Bangalore Power Cut: ಬೆಂಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಇರೋಲ್ಲ
Nov 22, 2024 08:58 PM IST
ಬೆಂಗಳೂರಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಈ ಭಾನುವಾರ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.
- Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿ2024ರ ನವೆಂಬರ್ 24 ರ ಭಾನುವಾರ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ತಿಳಿಸಿವೆ
- ವರದಿ: ಎಚ್.ಮಾರುತಿ.ಬೆಂಗಳೂರು
Bangalore Power Cut: ಈ ಭಾನುವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾರ್ಯ ಇರುವುದರಿಂದ 2024ರ ನವೆಂಬರ್ 24 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಹಾಗೂ ಕೆಪಿಟಿಸಿಎಲ್ ಮಾಹಿತಿ ನೀಡಿದೆ. ಭಾನುವಾರ ರಜೆ ಇರುವುದರಿಂದ ಬಹುತೇಕರು ಅಂದು ಮನೆಯಲ್ಲಿಯೇ ಇರುತ್ತಾರೆ. ಈ ಕಾರಣದಿಂದಾಗಿ ಅಂದು ಕೆಲವು ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಹಾಗೂ ಇನ್ನು ಕೆಲವು ಕಡೆಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5ರವರೆಗೆ ಸಂಪರ್ಕದಲ್ಲಿ ವ್ಯತ್ಯಯವಾದಾಗ ಜನತೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಭಾನುವಾರ ಪೀಣ್ಯ ಸುತ್ತಮುತ್ತ ವಿದ್ಯುತ್ ವ್ಯತ್ಯಯ
220/66/11 ಕೆವಿ ಎಸ್ಆರ್ಎಸ್ ಪೀಣ್ಯ ಸಬ್ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4/ ಎನ್-5/ ಎನ್-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಭಾನುವಾರದಂದು ಬೆಳಗ್ಗೆ 10 ಯಿಂದ ಮಧ್ಯಾಹ್ನ 3.30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಚ್ಎಂಟಿ ರಸ್ತೆ, ಆರ್ಎನ್ಎಸ್ ಅಪಾರ್ಟ್ಮೆಂಟ್, ಸಿಎಮ್ಟಿಐ, ಬೋರ್ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್ಬಿ ಲೇಔಟ್ ರಾಜೇಶ್ವರಿನಗರ, ಆಕಾಶ್ ಥೇಟರ್ ರಸ್ತೆ, ಸ್ನೇಹಿತರು ವೃತ್ತ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6 ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5 ನೇ ಮುಖ್ಯ ರಸ್ತೆ, ಯುಕೋ ಬ್ಯಾಂಕ್ ರಸ್ತೆ, ಥರ್ಲಾಕ್ ರಸ್ತೆ, 7 ನೇ ಮುಖ್ಯ ರಸ್ತೆ, 3 ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, Gkw ಲೇಔಟ್, ಬೈರವೇಶ್ವರ ನಗರ, ESIC ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ.
ಗಾಂಧಿನಗರ, ಶೇಷಾದ್ರಿಪುರಂ ಸುತ್ತಮುತ್ತ
ಕೆಪಿಟಿಸಿಎಲ್ 66/11ಕೆ.ವಿ ‘ಎ’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ನವೆಂಬರ್ 24ರಂದು (ಭಾನುವಾರ) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಂಭವವಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಟಿಸಿಎಸ್, ಹಾಲಿಡೇ ಇನ್, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, 1 ನೇ ಮುಖ್ಯ ರಸ್ತೆ ಗಾಂಧಿ ನಗರ ಮತ್ತು 1 ನೇ ಕ್ರಾಸ್, ಮತ್ತು 2 ನೇ ಕ್ರಾಸ್ನ ಭಾಗ. ಕ್ರೆಸೆಂಟ್ ರಸ್ತೆ, ರ‍್ನಾಟಕ ನ್ಯಾಯಾಂಗ ಅಕಾಡೆಮಿ, 2 ಸಚಿವರ ಕ್ವರ‍್ಟರ‍್ಸ್, ವೆಸ್ಟ್ ಎಂಡ್ ಹೋಟೆಲ್, ರ‍್ನಾಟಕ ಪವರ್ ಕರ‍್ಪೊರೇಷನ್, ಫೇರ್ ಫೀಲ್ಡ್ ಲೇಔಟ್, ಎಲ್ಎಲ್ಆರ್ ಬಿಡಬ್ಲ್ಯೂಎಸ್ಎಸ್.ಬಿ, ಶಿವಾನಂದಪಾರ್ಕ್, ಶೇಷಾದ್ರಿಪುರಂ, ಇಂಧನ ಸಚಿವರು ಮತ್ತು ಗೃಹ ಮಂತ್ರಿಗಳ ಕ್ವಾರ್ಟಸ್, ಕುಮಾರ ಪಾರ್ಕ್ ಪಕ್ಕ, ಕಾವೇರಿ ಭವನ, ಕೆಎಚ್‌ಬಿ, ಬಿಡಬ್ಲ್ಯೂಎಸ್‌ಎಸ್‌ಬಿ, ಕಂದಾಯ ಭವನ, ಗಾಂಧಿ ನಗರದಲ್ಲಿನ ಸಿನಿಮಾ ಥಿಯೇಟರ್‌ಗಳು, ಟ್ಯಾಂಕ್ ಬಂಡ್ ರಸ್ತೆ, ಎಸ್‌ಸಿ ರಸ್ತೆ, ಕೆಜಿ ರಸ್ತೆಯ ಭಾಗ, ಆಸ್ಪತ್ರೆ ರಸ್ತೆಯ ಭಾಗ ಮತ್ತು ಲಕ್ಷ್ಮಣ ಪುರಿ ಪ್ರದೇಶ (ಸ್ಲಮ್ ಪ್ರದೇಶ) 6ನೇ ಕ್ರಾಸ್, & 10ನೇ ಕ್ರಾಸ್ ಕಬ್ಬನ್‌ಪೇಟೆ, ಲೋಡ್ ಡೆಸ್ಪ್ಯಾಚ್ ಸೆಂಟರ್, ಆನಂದ ರಾವ್ ವೃತ್ತದಲ್ಲಿರುವ ಕೆಪಿಟಿಸಿಎಲ್ ಕಚೇರಿಗಳು.
ರೇಸ್ ಕೋರ್ಸ್ ರಸ್ತೆ
ರೇಸ್ ಕೋರ್ಸ್ ಮುಖ್ಯ ಕಚೇರಿ ಮತ್ತು ವಸಂತನಗರದ ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ ಮತ್ತು ಪಿ ಡಬ್ಲ್ಯೂಡಿ ಕಚೇರಿ ಮತ್ತು ಪೊಲೀಸ್ ಕ್ವರ‍್ಟರ‍್ಸ್ ಪ್ರದೇಶ, ಬ್ರಿಗೇಡ್ ಪ್ಲಾಜಾ, ಶೇಷಾದ್ರಿ ರಸ್ತೆ, ಆನಂದ ರಾವ್ ವೃತ್ತ ಪ್ರದೇಶ, ಖನಿಜ ಭವನ, ಚಾಲುಕ್ಯ ವೃತ್ತ, ಬಿಡಬ್ಲ್ಯೂಎಸ್ಎಸ್.ಬಿ ವಾಟರ್ ಪಂಪ್, ಹೈಗ್ರೌಂಡ್ಸ್, ಬಿ.ಎಸ್.ಎನ್.ಎಲ್. ಕಚೇರಿ, ಎಜಿಎಸ್ ಕಚೇರಿ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಕೆ ಲೇನ್, ಉಡುಪಿ ಕೃಷ್ಣ ಭವನ ಪ್ರದೇಶ, ಒಟಿಸಿ ರಸ್ತೆ ಮತ್ತು ಬಿವಿಕೆ ಅಯ್ಯಂಗಾರ್ ರಸ್ತೆ, ಕಬ್ಬನ್‌ಪೇಟೆ ಭಾಗ, ರಾಮಣ್ಣ ಪೇಟೆ, ಸಿಟಿ ಸ್ಟ್ರೀಟ್ ಮತ್ತು ಅವೆನ್ಯೂ ರಸ್ತೆ ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ. ಮಹಾರಾಣಿ ಕಾಲೇಜು, ತಾಂತ್ರಿಕ ಶಿಕ್ಷಣ ನಿರ‍್ದೇಶನಾಲಯ,
ಬೆಸ್ಕಾಂ ಕಚೇರಿ
ಎಸ್‌ಜೆಟಿಐ, ಬೆಸ್ಕಾಂ ಕಾರ‍್ಪೊರೇಟ್ ಕಚೇರಿ, ಭಾರತೀಯ ರಿಸರ‍್ವ್ ಬ್ಯಾಂಕ್, ಚುನಾವಣಾ ಆಯೋಗ, ಸಾಮಾನ್ಯ ಅಂಚೆ ಕಚೇರಿ, ಕೇಂದ್ರ ಟೆಲಿಗ್ರಾಫ್ ಕಚೇರಿ, ನೃಪತುಂಗ ರಸ್ತೆ, ಕೆಆರ್ ವೃತ್ತ. ಮುಖ್ಯ ಕರ‍್ಯರ‍್ಶಿ ಕ್ವರ‍್ಟರ‍್ಸ್, 7 ಮಂತ್ರಿ ಕ್ವರ‍್ಟರ‍್ಸ್ ಮತ್ತು ಅರಮನೆ ರಸ್ತೆ, ಬಾಲಬ್ರೂಯಿ ಅತಿಥಿ ಗೃಹ (ಬಿಡಬ್ಲ್ಯೂಎಸ್ಎಸ್.ಬಿ ವಾಟರ್ ಪಂಪ್, ಹೈ ಗ್ರೌಂಡ್ಸ್ - ಚೇಂಜ್ ಓವರ್), ಕಬ್ಬನ್‌ಪೇಟೆಯ ಭಾಗ, ಅನ್ನದಾನಪ್ಪ ಲೇನ್, ಎಟಿ ರಸ್ತೆ, ಚೌಲಗಲ್ಲಿ, ಲಿಂಗಶೆಟ್ಟಿಪೇಟೆ, ಕೆಎಎಸ್ ಲೇನ್ ಮತ್ತು ಅವೆನ್ಯೂ ರಸ್ತೆಯ ಭಾಗ ಕಬ್ಬನ್‌ಪೇಟೆ,
ಸೆಂಟ್ರಲ್ ಶಾಲೆ ಮತ್ತು (W4 S/ಆ ಗೆ ಸೇರಿದ ಗುಬ್ಬಿ ರಂಗಮಂದಿರ ಪ್ರದೇಶದಂತೆ ಗಾಂಧಿನಗರದ 6 ನೇ ಮುಖ್ಯ ಮತ್ತು 2 ನೇ ಕ್ರಾಸ್ನ ಭಾಗ) ತುಳಸಿ ತೋಟ, ಕಾಟನ್‌ಪೇಟೆ ಪ್ರದೇಶ, ಗಾಂಧಿ ನಗರ ಪ್ರದೇಶ 5 ನೇ ಮುಖ್ಯ, 3 ನೇ, 4, 5 ಮತ್ತು 6 ನೇ ಕ್ರಾಸ್ ಮತ್ತು 2 ನೇ 3, 4 ನೇ ಮೇನ್. ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್, ಹೋಟೆಲ್ ಸುಖ್ ಸಾಗರ್ ಪ್ರದೇಶಗಳು, ಖೋಡೇಸ್ ವೃತ್ತ, ಮಾಗಡಿ ರಸ್ತೆ ರೈಲ್ವೆ ಕಾಲೋನಿ (ಡಬ್ಲ್ಯು 4), ಗೋಪಾಲ್ ಪುರ, ಮಿರ‍್ವ ಮಿಲ್ (ಡಬ್ಲ್ಯು 3), ರೇಸ್‌ನಲ್ಲಿರುವ ಸಿಎಂ ನಿವಾಸ ರಸ್ತೆ, ಕುಮಾರ ಕೃಪಾ ಅತಿಥಿ ಗೃಹ, ಕೆ.ಎಸ್.ಆರ್.ಟಿ.ಸಿ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ರೈಲ್ವೆ ಲೋಕೋ ಶೆಡ್, ಬಿಟಿಎಸ್ ಬಸ್ ನಿಲ್ದಾಣ.
ಶಾಂತಲಾ ಸಿಲ್ಕ್ ಹೌಸ್ ಪ್ರದೇಶ, ಡಿ.ಕೆ ಲೇನ್, ಚಿಕ್ಕಪೇಟೆ ಮುಖ್ಯರಸ್ತೆ ಪ್ರದೇಶ.
ಅರಮನೆಯಲ್ಲಿ ಎಂಬಸ್ಸಿ ರೆಸಿಡೆನ್ಸಿ ಅಪಾರ‍್ಟ್‌ಮೆಂಟ್ ಮುಂತಾದ ಕಾಟನ್‌ಪೇಟೆ ಪ್ರದೇಶದ ಭಾಗರಸ್ತೆ, ಶೋಭಾ ಇಂದ್ರಪ್ರಸ್ಥ ಅಪಾರ‍್ಟ್‌ಮೆಂಟ್, ಗ್ಲೋಬಲ್ ಮಾಲ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 10ನೇ ಕ್ರಾಸ್, ಕಬ್ಬನ್‌ಪೇಟೆ 5ನೇ ಕ್ರಾಸ್, 6ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, ಚೌಲಗಲ್ಲಿ ಎ,ಬಿ,ಸಿ, ಡಿ ಗಲ್ಲಿ, ಆರ್‌ಬಿಐ, ನೃಪತುಂಗ ರಸ್ತೆ, ಯುವಿಸಿಇ, ಕೃಷಿ ಕಚೇರಿ, ಸರ‍್ಕಾರಿ ಕಲಾ ಕಾಲೇಜು, ಮರ‍್ಥಾಸ್ ಆಸ್ಪತ್ರೆ, ಸುಂಕಲಪೇಟೆ, ನಗರ್‌ಪೇಟೆ ಮುಖ್ಯರಸ್ತೆ, ಕೆಎಎಸ್ ಲೇನ್, 'ಸಿ' ಲೇನ್ 'ಎ' ಲೇನ್ 'ಡಿ' ಲೇನ್ ಪಿಆರ್‌ಎಸ್ ಲೇನ್, 13ನೇ ಕ್ರಾಸ್, ಕಬ್ಬನ್‌ಪೇಟೆಯ 14, 15ನೇ ಕ್ರಾಸ್, ಕೆ.ಜಿ.ರಸ್ತೆಯ ಭಾಗ, ಒಟಿಸಿ ರಸ್ತೆ, ಶಾರಧಾ ಥಿಯೇಟರ್ ಹಿಂಭಾಗ ಬದಿ, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ರ‍್ಮರಾಯ ಸ್ವಾಮಿ ದೇವಸ್ಥಾನ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಮಂತ್ರಿ ಮಾಲ್, ಮಂತ್ರಿ ಗ್ರೀನ್ಸ್ ಅಪಾರ‍್ಟ್ಮೆಂಟ್, ಅಪೋಲೋ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.