ಕರ್ನಾಟಕದಲ್ಲಿ ಮರೆಯಾಯಿತು ಮಳೆ, ಬೆಂಗಳೂರಲ್ಲಿ ಮುಂಜಾನೆ ಮಂಜು, ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆ - ಹೀಗಿರಲಿದೆ ಇಂದು ಹವಾಮಾನ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮರೆಯಾಯಿತು ಮಳೆ, ಬೆಂಗಳೂರಲ್ಲಿ ಮುಂಜಾನೆ ಮಂಜು, ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆ - ಹೀಗಿರಲಿದೆ ಇಂದು ಹವಾಮಾನ

ಕರ್ನಾಟಕದಲ್ಲಿ ಮರೆಯಾಯಿತು ಮಳೆ, ಬೆಂಗಳೂರಲ್ಲಿ ಮುಂಜಾನೆ ಮಂಜು, ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆ - ಹೀಗಿರಲಿದೆ ಇಂದು ಹವಾಮಾನ

Karnataka Weather: ಕರ್ನಾಟಕದಲ್ಲಿ ಮಳೆಯ ವಾತಾವರಣ ನಿಧಾನವಾಗಿ ಮರೆಯಾಗಿದೆ. ಈಗ ಬೆಂಗಳೂರು ಸೇರಿ ವಿವಿಧೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆಯ ದೃಶ್ಯ ಕಾಣಬಹುದು. ಇಂದು (ಅಕ್ಟೋಬರ್ 28) ಬೆಂಗಳೂರು ಹವಾಮಾನ ಮತ್ತು ಒಟ್ಟಾರೆ ಕರ್ನಾಟಕದ ಹವಾಮಾನ ಹೀಗಿರಲಿದೆ.

ಹವಾಮಾನ ಇಂದು (ಅಕ್ಟೋಬರ್ 28): ಕರ್ನಾಟಕದಲ್ಲಿ ಮರೆಯಾದ ಮಳೆ, ಬೆಂಗಳೂರಲ್ಲಿ ಮುಂಜಾನೆ ಮಂಜು, ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆ  (ಸಾಂಕೇತಿಕ ಚಿತ್ರ)
ಹವಾಮಾನ ಇಂದು (ಅಕ್ಟೋಬರ್ 28): ಕರ್ನಾಟಕದಲ್ಲಿ ಮರೆಯಾದ ಮಳೆ, ಬೆಂಗಳೂರಲ್ಲಿ ಮುಂಜಾನೆ ಮಂಜು, ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆ (ಸಾಂಕೇತಿಕ ಚಿತ್ರ) (PC - Namma Karnataka Weather)

ಬೆಂಗಳೂರು: ಕರ್ನಾಟಕದಲ್ಲಿ ಈಗ ಮರೆಯಾಯಿತು ಮಳೆ. ಇನ್ನೇನಿದ್ದರೂ ಒಣಹವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇನ್ನೇನಿದ್ದರೂ ಮುಂಜಾನೆ ಮಂಜು, ಸ್ವಲ್ಪ ಚಳಿ ಮತ್ತು ಇಬ್ಬನಿ ತಬ್ಬಿದ ಇಳೆಯ ಮುದ ನೀಡುವ ದೃಶ್ಯಗಳೇ ಕಣ್ಮನ ಸೆಳೆಯಬಹುದು. ಕರ್ನಾಟಕದಲ್ಲಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಹವಾಮಾನ ಹೇಗಿದೆ ಎಂಬ ಕುತೂಹಲ ಸಹಜವೇ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ನಾಳೆ (ಅಕ್ಟೋಬರ್ 29) ಬೆಳಗ್ಗೆ ತನಕ ಮಳೆಯ ಸುಳಿವು ಇಲ್ಲ. ರಾತ್ರಿಯಿಂದ ಮುಂಜಾನೆವರೆಗೆ ಮಂಜು ಆವರಿಸಲಿದೆ. ಕೆಲವು ಕಡೆಗೆ ದಟ್ಟ ಮುಂಜಾನೆ ಮಂಜು ಕಾಡಬಹುದು. ಸ್ವಲ್ಪ ಚಳಿಯೂ ಇರಬಹುದು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಹವಾಮಾನ ಹೇಗಿದೆ

ಕರ್ನಾಟಕದಲ್ಲಿ ನಿನ್ನೆ (ಅಕ್ಟೋಬರ್ 27) ಗರಿಷ್ಠ ತಾಪಮಾನ 34.4 ಡಿಗ್ರಿ ಸೆಲ್ಶಿಯಸ್‌ ಕಾರವಾರದಲ್ಲಿ ದಾಖಲಾಗಿದೆ. ಕನಿಷ್ಠ ತಾಪಮಾನ 16.2 ಡಿಗ್ರಿ ಸೆಲ್ಶಿಯಸ್ ವಿಜಯಪುರದಲ್ಲಿ ದಾಖಲಾಗಿದೆ. ನಿನ್ನೆ ಕೂಡ ಮಳೆ ಇರಲಿಲ್ಲ. ರಾಜ್ಯದ ವಿವಿಧೆಡೆ ಮುಂಜಾನೆ ಮಂಜು ಮುಸುಕಿದ ವಾತಾವರಣ ಇತ್ತು. ಕೆಲವು ಕಡೆ ಸ್ವಲ ಚಳಿಯೂ ಇತ್ತು. ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಉತ್ತರ ಒಡಿಶಾದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಈಗ ಕರಾವಳಿ ಒಡಿಶಾದ ಮೇಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಮೀ ವರೆಗೆ ಎತ್ತರದೊಂದಿಗೆ ನೈಋತ್ಯಕ್ಕೆ ವಾಲತೊಡಗಿದೆ. ಅದೇ ರೀತಿ, ಲಕ್ಷದ್ವೀಪ ಪ್ರದೇಶದಿಂದ ಉತ್ತರ ತಮಿಳುನಾಡು ತೀರದವರೆಗೆ ಸಮುದ್ರ ಮಟ್ಟದಿಂದ 4.5 ಮತ್ತು 5.8 ಕಿ.ಮೀ ಎತ್ತರದ ನಡುವಿನ ಒತ್ತಡ ಕಡಿಮೆಯಾಗಿದೆ.

ಹವಾಮಾನ ಇಂದು (ಅಕ್ಟೋಬರ್ 28): ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ. ಇದೇ ರೀತಿ, ನಾಳೆ ( ಅಕ್ಟೋಬರ್‌ 29) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಹವಾಮಾನ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 29 ರ ಬೆಳಗ್ಗೆವರೆಗಿನ ಹವಾಮಾನ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಪ್ರಕಟಿಸಿದೆ ಇದರಂತೆ, ನಿನ್ನೆ ಮಧ್ಯಾಹ್ನ 1 ರಿಂದ ಮುಂದಿನ 24 ಗಂಟೆ ವರೆಗೆ ಅಂದರೆ ಇಂದು ಮಧ್ಯಾಹ್ನದ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಅದೇ ರೀತಿ ಒಣ ಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು/ ದಟ್ಟಮಂಜು ತುಂಬಾ ಸಾಧ್ಯತೆ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ° C ಮತ್ತು 19 ° C ಆಗಿರಬಹುದು ಎಂದು ಕೇಂದ್ರದ ವಿಜ್ಞಾನಿ ಡಾ.ಪುವಿಯರಸನ್ ತಿಳಿಸಿದ್ದಾರೆ.

ಇದೇ ರೀತಿ ಮುಂದಿನ 48 ಗಂಟೆ ತನಕ ಅಂದರೆ ಅಕ್ಟೋಬರ್ 29ರ ಮಧ್ಯಾಹ್ನದ ವರೆಗೆ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶ. ಒಣ ಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು/ ದಟ್ಟಮಂಜು ತುಂಬಾ ಸಾಧ್ಯತೆ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ° C ಮತ್ತು 19 ° C ಆಗಿರಬಹುದು ಎಂದು ಹೇಳಿದ್ದಾರೆ.

Whats_app_banner