Bescom Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟೇ ಇರೋದಿಲ್ಲ; ನಿಮ್ಮ ಏರಿಯಾನೂ ಇರಬಹುದು ನೋಡಿ
Bescom Power Cut: ಬೆಂಗಳೂರು ನಗರದಲ್ಲಿ ತುರ್ತು ಕಾಮಗಾರಿ ಕೈಗೊಂಡ ಹಿನ್ನೆಲೆ ಹೆಬ್ಬಾಳ ಸ್ಟೇಷನ್ ವ್ಯಾಪ್ತಿಯ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು: ನಗರದ ಹಲವೆಡೆ ಇಂದು (ಸೆಪ್ಟೆಂಬರ್ 17) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಏಜೆನ್ಸಿಗಳು ನಗರದೆಡೆ ಜರುಗುತ್ತಿರುವ ವಿವಿಧ ಯೋಜನೆಗಳ ಕಾಮಗಾರಿ ಮತ್ತು ನಿರ್ವಹಣಾ ಚಟುವಟಿಕೆಗಳ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮೂಲಸೌಕರ್ಯ ನವೀಕರಣ, ಲೈನ್ ನಿರ್ವಹಣೆ, ಆಧುನೀಕರಣದ ಪ್ರಯತ್ನ, ಟ್ರಾನ್ಸ್ಫರ್ಮರ್ ಬದಲಾವಣೆ, ಅಂಡರ್‌ಗ್ರೌಂಡ್‌ಗೆ ಕೇಬಲ್ ಬದಲಾವಣೆ, ಕಂಬಗಳ ಸ್ಥಳಾಂತರ, ಲೈನ್ ತಾಗಿದ ಮರದ ರೆಂಬೆ ಕೊಂಬೆಗಳ ಕಡಿತ ಮತ್ತು ನೀರು ಸರಬರಾಜಿಗೆ ಸಂಬಂಧಿಸಿದ ಕಾಮಗಾರಿಗಳಿಂದ ವಿದ್ಯುತ್ ಉಂಟಾಗಲಿದೆ.
ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ?
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ಇಂದು (ಸೆಪ್ಟೆಂಬರ್ 17) ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯ ಉಂಟಾಗಲಿದೆ. ಈ ಅಡಚಣೆಗೆ ನಾವು ವಿಷಾದಿಸುತ್ತೇವೆ ಎಂದು ಬೆಸ್ಕಾಂ ಟ್ವೀಟ್ ಮಾಡಿದೆ.ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕರೆಂಟ್ ಇರೋದಿಲ್ಲ.
220/66/11 ಕೆ.ವಿ ಹೆಬ್ಬಾಳ ಸ್ಟೇಷನ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳ ಕಾರ್ಯ ನಿರ್ವಹಣೆ ಮಾಡಬೇಕಿರುವ ಕಾರಣ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಯಾವುದೇ ವಿದ್ಯುತ್ ದೂರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆವಿಕಂ) ಸಹಾಯವಾಣಿ ಸಂಖ್ಯೆ 1912ಗೆ ಸಂಪರ್ಕಿಸಿ.
ವ್ಯತ್ಯಯ ಉಂಟಾಗುವ ಸ್ಥಳಗಳು: ನಂದಿ ದರ್ಗಾ, ಜಯಮಹಲ್ ಎಕ್ಸ್‌ಟೆನ್ಶನ್, ದೂರದರ್ಶನ ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಮಾರಪ್ಪ ಗಾರ್ಡನ್, ಜೆ.ಸಿ.ನಗರ, ಎನ್.ಡಿ.ರಸ್ತೆ, ಚಿನಪ್ಪ ಗಾರ್ಡನ್, ಏರ್ ಟೆಲ್ ಸಮೀಪದ ಬಡಾವಣೆಗಳು.