ಕನ್ನಡ ಸುದ್ದಿ  /  Nation And-world  /  Housing Sales 2022: Housing Sales In 7 Indian Cities Including Bengaluru Jump 54% To 3.64 Lakh Units In 2022 Said Report

Housing sales 2022: ದೇಶದ ಏಳು ನಗರಗಳಲ್ಲಿ 3.64 ಲಕ್ಷ ಮನೆ ಮಾರಾಟ ಆಗಿದೆಯಂತೆ!; ಹೌದಾ.. ಬೆಂಗಳೂರಿನಲ್ಲಿ ಎಷ್ಟು ಮನೆ ಮಾರಾಟ ಆಗಿದೆ?

Housing sales 2022: ಕ್ಯಾಲೆಂಡರ್‌ ವರ್ಷದ ಕೊನೆಯ ದಿನಗಳನ್ನು ಎಣಿಸುತ್ತಿದ್ದೇವೆ. ಹೊರಳು ನೋಟ ಶುರುವಾಗಿದೆ. ಈ ವರ್ಷ ದೇಶದ ಪ್ರಮುಖ ಏಳು ನಗರಗಳಲ್ಲಿ 3.64 ಲಕ್ಷ ಮನೆಗಳು ಮಾರಾಟ ಆಗಿದೆಯಂತೆ! ಹೌದಾ… ಹಾಗಾದರೆ ಬೆಂಗಳೂರಿನಲ್ಲಿ ಎಷ್ಟು ಮನೆಗಳು ಮಾರಾಟ ಆಗಿವೆ? ಇಲ್ಲಿದೆ ಒಂದು ವರದಿ.

ಏಳೂ ನಗರಗಳಲ್ಲಿ ಪ್ರಾಪರ್ಟಿ ಬೆಲೆ ಶೇಕಡ 4 ರಿಂದ ಶೇಕಡ 7ರ ಏರಿಕೆ ದಾಖಲಿಸಿದೆ. ಇದು ಇನ್‌ಪುಟ್‌ ವೆಚ್ಚ ಮತ್ತು ಬೇಡಿಕೆ ಹೆಚ್ಚಳದ ಕಾರಣ ಉಂಟಾಗಿರುವ ಏರಿಕೆ ಎಂದು ವರದಿ ಹೇಳಿದೆ.
ಏಳೂ ನಗರಗಳಲ್ಲಿ ಪ್ರಾಪರ್ಟಿ ಬೆಲೆ ಶೇಕಡ 4 ರಿಂದ ಶೇಕಡ 7ರ ಏರಿಕೆ ದಾಖಲಿಸಿದೆ. ಇದು ಇನ್‌ಪುಟ್‌ ವೆಚ್ಚ ಮತ್ತು ಬೇಡಿಕೆ ಹೆಚ್ಚಳದ ಕಾರಣ ಉಂಟಾಗಿರುವ ಏರಿಕೆ ಎಂದು ವರದಿ ಹೇಳಿದೆ.

ದೇಶದ ಏಳು ನಗರಗಳಲ್ಲಿ ಮನೆ ಮಾರಾಟ ಈ ವರ್ಷ ಅಂದರೆ 2022ರಲ್ಲಿ ಹೊಸ ದಾಖಲೆ ಬರೆದಿದೆ. 2014ರ ದಾಖಲೆಯನ್ನೂ ಮುರಿದಿರುವುದು ಈಗ ಇತಿಹಾಸ ಎಂದು ಅನರಾಕ್‌ ವರದಿ ಹೇಳಿದೆ.

ಅನರಾಕ್‌ ಎಂಬುದು ಪ್ರಾಪರ್ಟಿ ಕನ್ಸಲ್ಟಟಂಟ್‌ ಸಂಸ್ಥೆ ಆಗಿದ್ದು, ಈ ವರ್ಷದ ಹೌಸಿಂಗ್‌ ಸೇಲ್ಸ್‌ ವರದಿಯನ್ನು ಅದು ಪ್ರಕಟಿಸಿದೆ. ಈ ವರದಿ ಪ್ರಕಾರ, ದೇಶದ 7 ನಗರಗಳಲ್ಲಿ 2022ರಲ್ಲಿ ಇದುವರೆಗೆ 3.64 ಲಕ್ಷ ಮನೆಗಳ ಮಾರಾಟ ಆಗಿದೆ. 2021ರಲ್ಲಿ 2,36,500 ಮನೆಗಳು ಮಾರಾಟ ಆಗಿದ್ದವು. ವರ್ಷದಿಂದ ವರ್ಷಕ್ಕೆ ಶೇಕಡ 54 ಬೆಳವಣಿಗೆ ದರ ದಾಖಲಾಗಿದೆ. 2014ರಲ್ಲಿ ಹೌಸಿಂಗ್‌ ಸೇಲ್ಸ್‌ನ ಟಾಪ್‌ ಏಳು ನಗರಗಳಲ್ಲಿ 3.43 ಲಕ್ಷ ಮನೆಗಳು ಮಾರಾಟ ಆಗಿದ್ದವು.

ಯಾವ ನಗರದಲ್ಲಿ ಎಷ್ಟು ಮನೆಗಳು ಮಾರಾಟ?

ಅನರಾಕ್‌ ವರದಿ ಪ್ರಕಾರ, ಏಳು ನಗರಗಳಲ್ಲಿ ಮಾರಾಟವಾಗಿರುವ ಅಂದಾಜು ಲೆಕ್ಕದ ಅಂಕಿ ನೋಟ ಇಲ್ಲಿದೆ.

ಮಹಾನಗರಮನೆಗಳ ಸಂಖ್ಯೆ (ಅಂದಾಜು)
ಮುಂಬೈ1,09,700
 ದೆಹಲಿ ಎನ್‌ಸಿಆರ್‌ 63,700
 ಪುಣೆ  57,200
 ಬೆಂಗಳೂರು 49,500
 ಹೈದರಾಬಾದ್ 47‌,500
 ಕೋಲ್ಕತ್ತ 21,200
 ಚೆನ್ನೈ 16,100

ಟಾಪ್‌ ಏಳು ನಗರಗಳ ಪೈಕಿ ಮುಂಬೈ ಮಹಾನಗರದಲ್ಲಿ ಅಂದಾಜು 1,09,700 ಮನೆಗಳು ಮಾರಾಟ ಅಗಿವೆ. ದೆಹಲಿ ಎನ್‌ಸಿಆರ್‌ನಲ್ಲಿ 63,700 ಮನೆಗಳು ಮಾರಾಟ ಆಗಿವೆ. ಇನ್ನು ಪುಣೆಯಲ್ಲಿ 2021ಕ್ಕೆ ಹೋಲಿಸಿದರೆ ಶೇಕಡ 59 ಮಾರಾಟ ಏರಿದ್ದು, 57,200 ಮನೆಗಳು ಮಾರಾಟ ಆಗಿವೆ.

ಬೆಂಗಳೂರಿನಲ್ಲೂ 2021ಕ್ಕೆ ಹೋಲಿಸಿದರೆ ಶೇಕಡ 50 ಮನೆ ಮಾರಾಟ ಹೆಚ್ಚಳವಾಗಿದ್ದು, 49,500 ಮನೆಗಳ ಮಾರಾಟವಾಗಿದೆ. ಹೈದರಾಬಾದ್‌ನಲ್ಲಿ ಶೇಕಡ 87 ಮಾರಾಟ ಹೆಚ್ಚಳವಾಗಿದ್ದು, 47,500 ಮನೆಗಳ ಮಾರಾಟವಾಗಿದೆ. ಕೋಲ್ಕತದಲ್ಲಿ ಶೇಕಡ 62 ಹೆಚ್ಚಳದೊಂದಿಗೆ 21,200 ಮನೆಗಳ ಮಾರಾಟವಾಗಿದೆ. ಚೆನ್ನೈನಲ್ಲೂ ಶೇಕಡ 29 ಮಾರಾಟ ಹೆಚ್ಚಳವಾಗಿದೆ.

ಹೊಸ ಮನೆ ನಿರ್ಮಾಣ ದರ ಶೇಕಡ 51 ವಾರ್ಷಿಕ ಬೆಳವಣಿಗೆ ದಾಖಲಿಸಿದೆ

ಹೊಸ ಹೊಸ ಮನೆ, ಫ್ಲ್ಯಾಟ್‌ ನಿರ್ಮಾಣಗಳ ಪ್ರಮಾಣ ಏಳು ನಗರಗಳಲ್ಲಿ ವಾರ್ಷಿಕ ಶೇಕಡ 51 ಬೆಳವಣಿಗೆ ದರ ದಾಖಲಿಸಿವೆ. 2021ರಲ್ಲಿ 2,36,700 ಮನೆಗಳ ನಿರ್ಮಾಣವಾಗಿದ್ದರೆ, 2022ರಲ್ಲಿ 3,57,600 ಹೊಸ ಮನೆಗಳ ನಿರ್ಮಾಣವಾಗಿದೆ. ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಗರಿಷ್ಠ ಹೊಸ ಮನೆಗಳ ನಿರ್ಮಾಣವಾಗಿದೆ. ಈ ಎರಡೂ ನಗರಗಳ ಪಾಲು ಒಟ್ಟು ಶೇಕಡ 54 ಇದೆ.

ಹೆಚ್ಚುತ್ತಿರುವ ಆಸ್ತಿ ಬೆಲೆ, ಬಡ್ಡಿದರ ಹೆಚ್ಚಳ ಮತ್ತು ಎಲ್ಲ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಇತ್ಯಾದಿ ಸೇೆರಿ ಎಲ್ಲ ಹೆಡ್‌ವಿಂಡ್‌ಗಳ ಹೊರತಾಗಿಯೂ ವಸತಿ ರಿಯಲ್ ಎಸ್ಟೇಟ್‌ಗೆ 2022 ಅಸಾಧಾರಣ ವರ್ಷವಾಗಿದೆ. ಟಾಪ್ 7 ನಗರಗಳಲ್ಲಿನ ವಸತಿ ಮಾರಾಟವು 2014 ರ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿ ಹೊಸ ದಾಖಲೆ ಬರೆದಿದೆ ಎಂದು ಅನರಾಕ್ ಗ್ರೂಪ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಬೆಲೆಯೂ ಶೇಕಡ 4 ರಿಂದ 7 ಹೆಚ್ಚಳ

ಏಳೂ ನಗರಗಳಲ್ಲಿ ಪ್ರಾಪರ್ಟಿ ಬೆಲೆ ಶೇಕಡ 4 ರಿಂದ ಶೇಕಡ 7ರ ಏರಿಕೆ ದಾಖಲಿಸಿದೆ. ಇದು ಇನ್‌ಪುಟ್‌ ವೆಚ್ಚ ಮತ್ತು ಬೇಡಿಕೆ ಹೆಚ್ಚಳದ ಕಾರಣ ಉಂಟಾಗಿರುವ ಏರಿಕೆ ಎಂದು ವರದಿ ಹೇಳಿದೆ.

ಮುಂಬೈ ಮತ್ತು ಬೆಂಗಳೂರಿನಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾಪರ್ಟಿ ದರ ಶೇಕಡ 7 ಏರಿದೆ. ಮುಂಬೈನಲ್ಲಿ ಚದರ ಅಡಿಗೆ 11,890 ರೂಪಾಯಿ ಸರಾಸರಿ ದರ ಇದ್ದರೆ, ಬೆಂಗಳೂರಿನಲ್ಲಿ ಇದು ಸರಾಸರಿ 5,570 ರೂಪಾಯಿ ಇದೆ. ಇನ್ನುಳಿದಂತೆ, ದೆಹಲಿ ಎನ್‌ಸಿಆರ್‌ನಲ್ಲಿ ಚದರ ಅಡಿಗೆ 5,025 ರೂಪಾಯಿ, ಹೈದರಾಬಾದ್‌ನಲ್ಲಿ 4,260 ರೂಪಾಯಿ, ಚೆನ್ನೈನಲ್ಲಿ 5,315 ರೂಪಾಯಿ, ಕೋಲ್ಕತದಲ್ಲಿ 4,700 ರೂಪಾಯಿ ಇದೆ ಎಂದು ವರದಿ ಹೇಳಿದೆ.

IPL_Entry_Point