logo
ಕನ್ನಡ ಸುದ್ದಿ  /  ಕರ್ನಾಟಕ  /  Sslc2 Exams: ಎಸ್‌ಎಸ್‌ಎಲ್‌ಸಿ2 ಪರೀಕ್ಷೆ ನಾಳೆಯಿಂದ, 2.23 ಲಕ್ಷ ವಿದ್ಯಾರ್ಥಿಗಳ ಹಾಜರು

SSLC2 Exams: ಎಸ್‌ಎಸ್‌ಎಲ್‌ಸಿ2 ಪರೀಕ್ಷೆ ನಾಳೆಯಿಂದ, 2.23 ಲಕ್ಷ ವಿದ್ಯಾರ್ಥಿಗಳ ಹಾಜರು

Umesha Bhatta P H HT Kannada

Jun 13, 2024 05:02 PM IST

google News

ಎಸ್‌ಎಸ್‌ ಎಲ್‌ಸಿ2 ಪರೀಕ್ಷೆ ಶುಕ್ರವಾರ ಶುರುವಾಗಲಿವೆ.

    • Exams  ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ 2( SSLC2 Exams) ಪರೀಕ್ಷೆಗಳು ಜೂನ್‌ 14ರಂದು ಎಲ್ಲಾ ಜಿಲ್ಲೆಗಳಲ್ಲೂ  ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಎಸ್‌ಎಸ್‌ ಎಲ್‌ಸಿ2  ಪರೀಕ್ಷೆ ಶುಕ್ರವಾರ ಶುರುವಾಗಲಿವೆ.
ಎಸ್‌ಎಸ್‌ ಎಲ್‌ಸಿ2 ಪರೀಕ್ಷೆ ಶುಕ್ರವಾರ ಶುರುವಾಗಲಿವೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ 2 ಪರೀಕ್ಷೆಯನ್ನು ಜೂನ್‌ 14ರಿಂದ ಒಂಬತ್ತು ದಿನಗಳ ಕಾಲ ನಡೆಸಲಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಕರ್ನಾಟಕದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ 724 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಹಿತ ಎಲ್ಲಾ ಸೂಚನೆಗಳನ್ನೂ ಈಗಾಗಲೇ ನೀಡಲಾಗಿದೆ. ಮಂಡಳಿ ನೀಡಿರುವ ಸೂಚನೆಯಂತೆಯೇ ಪರೀಕ್ಷೆಗಳು ನಡೆಯಲಿದ್ದು. ವಿದ್ಯಾರ್ಥಿಗಳು ಸೂಚನೆಗಳನ್ನು ಪಾಲಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕ ಬಿ.ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

  • ಎಸ್‌ಎಸ್‌ಎಲ್‌ಸಿ 2 ಪರೀಕ್ಷೆಗಳು ಜೂನ್‌ 14 ರಿಂದ ಜೂನ್‌ 22ರವರಗೆ ಅತ್ಯಂತ ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಸಲಾಗುವುದು.
  • ಕರ್ನಾಟಕದ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಲ್ಲಿ 2,23,308 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಲು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಬಾಲಕರ ಸಂಖ್ಯೆ 144160 ಹಾಗೂ ಬಾಲಕಿಯರ ಸಂಖ್ಯೆ 79148 .

ಇದನ್ನೂ ಓದಿರಿ: ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

  • ಇವರಲ್ಲಿ ಒಟ್ಟು 13085 ವಿದ್ಯಾರ್ಥಿಗಳು ಈಗಾಗಲೇ ಉತ್ತೀರ್ಣರಾಗಿದ್ದರೂ ಫಲಿತಾಂಶ ವೃದ್ದಿ ಮಾಡಿಕೊಳ್ಳುವ ಉದ್ದೇಶದಿಂದ ಮರು ಪರೀಕ್ಷೆಯನ್ನು ತೆಗದುಕೊಂಡಿದ್ದಾರೆ. ಇವರು ಹಿಂದಿನ ಪರೀಕ್ಷೆ ಸೇರಿ ಎರಡೂ ಪರೀಕ್ಷೆಗಳಲ್ಲಿ ಯಾವ ವಿಷಯದಲ್ಲಿ ಹೆಚ್ಚು ಅಂಕ ಪಡೆಯುತ್ತಾರೋ ಅದನ್ನೇ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ. ಹಿಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದರೆ ಅದೇ ಗಣನೆಗೆ ಬರಲಿದೆ.
  • ಕರ್ನಾಟಕದ ಒಟ್ಟು 724 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಆಯಾ ಜಿಲ್ಲೆಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ತರಬೇತಿ, ಮಾಹಿತಿಯನ್ನೂ ಒದಗಿಸಲಾಗಿದೆ.
  • ಒಟ್ಟು ಕನ್ನಡ ಹಾಗೂ ಇಂಗ್ಲೀಷ್‌ ಸೇರಿದಂತೆ 7 ಮಾಧ್ಯಮಗಳಲ್ಲಿ ಈ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಲಾಗಿದೆ.
  • ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನೀಕ ಜಾಗೃತ ದಳದ ತಂಡದವರು., ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿರಿ: ಸಣ್ಣಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಜಗಳ ತಾರಕಕ್ಕೇರುತ್ತಾ? ಈ ಕಾರಣಗಳನ್ನು ಕಂಡುಕೊಂಡರೆ ಜೀವನ ಸುಖಮಯವಾಗಿರುತ್ತೆ

  • ಜಿಲ್ಲಾ ಹಾಗೂ ತಾಲ್ಲೂಕು ಹಂತಗಳ ವಿಚಕ್ಷಣಾ ದಳಗಳು ಪರೀಕ್ಷೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿವೆ.
  • ಆಯಾ ಜಿಲ್ಲಾಧಿಕಾರಿಗಳಿಂದ ನಿಯೋಜಿತಗೊಂಡಿರುವ ಇತರೆ ಇಲಾಖೆಗಳ ಜಾಗೃತ ದಳಗಳು ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿವೆ.
  • ಔಪ್ರತೀ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿಗಳ ಮೂಲಕ ಪರೀಕ್ಷಾ ಅವ್ಯವಹಾರಗಳನ್ನು ತಡೆಯಲು ನಿಗಾ ಇರಿಸುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಗೋಪಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ