಇದೇ ಸಮಯದಲ್ಲಿ ಭೂಮಿಕಾ ಮತ್ತು ಮಲ್ಲಿ ಮಾತನಾಡುತ್ತಾ ಇದ್ದಾರೆ. "ತಾತಾ ನನ್ನನ್ನು ಶಕ್ತಿಮೀರಿ ಬೆಳೆಸಿದ್ದಾರೆ. ನೀವೆಲ್ಲ ನನ್ನ ಮಹಾರಾಣಿ ರೀತಿ ನೋಡಿಕೊಳ್ತಾ ಇದ್ದೀರಿ" ಎನ್ನುತ್ತಾಳೆ ಮಲ್ಲಿ. ಹೀಗೆ ಒಂದಿಷ್ಟು ಮಾತುಕತೆಗಳು ನಡೆಯುತ್ತವೆ. ಇದೇ ಸಮಯದಲ್ಲಿ ನೀವು ಯಾವಾಗ ಒಳ್ಳೆಯ ಸುದ್ದಿ ಕೊಡೋದು ಎಂದು ಮಲ್ಲಿ ಕೇಳಿದಾಗ ಭೂಮಿಕಾ ನಾಚುತ್ತಾಳೆ. "ಅದಕ್ಕಿನ್ನೂ ತುಂಬಾ ಟೈಮ್ ಇದೆ" ಎಂದು ಭೂಮಿಕಾ ಹೇಳುತ್ತಾಳೆ. "ಈಗ ನೀವು ನನಗೆ ಬಾಣಂತನ ಮಾಡಿ. ಮುಂದೆ ನಾನು ನಿಮಗೆ ಬಾಣಂತನ ಮಾಡ್ತಿನಿ" ಎಂದು ಮಲ್ಲಿ ಹೇಳಿದಾಗ ಜೋರಾಗಿ ನಗುತ್ತಾರೆ. ಇದೇ ಸಮಯದಲ್ಲಿ ಅಪೇಕ್ಷಾ ಬರುತ್ತಾಳೆ. "ನಾನು ಇವಳಿಗೆ ಮೇಕಪ್ ಮಾಡ್ತಿನಿ" ಎನ್ನುತ್ತಾಳೆ ಅಪೇಕ್ಷಾ. "ಮೇಕಪ್ ಜಾಸ್ತಿ ಮಾಡಬೇಡ. ಅದರಲ್ಲಿ ಕೆಮಿಕಲ್ ಇರುತ್ತದೆ" ಎನ್ನುತ್ತಾಳೆ ಭೂಮಿಕಾ. "ನೀನು ಹಳೆ ಕಾಲದ ಅಜ್ಜಿಯಂತೆ ಮಾತನಾಡಬೇಡ" ಎನ್ನುತ್ತಾಳೆ ಅಪ್ಪಿ. "ನೀನು ಹೋಗಿ ಒಡವೆ ತೆಗೆದುಕೊಂಡು ಬಾ. ನಾನು ಮೇಕಪ್ ಮಾಡ್ತಿನಿ" ಎಂದು ಅಪೇಕ್ಷಾ ಆರ್ಡರ್ ಮಾಡುತ್ತಾಳೆ. ಭೂಮಿಕಾ ಏನೂ ಮಾತನಾಡುವುದಿಲ್ಲ.
ಭೂಮಿಕಾಳ ಸೀಮಂತ ಯಾವಾಗ?
ಇದೇ ಸಮಯದಲ್ಲಿ ಶಕುಂತಲಾ ಅವರ ಮೂವರು ಗೆಳತಿಯರು ಬರುತ್ತಾರೆ. ಶಕುಂತಲಾದೇವಿ ಕರೆಯದೇ ಬಂದಿದ್ದಾರೆ. ಅವರಿಗೂ ಗೊತ್ತಿರುವುದಿಲ್ಲ ಇಲ್ಲಿ ಫಂಕ್ಷನ್ ಇದೆ ಅಂತ ಎಂದು ಹೇಳುತ್ತಾರೆ. ಅದಕ್ಕೆ ಶಕುಂತಲಾದೇವಿ "ನನ್ನ ದೊಡ್ಡ ಸೊಸೆ ಮಲ್ಲಿಯ ಸೀಮಂತ" ಎಂದು ಹೇಳುತ್ತಾಳೆ. "ಮತ್ತೆ ನಮ್ಮನ್ನೆಲ್ಲ ಕರೆದಿಲ್ಲ. ಬಜೆಟ್ ಫ್ರೆಂಡ್ಲಿ ಸೀಮಂತನ" ಎಂದೆಲ್ಲ ಶಕುಂತಲಾ ಗೆಳತಿಯರ ಟಾಂಗ್ ಇರುತ್ತದೆ. "ಮಲ್ಲಿಗೆ ಬಸುರಿ ಬಯಕೆ. ಸೀಮಂತ ಮಾಡಿಕೊಳ್ಳಬೇಕೆಂದು ಆಸೆ ಪಟ್ಲು. ಅದಕ್ಕೆ ಗೌತಮ್ ಅರ್ಜೆಂಟಾಗಿ ಮಾಡಿದ್ರು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅಜ್ಜಿಯಾಗಿರುವುದಕ್ಕೆ ಕಂಗ್ರಾಜ್ಯುಲೇಷನ್" ಎಂದು ಹೇಳುತ್ತಾರೆ. ಒಟ್ಟಾರೆ, ಚಿತ್ರವಿಚಿತ್ರವಾಗಿ ಟಾಂಗ್ ಕೊಡುವುದಕ್ಕೆ ಈ ಮೂವರು ಗೆಳತಿಯರ ಕ್ಯಾರೆಕ್ಟರ್ ಇದೆ.
ಜೈದೇವ್‌ಗೆ ಮಾವ ಬುದ್ಧಿವಾದ ಹೇಳುತ್ತಾರೆ. "ಈ ಸಮಯದಲ್ಲಿ ಮಲ್ಲಿಗೆ ಏನಾದರೂ ಮಾಡಿದ್ರೆ ನಿನಗೆ ಸೆರವಾಸ ಖಾತ್ರಿ" ಎಂದು ಹೇಳುತ್ತಾರೆ. "ಏನು ಮಾಡಬೇಕು ಎಂದು ನನಗೆ ಗೊತ್ತು" ಎಂದು ಜೈದೇವ್ ಹೇಳುತ್ತಾನೆ. "ಚೂರು ಯಾಮಾರಿದ್ರೆ ನನಗೆ ತಗಲಾಕಿಕೊಳ್ಳಬಹುದು" ಎಂದು ಜೈದೇವ್ ಯೋಚಿಸುತ್ತಾನೆ.
ಶಕುಂತಲಾ ಗೆಳತಿಯರು ಇರುವಾಗ ಭೂಮಿಕಾ ಅತ್ತೆಯಲ್ಲಿ ಒಡವೆ ಕೇಳುತ್ತಾಳೆ. ಆ ಸಮಯದಲ್ಲಿ ಗೆಳತಿಯರು "ನಿಮ್ಮ ಅತ್ತೆ ಸೀಮಂತ ಎಂದಾಗ ನಾವು ನಿಮ್ಮದೇ ಸೀಮಂತ ಅಂದುಕೊಂಡೆವು" ಎಂದು ಹೊಟ್ಟೆ ಉರಿಸೋ ಮಾತು ಆಡುತ್ತಾರೆ ಮನೆಹಾಳ ಗೆಳತಿಯರು. "ನಿಮ್ಮ ಕಡೆಯಿಂದ ಹ್ಯಾಪಿನ್ಯೂಸ್ ಏನೂ ಇಲ್ವ ಭೂಮಿಕಾ" ಎಂದು ಕೇಳುತ್ತಾರೆ. "ಏನಾದರೂ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಕೊಂಡಿದ್ದೀರಾ" "ಇಷ್ಟು ವಯಸ್ಸಾದರೂ ಅದೇನೂ ಪ್ಲ್ಯಾನಿಂಗ್" "ಏನಾದ್ರೂ ಪ್ರಾಬ್ಲಂ ಇದೆಯಾ" "ನೀನು ಗೌತಮ್ ಯಾಕೆ ಒಮ್ಮೆ ಡಾಕ್ಟರ್ ಬಳಿಗೆ ಹೋಗಬಾರದು" ಎಂದೆಲ್ಲ ಕೇಳುತ್ತಾರೆ. ಇದನ್ನು ಅಪರ್ಣಾ ಕೇಳಿಸಿಕೊಳ್ಳುತ್ತಾಳೆ.
ಭೂಮಿಕಾ ಇದನ್ನೇ ಯೋಚಿಸುತ್ತ ಬೇಸರದಲ್ಲಿ ಕುಳಿತಿದ್ದಾರೆ. ಆಗ ಅಲ್ಲಿಗೆ ಗೌತಮ್ ಬರುತ್ತಾರೆ. ಯಾಕೆ ಅಳ್ತಾ ಇದ್ದೀರ ಎಂದು ಕೇಳುತ್ತಾರೆ ಗೌತಮ್. ಮಲ್ಲಿ ತವರಿಗೆ ಹೋಗುವ ಬೇಸರ ಎನ್ನುತ್ತಾಳೆ. ಗೌತಮ್ ಹೊರಗೆ ಹೋದ ಬಳಿಕ ಅಪರ್ಣಾ ಬಂದು ಭೂಮಿಕಾಳ ಬಳಿ ಮಾತನಾಡುತ್ತಾಳೆ. "ಅವರಿಗೆ ಯಾರು ಈ ಹಕ್ಕು ನೀಡಿದ್ದು. ನೀನು ಮಾತನಾಡಬೇಕಿತ್ತು" ಎಂದು ಅಪರ್ಣಾ ಹೇಳುತ್ತಾಳೆ.
ಅಕ್ಕನ ವಿರುದ್ಧ ಅಪೇಕ್ಷಾಳ ದ್ವೇಷ
ಅಪೇಕ್ಷಾ ಮಲ್ಲಿಗೆ ಅಲಂಕಾರ ಮಾಡಿದ್ದಾಳೆ. ಮಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾಳೆ. "ಅಕ್ಕ ಆಗಿದ್ರೆ ನಿಮ್ಮನ್ನು ಬ್ಲ್ಯಾಕ್ ಆಂಡ್ ವೈಟ್ ಹೀರೋಯಿನ್ ರೀತಿ ರೆಡಿ ಮಾಡ್ತಾ ಇದ್ಲು. ನಾನು ನಿಮ್ಮನ್ನು ಎಷ್ಟು ಚೆನ್ನಾಗಿ ರೆಡಿ ಮಾಡಿದ್ದೀನಿ" ಎನ್ನುತ್ತಾಳೆ ಅಪೇಕ್ಷಾ. ಈ ಸಮಯದಲ್ಲಿ ಅಕ್ಕನ ವಿರುದ್ಧ ಸಾಕಷ್ಟು ಕೆಟ್ಟದ್ದಾಗಿ ಮಾತನಾಡುತ್ತಾಳೆ. ಮಲ್ಲಿ ಅಕ್ಕಾವ್ರ ಪರವಾಗಿ ಮಾತನಾಡಲು ಪ್ರಯತ್ನಿಸಿದರೂ ಆಗೋದಿಲ್ಲ. ನನಗೂ ಅಕ್ಕನ ಬಗ್ಗೆ ಮದುವೆ ಸಮಯದಲ್ಲಿ ಗೊತ್ತಾದದ್ದು. ಇಲ್ಲಿ ಊಸರವಳ್ಳಿ ಸಂಬಂಧಿಕರು ತುಂಬಾ ಜನ ಇದ್ದಾರೆ ಎಂದೆಲ್ಲ ಮಲ್ಲಿಯ ತಲೆ ಕೆಡಿಸಲು ಯತ್ನಿಸುತ್ತಾಳೆ.
ಮಲ್ಲಿ ಜೈದೇವ್ ಮಾತನಾಡುತ್ತಾ ಇದ್ದಾರೆ. ಈ ಸಮಯದಲ್ಲಿ ಜೈದೇವ್ ತುಂಬಾ ಒಳ್ಳೆಯವನಂತೆ ಬೇಸರದಲ್ಲಿ ಮಾತನಾಡುತ್ತಾನೆ. ಅತ್ತಿಗೆ ನನ್ನನ್ನು ಮತ್ತು ದಿಯಾಳನ್ನು ಲಿಂಕ್ ಮಾಡಿ ಮಾತನಾಡಿದ್ದಾರೆ ಗೊತ್ತಾಯ್ತಾ? ಅದು ನನಗೆ ಬೇಸರವಾಯ್ತು ಎನ್ನುತ್ತಾನೆ. ಅತ್ತಿಗೆ ಅದನ್ನು ಮತ್ತೆ ಹೇಳಿಲ್ಲ ಎನ್ನುತ್ತಾಳೆ. "ಆದ್ರೆ, ಅವರು ಅದನ್ನು ಯಾವಾಗ ಯಾವ ರೂಪದಲ್ಲಿ ಹೇಳ್ತಾರೆ ಹೇಳಲಾಗದು ಮಲ್ಲಿ" ಎನ್ನುತ್ತಾನೆ. ಈ ಮೂಲಕ ಭೂಮಿಕಾಳ ವಿರುದ್ಧ ಮಲ್ಲಿ ಮಾತನಾಡುವಂತೆ ಮಾನಸಿಕವಾಗಿ ಸಜ್ಜು ಮಾಡುತ್ತಾನೆ ಜೈದೇವ್.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)