ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

Karnataka Weather: ಇಂದು ಕೂಡಾ ಕರ್ನಾಟಕದ ಬಹುತೇಕ ಕಡೆ ಮಳೆ ಆಗಲಿದೆ. ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ
ಕರ್ನಾಟಕ ಹವಾಮಾನ ಜೂನ್‌ 13; ಶಿವಮೊಗ್ಗ, ಯಾದಗಿರಿ, ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ (PC: Canva)

ಬೆಂಗಳೂರು: ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಇಷ್ಟು ದಿನಗಳ ಕಾಲ ಬೇಸಿಗೆ ಧಗೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಜನರಿಗೆ ವರುಣ ತಂಪೆರೆಯುತ್ತಿದ್ದಾನೆ. ಕೆಲವೆಡೆ ತುಂತುರು ಮಳೆ ಆದರೆ, ಇನ್ನೂ ಕೆಲವೆಡೆ ಗುಡುಗು ಸಹಿತ ಮಳೆ ಬಿಡದಂತೆ ಸುರಿಯುತ್ತಿದೆ. ರಾಜ್ಯದಲ್ಲಿ ಜೂನ್‌ 12 ರಂದು ಎಲ್ಲೆಲ್ಲಿ ಮಳೆ ಆಯ್ತು, ಇಂದು ( ಜೂ.13 ಎಲ್ಲೆಲ್ಲಿ ಮಳೆ ಆಗಲಿದೆ? ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಏನು? ಇಲ್ಲಿದೆ ಮಾಹಿತಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬುಧವಾರ ಎಲ್ಲೆಲ್ಲಿ ಮಳೆ ಆಯ್ತು?

ಬುಧವಾರ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಕನ್ನಡದ ಶಿರಾಲಿ, ಮಂಕಿಯಲ್ಲಿ 11 ಸೆಮೀ ಮಳೆ ಆಗಿದ್ದು ಅತಿ ಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಬೀದರ್‌ನ ಮಂಠಾಳ, ಉಡುಪಿಯ ಕುಂದಾಪುರದಲ್ಲಿ 7 ಸೆಮೀ ಮಳೆ ಆಗಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿ , ಬೀದರ್‌ನ ಹುಮನಾಬಾದ್‌ನಲ್ಲಿ ತಲಾ 5 ಸೆಮೀ, ಉತ್ತರ ಕನ್ನಡದ ಗೋಕರ್ಣ, ಅಂಕೋಲಾ, ಹೊನ್ನಾವರ, ಕೊಡಗು ಜಿಲ್ಲೆಯ ಭಾಗಮಂಡಲ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತಲಾ 4 ಸೆಮೀ, ಯಾದಗಿರಿಯ ಹುಣಸಗಿ, ಬೆಳಗಾವಿಯ ಯಡವಾಡ, ಕೊಪ್ಪಳದ ಕುಷ್ಟಗಿ, ಕೊಡಗಿನ ವಿರಾಜಪೇಟೆ, ತುಮಕೂರಿನ ವೈಎನ್‌ ಹೊಸಕೋಟೆ ಸೇರಿದಂತೆ ವಿವಿಧೆಡೆ ತಲಾ 3 ಸೆಮೀ ಮಳೆ ವರದಿಯಾಗಿದೆ.

ಇಂದು ಎಲ್ಲೆಲ್ಲಿ ಮಳೆ ಆಗಲಿದೆ?

ದ. ಕನ್ನಡ , ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ ಆಗಲಿದೆ. ಇದರೊಂದಿಗೆ ಬೆಳಗಾವಿ , ಬಾಗಲಕೋಟೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಚಂಡಮಾರುತದ ಹವಾಮಾನವು ಗಂಟೆಗೆ 35-45 ಕಿಮೀ ವೇಗದಲ್ಲಿ 55 ಕಿಮೀ ಬೀಸುವ ಗಾಳಿಯೊಂದಿಗೆ ಕರ್ನಾಟಕ ಕರಾವಳಿ ಉದ್ದಕ್ಕೂ ಹಾಗೂ ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಆದ್ದರಿಂದ ಭಾರತೀಯ ಹವಾಮಾನ ಇಲಾಖೆಯು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.

ಇಂದು ಬೆಂಗಳೂರು ಸುತ್ತಮುತ್ತಲಿನ ವಾತಾವರಣ

ಸಿಲಿಕಾನ್‌ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರಲಿದೆ. ಕೆಲವೆಡೆ ಸಾಧಾರಣ ಮಳೆ ಆದರೆ ಇನ್ನೂ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°ಸೆ ಮತ್ತು 21° ಸೆಲ್ಸಿಯಸ್‌ ಆಗಿರಬಹುದು. ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್‌?

ಭಾರತೀಯ ಹವಾಮಾನ ಇಲಾಖೆಯು ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner