ಲೋಕಸಭೆ ಚುನಾವಣೆ ಫಲಿತಾಂಶ; ಭಾರತದ ಸಟ್ಟಾ ಬಜಾರ್‌ಗಳಲ್ಲಿ ಏನಿದೆ ಬೆಟ್ಟಿಂಗ್ ಲೆಕ್ಕಾಚಾರ ವಿವರ- ಇಲ್ಲಿದೆ ಮಾಹಿತಿ
ಲೋಕಸಭೆ ರಿಸಲ್ಟ್ ಜೂನ್ 4 ರಂದು ಪ್ರಕಟವಾಗಲಿದೆ. ಅದಕ್ಕೂ ಮೊದಲು ಫಲೋಡಿಯಲ್ಲಿ ಆಟ ಬದಲಾಗಿದ್ದು, ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಲಿದೆ ಎಂಬುದರ ಬೆಟ್ಟಿಂಗ್ ಕೂಡ ಜೋರಾಗಿದೆ. ಭಾರತದ ಸಟ್ಟಾ ಬಜಾರ್‌ಗಳಲ್ಲಿ ಏನಿದೆ ಬೆಟ್ಟಿಂಗ್ ಲೆಕ್ಕಾಚಾರ- ಇಲ್ಲಿದೆ ಮಾಹಿತಿ.
ಜೈಪುರ/ನವದೆಹಲಿ: ಲೋಕಸಭಾ ಚುನಾವಣೆ 2024ರ ಫಲಿತಾಂಶ (Lok Sabha Election 2024 Results) ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ. ಇದಕ್ಕೂ ಮೊದಲು ಇನ್ನೇನು ಕೆಲವೇ ನಿಮಿಷಗಳಲ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ (Election Exit Poll Results 2024) ಪ್ರಕಟವಾಗಲಿದೆ. ಅದಕ್ಕೂ ಮೊದಲೇ, ಫಲೋಡಿ ಬೆಟ್ಟಿಂಗ್ ಮಾರುಕಟ್ಟೆಯ ತಾಜಾ ಸುದ್ದಿ ಗಮನಸೆಳೆದಿದೆ.
ಬೆಟ್ಟಿಂಗ್ ಆಟದಲ್ಲಿ ಆಗಿರುವ ಬದಲಾವಣೆ ಮತ್ತು ಇತ್ತೀಚಿನ ಅಂಕಿ ಅಂಶಗಳನ್ನು ನೋಡಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಾಳಯ ಕಂಗಾಲಾದರೆ, ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ (I.N.D.I.A.) ಒಕ್ಕೂಟ ಖುಷಿಯಾಗಿದೆ. ಅದೇನೇ ಇದ್ದರೂ ಜೂನ್ 4 ರಂದು ಲೋಕಸಭಾ ಚುನಾವಣೆಯ ನಿಜವಾದ ಫಲಿತಾಂಶ ಹೊರಬೀಳಲಿದೆ. ಉತ್ತರ ಪ್ರದೇಶ ಮತ್ತು ದೇಶದ ವಿವಿಧ ಸಟ್ಟಾ ಬಜಾರ್ (ಬೆಟ್ಟಿಂಗ್ ಮಾರುಕಟ್ಟೆ)ಗಳಲ್ಲಿ ಯಾವ ರೀತಿ ಬೆಟ್ಟಿಂಗ್ ನಡೆಯುತ್ತಿದೆ ಎಂಬುದನ್ನು ಗಮನಿಸೋಣ.
ಲೋಕಸಭಾ ಚುನಾವಣೆ 2024; ಪ್ರತಿ ಹಂತದಲ್ಲೂ ಬದಲಾಗುತ್ತಿರುವ ಬೆಟ್ಟಿಂಗ್
ಲೋಕಸಭಾ ಚುನಾವಣೆ 2024 ಶುರುವಾದಾಗ, ಫಲೋಡಿ ಸಟ್ಟಾ ಬಜಾರ್‌ನಲ್ಲಿ ಎನ್‌ಡಿಎ 400 ಸ್ಥಾನಗಳಿಸುವ ವಿಚಾರಕ್ಕೆ ಆದ್ಯತೆ ಇತ್ತು. ಪ್ರಧಾನಿ ಮೋದಿ ಅವರ ಚಾರ್ ಸೌ ಪಾರ್ ಹೇಳಿಕೆಗೆ ಅನುಗುಣವಾಗಿ ಇಲ್ಲಿ ಬೆಟ್ಟಿಂಗ್ ನಡೆದಿತ್ತು. ಏಪ್ರಿಲ್ 19ರ ಮತದಾನಕ್ಕೆ ಮೊದಲು ಸಟ್ಟಾ ಬಜಾರ್‌ನಲ್ಲಿ ಬಿಜೆಪಿಗೆ 300ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬ ಮಾತು ಚಾಲ್ತಿಯಲ್ಲಿತ್ತು.
ಮೊದಲ ಎರಡು ಹಂತಗಳ ನಂತರ, ಚಿತ್ರಣ ಬದಲಾಯಿತು. ಈ ಅಂಕಿ ಅಂಶವು ಸುಮಾರು 290 ಸ್ಥಾನಗಳಿಗೆ ಇಳಿಯಿತು ಮತ್ತು ಐದನೇ ಹಂತದ ನಂತರ ಅದು ಮತ್ತೆ ಸುಮಾರು 300 ಸ್ಥಾನಗಳಿಗೆ ಏರಿತು. ಫಲೋಡಿ ಸಟ್ಟಾ ಬಜಾರ್ ತನ್ನ ತಾಜಾ ವರದಿ ಪ್ರಕಾರ, ಬಿಜೆಪಿಗೆ 300ಕ್ಕಿಂತ ಕಡಿಮೆ ಸ್ಥಾನ ಅಂದಾಜಿಸಿದೆ. ಇಂಡಿಯಾ ಬ್ಲಾಕ್ 80- 85 ಸ್ಥಾನ ಗೆಲ್ಲಬಹುದು ಎನ್ನುತ್ತಿರುವುದಾಗಿ ರಾಜಸ್ಥಾನ್ ಪತ್ರಿಕಾ ವರದಿ ಮಾಡಿದೆ.
ಭಾರತದ ವಿವಿಧ ಸಟ್ಟಾ ಬಜಾರ್‌ಗಳ ಬೆಟ್ಟಿಂಗ್ ಹೀಗಿದೆ ನೋಡಿ
ಭಾರತದ ವಿವಿಧ ಸಟ್ಟಾ ಬಜಾರ್‌ಗಳಲ್ಲಿ ಏನಿದೆ ಲೆಕ್ಕಾಚಾರ
ಸಟ್ಟಾಬಜಾರ್ | ಕಾಂಗ್ರೆಸ್ | ಐಎನ್ಡಿಎಐಎ | ಬಿಜೆಪಿ | ಎನ್‌ಡಿಎ |
ಪಾಲನ್‌ಪುರ | 112 | 225 | 216 | 247 |
ಕರ್ನಾಲ್ | 108 | 231 | 235 | 263 |
ಬೇಹರಿ | 115 | 212 | 227 | 255 |
ಬೆಳಗಾಂ | 120 | 230 | 223 | 265 |
ಕೋಲ್ಕತ | 128 | 228 | 218 | 261 |
ವಿಜಯವಾಡ | 121 | 237 | 224 | 251 |
ಇಂದೋರ್ ಸರಾಫಾ | 94 | 180 | 260 | 283 |
ಅಹಮದಾಬಾದ್ | 104 | 193 | 241 | 270 |
ಸೂರತ್ ಮಘೋಬಿ | 96 | 186 | 247 | 282 |
ಗಮನಿಸಿ: ನಾವು ಯಾವುದೇ ಉದ್ದೇಶಿತ ಊಹಾಪೋಹ ಅಥವಾ ಊಹಾತ್ಮಕ ಮಾರುಕಟ್ಟೆಗಳ ಸಮೀಕ್ಷೆಯನ್ನು ಅನುಮೋದಿಸುವುದಿಲ್ಲ. ಆದಾಗ್ಯೂ ಈ ಸುದ್ದಿ/ಮಾಹಿತಿಯು ಊಹಾತ್ಮಕ ಮಾರುಕಟ್ಟೆಗಳಲ್ಲಿನ ಪ್ರವೃತ್ತಿಗಳ ಬಗ್ಗೆ ನಿಮಗೆ ಅರಿವು ಮೂಡಿಸುವ ಸಲುವಾಗಿ ಮಾತ್ರ ಪ್ರಕಟಿಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಈ ಪ್ರತಿಪಾದನೆಗಳನ್ನು ಯಾವುದೇ ರೀತಿಯಲ್ಲೂ ಅನುಮೋದಿಸುವುದಿಲ್ಲ. ಜೂನ್ 4ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.