logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Cet 2024; ಕರ್ನಾಟಕ ಸಿಇಟಿ ಶುರು, ನಾಳೆ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, 3.5 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ

Karnataka CET 2024; ಕರ್ನಾಟಕ ಸಿಇಟಿ ಶುರು, ನಾಳೆ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, 3.5 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ

Umesh Kumar S HT Kannada

Apr 18, 2024 11:23 AM IST

google News

ಕರ್ನಾಟಕ ಸಿಇಟಿ ಶುರು (ಸಾಂಕೇತಿಕ ಚಿತ್ರ)

  • ಕರ್ನಾಟಕ ಸಿಇಟಿ 2024ರ ಪರೀಕ್ಷೆಗಳು ಇಂದು ಶುರುವಾಗಿವೆ. ನಾಳೆ  ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಈ ಬಾರಿ 3.5 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. 

ಕರ್ನಾಟಕ ಸಿಇಟಿ ಶುರು (ಸಾಂಕೇತಿಕ ಚಿತ್ರ)
ಕರ್ನಾಟಕ ಸಿಇಟಿ ಶುರು (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಏಪ್ರಿಲ್ 18) ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶುರುವಾಗಿದೆ. ಕರ್ನಾಟಕ ಸಿಇಟಿ 2024 (Karnataka CET 2024) ಬೆಂಗಳೂರಿನ 167 ಸೇರಿ ಇಟ್ಟು 737 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಈ ಸಲದ ಕರ್ನಾಟಕ ಸಿಇಟಿಗೆ 3,49,637 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷಾ ಕರ್ತವ್ಯಕ್ಕೆ 20,300 ಸಿಬ್ಬಂದಿ ನಿಯೋಜಿಸಿದೆ. 648 ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕರ್ನಾಟಕ ಸಿಇಟಿ ಮೊದಲ ದಿನವಾದ ಇಂದು (ಏಪ್ರಿಲ್ 18) ಜೀವಶಾಸ್ತ್ರ ಮತ್ತು ಗಣಿತ, ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯುತ್ತವೆ. ಬೆಳಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 2.30ಕ್ಕೆ ನಡೆಯುವ ಪರೀಕ್ಷೆ ಬರೆಯುವವರಿಗಾಗಿ ಒಂದು ಪರೀಕ್ಷಾ ಕೊಠಡಿಯಲ್ಲಿ 16 ಆವೃತ್ತಿಗಳ ಪ್ರಶ್ನೆಪತ್ರಿಕೆಗಳು ಇರಲಿದ್ದು, ನಕಲು ಮಾಡಲು ಅವಕಾಶ ಇಲ್ಲದಂತೆ ರೂಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಣ್ಣಾವಲು ಏರ್ಪಡಿಸಲಾಗಿದೆ.

ಇನ್ನು, ಶನಿವಾರ (ಏ.20) ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಕರ್ನಾಟಕ ಸಿಇಟಿ; ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ಕರ್ನಾಟಕ ಸಿಇಟಿ ಪ್ರಾಮುಖ್ಯತೆ ಹೆಚ್ಚಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆಗಳನ್ನು ಒದಗಿಸಲಾಗುತ್ತಿದೆ. ಅಭ್ಯರ್ಥಿಗಳಿಗೆ ಗೊಂದಲ ಉಂಟಾದರೆ ಇಂಗ್ಲಿಷ್ ಆವೃತ್ತಿಯನ್ನೇ ಅಂತಿಮ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ ಭಾಗಗಳ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿ ಗೊಂದಲ ಇತ್ತು. ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಗೆಹರಿಸಿದೆ. ವಿದ್ಯಾರ್ಥಿಗಳಿಗೆ ಸಮೀಪದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಡವಾಗಿ ಬಂದರೆ ಕೇಂದ್ರವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

ಗಮನಿಸಬಹುದಾದ ಇನ್ನಷ್ಟು ಸ್ಟೋರಿಗಳು

1) ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ - ವರದಿ ಓದಿ

2) ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ- ಓದಲು ಇಲ್ಲಿ ಕ್ಲಿಕ್ ಮಾಡಿ

3) ಬೆಂಗಳೂರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ, ಮೂವರು ಯುವಕರಿಂದ ದೂರು; ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಪೊಲೀಸರು- ಇಲ್ಲಿದೆ ವಿವರ

4) ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಫಾರಂ 12 ಕೊಡದ ಅಧಿಕಾರಿಗಳು, ಅವರಿಗೆ ಮತದಾನದ ಅವಕಾಶವಿಲ್ಲವೆ - ವಿವರ ವರದಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ