Amruthadhaare: ಪ್ರಜ್ಞೆ ಬಂದ ಮಲ್ಲಿಗೆ ಮತ್ತಿನೌಷಧ ನೀಡಿದ ಸಿಸ್ಟರ್; ಜೈದೇವ್ ಕುತಂತ್ರ ಗೌತಮ್ ಭೂಮಿಕಾಳಿಗೆ ತಿಳಿಯುವುದೇ?
Sep 25, 2024 09:42 AM IST
ಅಮೃತಧಾರೆ ಸೀರಿಯಲ್ ಸ್ಟೋರಿ
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಮಹತ್ವದ ಬೆಳವಣಿಗೆ ಏನೂ ನಡೆದಿಲ್ಲ. ಆದರೆ, ಆಸ್ಪತ್ರೆಯ ಸಿಸ್ಟರ್‌ಗೆ ಆಮಿಷವೊಡ್ಡಿದ ಜೈದೇವ್ ಮಲ್ಲಿಗೆ ಪ್ರಜ್ಞೆ ಬಾರದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದಾನೆ. ದಿಯಾ ಜೈದೇವ್ ಸಂಬಂಧ ಭೂಮಿಕಾ ಮತ್ತು ಗೌತಮ್‌ಗೆ ತಿಳಿಯುವುದೇ? ಎಂಬ ಸಂದೇಹ ಇದೆ.
Amruthadhaare Serial Today Episode: ಜೈದೇವ್ ಮತ್ತು ಮಾವ ಮಾತನಾಡುತ್ತ ಇದ್ದಾರೆ. ಆಸ್ಪತ್ರೆಯಲ್ಲಿ ಮಲ್ಲಿಗೆ ಎಚ್ಚರವಾದಂತೆ ಆಕೆಯ ಕಥೆ ಮುಗಿಸುವುದಾಗಿ ಜೈದೇವ್ ಹೇಳುತ್ತಾನೆ. ಇವನು ಅಂದುಕೊಂಡ ಕತೆಗೆ ಏನೇನೋ ಟ್ವಿಸ್ಟ್ ಇದೆಯೋ ಟೆಲಿಕಾಸ್ಟ್ ಆದ ಮೇಲೆಯೇ ಗೊತ್ತಾಗೋದು ಎಂದು ಮಾವ ಅಂದುಕೊಳ್ಳುತ್ತಾರೆ. ಈ ಮೂಲಕ ಈ ಸೀರಿಯಲ್‌ನಲ್ಲಿ ಇನ್ನಷ್ಟು ಟ್ವಿಸ್ಟ್‌ಗಳು ಇರುವ ಸೂಚನೆಯನ್ನು ನೀಡಿದ್ದಾರೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಇರುವ ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಾ ಇದ್ದಾರೆ. "ಮಲ್ಲಿನ ನಾವು ಹೇಗೆ ಫೇಸ್ ಮಾಡೋದು. ಪ್ರಜ್ಞೆ ಬಂದ ಹಾಗೇ ನನ್ನ ಮಗು ಎಲ್ಲಿ ಎಂದು ಕೇಳಿದ್ರೆ ಏನು ಹೇಳೋದು. ತುಂಬಾ ಚಿಂತೆ ಆಗ್ತಾ ಇದೆ" ಎಂದು ಭೂಮಿಕಾ ಕೇಳುತ್ತಾರೆ. "ಅವಳಿಗೆ ಏನು ಅಂತ ಹೇಳೋದು ಅಂತ ಟೆನ್ಷನ್ ಆಗ್ತಾ ಇದೆ" ಎಂದು ಗೌತಮ್ ಕೂಡ ಆತಂಕ ವ್ಯಕ್ತಪಡಿಸುತ್ತಾರೆ. "ಕಟ್ಟಿಕೊಂಡ ನಾನೇ ಇಲ್ಲಿ ಆರಾಮವಾಗಿ ನಿಂತಿದ್ದೀನಿ. ಇವರಿಬ್ಬರು ಯಾಕೆ ಇಷ್ಟೊಂದು ಟೆನ್ಷನ್ ಮಾಡ್ತಾರೆ" ಎಂದು ಜೈದೇವ್ ದೂರದಲ್ಲಿ ನಿಂತು ಆಲೋಚಿಸುತ್ತಾನೆ. ಆಗ ಅಲ್ಲಿಗೆ ಬಂದ ಡಾಕ್ಟರ್ "ಇನ್ನೂ ಪ್ರಜ್ಞೆ ಬಂದಿಲ್ಲ. ಇಂತಹ ಸಮಯದಲ್ಲಿ ನಾವು ಏನೂ ಹೇಳುವಂತೆ ಇಲ್ಲ. ನೀವು ಕುಗ್ಗುವ ಅವಶ್ಯಕತೆ ಇಲ್ಲ ಅಂದುಕೊಂಡಿದ್ದೇನೆ" ಎಂದು ಹೇಳುತ್ತಾರೆ.
ಅಪೇಕ್ಷಾ ಮನೆಯ ಹೊರಗಡೆ ಕುಳಿತಿದ್ದಾಳೆ. ಅಲ್ಲಿಗೆ ಪಾರ್ಥ ಬರುತ್ತಾನೆ. ನಾವೂ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರೋಣ ಎಂದು ಪಾರ್ಥ ಹೇಳುತ್ತಾನೆ. "ನನಗೆ ತಲೆನೋವು, ವಾಮಿಟ್ ಬಂದ ಹಾಗೆ ಆಯ್ತು" ಎಂದು ಅಪೇಕ್ಷಾ ಸುಳ್ಳು ಹೇಳುತ್ತಾಳೆ. ಈ ಮೂಲಕ ಶಕುಂತಲಾದೇವಿ ಹೇಳಿದಂತೆ ಈಕೆ ಮನೆಯಲ್ಲೇ ಇರಲು ಪ್ಲ್ಯಾನ್ ಮಾಡುತ್ತಾಳೆ. ಅಲ್ಲಿ ಅಕ್ಕಭಾವ ಇದ್ದಾರೆ ಅಲ್ವ, ನೀವು ಯಾಕೆ ಅಲ್ಲಿಗೆ ಹೋಗಬೇಕು ಎಂದು ಪಾರ್ಥನನ್ನೂ ಹೋಗಲು ಬಿಡೋದಿಲ್ಲ.
ಮಲ್ಲಿಗೆ ಪ್ರಜ್ಞೆ ಬಂತು, ಆದರೆ…
ಆಸ್ಪತ್ರೆಯಲ್ಲಿರುವ ಮಲ್ಲಿಗೆ ಪ್ರಜ್ಞೆ ಬಂದಂತೆ ಆಗಿದೆ. ಇದನ್ನು ನೋಡಿದ ನರ್ಸ್ ಅಚ್ಚರಿಗೊಂಡಿದ್ದಾಳೆ. ತಕ್ಷಣ ಜೈದೇವ್‌ಗೆ ಕರೆ ಮಾಡುತ್ತಾಳೆ. ಜೈದೇವ್ ತಕ್ಷಣ ನಿನಗೆ ಎಷ್ಟು ಹಣ ಬೇಕು, ಏನೂ ಬೇಕೂ ಕೊಡ್ತಿನಿ ಅವಳಿಗೆ ಎಚ್ಚರವಾಗದಂತೆ ನೋಡಿಕೋ ಎನ್ನುತ್ತಾರೆ. "ಅವಳಿಗೆ ಪ್ರಜ್ಞೆ ಬಂದ ವಿಚಾರ ಯಾರಿಗೂ ಹೇಳಬೇಡಿ, ಅವಳಿಗೆ ಮತ್ತೂ ಬರುವ ಇಂಜೆಕ್ಷನ್ ಏನಾದರೂ ಕೊಡಿ" ಎಂದು ಹೇಳುತ್ತಾನೆ. "ನಿಮಗೆ ಏನು ಬೇಕು, ಕಾರು ಬೇಕ, ಒಡವೆ ಬೇಕಾ, ನೀವು ರಿಸ್ಕ್ ತೆಗೆದುಕೊಂಡರೆ ದೊಡ್ಡ ಪ್ಲ್ಯಾಟ್ ಕೊಡ್ತಿನಿ, ಸ್ವಂತ ಮನೆಯೇ ಕೊಡ್ತಿನಿ" ಎಂದೆಲ್ಲ ಆಮೀಷ ಒಡ್ಡುತ್ತಾನೆ. ಸಿಸ್ಟರ್ ಒಪ್ಪುತ್ತಾಳೆ. ಮಲ್ಲಿಗೆ ನೀಡುವ ಗ್ಲುಕೋಸ್‌ಗೆ ಮತ್ತಿನ ಔಷಧ ಬೆರೆಸುತ್ತಾಳೆ.
ಅತ್ತಿಗೆನ ಕರೆದುಕೊಂಡು ಮನೆಗೆ ಹೋಗಿ ರೆಸ್ಟ್ ಮಾಡಿ ಎಂದು ಗೌತಮ್‌ಗೆ ಜೈದೇವ್ ಹೇಳುತ್ತಾನೆ. "ಅವಳಿಗೆ ಪ್ರಜ್ಞೆ ಬರಲಿ, ಆಮೇಲೆ ನಿರ್ಧಾರ ಮಾಡ್ತಿನಿ" ಎನ್ನುತ್ತಾರೆ ಗೌತಮ್. "ನೀವು ಇರ್ತಿರಿ, ಅವಳಿಗೆ ಪ್ರಜ್ಞೆ ಬಂದು ಎಲ್ಲಿ ವಿಷಯ ಬಾಯಿ ಬಿಡ್ತಾಳೆ ಎಂಬ ಭಯ ನನಗೆ" ಎಂದುಕೊಳ್ಳುತ್ತಾನೆ.
ಅಪೇಕ್ಷಾ ಪಾರ್ಥನ ಜತೆ ಮಾತನಾಡುತ್ತಾಳೆ. "ನೀವು ಇವತ್ತು ಆಫೀಸ್‌ಗೆ ಹೋಗಬೇಡಿ" ಎನ್ನುತ್ತಾಳೆ. "ಅಂದ್ರೆ, ಆಫೀಸ್‌ಗೆ ಹೋಗದೆ ಆಸ್ಪತ್ರೆಗೆ ಹೋಗೋಣ್ವ" ಎಂದು ಪಾರ್ಥ ಕೇಳುತ್ತಾನೆ. "ಅಲ್ಲ, ನಾವು ಹೊರಗಡೆ ಸುತ್ತಾಡೋಣ" ಎನ್ನುತ್ತಾಳೆ. "ಈ ಸ್ಥಿತಿಯಲ್ಲಿ ಹೊರಗೆ ಹೋಗೋದ, ನೀವು ಹೇಳಿದಂತೆ ನಾನು ಆಫೀಸ್‌ಗೆ ಹೋಗೋಲ್ಲ. ನಾವಿಬ್ಬರೂ ಆಸ್ಪತ್ರೆಗೆ ಹೋಗೋಣ, ಆಮೇಲೆ ಎಲ್ಲಾದರೂ ಸುತ್ತಾಡಲು ಹೋಗೋಣ" ಎನ್ನುತ್ತಾನೆ. "ಆಸ್ಪತ್ರೆಗೆ ಬರಲು ನನಗೆ ಇಷ್ಟವಿಲ್ಲ ಪಾರ್ಥ" ಎನ್ನುತ್ತಾಳೆ. "ನನಗೆ ಆಸ್ಪತ್ರೆ ಸ್ಮೆಲ್ ಆಗೋಲ್ಲ. ಮನೆಯವರನ್ನ ಈ ಸ್ಥಿತಿಯಲ್ಲಿ ನೋಡಲು ನನಗೆ ಆಗೋದಿಲ್ಲ" ಎಂದು ಸಬೂಬು ಹೇಳುತ್ತಾಳೆ. "ಸರಿ, ನಿಮ್ಮ ಮೂಡ್ ಹಾಳು ಮಾಡಿದ್ರೆ ನನ್ನ ಮನಸ್ಸು ಹಾಳಾಗುತ್ತದೆ. ಹೊರಗೆ ಸುತ್ತಾಡಿ ಬರೋಣ" ಎನ್ನುತ್ತಾನೆ.
ಸಿಸ್ಟರ್ ಜತೆ ಜೈದೇವ್ ಮಾತನಾಡುತ್ತಾನೆ. ಪ್ರಜ್ಞೆ ಬಾರದೆ ಇದ್ದರೆ ಏನು ಮಾಡ್ತಾರೆ ಎಂದು ಕೇಳುತ್ತಾರೆ. ಹಾಗೇ ಆಗೋದಿಲ್ಲ. ಎಲ್ಲಾದರೂ ಈ ರೀತಿ ಆದ್ರೆ ಆಪರೇಷನ್ ಮಾಡ್ತಾರೆ ಎನ್ನುತ್ತಾರೆ ಸಿಸ್ಟರ್. ಆಪರೇಷನ್ ಬರೋ ತನಕ ಇವಳಿಗೆ ಪ್ರಜ್ಞೆ ಬರಬಾರದು ಎಂದೆಲ್ಲ ಆಕೆಗೆ ಐಡಿಯಾ ನೀಡುತ್ತಾನೆ. ಸಿಸ್ಟರ್ ಭಯ ಪಡುತ್ತಾರೆ. ಮತ್ತಷ್ಟು ಹಣದ ಆಮೀಷ ನೀಡುತ್ತಾನೆ.
ಶಕುಂತಲಾದೇವಿ ದುಃಖದಲ್ಲಿದ್ದಾರೆ. ಸಹೋದರನ ಜತೆ ದುಃಖ ತೋಡಿಕೊಳ್ಳುತ್ತಾರೆ. "ನನಗೆ ಮಗು ಹೋಗಿರುವುದು ದುಃಖವಾಗುತ್ತದೆ. ನನ್ನ ತಲೆಮಾರಿನಲ್ಲಿ ಬರುವ ಮೊದಲ ಮಗುವಾಗಿತ್ತು. ಮತ್ತೆ ಮನೆಗೆ ಮಗು ಬರುತ್ತದೆ ಎಂದು ಆಸೆಪಟ್ಟಿದ್ದೆ" ಎಂದೆಲ್ಲ ಹೇಳುತ್ತಾರೆ. ಇನ್ನೊಂದೆಡೆ ಗೌತಮ್ ಮತ್ತು ಭೂಮಿಕಾಳನ್ನು ಆಸ್ಪತ್ರೆಯಿಂದ ಕಳುಹಿಸಲು ಜೈದೇವ್ ಪ್ರಯತ್ನಿಸುತ್ತಾನೆ. ಕೊನೆಗೆ ಗೌತಮ್ ಹೋಗಿ ರೆಸ್ಟ್ ಮಾಡಲು ಒಪ್ಪುತ್ತಾರೆ. ಮಲ್ಲಿ ಈಗ ಇರುವ ಪರಿಸ್ಥಿತಿಯಲ್ಲಿ ಯಾರಾದರೂ ಹೆಂಗಸರು ಇರೋದು ಒಳ್ಳೆಯದು ಎಂದು ಭೂಮಿಕಾ ಹೋಗಲು ಒಪ್ಪುವುದಿಲ್ಲ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)