MB Patil on Electric Scooter: ಸ್ಕೂಟರ್‌ ಚಲಾಯಿಸಿದ ಸಚಿವ ಎಂಬಿ ಪಾಟೀಲ್‌; ಬೆಂಗಳೂರಲ್ಲಿ ವಿದ್ಯುತ್‌ ಚಾಲಿತ ವಾಹನ ಉತ್ಪಾದನೆಗೆ ಒತ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mb Patil On Electric Scooter: ಸ್ಕೂಟರ್‌ ಚಲಾಯಿಸಿದ ಸಚಿವ ಎಂಬಿ ಪಾಟೀಲ್‌; ಬೆಂಗಳೂರಲ್ಲಿ ವಿದ್ಯುತ್‌ ಚಾಲಿತ ವಾಹನ ಉತ್ಪಾದನೆಗೆ ಒತ್ತು

MB Patil on Electric Scooter: ಸ್ಕೂಟರ್‌ ಚಲಾಯಿಸಿದ ಸಚಿವ ಎಂಬಿ ಪಾಟೀಲ್‌; ಬೆಂಗಳೂರಲ್ಲಿ ವಿದ್ಯುತ್‌ ಚಾಲಿತ ವಾಹನ ಉತ್ಪಾದನೆಗೆ ಒತ್ತು

  • Minister MB Patil ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್‌ ದ್ವಿಚಕ್ರವಾಹನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿರುವ ನಡುವೆಯೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌( MB Patil) ವಿದ್ಯುತ್‌ ಚಾಲಿತ ಸ್ಕೂಟರ್‌ ಓಡಿಸಿ ಅನುಭವ ಪಡೆದುಕೊಂಡರು.

ಕರ್ನಾಟಕದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಪ್ರಮಾಣವನ್ನು ಏರಿಸಲು ಬಯಸಿರುವ ರಿವರ್ ಮೊಬಿಲಿಟಿ ಕಂಪನಿಗೆ ಅಗತ್ಯ ಭೂಮಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. 
icon

(1 / 6)

ಗುರುವಾರ ತಮ್ಮನ್ನು ಭೇಟಿಯಾದ ಕಂಪನಿಯ ಸಿಇಒ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್ ಜತೆ ಅವರು ಭವಿಷ್ಯದ ಸಂಪರ್ಕ ವ್ಯವಸ್ಥೆ ಕುರಿತು ಮಾತುಕತೆ ನಡೆಸಿ ಸ್ಕೂಟರ್‌ ಚಲಾಯಿಸಿದರು,.
icon

(2 / 6)

ಸದ್ಯಕ್ಕೆ ರಿವರ್ ಮೊಬಿಲಿಟಿ ಕಂಪನಿಯು ಹೊಸಕೋಟೆ ಬಳಿ ಇರುವ ತನ್ನ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 1.20 ಲಕ್ಷ ಇ.ವಿ. ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. ಇದನ್ನು ವರ್ಷಕ್ಕೆ 5 ಲಕ್ಷಕ್ಕೆ ಕೊಂಡೊಯ್ಯಲು ಕಂಪನಿ ಬಯಸಿದ್ದು, ಅದಕ್ಕಾಗಿ ಜಮೀನಿಗೆ ಬೇಡಿಕೆ ಇಟ್ಟಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಬಯಸಿದ ಪ್ರಕಾರ ಜಮೀನು ಹಂಚಿಕೆ ಮಾಡಲಾಗುವುದು ಎಂದು  ಎಂಬಿ ಪಾಟೀಲ್‌ ಭರವಸೆ ನೀಡಿದರು.
icon

(3 / 6)

ರಿವರ್ ಮೊಬಿಲಿಟಿ  ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಒಂದು ಸುತ್ತು  ಚಲಾಯಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು.ಕಂಪನಿಯು ಇ.ವಿ.‌ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದ್ದು, 400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯ ಇ.ವಿ. ವಾಹನವು ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ. ಓಡಲಿದೆ ಎನ್ನುವ ಮಾಹಿತಿ ಪಡೆದರು.
icon

(4 / 6)

ರಾಜ್ಯದಲ್ಲಿ ಇ.ವಿ. ಕ್ಷೇತ್ರದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶಗಳಿವೆ. ಜತೆಗೆ ಸರಕಾರ ಕೂಡ ನಾನಾ ಬಗೆಯ ಉತ್ತೇಜನವನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಸಾಂಪ್ರದಾಯಿಕ ವಾಹನಗಳು ಜನಪ್ರಿಯವಾಗಲಿವೆ ಎನ್ನುವುದು ಎಂಬಿಪಾಟೀಲ್‌ ನುಡಿ,
icon

(5 / 6)

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ʼವೆಂಚುರೈಸ್ 24ʼ ಅನಾವರಣಗೊಳಿಸಿ  ಸಚಿವ ಎಂ.ಬಿ,ಪಾಟೀಲ್‌ ಮಾತನಾಡಿದರು,
icon

(6 / 6)

ಇತರ ಗ್ಯಾಲರಿಗಳು