ದಿವಾನ್‌ ಆಫೀಸ್‌ಗೆ ಮನೆಹಾಳ ಮಾವನ ಎಂಟ್ರಿ, ಸಿನಿಮಾಕ್ಕೆ ಹೊರಟ ಅಪೇಕ್ಷಾ ಪಾರ್ಥ, ಮುಗಿದಿಲ್ಲ ಶಕುಂತಲಾ ಸ್ವಾರ್ಥ- ಅಮೃತಧಾರೆ ಸೀರಿಯಲ್‌-sandalwood news anand regains consciousness in zee kannada amruthadhare serial read yesteday episode story here pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದಿವಾನ್‌ ಆಫೀಸ್‌ಗೆ ಮನೆಹಾಳ ಮಾವನ ಎಂಟ್ರಿ, ಸಿನಿಮಾಕ್ಕೆ ಹೊರಟ ಅಪೇಕ್ಷಾ ಪಾರ್ಥ, ಮುಗಿದಿಲ್ಲ ಶಕುಂತಲಾ ಸ್ವಾರ್ಥ- ಅಮೃತಧಾರೆ ಸೀರಿಯಲ್‌

ದಿವಾನ್‌ ಆಫೀಸ್‌ಗೆ ಮನೆಹಾಳ ಮಾವನ ಎಂಟ್ರಿ, ಸಿನಿಮಾಕ್ಕೆ ಹೊರಟ ಅಪೇಕ್ಷಾ ಪಾರ್ಥ, ಮುಗಿದಿಲ್ಲ ಶಕುಂತಲಾ ಸ್ವಾರ್ಥ- ಅಮೃತಧಾರೆ ಸೀರಿಯಲ್‌

Amruthadhare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಕೋಮದಲ್ಲಿದ್ದ ಆನಂದ್‌ ಕಣ್ಣು ತೆರೆದಿದ್ದಾನೆ. ಆತನಿಗೆ ಎಲ್ಲವೂ ನೆನಪಾಗಿದೆ. ಇದೇ ಸಮಯದಲ್ಲಿ ದಿವಾನ್‌ ಆಫೀಸ್‌ಗೆ ಗೌತಮ್‌ ಮನೆಹಾಳ ಮಾವನ ಕಳುಹಿಸಿದ್ದಾನೆ.

ಅಮೃತಧಾರೆ ಸೀರಿಯಲ್‌ ಆಗಸ್ಟ್‌ ̇28 ಬುಧವಾರದ ಕಥೆ:
ಅಮೃತಧಾರೆ ಸೀರಿಯಲ್‌ ಆಗಸ್ಟ್‌ ̇28 ಬುಧವಾರದ ಕಥೆ:

ಅಮೃತಧಾರೆ ಸೀರಿಯಲ್‌ ಆಗಸ್ಟ್‌ ̇28 ಬುಧವಾರದ ಕಥೆ: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್‌ ಕೋಮದಲ್ಲಿದ್ದಾನೆ. ಗೌತಮ್‌ ಆತನ ಆರೈಕೆ ಮಾಡುತ್ತಾನೆ. ಇನ್ನೊಂದೆಡೆ ಅಪೇಕ್ಷಾಗೆ ಅಹಂ ಹೆಚ್ಚಾಗಿದೆ. ಪಾರ್ಥ ಮಂಕಾಗಿದ್ದಾನೆ. ಶಕುಂತಲಾ ಟೀಮ್‌ನ ಆಟ ಮುಂದುವರೆದಿದೆ. ಇದೇ ಸಮಯದಲ್ಲಿ ಸದಾಶಿವ ಕಾಣೆಯಾಗಿದ್ದಾರೆ. ಅಮೃತಧಾರೆ ಸೀರಿಯಲ್‌ನ ಬುಧವಾರದ ಸಂಚಿಕೆಯಲ್ಲಿ ಏನೆಲ್ಲ ಬೆಳವಣಿಗೆಗಳು ಆಗಿವೆ ನೋಡೋಣ. ಕೋಮಾದಲ್ಲಿ ಮಲಗಿರುವ ಆನಂದ್‌ ಬಳಿಗೆ ಜೈದೇವ್‌ ಬಂದು ಡೈಲಾಗ್‌ ಹೊಡೆಯುತ್ತ ಇರುತ್ತಾನೆ. "ನಿನ್ನ ಹೆಂಡತಿ ತಾಳಿ ಭಾಗ್ಯದಿಂದ ಬದುಕಿ ಉಳಿದಿರುವೆ. ನೀನು ನನ್ನ ಲೈಫ್‌ನಲ್ಲಿರುವ ದೊಡ್ಡ ತಲೆನೋವು, ಆದರೆ, ಸಾಯಲಿಲ್ಲ. ನಮ್ಮ ಮನೆಯಲ್ಲಿ ನೀನು ಸೆಟಲ್‌ ಆಗಿದ್ದೀಯ. ನಿನ್ನನ್ನು ಸಾಯಿಸಲು ಹೊರಟವನ ಬಳಿಯೇ ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ಬಂದಿದೆ. ನಿನ್ನನ್ನು ಸುಮ್ಮನೆ ಬಿಡ್ಲ. ಪರ್ಮನೆಂಟ್‌ ಆಗಿ ಮುಗಿಸಿಬಿಡ್ಲಾ" ಎಂದೆಲ್ಲ ಹೇಳುತ್ತಾನೆ. ಇನ್ನೊಂದೆಡೆ ಗೌತಮ್‌ ಖುಷಿಯಲ್ಲಿದ್ದಾರೆ. "ಆನಂದ್‌ ರಿಯಾಕ್ಟ್‌ ಮಾಡುತ್ತ ಇದ್ದಾನೆ. ಆತ ಹುಷಾರಾಗುತ್ತಾನೆ" ಎಂದು ಭೂಮಿಕಾ ಬಳಿ ಡುಮ್ಮ ಸರ್‌ ಹೇಳುತ್ತಾರೆ. "ಆನಂದ್‌ ನನ್ನ ಜೀವನದಲ್ಲಿ ಇಲ್ಲದೆ ಇದ್ದರೆ ನಾನು ಝೀರೋ. ಗೆದ್ದಾಗ ಮೊದಲ ಚಪ್ಪಾಳೆ, ಬಿದ್ದಾಗ ಮೊದಲ ಕೈ ಬರೋದು ಇವನದ್ದೇ. ನಾನು ಜೀವನದಲ್ಲಿ ಸಂತೋಷ ನೀಡಿದ ಎರಡು ವಿಚಾರ ಆನಂದ ಮತ್ತು ಭೂಮಿಕಾ" ಎಂದು ಗೌತಮ್‌ ಹೇಳುತ್ತಾರೆ.

ಅಪೇಕ್ಷಾ ಪಾರ್ಥ ಮಾತುಕತೆ

ಅಪೇಕ್ಷಾಳ ಬಳಿಗೆ ಪಾರ್ಥ ಬರುತ್ತಾನೆ. "ನೀವು ಬೇಜಾರಾಗಿದ್ದೀರಿ, ಅದಕ್ಕೆ ನಿಮ್ಮ ಬೇಸರ ಕಡಿಮೆ ಮಾಡೋಣ ಎಂದುಕೊಂಡಿದ್ದೇನೆ. ನಿಮ್ಮನ್ನು ಹೊರಗೆ ಕರೆದುಕೊಂಡು ಹೋಗೋಣ ಎಂದುಕೊಂಡಿದ್ದೇನೆ" ಎನ್ನುತ್ತಾನೆ. "ನಿಮ್ಮನ್ನು ಮೂವಿಗೆ ಕರೆದುಕೊಂಡು ಹೋಗುವೆ. ಟಿಕೆಟ್‌ ಮಾಡಿದ್ದೇನೆ. ಮನೆಯವರು ಇದ್ದರೆ ಚೆನ್ನಾಗಿರುತ್ತಿತ್ತು" ಎನ್ನುತ್ತಾನೆ. "ಈ ಒಳ್ಳೆ ಮೂಡ್‌ನಲ್ಲೂ ಮನೆಯವರ ಕುರಿತು ಹೇಳ್ತಿರಿ" ಎಂದು ಬೇಸರವ್ಯಕ್ತಪಡಿಸುತ್ತಾಳೆ. ಬಳಿಕ ಒಂದಿಷ್ಟು ಪ್ರೀತಿ ಮಾತು ನಡೆದು ಸಿನಿಮಾಕ್ಕೆ ಹೋಗಲು ಮುಂದಾಗುತ್ತಾರೆ.

ಜೈದೇವ್‌ ಮಾತು ಮುಂದುವರೆಸಿದ್ದಾನೆ. ಆ ಸಮಯದಲ್ಲಿ ಚಮಕ್‌ ಚಲ್ಲೋ ಮೆಸೆಜ್‌ ಬಂದಿದೆ. ಆಕೆಯ ಜತೆ ಚಾಟಿಂಗ್‌ ಮುಂದುವರೆಸುತ್ತಿದ್ದಾನೆ. ಈ ಸಮಯದಲ್ಲಿ ಆನಂದ್‌ ಕಣ್ಣು ಮಿಸುಕಾಡುತ್ತಿದೆ. ಚಮಕ್‌ ಚಲ್ಲೋ ಜತೆಗೆ ಚಾಟಿಂಗ್‌ ಮುಗಿದ ಬಳಿಕ ಮತ್ತೆ ಆನಂದ್‌ನಲ್ಲಿ ಮಾತನಾಡುತ್ತಾನೆ. ಈ ಸಮಯದಲ್ಲಿ ಆನಂದ್‌ ಕತ್ತು ಹಿಡಿಯುತ್ತಾನೆ. "ನಿನ್ನ ಆರೈಕೆ ಮಾಡಬೇಕಾ?. ನಿನ್ನನ್ನು ಸಾಯಿಸುವೆ" ಎನ್ನುತ್ತಾನೆ. "ಬೇಡ ಇವನ ಕೊರಳಲ್ಲಿ ನನ್ನ ಫಿಂಗರ್‌ ಪ್ರಿಂಟ್‌ ಬಿದ್ರೆ ಒಳ್ಳೆಯವನೆಂಬ ನನ್ನ ಇಮೇಜ್‌ಗೆ ಹಾಳಾಗುತ್ತದೆ" ಎನ್ನುತ್ತಾನೆ. ಇದಾದ ಬಳಿಕ ಜೈದೇವ್‌ ಅಲ್ಲಿಂದ ಎದ್ದು ಹೋಗುತ್ತಾನೆ.

ದಿವಾನ್‌ ಆಫೀಸ್‌ಗೆ ಮನೆಹಾಳ ಮಾವ

ಮನೆಹಾಳ ಮಾವ ಮತ್ತು ಶಕುಂತಲಾದೇವಿ ಮಾತನಾಡುತ್ತ ಇದ್ದಾರೆ. "ಗೌತಮ್‌ ಈಗ ಆಫೀಸ್‌ಗೆ ಹೋಗುತ್ತಿಲ್ಲ. ಹೀಗಾದ್ರೆ ದಿವಾನ್‌ ಕಂಪನಿ ಬೀದಿಗೆ ಬರುತ್ತದೆ" ಎಂದು ರಮಾಕಾಂತ ಹೇಳುತ್ತಾನೆ. ಈ ಕುರಿತು ಶಕುಂತಲಾದೇವಿ ಚಿಂತೆ ಮಾಡುತ್ತಾರೆ. ಆಗ ಅಲ್ಲಿಗೆ ಗೌತಮ್‌ ಬರುತ್ತಾರೆ. "ಆನಂದ್‌ನ ನೋಡಿಕೊಳ್ಳಲು ಎಲ್ಲರೂ ಇದ್ದಾರೆ. ನೀನು ಆಫೀಸ್‌ಗೆ ಹೋಗಬಹುದಲ್ವ" ಎಂದು ಶಕುಂತಲಾ ಹೇಳುತ್ತಾರೆ. "ತುಂಬಾ ದಿನ ಆಫೀಸ್‌ಗೆ ಹೋಗದೆ ಇದ್ರೆ ತೊಂದರೆಯಾಗೋಲ್ವ. ಆನಂದ್‌ ಕೂಡ ಇಲ್ಲ. ನೀನು ಹೋಗದೆ ಇದ್ರೆ ತೊಂದರೆಯಾಗೋಲ್ವ" ಎಂದು ಕೇಳುತ್ತಾರೆ. "ನನಗೆ ಈಗ ಆಫೀಸ್‌ಗೆ ಹೋಗಲು ಆಸಕ್ತಿ ಇಲ್ಲ. ಅಲ್ಲಿ ಎಲ್ಲರಿಗೂ ಕೆಲಸ ವಹಿಸಿದ್ದೇನೆ. ಸದ್ಯ ನನಗೆ ಆನಂದ್‌ ಇಂಪಾರ್ಟೆಂಟ್‌" ಎನ್ನುತ್ತಾರೆ ಗೌತಮ್‌. "ಕಂಪನಿ ನಮ್ಮದೇ ಅಂದಮೇಲೆ ಯಾರಾದರೂ ಒಬ್ಬರು ಅಲ್ಲಿರಬೇಕಲ್ವ" ಎನ್ನುತ್ತಾರೆ ಶಕುಂತಲಾ. "ಹಾಗಾದರೆ ಮಾವ ಆಫೀಸ್‌ಗೆ ಹೋಗ್ಲಿ" ಎಂದಾಗ ಮನೆಹಾಳ ಮಾವ ಅಚ್ಚರಿಗೊಳ್ಳುತ್ತಾರೆ. ಖುಷಿಯಿಂದ ಆಫೀಸ್‌ಗೆ ಹೋಗಲು ಒಪ್ಪುತ್ತಾರೆ. "ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಆಯ್ತು" ಎಂದುಕೊಳ್ಳುತ್ತಾರೆ ಶಕುಂತಲಾ.

ಕಣ್ಣು ತೆರೆದ ಆನಂದ್‌

ಮಲ್ಲಿ ಜತೆ ಜೈದೇವ್‌ ಮಾತನಾಡುತ್ತಾನೆ. "ಯಾರೂ ಮಾತನಾಡಿದರೂ ಕಣ್ಣು ತೆರೆಯದ ಆನಂದ್‌ ಅವ್ರು ನಿಮ್ಮ ಧ್ವನಿಗೆ ಕಣ್ಣು ಮಿಟುಕಿಸಿದ್ರಲ್ವ. ನೀವು ದೇವರ ರೀತಿ ಕಾಣಿಸ್ತಿರಿ" ಎನ್ನುತ್ತಾಳೆ ಮಲ್ಲಿ. ವಿಕಟವಾಗಿ ಜೈದೇವ್‌ ನಗುತ್ತಾನೆ. "ನಾನು ಇಂಪಾರ್ಟೆಂಟ್‌ ಕೆಲಸದ ಮೇಲೆ ಹೋಗಿ ಬರುವೆ. ಅಲ್ಲಿ ತನಕ ಮ್ಯಾನೇಜ್‌ ಮಾಡು" ಎಂದು ಮಲ್ಲಿಗೆ ಹೇಳಿ ಜೈದೇವ್‌ ಚಮಕ್‌ ಚಲ್ಲೋ ಬಳಿಗೆ ಹೋಗುತ್ತಾನೆ. ಇನ್ನೊಂದೆಡೆ ಅಪರ್ಣಾಗೆ ಭೂಮಿಕಾ ಸಮಧಾನ ಹೇಳುತ್ತಾ ಇರುತ್ತಾರೆ. ಇದೇ ಸಮಯದಲ್ಲಿ ಆನಂದ್‌ಗೆ ಎಚ್ಚರವಾಗುತ್ತದೆ. ಒಂದೊಂದಾಗಿ ಎಲ್ಲವೂ ನೆನಪಾಗುತ್ತದೆ. ಅಪರ್ಣಾಗೆ ಬಾಯ್‌ ಹೇಳಿ ಮನೆಯಿಂದ ಹೊರಗೆ ಬಂದೆ. ಆಗ ಒಂದು ಟಿಟಿ ಸ್ಪೀಡ್‌ ಆಗಿ ಬಂತು.... ಎಂದು ನೆನಪಿಸಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಜೈದೇವ್‌ ಎಲ್ಲದಕ್ಕೂ ಕಾರಣ ಎನ್ನುವುದೂ ನೆನಪಾಗುತ್ತದೆ. ಸೀರಿಯಲ್‌ ಮುಂದುವರೆಯುತ್ತದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)