Karnataka Reservoirs: ತಿಂಗಳಲ್ಲೇ ಭಾರೀ ಮಳೆ, ಕರ್ನಾಟಕದ ಜಲಾಶಯಗಳು ಶೇ 70 ರಷ್ಟು ನೀರು ಭರ್ತಿ, ಎಲ್ಲಿ ಎಷ್ಟು ಟಿಎಂಸಿ ನೀರಿದೆ?
Jul 23, 2024 08:00 AM IST
ವಿಜಯಪುರ ಜಿಲ್ಲೆ ಆಲಮಟ್ಟಿಯ ಎಲ್ಲಾ ಗೇಟ್ ಗಳಿಂದ ನೀರು ಹರಿಸಲಾಗುತ್ತಿದೆ.
- Karnataka Dams ಕರ್ನಾಟಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಜಲಾಶಯಗಳು ತುಂಬಿವೆ. ಕೆಲವು ಜಲಾಶಯಗಳು ತುಂಬಲು ಕಾಯುತ್ತಿವೆ. ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಕಳೆದ ವರ್ಷ ಜಲಾಶಯಗಳು ಶೇ. 50 ರಷ್ಟು ಭರ್ತಿಯಾಗುವುದಲ್ಲಿ ಹೆಚ್ಚಾಗಿ ಹೋಗಿತ್ತು. ಕೆಲವು ಜಲಾಶಯಗಳಿಗೆ ಮಾತ್ರ ಹೆಚ್ಚಿನ ನೀರು ಹರಿದು ಬಂದರೂ ತುಂಬಲು ಆಗಲೇ ಇಲ್ಲ. ಮಳೆಗಾಲ ಮುಗಿದ ನಂತರವೂ ಮಳೆ ಬಂದಿದ್ದರಿಂದ ಹಿಂದಿನ ವರ್ಷ ಸಮಸ್ಯೆ ಬಹುವಾಗಿ ಕಾಡಲಿಲ್ಲ. ಈ ಬಾರಿ ಪರಿಸ್ಥಿತಿ ಹಾಗಿಲ್ಲ.ಕರ್ನಾಟಕ ಒಟ್ಟು 14 ಪ್ರಮುಖ ಜಲಾಶಯಗಳಿಗೂ ಹೆಚ್ಚಿನ ನೀರು ಜುಲೈ ಮೂರನೇ ವಾರದ ಹೊತ್ತಿಗೆ ಹರಿದು ಬಂದಿದೆ. ಒಂದೆರಡು ಜಲಾಶಯ ಹೊರತುಪಡಿಸಿ ಬಹುತೇಕ ಜಲಾಶಯ ತುಂಬಿವೆ. ಹೊರ ಹರಿವು ಕೂಡ ಅಧಿಕವಾಗಿದ್ದು, ಇನ್ನೂ ಎರಡೂವರೆ ತಿಂಗಳ ಮಳೆಗಾಲದಲ್ಲಿ ಇನ್ನಷ್ಟು ನೀರು ಜಲಾಶಯಗಳಿಗೆ ಬರುವ ಸೂಚನೆಯಿದೆ.
ಕರ್ನಾಟಕದಲ್ಲಿ ಆಲಮಟ್ಟಿ. ಕೃಷ್ಣರಾಜಸಾಗರ, ತುಂಗಭದ್ರಾ, ಲಿಂಗನಮಕ್ಕಿ. ಭದ್ರಾ, ಕಬಿನಿ, ನಾರಾಯಣಪುರ, ಹೇಮಾವತಿ, ವಾಣಿ ವಿಲಾಸ ಸಾಗರ, ಹಾರಂಗಿ, ಸೂಪಾ, ಮಲಪ್ರಭಾ, ವರಾಹಿ, ಘಟಪ್ರಭಾ ಪ್ರಮುಖ ಜಲಾಶಯಗಳು. ಅದರಲ್ಲೂ ಲಿಂಗನಮಕ್ಕಿ. ಆಲಮಟ್ಟಿ, ಸೂಪಾ, ತುಂಗಭದ್ರಾ, ಭದ್ರಾ, ಕೆಆರ್‌ಎಸ್, ಘಟಪ್ರಭಾ ಹೆಚ್ಚು ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಜಲಾಶಯಗಳು. ಕೆಲವು ಜಲಾಶಯಗಳು ಕರ್ನಾಟಕದ ಒಳಗಿನ ಜಿಲ್ಲೆಗಳ ಮಳೆಯಿಂದ ತುಂಬಿದರೆ, ಇನ್ನಷ್ಟು ಜಲಾಶಯಗಳಿಗೆ ಮಹಾರಾಷ್ಟ್ರ ಹಾಗೂ ಕೇರಳದ ಮಳೆ ನೀರೇ ಆಸರೆ. ಈ ಬಾರಿ ಕರ್ನಾಟಕದ ಜತೆಗೆ ಮಹಾರಾಷ್ಟ್ರ ಹಾಗೂ ಕೇರಳದಲ್ಲೂ ಮಳೆ ಚೆನ್ನಾಗಿ ಆಗಿರುವುದರಿಂದ ಜಲಾಶಯಗಳಿಗೆ ಜೀವ ಕಳೆ ಬಂದಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಿಸಿಡಬಹುದಾದ ಟಿಎಂಸಿ ಪ್ರಮಾಣ 895.62 . ಈವರೆಗೂ ಸಂಗ್ರಹವಾಗಿರುವುದು 615.20 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಟಿಎಂಸಿ ಪ್ರಮಾಣ 300.95 .
ಯಾವ ಜಲಾಶಯದಲ್ಲಿ ಎಷ್ಟು?
- ಇದರಲ್ಲಿ ಅತಿ ದೊಡ್ಡದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 90.19 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 44387 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 1899 ಕ್ಯೂಸೆಕ್ ಇದೆ.
- ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 93.81 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 115406 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 144295 ಕ್ಯೂಸೆಕ್ ಇದೆ.
- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 73.50 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 32594 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 0 ಕ್ಯೂಸೆಕ್ ಇದೆ.
- ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ 105.79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 83.95 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 113402 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 4950 ಕ್ಯೂಸೆಕ್ ಇದೆ.
ಇದನ್ನೂ ಓದಿರಿ: KRS Dam: ತುಂಬಿದ ಕೆಆರ್‌ಎಸ್, ಕಬಿನಿ ಜಲಾಶಯಗಳಿಗೆ ಸಿಎಂ ಜುಲೈ 27 ಕ್ಕೆ ಬಾಗಿನ ಅರ್ಪಣೆ, ಕಾವೇರಿಯಲ್ಲೂ ಗಂಗಾರತಿ ಮಾದರಿ ಪೂಜೆ - ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 47.24 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 60016 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 52020 ಕ್ಯೂಸೆಕ್ ಇದೆ.
- ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಜಲಾಶಯದಲ್ಲಿ 51 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 38.58 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 31202 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 2405 ಕ್ಯೂಸೆಕ್ ಇದೆ.
- ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೇಮಾವತಿ ಜಲಾಶಯದಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 35.27 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 23769 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 15624 ಕ್ಯೂಸೆಕ್ ಇದೆ.
- ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 49.24 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 25367 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 193 ಕ್ಯೂಸೆಕ್ ಇದೆ.
ಇದನ್ನೂ ಓದಿರಿ: Karnataka Reservoirs: ತಗ್ಗಿದ ಕಬಿನಿ ಹೊರ ಹರಿವು, ಕೆಆರ್‌ಎಸ್, ಅಲಮಟ್ಟಿ ಜಲಾಶಯದಿಂದ ಅಧಿಕ ನೀರು ಹೊರಕ್ಕೆ
- ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ18.49 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 25882 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 17375 ಕ್ಯೂಸೆಕ್ ಇದೆ.
- ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ವರಾಹಿ ಜಲಾಶಯದಲ್ಲಿ 31.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ2.40 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 2712ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 0 ಕ್ಯೂಸೆಕ್ ಇದೆ.
- ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 7.23 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 7281 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 4000 ಕ್ಯೂಸೆಕ್ ಇದೆ.
- ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 17.93 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 0 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ147 ಕ್ಯೂಸೆಕ್ ಇದೆ.
ಇದನ್ನೂ ಓದಿರಿ: ಮೈದುಂಬಿ ಹರಿಯತೊಡಗಿವೆ ಅಘನಾಶಿನಿ, ಕಾಳಿ, ಕಪಿಲಾ, ಕಾವೇರಿ ನದಿಗಳು, ಉತ್ತರ ಕನ್ನಡ, ನಂಜನಗೂಡು, ಕುಶಾಲ ನಗರದ ಮಳೆ ಫೋಟೋಸ್
- ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ 37.73 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 19.45 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 11328 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 194 ಕ್ಯೂಸೆಕ್ ಇದೆ.
- ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಪುರ ಜಲಾಶಯದಲ್ಲಿ33.31 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 27.93 ಟಿಎಂಸಿ ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 1,36,484 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 147770 ಕ್ಯೂಸೆಕ್ ಇದೆ.