logo
ಕನ್ನಡ ಸುದ್ದಿ  /  ಕರ್ನಾಟಕ  /  Isro News: ಇಸ್ರೊ ಗಗನಯಾನ, ಅಂತರಿಕ್ಷದಲ್ಲಿ ತಂಗುವ ಗಗನಯಾತ್ರಿಗಳಿಗೆ ಮೈಸೂರಿನ ಇಡ್ಲಿ-ಸಾಂಬಾರ್‌, ಬಿರಿಯಾನಿ ರೆಡಿ

ISRO News: ಇಸ್ರೊ ಗಗನಯಾನ, ಅಂತರಿಕ್ಷದಲ್ಲಿ ತಂಗುವ ಗಗನಯಾತ್ರಿಗಳಿಗೆ ಮೈಸೂರಿನ ಇಡ್ಲಿ-ಸಾಂಬಾರ್‌, ಬಿರಿಯಾನಿ ರೆಡಿ

HT Kannada Desk HT Kannada

May 16, 2023 02:35 PM IST

ಇಸ್ರೊ ಗಗನಯಾನ (ಸಾಂದರ್ಭಿಕ ಚಿತ್ರ)

    • ISRO Gaganyaan News: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ(ಡಿಎಫ್‌ಎಲ್‌ಆರ್‌) ಈಗಾಗಲೇ ಆಹಾರ ಸಿದ್ಧಪಡಿಸಿದೆ. ಈ ಕುರಿತ ಸ್ಪೆಷಲ್‌ ರಿಪೋರ್ಟ್‌ ಇಲ್ಲಿದೆ.
ಇಸ್ರೊ ಗಗನಯಾನ (ಸಾಂದರ್ಭಿಕ ಚಿತ್ರ)
ಇಸ್ರೊ ಗಗನಯಾನ (ಸಾಂದರ್ಭಿಕ ಚಿತ್ರ) (PTI)

ಮೈಸೂರು: ಮನೆಯಲ್ಲಿ ಕುಳಿತು ಅಥವಾ ನಮ್ಮ ನೆಚ್ಚಿನ ಹೋಟೆಲ್‌ಗೆ ತೆರಳಿ ಅಚ್ಚುಮೆಚ್ಚಿನ ಆಹಾರ ಸವಿಯುವುದು ಸಾಮಾನ್ಯ ಸಂಗತಿ. ಆದರೆ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳ ಕಥೆ ಏನು? ಅವರು ಗಗನಯಾತ್ರೆಯಲ್ಲಿರುವಾಗ ನಮ್ಮಂತೆ ಮಾಮೂಲಿ ಆಹಾರ ಸವಿಯಬಹುದೆ? ʻಯಾಕಿಲ್ಲ? ಖಂಡಿತವಾಗಿಯೂ ಸವಿಯಬಹುದುʼ ಎನ್ನುತ್ತದೆ ಮೈಸೂರಿನ ಡಿಎಫ್‌ಆರ್‌ಎಲ್‌ (ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ).

ಟ್ರೆಂಡಿಂಗ್​ ಸುದ್ದಿ

Bamboo: ಬಿದಿರು ದಿನಕ್ಕೆ ಎಷ್ಟು ಉದ್ದ ಬೆಳೆಯಬಲ್ಲದು, ತಾಪಮಾನ ಏರಿಕೆ ತಡೆಗೆ ಬಿದಿರಿನ ಪಾತ್ರ ಗೊತ್ತೆ, ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಬೆಂಗಳೂರಲ್ಲಿ ಬಿಯರ್ ಕೊರತೆ; ಈವರೆಗೆ 30,000 ಲೀಟರ್ ಮಾರಾಟ, ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್

Bangalore Crime: ಆನ್‌ಲೈನ್‌ನಲ್ಲಿ ಹೂಡಿಕೆ 5 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ; ಮುಳುವಾದ ದುಪ್ಪಟ್ಟು ಲಾಭ ಗಳಿಸಿ ಸಂದೇಶ

Hassan Scandal: ಎಸ್‌ಐಟಿ ಸಿಎಂ, ಡಿಸಿಎಂ ಏಜೆಂಟ್‌, ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಕ್ರಮ ಏಕಿಲ್ಲ: ಎಚ್‌ಡಿಕೆ ಗಂಭೀರ ಪ್ರಶ್ನೆ

ಹೌದು.. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಗಗನಯಾತ್ರಿಗಳಿಗೆ ಡಿಎಫ್‌ಆರ್‌ಎಲ್ ವಿಶೇಷ ಆಹಾರಗಳನ್ನು ಸಿದ್ಧಪಡಿಸಿದೆ. ಗಗನಯಾತ್ರಿಗಳು ಅಂತರಿಕ್ಷದಲ್ಲಿ ಮೈಸೂರಿನ ಇಡ್ಲಿ-ಸಾಂಬಾರ್, ಬಿರಿಯಾನಿ ಸವಿಯಲಿದ್ದಾರೆ. ಡಿಎಫ್‌ಆರ್‌ಎಲ್ ಒಟ್ಟು 40 ಬಗೆಯ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳನ್ನು ಗಗನಯಾತ್ರಿಗಳಿಗೋಸ್ಕರ ತಯಾರಿಸಿದೆ ಎನ್ನಲಾಗಿದೆ. ಆಹಾರ ಸಿದ್ಧಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರತಿಯೊಂದು ಆಹಾರಕ್ಕೂ ಇಸ್ರೋದಿಂದ ಅನುಮತಿ ಸಿಕ್ಕಿದೆ. ಆದರೆ, ಕೆಲವು ಆಹಾರಗಳಲ್ಲಿ ಉಪ್ಪು ಹಾಗೂ ಖಾರದ ಪ್ರಮಾಣ ಹೆಚ್ಚಿದೆ ಎಂದು ಗಗನಯಾತ್ರಿಗಳು ತಿಳಿಸಿದ್ದು, ರುಚಿಗೆ ತಕ್ಕಂತೆ ಬದಲಾವಣೆ ಮಾಡಬೇಕು.

ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾತ್ರೆ ಮಿಷನ್ ಅನ್ನು 2022ರಲ್ಲಿ ಪ್ರಾರಂಭಿಸಲು ಯೋಚಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ 2024ರ 4ನೇ ತ್ರೈಮಾಸಿಕ ವೇಳೆಗೆ ಗಗನಯಾನ ಕೈಗೊಳ್ಳಲು ಇಸ್ರೋ ಉದ್ದೇಶಿಸಿದೆ. ನಾಲ್ವರು ಯಾತ್ರಿಗಳ ಚೊಚ್ಚಲ ಗಗನಯಾತ್ರೆಗೆ ಸಿದ್ಧತೆ ನಡೆದಿದ್ದು, ಅವರಿಗೆ ದೇಶ ಹಾಗೂ ವಿದೇಶದಲ್ಲಿ ತರಬೇತಿ ನೀಡಲಾಗುತ್ತಿದೆ. 5ರಿಂದ 7 ದಿನಗಳ ಕಾಲ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಂಗಲಿದ್ದಾರೆ. ಈ ಅವಧಿಯಲ್ಲಿ ಬಾಹ್ಯಾಕಾಶಕ್ಕೆ ಹೊಂದಾಣಿಕೆ ಅಗುವಂತಹ ಆಹಾರವನ್ನು ಮೈಸೂರಿನ ಡಿಎಫ್‌ಆರ್‌ಎಲ್‌ ತಯಾರಿಸಿರುವುದು ವಿಶೇಷ.

ಇಡ್ಲಿ- ಸಾಂಬಾರ್, ಎಗ್‌ರೋಲ್ಸ್, ವೆಜ್‌ರೋಲ್ಸ್, ವೆಜ್ ಪಲಾವ್, ಸೂಜಿ ಹಲ್ವಾ, ದಾಲ್ ಹಲ್ವಾ, ತೆಂಗಿನಕಾಯಿ ಚಟ್ಟಿ, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಸೇರಿ ಹಲವು ಬಗೆಯ ಒಟ್ಟು 40 ಆಹಾರ ಪದಾರ್ಥ ತಯಾರಿಸಲಾಗಿದೆ. ಆಹಾರವನ್ನು ಶೇಖರಿಸಿಡಲು ವಿಶೇಷ ಕಂಟೇನರ್‌ಗಳನ್ನೂ ಸಿದ್ಧಪಡಿಸಲಾಗಿದೆ. ಗಗನಯಾತ್ರಿಗಳ ಜತೆಗೆ ಸುಮಾರು 60 ಕೆ.ಜಿ. ಆಹಾರ ಹಾಗೂ 100 .ಲೀಟರ್‌ ನೀರು ರವಾನೆಯಾಗಲಿದೆ. ಡಿಎಫ್‌ಆರ್‌ಎಲ್‌ನಲ್ಲಿ ಒಟ್ಟು 20 ವಿಜ್ಞಾನಿಗಳ ಪರಿಶ್ರಮದಿಂದ ಗಗನಯಾತ್ರಿಗಳಿಗಾಗಿ ಆಹಾರ ಸಿದ್ಧವಾಗಿದೆ.

ಪ್ರತಿ ಖಾದ್ಯವನ್ನು 100 ಗ್ರಾಂನ ಆಹಾರದ ಪ್ಯಾಕೇಟ್‌ಗಳಾಗಿ ಸಿದ್ಧಪಡಿಸಲಾಗಿದೆ. ಈ ಆಹಾರವನ್ನು ಒಂದು ವರ್ಷದವರೆಗೆ ಬಳಕೆ ಮಾಡಬಹುದು. ಇವು ಅತ್ಯಂತ ಕಡಿಮೆ ತೂಕ ಹೊಂದಿದ್ದು, ಹೆಚ್ಚು ಪೌಷ್ಟಿಕಾಂಶ ಇದೆ. 1984ರಲ್ಲೇ ರಷ್ಯಾ ಸೊಯುಜ್ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಗಗನ ಯಾತ್ರಿಗಳಿಗೆ ಡಿಎಫ್‌ಆರ್‌ಎಲ್‌ ಆಹಾರ ಪೂರೈಸಿತ್ತು. ಆಗ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಗಗನಯಾತ್ರೆ ಕೈಗೊಂಡಿದ್ದರು. ಇದೀಗ ಇಸ್ರೋ ಕೈಗೊಳ್ಳುತ್ತಿರುವ ಗಗನಯಾತ್ರೆಯಲ್ಲಿ ಮೈಸೂರಿನ ಡಿಎಫ್‌ಆರ್‌ಎಲ್‌ ಭಾಗವಾಗುತ್ತಿರುವುದು ಹೆಮ್ಮೆಯ ವಿಚಾರ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು