logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ 2024: ಕಾಡಾನೆ ಉಪಟಳ ನಿಗ್ರಹಿಸುವ ರೈಲ್ವೆ ಬ್ಯಾರಿಕೇಡ್‌ ಬೇಕು, ಅನುದಾನ ಮಾತ್ರ ಇಲ್ಲ, ಬಂಡೀಪುರಕ್ಕೆ ಬಂಪರ್‌

ಕರ್ನಾಟಕ ಬಜೆಟ್‌ 2024: ಕಾಡಾನೆ ಉಪಟಳ ನಿಗ್ರಹಿಸುವ ರೈಲ್ವೆ ಬ್ಯಾರಿಕೇಡ್‌ ಬೇಕು, ಅನುದಾನ ಮಾತ್ರ ಇಲ್ಲ, ಬಂಡೀಪುರಕ್ಕೆ ಬಂಪರ್‌

Umesha Bhatta P H HT Kannada

Feb 16, 2024 06:03 PM IST

google News

ಕರ್ನಾಟಕ ಬಜೆಟ್‌ 2024 ನಲ್ಲಿ ಸಿದ್ದರಾಮಯ್ಯ ಅರಣ್ಯ, ಪರಿಸರ ಇಲಾಖೆ ಕೊಟ್ಟಿದ್ದೇನು

    • Forest Ecology  ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್‌ 2024 ನಲ್ಲಿ ವನ್ಯಜೀವಿ ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ಸಿಕ್ಕಿಲ್ಲ
ಕರ್ನಾಟಕ ಬಜೆಟ್‌ 2024 ನಲ್ಲಿ ಸಿದ್ದರಾಮಯ್ಯ ಅರಣ್ಯ, ಪರಿಸರ ಇಲಾಖೆ ಕೊಟ್ಟಿದ್ದೇನು
ಕರ್ನಾಟಕ ಬಜೆಟ್‌ 2024 ನಲ್ಲಿ ಸಿದ್ದರಾಮಯ್ಯ ಅರಣ್ಯ, ಪರಿಸರ ಇಲಾಖೆ ಕೊಟ್ಟಿದ್ದೇನು

ಬೆಂಗಳೂರು: ಕರ್ನಾಟಕದಲ್ಲಿ ವನ್ಯಜೀವಿ ಮಾನವ ಸಂಘರ್ಷ ಮಿತಿ ಮೀರಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್‌ 2024ರಲ್ಲಿ ಮಹತ್ವದ ಕಾರ್ಯಕ್ರಮಗಳನ್ನೇ ಘೋಷಿಸಿಲ್ಲ. ಬಂಡೀಪುರದಲ್ಲಿ ಕಾರ್ಯಪಡೆ ರಚನೆ ಘೋಷಣೆ ಬಿಟ್ಟರೆ, ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ರೈಲ್ವೇ ಬ್ಯಾರಿಕೇಡ್‌ ಅಳವಡಿಸುವ ಯೋಜನೆಗೂ ನಯಾಪೈಸೆ ಅನುದಾನ ನೀಡಿಲ್ಲ. ಪ್ರಸಕ್ತ ಸಾಲಿನಲ್ಲಿಯೂ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂದಷ್ಟೇ ಉಲ್ಲೇಖಿಸಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ವನ್ಯಜೀವಿಗಳ ಉಪಟಳದಿಂದ ಹೆಚ್ಚು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಡಾನೆ ಉಪಟಳವಂತೂ ಮಿತಿ ಮೀರಿದೆ. ಇದಕ್ಕಾಗಿ ಬಜೆಟ್‌ ಮೂಲಕ ವಿಶೇಷ ಅನುದಾನ ನೀಡಿ ಕಾರ್ಯಕ್ರಮ ಪ್ರಕಟಿಸಬಹುದು ಎನ್ನುವ ನಿರೀಕ್ಷೆಯಿತ್ತು. ಚಾಮರಾಜನಗರ, ಮೈಸೂರು ಜಿಲ್ಲೆಯ ಬಂಡೀಪುರ ಅರಣ್ಯಕ್ಕೆಂದೇ ಪ್ರತ್ಯೇಕ ಆನೆ ಕಾರ್ಯಪಡೆ ಘೋಷಿಸಲಾಗಿದೆ. ಬಂಡೀಪುರದಲ್ಲಿ ಮಾಹಿತಿ ಕೇಂದ್ರವನ್ನೂ ಪ್ರವಾಸೋದ್ಯಮ ಇಲಾಖೆಯಡಿ ಒದಗಿಸಲಾಗಿದೆ.

ನಡುತೋಪು ರೂಪಿಸುವ ಕಾರ್ಯಕ್ರಮ ಬಿಟ್ಟರೆ ಅರಣ್ಯಕ್ಕೆ ಪ್ರೋತ್ಸಾಹ ನೀಡುವ ವನತೋಟಗಾರಿಕೆಯಂತಹ ಚಟುವಟಿಕೆಯ ಪ್ರಸ್ತಾವವೂ ಇಲ್ಲ. ಪರಿಸರ ನಿಯಂತ್ರಣದ ನಿಟ್ಟಿನಲ್ಲೂ ಮೂರು ಕಾರ್ಯಕ್ರಮ ಪ್ರಕಟಿಸಿದ್ದಾರೆ.

ಅರಣ್ಯ, ಪರಿಸರಕ್ಕೆ ಸಿದ್ದರಾಮಯ್ಯ ಕೊಟಿದ್ದಿಷ್ಟು

  • ಮಾನವ-ವನ್ಯಜೀವಿ ಸಂಘರ್ಷ ರಾಜ್ಯ ಸರ್ಕಾರದ ಮುಂದಿರುವ ಜ್ವಲಂತ ಸವಾಲಾಗಿದೆ. ವನ್ಯಜೀವಿಗಳ ಸಂರಕ್ಷಣೆಯ ಜೊತೆಜೊತೆಗೇ ವನ್ಯಜೀವಿಗಳಿಂದ ಕಾಡಂಚಿನ ಜನರು ಹಾಗೂ ಅಲ್ಲಿನ ಬೆಳೆಗಳ ರಕ್ಷಣೆ ಮಾಡಲು ಈವರೆಗೂ 201 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಲಾಗಿದೆ.
  • ರಾಜ್ಯದಲ್ಲಿ ಈಗಾಗಲೇ 07 ಆನೆ ಕಾರ್ಯಪಡೆಗಳು ಹಾಗೂ 02 ಚಿರತೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈ ಕಾರ್ಯಪಡೆಗಳನ್ನು ಬಲಪಡಿಸಲು 40 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷ ಬಂಡೀಪುರದಲ್ಲಿ ಒಂದು ಹೊಸ ಕಾರ್ಯಪಡೆಯನ್ನು ರಚಿಸಲಾಗುವುದು ಮತ್ತು ಕಾರ್ಯಪಡೆಗಳಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲಪಡಿಸಲು 10 ಕೋಟಿ ರೂ. ಹಂಚಿಕೆ ಮಾಡಲಾಗುವುದು.
  • ಮಾನವ ವನ್ಯ ಜೀವಿ ಸಂಘರ್ಷ ತಡೆಯಲು ಅಗತ್ಯವಾದ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ಹಿಂದಿನ ಆಯವ್ಯಯದಲ್ಲಿ 100 ಕೋಟಿ ರೂ. ಒದಗಿಸಲಾಗಿತ್ತು ಮತ್ತು 78 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್‌ ಅನ್ನು ನಿರ್ಮಿಸಲಾಗಿತ್ತು.

ಇದನ್ನೂ ಓದಿರಿ: Ola Price Reduce: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ 25 ಸಾವಿರ ರೂಪಾಯಿವರೆಗೆ ಕಡಿತ; ಯಾವ ಮಾಡೆಲ್‌ಗೆ ಎಷ್ಟಿದೆ

  • ಪ್ರಸಕ್ತ ಸಾಲಿನಲ್ಲಿಯೂ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಪ್ರಾಮುಖ್ಯತೆ ನೀಡಲಾಗುವುದು.
  • ರಾಜ್ಯಾದ್ಯಂತ ಹಸಿರು ಕವಚವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳಡಿ ಒಟ್ಟು 2.74 ಕೋಟಿ ಸಸಿಗಳನ್ನು ನೆಟ್ಟು 50,225 ಹೆಕ್ಟೇರ್‌ ನೆಡುತೋಪು ನಿರ್ಮಾಣ ಮಾಡಲಾಗಿದೆ.
  • ಈ ನೆಡುತೋಪುಗಳನ್ನು ಸಿರಿ ಚಂದನವನ, ನಗರ ಪ್ರದೇಶ ಹಸಿರೀಕರಣ, ಹಸಿರು ಆಯವ್ಯಯ, ಔಷಧಿ ಸಸ್ಯಗಳ ನೆಡುತೋಪು, ಟ್ರೀ-ಪಾರ್ಕ್‌, ರಸ್ತೆ ಬದುವಿನ ನೆಡುತೋಪು, ದೇವರಕಾಡು ಮತ್ತು ಹಸಿರು ಕರ್ನಾಟಕ ಕಾರ್ಯಕ್ರಮಗಳಡಿ ನಿರ್ಮಾಣ ಮಾಡಲಾಗಿದೆ.

ಬೀದರ್‌ನಲ್ಲಿ ಪರಿಸರ ಪ್ರವಾಸೋದ್ಯಮ

  • ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರೂ. ಅನುದಾನ ಒದಗಿಸಲಾಗುವುದು.

ಇದನ್ನೂ ಓದಿರಿ:Swapna Shastra: ಕನಸಿನಲ್ಲಿ ಇರುವೆಗಳನ್ನು ಕಂಡಿರಾ; ಹಾಗಾದರೆ ಸಂಪತ್ತು, ಸಮೃದ್ಧಿ ವೃದ್ಧಿಸೋದು ಗ್ಯಾರಂಟಿ

ನದಿ ನೀರು ಪರೀಕ್ಷೆಗೆ ಪ್ರಯೋಗಾಲಯ

  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ, ವಾಯು ಹಾಗೂ ಪರಿಸರ ಸಂರಕ್ಷಣಾ ಕಾಯ್ದೆಗಳನ್ವಯ ನೀಡುವ ಸಮ್ಮತಿ ಪತ್ರಗಳನ್ನು ಒಗ್ಗೂಡಿಸಿ ಸರಳೀಕರಣಗೊಳಿಸುವ ಮೂಲಕ ಉತ್ತೇಜಿಸಲಾಗುವುದು.
  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವಿಧಾನವನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಅನುಮತಿಗಳು ಮತ್ತು ಪ್ರಮಾಣ ಪತ್ರಗಳನ್ನು ನೀಡಲು ಏಕಗವಾಕ್ಷಿ ಕಾರ್ಯವಿಧಾನವನ್ನು ಸೃಜಿಸಲಾಗುವುದು.
  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ 17 ನದಿ ನೀರಿನ ಗುಣಮಟ್ಟ ಮಾಪನ ಕೇಂದ್ರಗಳು ಹಾಗೂ ಎರಡು ಪರಿಸರ ಪ್ರಯೋಗಾಲಯಗಳ ಸ್ಥಾಪನೆ ಮಾಡಲಾಗುವುದು. ಅಲ್ಲದೇ 9 ಪರಿಸರ ಪ್ರಯೋಗಾಲಯಗಳನ್ನು ಉನ್ನತೀಕರಿಸಲಾಗುವುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ