logo
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ; ಹೀಗಿದೆ ಸಂಪೂರ್ಣ ಪಟ್ಟಿ

ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ; ಹೀಗಿದೆ ಸಂಪೂರ್ಣ ಪಟ್ಟಿ

Dec 06, 2024 04:46 PM IST

google News

ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ

    • Today OTT Releases: ಒಟಿಟಿಯಲ್ಲಿಂದು ಒಂದಲ್ಲ ಎರಡಲ್ಲ ಬರೋಬ್ಬರಿ 19 ಸಿನಿಮಾ ಮತ್ತು ವೆಬ್‌ಸರಣಿಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಆ 19ರ ಪೈಕಿ ಕನ್ನಡದ ಎರಡು ಸಿನಿಮಾಗಳಾದ ಮ್ಯಾಟ್ನಿ ಮತ್ತು ಮರ್ಫಿ ಇಂದಿನಿಂದಲೇ ಪ್ರಸಾರ ಕಾಣುತ್ತಿವೆ. 
ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ
ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ (imdb)

Today OTT Releases: ಒಟಿಟಿ ಸಿನಿಮಾ ವೀಕ್ಷಕರಿಗೆ ಈ ವಾರ ಬಂಪರ್‌. ಏಕೆಂದರೆ ಒಂದಲ್ಲ ಎರಡಲ್ಲ ಬರೋಬ್ಬರಿ 19 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ಈ 19ರ ಪೈಕಿ ಕ್ರೈಂ ಥ್ರಿಲ್ಲರ್, ಸೈ- ಫಿಕ್ಷನ್, ಆಕ್ಷನ್, ರೊಮ್ಯಾಂಟಿಕ್, ಡ್ರಾಮಾ ಸೇರಿ ಹಲವು ಪ್ರಕಾರದ ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಯಾವ ಹೊಸ ಕಂಟೆಂಟ್‌ಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.  

ನೆಟ್‌ಫ್ಲಿಕ್ಸ್‌ ಒಟಿಟಿ

ಜಿಗ್ರಾ (ಹಿಂದಿ ಕ್ರೈಮ್ ಥ್ರಿಲ್ಲರ್ ಚಿತ್ರ)- ಡಿಸೆಂಬರ್ 6

ಮೇರಿ (ಇಂಗ್ಲಿಷ್ ಸಿನಿಮಾ)- ಡಿಸೆಂಬರ್ 6

ಬ್ಯೂಟಿಫುಲ್ ಲೈಫ್ ಸೀಸನ್ 1 (ಜಪಾನೀಸ್ ರೊಮ್ಯಾಂಟಿಕ್ ವೆಬ್ ಸರಣಿ) - ಡಿಸೆಂಬರ್ 6

ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ (ಹಿಂದಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ)- ಡಿಸೆಂಬರ್ 7

ಅಮೆಜಾನ್ ಪ್ರೈಮ್ ಒಟಿಟಿ

ಅಗ್ನಿ (ಹಿಂದಿ ಆಕ್ಷನ್ ಡ್ರಾಮಾ ಸಿನಿಮಾ)- ಡಿಸೆಂಬರ್ 6

ದಿ ಸ್ಟಿಕ್ಕಿ (ಹಿಸ್ಟರಿ ವೆಬ್ ಸರಣಿ) - ಡಿಸೆಂಬರ್ 6

ಮೊಹ್ರೆ ಸೀಸನ್ 1 (ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ) - ಡಿಸೆಂಬರ್ 6

ಇಯರ್ 10 (ಇಂಗ್ಲಿಷ್ ಕ್ರೈಮ್ ಸರ್ವೈವಲ್ ಥ್ರಿಲ್ಲರ್ ಮೂವಿ)- ಡಿಸೆಂಬರ್ 6

ಮರ್ಫಿ ಸಿನಿಮಾ (ಕನ್ನಡ ಟೈಂ ಟ್ರಾವೆಲಿಂಗ್‌ ಸಿನಿಮಾ)- ಡಿಸೆಂಬರ್ 6

ಜಿಯೋ ಸಿನೆಮಾ ಒಟಿಟಿ

ಕ್ರೀಚ್ ಕಮಾಂಡೋಸ್ (ಅನಿಮೇಟೆಡ್ ಸಿನಿಮಾ)- ಡಿಸೆಂಬರ್ 6

ಲಾಂಗಿಂಗ್ (ಇಂಗ್ಲಿಷ್ ಕಾಮಿಡಿ ಸಿನಿಮಾ)- ಡಿಸೆಂಬರ್ 7

ಲಯನ್ಸ್ ಗೇಟ್ ಪ್ಲೇ ಒಟಿಟಿ

ಬ್ಲೀಡಿಂಗ್ ಸ್ಟೀಲ್ (ತೆಲುಗು ಡಬ್ ಇಂಗ್ಲಿಷ್ ಸೈ-ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಸಿನಿಮಾ) - ಡಿಸೆಂಬರ್ 6

ವಾರ್ ಆಫ್ ದಿ ವರ್ಲ್ಡ್ಸ್ ಸೀಸನ್ 1 (ಇಂಗ್ಲಿಷ್ ಸೈ-ಫಿಕ್ಷನ್ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ) - ಡಿಸೆಂಬರ್ 6

ನರುಡು ಬ್ರಾತುತು ನಟನ (ತೆಲುಗು ಸಿನಿಮಾ)- ಆಹಾ ಒಟಿಟಿ - ಡಿಸೆಂಬರ್ 6

ಸರ್ (ತಮಿಳು ಚಿತ್ರ)- ಆಹಾ ತಮಿಳು ಒಟಿಟಿ - ಡಿಸೆಂಬರ್ 6

ಡೋಂಟ್‌ ಟರ್ನ್‌ ಔಟ್‌ ದಿ ಲೈಟ್ಸ್‌ (ಇಂಗ್ಲಿಷ್ ಹಾರರ್ ಚಿತ್ರ) - ಬುಕ್ ಮೈ ಶೋ ಒಟಿಟಿ - ಡಿಸೆಂಬರ್ 6

ಮೈರಿ (ಹಿಂದಿ ರಿವೆಂಜ್ ಥ್ರಿಲ್ಲರ್ ವೆಬ್ ಸರಣಿ) - ಜೀ 5

ಎಮಿಲಿಯಾ ಪೆರೆಜ್ (ಇಂಗ್ಲಿಷ್ ಮ್ಯೂಸಿಕ್ ಥ್ರಿಲ್ಲರ್ ಚಿತ್ರ) - ಮುಬಿ ಒಟಿಟಿ - ಡಿಸೆಂಬರ್ 6

ಫ್ಯಾಮಿಲಿ (ಮಲಯಾಳಂ ಡ್ರಾಮಾ ಚಿತ್ರ) - ಮನೋರಮಾ ಮ್ಯಾಕ್ಸ್ ಒಟಿಟಿ - ಡಿಸೆಂಬರ್ 6

ಮ್ಯಾಟ್ನಿ (ಕನ್ನಡ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ) - ಸನ್ NXT ಒಟಿಟಿ - ಡಿಸೆಂಬರ್ 6

ವಿಶೇಷ ಎನಿಸುವ ಸಿನಿಮಾಳಿವು..

ಡಿಸೆಂಬರ್‌ 6ರಂದೇ 19 ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಪ್ರಸಾರವಾಗುತ್ತಿವೆ. ಕನ್ನಡದ ಎರಡು ಸಿನಿಮಾಗಳಾದ ಸೈ-ಫಿಕ್ಷನ್ ಥ್ರಿಲ್ಲರ್ ಮರ್ಫಿ, ರೊಮ್ಯಾಂಟಿಕ್ ಹಾರರ್‌ ಮ್ಯಾಟ್ನಿ, ಸರ್ವೈವಲ್ ಕ್ರೈಮ್ ಥ್ರಿಲ್ಲರ್ ಇಯರ್‌ 10, ನರುಡಿ ಬ್ರಾತುತು ನಟನೆ ಮತ್ತು ತಮಿಳಿನ ಸರ್‌ ಸಿನಿಮಾ ವಿಶೇಷ ಎನಿಸಿವೆ. ಅಲ್ಲದೆ, ಡೋಂಟ್‌ ಟರ್ನ್‌ ಔಟ್‌ ದಿ ಲೈಟ್ಸ್‌, ಮಲಯಾಳಂನ ಫ್ಯಾಮಿಲಿ, ಹಿಂದಿ ಕ್ರೈಮ್ ಥ್ರಿಲ್ಲರ್ ಸರಣಿ ಮೊಹ್ರೆ ಸೀಸನ್ 1, ಹಿಂದಿ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ ತನವ್ 2, ಜಾಕಿ ಚಾನ್ ಅಭಿನಯದ ಇಂಗ್ಲಿಷ್ ಸೈನ್ಸ್‌ ಫಿಕ್ಷನ್‌ ಸಿನಿಮಾ ಬ್ಲೀಡಿಂಗ್ ಸ್ಟೀಲ್ ಸಿನಿಮಾಗಳನ್ನು ಇದೀಗ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.  

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ