logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Weather: ಬೆಂಗಳೂರಲ್ಲಿ ಚಳಿಯ ವಾತಾವರಣ, ಬೆಳ್ಳಂಬೆಳಗ್ಗೆ ಭಾರೀ ಹಿಮ, ಹಲವಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Bangalore Weather: ಬೆಂಗಳೂರಲ್ಲಿ ಚಳಿಯ ವಾತಾವರಣ, ಬೆಳ್ಳಂಬೆಳಗ್ಗೆ ಭಾರೀ ಹಿಮ, ಹಲವಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Umesha Bhatta P H HT Kannada

Nov 10, 2024 12:06 PM IST

google News

ಬೆಂಗಳೂರಿನಲ್ಲಿ ಹಿಮದ ವಾತಾವರಣ ಇದ್ದುದು ವಿಮಾನಗಳಲ್ಲಿ ಸಂಚರಿಸಿದವರು ಸೆರೆ ಹಿಡಿದಿದ್ದಾರೆ.

    • Bengaluru Weather: ಬೆಂಗಳೂರಿನಲ್ಲಿ ಭಾನುವಾರ ಭಾರೀ ಚಳಿಯ ಜತೆಗೆ ಹಿಮದ ವಾತಾವರಣ ಕಂಡು ಬಂದಿತು. ಜನ ಚಳಿಯಲ್ಲೇ ವಿಹಾರ ನಡೆಸಿದರು. ಬೆಂಗಳೂರಿನ ಹಿಮದ ವಾತಾವರಣದಿಂದ ಕೆಲವು ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ.
ಬೆಂಗಳೂರಿನಲ್ಲಿ ಹಿಮದ ವಾತಾವರಣ ಇದ್ದುದು ವಿಮಾನಗಳಲ್ಲಿ ಸಂಚರಿಸಿದವರು ಸೆರೆ ಹಿಡಿದಿದ್ದಾರೆ.
ಬೆಂಗಳೂರಿನಲ್ಲಿ ಹಿಮದ ವಾತಾವರಣ ಇದ್ದುದು ವಿಮಾನಗಳಲ್ಲಿ ಸಂಚರಿಸಿದವರು ಸೆರೆ ಹಿಡಿದಿದ್ದಾರೆ. (The Hindu)

ಬೆಂಗಳೂರು: ಈಗಾಗಲೇ ಒಂದು ತಿಂಗಳು ಹೆಚ್ಚುವರಿಯಾಗಿ ವಿಸ್ತರಣೆಗೊಂಡು ಬೆಂಗಳೂರಿನಲ್ಲೂ ಸುರಿದಿದ್ದ ಮಳೆ ಪ್ರಮಾಣ ತಗ್ಗಿದ್ದು, ಭಾರೀ ಚಳಿ ಬೆಂಗಳೂರಲ್ಲಿ ಶುರುವಾಗಿದೆ. ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಚಳಿಯ ಅನುಭವ ಆಗುತ್ತಿದ್ದರೂ ಭಾನುವಾರ ಬೆಳಿಗ್ಗೆ ಎಂದಿನಿಂತೆ ಇರಲಿಲ್ಲ. ಬೆಳಗ್ಗೆ ವಿಹಾರಕ್ಕೆಂದು ಎದ್ದವರು ಹಿಮ ಬಿದ್ದ ಸನ್ನಿವೇಶವನ್ನು ಕಂಡರು. ರಸ್ತೆಗಳಲ್ಲಿ ಹಿಮ ಇರುವುದನ್ನು ಹಲವರು ಗಮನಿಸಿದರು ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಭಾರೀ ಕುಸಿತ ಕಂಡು ಹಿಮದ ಸನ್ನಿವೇಶ ಎಲ್ಲೆಡೆ ಕಂಡು ಬಂದಿತು. ಇನ್ನೂ ಕೆಲವು ದಿನ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಳಿಯ ವಾತಾವರಣವೇ ಮುಂದುವರೆಯುವ ಸೂಚನೆಯಿದೆ. ಈ ನಡುವೆ ಬೆಂಗಳೂರಿನಲ್ಲಿ ಬೆಳಿಗ್ಗೆಯೇ ಹಿಮದ ವಾತಾವರಣ ಕಂಡು ಬಂದಿದ್ದರಿಂದ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಟ್ಟ ಮಂಜಿನ ವಾತಾವರಣ

ಬೆಂಗಳೂರಿನಲ್ಲಿ ಚಳಿಗಾಲದಲ್ಲಿ ಮಂಜಿನ ವಾತಾವರಣ ಇದ್ದೇ ಇರುತ್ತದೆ. ಅದರಲ್ಲೂ ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿ ತಿಂಗಳು ಹೆಚ್ಚು ಚಳಿ ಇರುವ ಸಮಯ. ಹೊಸ ವರ್ಷಕ್ಕೂ ಮುನ್ನ ಹಾಗೂ ನಂತರ ಕನಿಷ್ಠ ಉಷ್ಣಾಂಶ ಹತ್ತು ಡಿಗ್ರಿಗೂ ಇಳಿಯುತ್ತದೆ. ಈ ಬಾರಿಯೂ ಚಳಿಗಾಲ ತಿಂಗಳ ಹಿಂದೆಯೇ ಆರಂಭಗೊಂಡಿದ್ದರೂ ಮಳೆಯಿಂದ ಅದು ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಭಾನುವಾರ ಬೆಳಿಗ್ಗೆಯೇ ದಟ್ಟ ಮಂಜಿನ ವಾತಾವರಣ ಚಳಿಯನ್ನು ಅನುಭವಕ್ಕೆ ತಂದಿತು.

ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಚಳಿ ಇರುವುದನ್ನು ಜನ ಅನುಭವಿಸಿದರು. ಕೆಲವರು ಅದರಲ್ಲೇ ಬೆಳಿಗ್ಗೆಯ ವಿಹಾರಕ್ಕೆ ಹೊರಟರೆ ಇನ್ನು ಕೆಲವರು ರದ್ದುಪಡಿಸಿದರು. ದಟ್ಟ ಮಂಜಿನ ಚಳಿಯಿಂದ ಜನ ಕಾಫಿಗೆ ಮೊರೆ ಹೋದರು.

ಎಲ್ಲಿ ಎಷ್ಟು ಉಷ್ಣಾಂಶ

ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಕುಸಿತ ಕಂಡು ಬಂದಿತು. ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 28.5 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 18.6 ಡಿಗ್ರಿ ಸೆಲ್ಸಿಯಸ್‌ ದಾಖಲಾಯಿತು.

ಬೆಂಗಳೂರು ನಗರ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 19.7 ಡಿಗ್ರಿ ಸೆಲ್ಸಿಯಸ್‌ ದಾಖಲಾಯಿತು.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 28.8 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 19.1 ಡಿಗ್ರಿ ಸೆಲ್ಸಿಯಸ್‌ ದಾಖಲಾಯಿತು.

ಬೆಂಗಳೂರು ಜಿಕೆವಿಕೆ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 28.6 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ದಾಖಲಾಯಿತು.

ವಿಮಾನ ಸಂಚಾರ ವ್ಯತ್ಯಯ

ದಟ್ಟ ಮಂಜಿನಿಂದ ಬೆಂಗಳೂರು ಆವರಿಸಿದ್ದು, ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ಭಾನುವಾರ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ದಟ್ಟವಾದ ಮಂಜು ಆವರಿಸಿದೆ, ಇದು ವಿಮಾನ ವಿಳಂಬ ಮತ್ತು ಹಲವಾರು ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕಾಯಿತು.

ಬೆಳಗ್ಗೆ 8.30ರ ವರೆಗೆ ಸುಮಾರು ಆರು ವಿಮಾನಗಳನ್ನು ಮಾರ್ಗ ಬದಲಾಯಿಸಲಾಯಿತು. 10ಕ್ಕೂ ಹೆಚ್ಚು ವಿಳಂಬವಾಗಿದೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಕೆಲ ದಿನ ಮಂಜು

ಬೆಂಗಳೂರು ನಗರ ಮತ್ತು ನೆರೆಹೊರೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಬೆಳಿಗ್ಗೆ 9 ಗಂಟೆಗೆ ನೀಡಲಾದ ಸ್ಥಳೀಯ ಮುನ್ಸೂಚನೆಯು ಭಾಗಶಃ ಮೋಡ ಕವಿದ ವಾತಾವರಣ ಇನ್ನೂ ಕೆಲವು ದಿನಗಳ ಮುಂದುವರಿಯಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಐಎಂಡಿಯು(IMD) ಸಾಮಾನ್ಯ ಗೋಚರತೆಯ ಆಧಾರದ ಮೇಲೆ ಮಂಜನ್ನು ವಿವಿಧ ಪ್ರಕಾರಗಳಾಗಿ ವರ್ಗೀಕರಿಸುತ್ತದೆ. ಗೋಚರತೆಯು 500 ಮೀ ವರೆಗೆ ಬಿದ್ದಾಗ, 200 ಮೀ ವರೆಗೆ ಮಧ್ಯಮ, 50 ಮೀ ವರೆಗೆ ದಟ್ಟವಾದ ಮತ್ತು 50 ಮೀ ಗಿಂತ ಕಡಿಮೆಯಿರುವಾಗ ತುಂಬಾ ದಟ್ಟವಾದ ಮಂಜು ಎಂದು ವರ್ಗೀಕರಿಸಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಮಂಜನ್ನು ವಿಕಿರಣ ಮಂಜು ಎಂದು ಕರೆಯಲಾಗುತ್ತದೆ. ನವೆಂಬರ್‌ನಿಂದ ಫೆಬ್ರುವರಿವರೆಗಿನ ನಾಲ್ಕು ತಿಂಗಳುಗಳಲ್ಲಿ 3 ರಿಂದ 8.30 ರವರೆಗೆ ಈ ಅವಧಿಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೀಕ್ಷಣೆ ಕೊರತೆಯಿಂದಾಗಿ ವಿಮಾನ ಕಾರ್ಯಾಚರಣೆಗಳು ಪರಿಣಾಮ ಬೀರುತ್ತವೆ. ಹಿಂದೆಯೂ ಈ ರೀತಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ