logo
ಕನ್ನಡ ಸುದ್ದಿ  /  ಮನರಂಜನೆ  /  ‘ನಾನು’ ಆಯ್ತು ‘ನೀನು’ ಬಂದೋಯ್ತು, ಈಗ ‘ನಾನು ನೀನು’; ಉಪೇಂದ್ರ Ui ಸಿನಿಮಾ ಏಕೆ ಸ್ಪೇಷಲ್? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

‘ನಾನು’ ಆಯ್ತು ‘ನೀನು’ ಬಂದೋಯ್ತು, ಈಗ ‘ನಾನು ನೀನು’; ಉಪೇಂದ್ರ UI ಸಿನಿಮಾ ಏಕೆ ಸ್ಪೇಷಲ್? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

Dec 20, 2024 12:14 PM IST

google News

ಉಪೇಂದ್ರ UI ಸಿನಿಮಾ ಏಕೆ ನೋಡಬೇಕು? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

    • UI Movie: ಈ ಸಲ ಹುಳ ಬಿಡಲು ಬರ್ತಿಲ್ಲ, ತಲೆಯಲ್ಲಿನ ಹುಳ ತೆಗೆಯಲು ಬರ್ತಿದ್ದೇನೆ ಎಂದು ಈ ಹಿಂದೆಯೇ ಹೇಳಿದ್ದರು ಉಪೇಂದ್ರ. ಅದರಂತೆ, ಈಗ ಒಂದಷ್ಟು ವಿಚಾರಗಳನ್ನು ಯುಐ ಸಿನಿಮಾದಲ್ಲಿ ಟಚ್‌ ಮಾಡಿದ್ದಾರವರು. ಅಷ್ಟಕ್ಕೂ ಉಪೇಂದ್ರ ಅವರ ಈ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಉತ್ತರ. 
ಉಪೇಂದ್ರ UI ಸಿನಿಮಾ ಏಕೆ ನೋಡಬೇಕು? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು
ಉಪೇಂದ್ರ UI ಸಿನಿಮಾ ಏಕೆ ನೋಡಬೇಕು? ಇಲ್ಲಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

5 interesting facts about UI: ಯುಐ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ. ಈ ಸಲ ಹುಳ ಬಿಡಲು ಬರ್ತಿಲ್ಲ, ತಲೆಯಲ್ಲಿನ ಹುಳ ತೆಗೆಯಲು ಬರ್ತಿದ್ದೇನೆ ಎಂದು ಈ ಹಿಂದೆಯೇ ಹೇಳಿದ್ದರು ಉಪೇಂದ್ರ. ಅದರಂತೆ, ಈಗ ಒಂದಷ್ಟು ವಿಚಾರಗಳನ್ನು ಈ ಸಿನಿಮಾದಲ್ಲಿ ಟಚ್‌ ಮಾಡಿದ್ದಾರವರು. ಅದರಂತೆ, ಆ ನಿರೀಕ್ಷೆಗಳೊಂದಿಗೆ ಈಗ UI ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಈ ನಡುವೆ ಉಪೇಂದ್ರ ಅವರ ಈ ಸಿನಿಮಾ ಏಕೆ ವಿಶೇಷ, UI ಸಿನಿಮಾ ಏಕೆ ನೋಡಬೇಕು? ಹೀಗಿವೆ 5 ಇಂಟ್ರೆಸ್ಟಿಂಗ್‌ ವಿಚಾರಗಳು

1. - ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಉಪೇಂದ್ರ

ಈ ವರೆಗೂ ರಿಯಲ್‌ ಸ್ಟಾರ್‌ ಉಪೇಂದ್ರ ಹತ್ತಾರು ಸಿನಿಮಾಗಳಲ್ಲಿ ನಟಿಸಿರಬಹುದು. ಆದರೆ, ಅವರ ನಿರ್ದೇಶನದ ಸಿನಿಮಾಗಳಿಗೆ ಇರುವ ಕ್ರೇಜ್‌ ಬೇರೆಯದೇ ಇದೆ. ತೆರೆಮೇಲೆ ಅವರನ್ನು ನೋಡುವುದರ ಜತೆಗೆ "ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಉಪೇಂದ್ರ" ಎಂದು ನೋಡಲು ಬಯಸುವವರೇ ಹೆಚ್ಚು. ಇದೀಗ ಆ ಅವಕಾಶ ಉಪ್ಪಿ 2 ಚಿತ್ರದ ಬಳಿಕ ಅಂದರೆ 9 ವರ್ಷಗಳ ನಂತರ ಆಗಮಿಸಿದೆ.

2. - 9 ವರ್ಷಗಳ ಬಳಿಕ ಪುನರಾಗಮನ‌

ನಟನೆಗಿಂತಲೂ ತಾವು ನಿರ್ದೇಶಿಸಿದ ಸಿನಿಮಾಗಳಿಂದಲೇ ಹೆಚ್ಚು ಸದ್ದು ಮಾಡಿದವರು ಉಪೇಂದ್ರ. ಶ್‌, ಓಂ, ಎ ಸಿನಿಮಾಗಳು ಸೂಪರ್‌ ಡೂಪರ್‌ ಹಿಟ್‌ ಪಟ್ಟ ಪಡೆದು, ಸಾರ್ವಕಾಲಿಕ ದಾಖಲೆಗಳನ್ನೂ ಆವತ್ತಿನ ಕಾಲದಲ್ಲಿಯೇ ತಮ್ಮದಾಗಿಸಿಕೊಂಡಿದ್ದವು. ಈಗ ಇದೇ ಉಪೇಂದ್ರ ಮತ್ತೆ 9 ವರ್ಷಗಳ ಬಳಿಕ ಆಗಮಿಸಿದ್ದಾರೆ. 2015ರಲ್ಲಿ ಉಪ್ಪಿ 2 ಸಿನಿಮಾ ಬಳಿಕ UI ಸಿನಿಮಾವನ್ನು ಹಿಡಿದು ಆಗಮಿಸಿದ್ದಾರೆ.

3. - ಬರೀ ನಾನಲ್ಲ, ನೀನಲ್ಲ; ನಾನು ಮತ್ತು ನೀನು

ಈ ಹಿಂದಿನ ಉಪೇಂದ್ರ ಸಿನಿಮಾದಲ್ಲಿ ನಾನು ಎಂಬ ಬಗ್ಗೆ ಮಾತನಾಡಿದ್ದ ಉಪ್ಪಿ, ಅದಾದ ಬಳಿಕ ನೀನು ಎಂಬುದನ್ನು ಉಪ್ಪಿ 2 ಸಿನಿಮಾದಲ್ಲಿ ಮುಂದುವರಿಸಿದ್ದರು. ಇದೀಗ ನಾನು ಮತ್ತು ನೀನು ಎರಡನ್ನೂ ಆಧರಿಸಿ UI ಮಾಡಿಟ್ಟಿದ್ದಾರೆ. ನಾನು ಮತ್ತು ನೀನು ಇಬ್ಬರು ಎದುರು ಬದುರಾದರೆ, ಸತ್ಯಯುಗದ ಸತ್ಯ ಕಲ್ಕಿಯುಗದ ಕಲ್ಕಿ ಎದುರಾದಾಗ ಏನಾಗಬಹುದು ಎಂಬುದನ್ನು UI ಸಿನಿಮಾ ಮೂಲಕ ತೋರಿಸುವ ಪ್ರಯತ್ನವಾಗಿದೆ.

4. - ತಂತ್ರಜ್ಞಾನದ ಜತೆಗೆ ತಾಂತ್ರಿಕತೆ

ಉಪೇಂದ್ರ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ತಂತ್ರಜ್ಞಾನದಲ್ಲಿ ಈ ಸಿನಿಮಾ ತುಂಬ ಮುಂದಿದೆ. ಮೇಕಿಂಗ್‌ ಮತ್ತು ಬಳಸಿದ ತಂತ್ರಜ್ಞಾನವೂ ಈ ಸಿನಿಮಾದ ಅಂದವನ್ನು ಮತ್ತಷ್ಟು ಮೇಲಕ್ಕೆ ಎತ್ತಿದೆ. ಇಬ್ಬರು ಛಾಯಾಗ್ರಾಹಕರು, ಇಬ್ಬರು ಸಂಕಲನಕಾರರು, ಇಬ್ಬರು ಸಂಗೀತ ನಿರ್ದೇಶಕರು ಈ ಸಿನಿಮಾದ ಭಾಗವಾಗಿದ್ದಾರೆ.

5. - ಅಪ್ಪಟ ಕನ್ನಡಿಗರ ಪ್ಯಾನ್‌ ಇಂಡಿಯನ್‌ ಸಿನಿಮಾ

UI ಸಿನಿಮಾ ಅಪ್ಪಟ ಕನ್ನಡಿಗರ ಸಿನಿಮಾ. ಉಪೇಂದ್ರ ನಿರ್ದೇಶಕರಾದರೆ, ಪಾತ್ರವರ್ಗದಲ್ಲಿ ಇರುವವರು ಬಹುತೇಕರು ಕನ್ನಡಿಗರೇ. ತಾಂತ್ರಿಕ ಬಳಗದಲ್ಲಿಯೂ ಕನ್ನಡಿಗರದ್ದೇ ಹವಾ. ಸಂಗೀತ, ಸಂಕಲನ, ಛಾಯಾಗ್ರಹಣ ವಿಭಾಗದಲ್ಲಿ ಕನ್ನಡಿಗರಿದ್ದಾರೆ. ಹೀಗೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ, ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ