logo
ಕನ್ನಡ ಸುದ್ದಿ  /  Karnataka  /  Evening Post Office: First Ever Evening Post Office Inaugurated In Bengaluru

Evening post office: ಬೆಂಗಳೂರಲ್ಲಿ ಚೊಚ್ಚಲ ಸಂಜೆ ಅಂಚೆ ಕಚೇರಿ ಶುರು; ಏನಿದು ಹೊಸ ಕಾನ್ಸೆಪ್ಟ್;‌ ಹೇಗೆ ಕೆಲಸ ಮಾಡುತ್ತೆ?

HT Kannada Desk HT Kannada

Jan 19, 2023 09:42 AM IST

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಸಂಜೆ ಅಂಚೆ ಕಚೇರಿ ಇದು. ವಾರದಲ್ಲಿ ಆರು ದಿನ ಅಪರಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆ ತನಕ ಸೇವೆ ಒದಗಿಸುತ್ತದೆ.

  • Evening post office: ಬೆಂಗಳೂರಿನ ಮ್ಯೂಸಿಯಂ ರಸ್ತೆ (Museum road, Bengaluru)ಯಲ್ಲಿ ಈ ಅಂಚೆ ಕಚೇರಿ ಇದ್ದು, ಸೋಮವಾರದಿಂದ ಅಂಚೆ ಸೇವೆ ಒದಗಿಸಲಾರಂಭಿಸಿದೆ. ಬಳಕೆದಾರರು ಈ ಅಂಚೆ ಕಚೇರಿಯಲ್ಲಿ ನಿಶ್ಚಿತ ಅಂಚೆ ಕಚೇರಿಯ ಸಮಯದ ಬಳಿಕವೂ ಇಲ್ಲಿ ಅಂಚೆ ಸೇವೆ ಪಡೆಯಬಹುದಾಗಿದೆ.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಸಂಜೆ ಅಂಚೆ ಕಚೇರಿ ಇದು. ವಾರದಲ್ಲಿ ಆರು ದಿನ ಅಪರಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆ ತನಕ ಸೇವೆ ಒದಗಿಸುತ್ತದೆ.
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಸಂಜೆ ಅಂಚೆ ಕಚೇರಿ ಇದು. ವಾರದಲ್ಲಿ ಆರು ದಿನ ಅಪರಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆ ತನಕ ಸೇವೆ ಒದಗಿಸುತ್ತದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚೊಚ್ಚಲ ಸಂಜೆ ಅಂಚೆ ಕಚೇರಿ (The Evening post office) ಶುರುವಾಗಿದೆ. ಬೆಂಗಳೂರಿನ ಮ್ಯೂಸಿಯಂ ರಸ್ತೆ (Museum road, Bengaluru)ಯಲ್ಲಿ ಈ ಅಂಚೆ ಕಚೇರಿ ಇದ್ದು, ಸೋಮವಾರದಿಂದ ಅಂಚೆ ಸೇವೆ ಒದಗಿಸಲಾರಂಭಿಸಿದೆ. ಬಳಕೆದಾರರು ಈ ಅಂಚೆ ಕಚೇರಿಯಲ್ಲಿ ನಿಶ್ಚಿತ ಅಂಚೆ ಕಚೇರಿಯ ಸಮಯದ ಬಳಿಕವೂ ಇಲ್ಲಿ ಅಂಚೆ ಸೇವೆ ಪಡೆಯಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

Hassan Sex Scandal; ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲಅವರ ಅಪ್ಪ ರೇವಣ್ಣ ಉಚ್ಚಾಟನೆಗೂ ಹೆಚ್ಚಿದ ಒತ್ತಡ

ಕರ್ನಾಟಕ ಹವಾಮಾನ ಏಪ್ರಿಲ್‌ 30; ಬಾಗಲಕೋಟೆ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌

Bangalore Crime: ಬೆಂಗಳೂರಲ್ಲಿ ತಾಯಿ ಮಗಳ ಜಗಳ, ಮಗಳನ್ನು ಕೊಂದಳಾ ತಾಯಿ, ತಲಾಖ್ ನೀಡಿಯೂ ಪತ್ನಿ ಕೊಲೆ

ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಈ ಸಂಜೆ ಅಂಚೆ ಕಚೇರಿ ವಾರದ ಆರು ದಿನ ಕಾರ್ಯ ನಿರ್ವಹಿಸಲಿದೆ. ಅಂಚೆ ಸೇವೆ ಒದಗಿಸುವ ಸಮಯ ಅಪರಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆ ತನಕ. ಈ ಅಂಚೆ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿ ಇದ್ದು, ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಾರೆ.

ರಾಜ್ಯದ ಮೊದಲ ಸಂಜೆ ಅಂಚೆ ಕಚೇರಿಯಲ್ಲಿ ಧಾರವಾಡದಲ್ಲಿ ಈ ಹಿಂದೆ ಶುರುಮಾಡಲಾಗಿದೆ. ಆದರೆ ಬೆಂಗಳೂರಿಗೆ ಇದುವೇ ಮೊದಲನೇಯದು. ಧಾರವಾಡದಲ್ಲಿ ಕಳೆದ ನವೆಂಬರ್‌ನಲ್ಲಿ ಸಂಜೆ ಅಂಚೆ ಕಚೇರಿ ಶುರುವಾಗಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣ, ಈಗ ಬೆಂಗಳೂರಿಗೆ ಈ ಸೇವೆ ವಿಸ್ತರಿಸಲ್ಪಟ್ಟಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಣೆ ಆಗಲಿದೆ ಎಂದು ಅಂಚೆ ಕಚೇರಿ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಅಂಚೆ ಕಚೇರಿಗಳು ಅಂಚೆ ಸೇವೆ ಒದಗಿಸುವ ಸಮಯ ಬೆಳಗ್ಗೆ 9.30ರಿಂದ ಅಪರಾಹ್ನ 3.30. ಸಂಜೆ ಅಂಚೆ ಕಚೇರಿಗಳು ಅಂಚೆ ಸೇವೆ ಒದಗಿಸುವ ಸಮಯ ಅಪರಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆ ತನಕ.

ಸಂಜೆ ಅಂಚೆ ಕಚೇರಿಯಲ್ಲಿ ಲಭ್ಯ ಅಂಚೆ ಸೇವೆಗಳೇನು? (List of postal services available at Evening post office)

ಸಾಮಾನ್ಯ ಅಂಚೆ ಕಚೇರಿಯಲ್ಲಿ ಲಭ್ಯ ಸೇವೆಗಳಂತೆಯೇ ವಿವಿಧ ಅಂಚೆ ಸೇವೆಗಳನ್ನು ಈ ಸಂಜೆ ಅಂಚೆ ಕಚೇರಿ ಒದಗಿಸುತ್ತದೆ. ಇದರಲ್ಲಿ ಸ್ಪೀಡ್‌ ಪೋಸ್ಟ್‌, ಪಾರ್ಸೆಲ್‌ ಬುಕ್ಕಿಂಗ್‌, ಪಾರ್ಸೆಲ್‌ ಪ್ಯಾಕಿಂಗ್‌, ಆಧಾರ್‌ ಸೇವೆ, ಪಿಕ್ಚರ್‌ ಪೋಸ್ಟ್‌ ಕಾರ್ಡ್‌, ಅಂಚೆ ಚೀಟಿ ಮುಂತಾದ ಸೇವೆಗಳು ಲಭ್ಯ ಇವೆ. ಬೆಂಗಳೂರಿಗರು ಇನ್ನು ಅಪರಾಹ್ನ 3.30 ದಾಟಿದ ಬಳಿಕ ಜಿಪಿಒಗೆ ಹೋಗಿ ಸ್ಪೀಡ್‌ ಪೋಸ್ಟ್‌ ಮಾಡಬೇಕಾಗಿಲ್ಲ. ಅದೇ ರೀತಿ, ರಿಜಿಸ್ಟರ್‌ ಪೋಸ್ಟ್‌ಗೆ ರೈಲ್ವೆ ನಿಲ್ದಾಣದ ಆರ್‌ಎಂಎಸ್‌ಗೆ ಹೋಗಬೇಕಾದ್ದಿಲ್ಲ. ಸಂಜೆ ಅಂಚೆ ಕಚೇರಿಯಲ್ಲಿ ಈ ಸೇವೆಗಳೂ ಲಭ್ಯ ಇವೆ.

ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಈ ರೀತಿ ಸಂಜೆ ಅಂಚೆ ಕಚೇರಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.

ಗಮನಿಸಬಹುದಾದ ಸುದ್ದಿ

ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ ಎಂದ ಪ್ರಧಾನಿ, ಇಂದು ಕಲಬುರಗಿ, ಯಾದಗಿರಿಗೆ ಮೋದಿ

Narendra Modi Karnataka Visit: "ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಟ್ವೀಟ್‌ ಮಾಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು