Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ, ಎಲ್ಲಿಲ್ಲಿ ಕರೆಂಟ್ ಇರೋಲ್ಲ
Dec 11, 2024 09:15 AM IST
ಬೆಂಗಳೂರಿನ ನಾನಾ ಭಾಗಗಳಲ್ಲಿ ಬುಧವಾರದಿಂದ ಮೂರು ದಿನ ಕರೆಂಟ್ ಇರೋಲ್ಲ.
- Bangalore Power Cut:ಬೆಂಗಳೂರು ಮಹಾನಗರದ ಹಲವು ಬಡಾವಣೆಗಳಲ್ಲಿ ಬುಧವಾರದಿಂದ ಮೂರು ದಿನ ವಿದ್ಯುತ್ ಕಡಿತ ಆಗಲಿದೆ. ಆ ಬಡಾವಣೆಗಳ ಮಾಹಿತಿ ಇಲ್ಲಿದೆ.
Bangalore Power Cut: ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಬುಧವಾರದಿಂದ ಮೂರು ದಿನಗಳ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. ಡಿಸೆಂಬರ್ 11, 12 ಹಾಗೂ 13ರಂದು ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ತಿಳಿಸಿದೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಆಡುಗೋಡಿ ಉಪ ಕೇಂದ್ರದ ಪ್ರದೇಶಗಳಲ್ಲಿ 2024ರ ಡಿಸೆಂಬರ್ 11 (ಬುಧವಾರ) ಮತ್ತು ಡಿಸೆಂಬರ್ 12 (ಗುರುವಾರ) ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ದೇವರಬೀಸನಹಳ್ಳಿ, ಬೆಳ್ಳಂದೂರು, ಆರ್ ಎಮ್ ಜೆಡ್, ಚಿಕ್ಕ ಆಡುಗೋಡಿ, ಎಕ್ಸೊಸ್ಪೇಸ್ ಎಕೋವರ್ಲ್ಡ್, ಕರಿಯಮ್ಮನ ಅಗ್ರಹಾರ, ಸಕ್ರ ಆಸ್ಪತ್ರೆ, ಪಾಸ್ ಪೋರ್ಟ್ ಆಫೀಸ್, ಶೋಭ ಅಪಾರ್ಟಮೆಂಟ್, ಹೊರ ವರ್ತುಲ ರಸ್ತೆ, 5ನೇ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಮಡಿವಾಳ ವೆಂಕಟೇಶ್ವರ ಬಡಾವಣೆ, ಜೋಗಿ ಕಾಲೋನಿ ಭಾಗದಲ್ಲಿ ಕರೆಂಟ್ ಇರೋಲ್ಲ
ಈಸ್ಟ್ ಲ್ಯಾಂಡ್ ಹೊಲ್ಡಿಂಗ್ ಬಿಲ್ಡಿಂಗ್, ಸೈಂಟ್ ಜಾನ್ ಸ್ಟಾಫ್ ಕ್ವಾಟ್ರಸ್, ಮಾರುತಿನಗರ, ಆಡುಗೋಡಿ 7ನೇ ಮತ್ತು 8ನೇ ಬ್ಲಾಕ್, ಸಿ.ಎ.ಆರ್. ಪೊಲೀಸ್ ಕ್ವಾಟ್ರಸ್, ಆಡುಗೊಡಿ ಮುಖ್ಯ ರಸ್ತೆ, ಸೈಂಟ್ ಜಾನ್ ಆಸ್ಪತ್ರೆ, ಮಡಿವಾಳ, ಮಾರುತಿ ನಗರ, ಡಾಲರ್ಸ್ ಕಾಲೋನಿ, 100 ಫೀಟ್ ರಿಂಗ್ ರಸ್ತೆ, ಆರ್ಯಾಕಲ್ ಕಂಪನಿ, ಬಿ.ಜಿ.ರಸ್ತೆ, ಕೆ.ಹೆಚ್.ಬಿ. ಕಾಲೋನಿ,ಭುವನಪ್ಪ ಕಾವೇರಿ ಬಡಾವಣೆ, ಕೃಷ್ಣಾ ನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೋನಿ, ಹ್ಯಾಪಿ ಮೈಂಡ್ ಕಂಪನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಏರಿಯಾ ಕೋರಮಂಗಲ, ಮೈಕೋ 3ನೇ 4ನೇ 5ನೇ ಮತ್ತು 6ನೇ ಬ್ಲಾಕ್ ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.
ಅದೇ ರೀತಿಯಲ್ಲಿ, ಬೆಂಗಳೂರು ಉತ್ತರ ವೃತ್ತ ಅಟ್ಟೂರು ಯಲಹಂಕ ಎಂಯುಎಸ್ ಎಸ್ ದಲ್ಲಿನ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 13ರ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಲಿದೆ ಎಂದು ತಿಳಿಸಲಾಗಿದೆ.
ಕೆ.ಎಂ.ಎಫ್, ಮದರ್ ಡೈರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407 ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್.ಇ.ಎಸ್ ರಸ್ತೆ, ಸಿ.ಎಂ ಎನ್ಕ್ಲೇವ್, ಮಾತೃ ಲೇಔಟ್, ಯಲಹಂಕ ಓಲ್ಡ್ ಟೌನ್, ಯಲಹಂಕ ಎಂಯುಎಸ್ಎಸ್, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡಾವಣೆ, , ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಂಪಿ ರಸ್ತೆ, ಕರೆ, ಬಿಬಿಎಂಪಿ ರಸ್ತೆ ಕೋಡಿ ರೋಡ್, ಪುರವಂಕರ ಅಪಾರ್ಟ್ ಮೆಂಟ್, ಆರ್.ಎಂ.ಝೆಡ್ ಮಾಲ್, ಆರ್.ಎಂ.ಝಡ್ ರೆಸಿಡೆನ್ಸಿಯಲ್ ಅಟ್ಟೂರು , ಕೋರಮಂಗಲ ವಿಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂರು ದಿನಗಳಲ್ಲಿ ವಿದ್ಯುತ್ ಕಡಿತವಾಗುವ ಪ್ರದೇಶದ ಜನತೆ ಬೆಸ್ಕಾಂನೊಂದಿಗೆ ಸಹಕರಿಸಬೇಕು ಎಂದು ಕೆಪಿಟಿಸಿಎಲ್ ಬೆಂಗಳೂರಿನ ಎಂಜಿನಿಯರ್ ಮನವಿ ಮಾಡಿದ್ದಾರೆ.