logo
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll Result: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ

Exit Poll Result: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ

Raghavendra M Y HT Kannada

Jun 01, 2024 07:54 PM IST

google News

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ ಹೇಳಿದೆ.

    • ಕರ್ನಾಟಕ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಆದರೆ ಕಳೆದ ಬಾರಿಗಿಂತ 3 ರಿಂದ 4 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ನ್ಯೂಸ್ 18 ಮತಗಟ್ಟೆ ಸಮೀಕ್ಷೆ ಹೇಳಿದೆ. 
ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ ಹೇಳಿದೆ.
ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 22-24 ಸ್ಥಾನ, ಕಾಂಗ್ರೆಸ್‌ಗೆ 3-7 ಸ್ಥಾನ; ನ್ಯೂಸ್ 18 ಸಮೀಕ್ಷೆ ಹೇಳಿದೆ.

ಬೆಂಗಳೂರು: ಲೋಕಸಭೆ ಚುನಾವಣೆಯ 7 ಹಂತಗಳ ಮತದಾನ (Lok Sabha Election 2024) ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷೆಗಳು (Exit Polls 2024) ಬಹಿರಂಗವಾಗಿದೆ. ನ್ಯೂಸ್ 18 ಸಮೀಕ್ಷೆಯ ಪ್ರಕಾರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22-24 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಆಡಳಿತ ಪಕ್ಷ ಕಾಂಗ್ರೆಸ್‌ಗೆ 3-7 ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20-22 ಸ್ಥಾನ, ಜೆಡಿಎಸ್ 2-3 ಸ್ಥಾನ, ಕಾಂಗ್ರೆಸ್ 3-5 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದೆ. ಈ ಸಮೀಕ್ಷೆ ನೀಡಿರುವ ವಿವರಗಳ ಪ್ರಕಾರ ಮತಗಳಿಕೆಯಲ್ಲಿಯೂ ಬಿಜೆಪಿಯೇ ಮುಂದಿದೆ. ಬಿಜೆಪಿ ಶೇ 48, ಇತರರು ಶೇ 4, ಜೆಡಿಎಸ್ ಶೇ 7, ಕಾಂಗ್ರೆಸ್ ಶೇ 41 ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.

ಎಕ್ಸಿಟ್ ಪೋಲ್ ಭವಿಷ್ಯವಾಣಿಗಳನ್ನು ಎಂದಿಗೂ ಕುರುಡಾಗಿ ನಂಬಬಾರದು, ಏಕೆಂದರೆ ತಪ್ಪುಗಳಿಗೆ ಯಾವಾಗಲೂ ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಪ್ಪಾದ ನಿದರ್ಶನಗಳೂ ವಿರಳವಾಗಿಲ್ಲ. 2019 ಮತ್ತು 2014 ರಲ್ಲಿ, ಚುನಾವಣೋತ್ತರ ಸಮೀಕ್ಷೆಗಳು ರಾಷ್ಟ್ರದ ಮನಸ್ಥಿತಿಯನ್ನು ತಪ್ಪಿಸಿದ್ದವು

2019ರ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ 306 ಮತ್ತು ಯುಪಿಎ 120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಎನ್‌ಡಿಎ 352 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಗಿನ ಯುಪಿಎ 93 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 52 ಸ್ಥಾನಗಳನ್ನು ಗಳಿಸಿತ್ತು. ಪರಿಮಾಣಾತ್ಮಕ ಸಮೀಕ್ಷೆಯಿಂದ ಮಾತ್ರ ಚುನಾವಣೆಯಲ್ಲಿ ಅಂತರ್ಗತವನ್ನು ಊಹಿಸುವುದು ಕಷ್ಟವಾಗುತ್ತದೆ ಎಂದು ಸಾರ್ವಜನಿಕ ನೀತಿ ತಜ್ಞ ತಿರುವನಂತಪುರಂ ಎಸ್ ರಾಮಕೃಷ್ಣನ್ ಕಳೆದ ವರ್ಷ ಡೆಕ್ಕನ್ ಹೆರಾಲ್ಡ್‌ಗೆ ಬರೆದ ಅಂಕಣದಲ್ಲಿ ಹೇಳಿದ್ದಾರೆ.

ಬಹುತೇಕ ಸಮೀಕ್ಷೆಗಳು ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಿವೆ. ಆದರೆ 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಕಾಂಗ್ರೆಸ್ 1 ಸ್ಥಾನದಿಂದ 3 ರಿಂದ 4ಕ್ಕೆ ತನ್ನ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕೇಂದ್ರದಲ್ಲಿ ಎನ್‌ಡಿಎ 370ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ, ಕಾಂಗ್ರೆಸ್ 150 ಪ್ಲಸ್ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿದೆ. ಅಂತಿಮವಾಗಿ ಜೂನ್ 4 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಸ್ಫಷ್ಟ ಚಿತ್ರಣ ಸಿಗಲಿದೆ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ