Bengaluru Power Cut; ಬೆಂಗಳೂರಲ್ಲಿ ಪವರ್‌ ಕಟ್‌ ಕಿರಿಕಿರಿ, ಬನ್ನೇರುಘಟ್ಟ ಮುಖ್ಯ ರಸ್ತೆ ಸೇರಿ ವಿವಿಧೆಡೆ ಈ ಶನಿವಾರ ಮತ್ತೆ ಕರೆಂಟ್ ಇರಲ್ಲ-bengaluru news bengaluru to experience power outages on saturday check areas including bannerghatta timings report uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Power Cut; ಬೆಂಗಳೂರಲ್ಲಿ ಪವರ್‌ ಕಟ್‌ ಕಿರಿಕಿರಿ, ಬನ್ನೇರುಘಟ್ಟ ಮುಖ್ಯ ರಸ್ತೆ ಸೇರಿ ವಿವಿಧೆಡೆ ಈ ಶನಿವಾರ ಮತ್ತೆ ಕರೆಂಟ್ ಇರಲ್ಲ

Bengaluru Power Cut; ಬೆಂಗಳೂರಲ್ಲಿ ಪವರ್‌ ಕಟ್‌ ಕಿರಿಕಿರಿ, ಬನ್ನೇರುಘಟ್ಟ ಮುಖ್ಯ ರಸ್ತೆ ಸೇರಿ ವಿವಿಧೆಡೆ ಈ ಶನಿವಾರ ಮತ್ತೆ ಕರೆಂಟ್ ಇರಲ್ಲ

Bengaluru News; ಬೆಂಗಳೂರಲ್ಲಿ ಪವರ್‌ ಕಟ್‌ ಕಿರಿಕಿರಿ ಹೆಚ್ಚಾಗಿದ್ದು, ಬನ್ನೇರುಘಟ್ಟ ಮುಖ್ಯ ರಸ್ತೆ ಸೇರಿ ವಿವಿಧೆಡೆ ಈ ಶನಿವಾರ ಮತ್ತೆ ಕರೆಂಟ್ ಇರಲ್ಲ. ವಿದ್ಯುತ್ ಪೂರೈಕೆ ವ್ಯತ್ಯಯದ ಸಮಯ, ಪ್ರದೇಶಗಳ ವಿವರ ಇಲ್ಲಿದೆ.

Bengaluru power cut: ಬೆಂಗಳೂರಿನ ವಿವಿಧೆಡೆ ವಿದ್ಯುತ್ ಘಟಕಗಳ ನಿರ್ವಹಣಾ ಕಾಮಗಾರಿ ನಡೆಯುವ ಕಾರಣ ಈ ಶನಿವಾರವೂ ವಿವಿಧ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ. (ಸಾಂಕೇತಿಕ ಚಿತ್ರ)
Bengaluru power cut: ಬೆಂಗಳೂರಿನ ವಿವಿಧೆಡೆ ವಿದ್ಯುತ್ ಘಟಕಗಳ ನಿರ್ವಹಣಾ ಕಾಮಗಾರಿ ನಡೆಯುವ ಕಾರಣ ಈ ಶನಿವಾರವೂ ವಿವಿಧ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ. (ಸಾಂಕೇತಿಕ ಚಿತ್ರ) (HT File)

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿಗರಿಗೆ ಪವರ್‌ ಕಟ್ ಕಿರಿಕಿರಿ ಪದೇಪದೆಕಾಡುತ್ತಿದೆ. ಈ ವಾರ ಪೂರ್ತಿ ವಿವಿಧ ಪ್ರದೇಶಗಳಲ್ಲಿ ಯೋಜಿತ ಪವರ್ ಕಟ್‌ ನಡೆದಿದ್ದು, ಬನ್ನೇರುಘಟ್ಟ ಮುಖ್ಯ ರಸ್ತೆ ಸೇರಿ ವಿವಿಧೆಡೆ ಈ ಶನಿವಾರವೂ ಮತ್ತೆ ಕರೆಂಟ್ ಇರಲ್ಲ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್)ಗಳು ವಿದ್ಯುತ್ ಮೂಲಸೌಕರ್ಯಗಳಿಗೆ ನಿಗದಿತ ನಿರ್ವಹಣೆ ಕಾರ್ಯ ಕೈಗೆತ್ತಿಕೊಂಡಿರುವ ಕಾರಣ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಶನಿವಾರ (ಆಗಸ್ಟ್ 31)ವೂ ಯೋಜಿತ ವಿದ್ಯುತ್ ಕಡಿತ ಉಂಟಾಗಲಿದೆ.

ನಿರ್ವಹಣಾ ಕಾಮಗಾರಿಗಳಲ್ಲಿ ವಿದ್ಯುತ್‌ ಸ್ಟೇಷನ್‌ಗಳ ವಿತರಣಾ ಟ್ರಾನ್ಸ್‌ಫರ್ಮರ್‌ಗಳನ್ನು ಅಪ್ಡೇಟ್‌ ಮಾಡುವ ಪ್ರಕ್ರಿಯೆ ಕೂಡ ಸೇರಿಕೊಂಡಿದೆ. ಕೇಂದ್ರ ಬೆಂಗಳೂರು ಸೇರಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಬೆಳಗ್ಗೆ 10 ರಿಂದ ಅಪರಾಹ್ನ 3 ರ ತನಕ ಚಾಲ್ತಿಯಲ್ಲಿರಲಿದೆ. ಕೆಲವು ಕಡೆ ಬೆಳಗ್ಗೆ 6 ಗಂಟೆಗೆ ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಶನಿವಾರ ಬೆಂಗಳೂರಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಈ ಶನಿವಾರ (ಆಗಸ್ಟ್ 31) ಬೆಳಗ್ಗೆ 10 ರಿಂದ ಅಪರಾಹ್ನ 3 ಗಂಟೆ ತನಕ ಕರೆಂಟ್‌ ಇರಲ್ಲ. ಪ್ರದೇಶಗಳ ವಿವರ ಹೀಗಿದೆ.

ಐಎಎಸ್‌ ಕಾಲೋನಿ, ಕೆಎಎಸ್‌ ಕಾಲೋನಿ, ಎನ್‌ ಎಸ್‌ ಪಾಳ್ಯ ಕೈಗಾರಿಕಾ ಪ್ರದೇಶ, ಬಿಳೇಕಹಳ್ಳಿ ಮುಖ್ಯ ರಸ್ತೆ, ಜಯನಗರ 4 ಟಿ, 9 ಬ್ಲಾಕ್, ಈಸ್ಟ್ ಎಂಡ್, ಬಿಎಚ್‌ಇಎಲ್‌ ಲೇಔಟ್, ಎನ್‌ಎಎಲ್‌ ಲೇಔಟ್, ತಿಲಕ್ ನಗರ, ಜಯದೇವ ಆಸ್ಪತ್ರೆ, ರಾಂಕಾ ಕಾಲೋನಿ ರಸ್ತೆ, ಬಿಸ್ಮಿಲ್ಲಾ ನಗರ, ವೇಗಾ ಸಿಟಿ ಮಾಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬಿಟಿಎಂ 1 ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಡಿತವಾಗಲಿದೆ.

ಬೆಂಗಳೂರಿನ ವಿವಿಧೆಡೆ ವಿದ್ಯುತ್ ಕಾಮಗಾರಿ, ನಿರ್ವಹಣಾ ಕಾರ್ಯ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳು ಮತ್ತು ದುರಸ್ತಿ ಕಾರ್ಯಗಳಿಗಾಗಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ಗಳು ಆಗಾಗ್ಗೆ ವಿದ್ಯುತ್ ಪೂರೈಕೆ ಅಡೆತಡೆಗಳನ್ನು ಯೋಜಿಸಲಾಗಿದೆ. ಅನೇಕ ಉದ್ಯೋಗಿಗಳು ಕೆಲಸದಿಂದ ಹೊರಗುಳಿದಿರುವುದರಿಂದ ಗ್ರಿಡ್‌ನಲ್ಲಿನ ಹೊರೆ ಕಡಿಮೆಯಾದಾಗ ಈ ಅಡಚಣೆಗಳನ್ನು ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೆಚ್ಚು ನಿಗದಿಪಡಿಸಲಾಗುತ್ತದೆ.

ಕಾಮಗಾರಿಗಳ ಪೈಕಿ ಮೂಲಸೌಕರ್ಯ ನವೀಕರಣ, ಆಧುನೀಕರಣ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾಯಿಸುವುದು, ಕಂಬ ಸ್ಥಳಾಂತರಗಳು, ರಿಂಗ್ ಮುಖ್ಯ ಘಟಕ ನಿರ್ವಹಣೆ, ಮರದ ಟ್ರಿಮ್ಮಿಂಗ್ ಮತ್ತು ನೀರು ಸರಬರಾಜು ಸುಧಾರಣೆಗಳು ಸೇರಿಕೊಂಡಿವೆ.

ಬೆಂಗಳೂರಿನ ಜಾಲಹಳ್ಳಿ ಚಿಕ್ಕಬಾಣಾವರ ಬಳಿ ಟಿಪ್ಪರ್ ಲಾರಿಯೊಂದು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಕಾರಣ 35ಕ್ಕೂಹೆಚ್ಚ ವಿದ್ಯುತ್ ಕಂಬಗಳು ಉರುಳಿದ್ದವು. ಇದರಿಂದಾಗಿ ಜಾಲಹಳ್ಳಿ ಭಾಗದ 30ಕ್ಕೂ ಹೆಚ್ಚು ಟ್ರಾನ್ಸ್‌ಫರ್ಮರ್‌ ಹಾನಿಗೀಡಾಗಿದ್ದವು. ಅಲ್ಲಿ 6000ಕ್ಕೂ ಹೆಚ್ಚು ಮನೆ, ಅಂಗಡಿಗಳಿಗೆ ಕರೆಂಟ್ ಇರಲಿಲ್ಲ.