logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಚಿಕ್ಕಮಗಳೂರು, ಧಾರವಾಡ, ಬೆಳಗಾವಿಯಲ್ಲಿ ಅಧಿಕ ಚಳಿ; 7 ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ನಿರೀಕ್ಷೆ

Karnataka Weather: ಚಿಕ್ಕಮಗಳೂರು, ಧಾರವಾಡ, ಬೆಳಗಾವಿಯಲ್ಲಿ ಅಧಿಕ ಚಳಿ; 7 ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ನಿರೀಕ್ಷೆ

Umesha Bhatta P H HT Kannada

Dec 24, 2024 07:15 AM IST

google News

ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ಚಳಿಯ ವಾತಾವರಣವಿದೆ.

    • Karnataka Weather: ಕರ್ನಾಟಕ ಮಲೆನಾಡು ಭಾಗದ ಜತೆಗೆ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ದಟ್ಟವಾದ ಮಂಜಿನ ವಾತಾವರಣದೊಂದಿಗೆ ಚಳಿಯ ಅನುಭವ ಕಂಡು ಬಂದಿದೆ. ಕೆಲವೆಡೆ ಹಗುರ ಮಳೆ ಮುನ್ಸೂಚನೆಯೂ ಇದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ಚಳಿಯ ವಾತಾವರಣವಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಮಂಗಳವಾರ ಚಳಿಯ ವಾತಾವರಣವಿದೆ.

ಬೆಂಗಳೂರು: ಮಲೆನಾಡಿನ ಚಿಕ್ಕಮಗಳೂರು, ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳ ಸೆರಗಿನ ಧಾರವಾಡ, ಬೆಳಗಾವಿ ನಗರಗಳಲ್ಲಿ ಭಾರೀ ಚಳಿಯ ಅನುಭವವಾಗುತ್ತಿದೆ. ಕರ್ನಾಟಕದಲ್ಲಿಯೇ ಅತಿ ಕಡಿಮೆ ಉಷ್ಣಾಂಶ ಚಿಕ್ಕಮಗಳೂರಿನಲ್ಲಿ ದಾಖಲಾದರೆ, ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ ಭಾಗದಲ್ಲೂ ಕಡಿಮೆ ಉಷ್ಣಾಂಶವಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ದಟ್ಟ ಚಳಿ ವಾತಾವರಣ ಮುಂದುವರಿದಿದೆ. ಕೆಲವು ಭಾಗದಲ್ಲಂತೂ ಮಂಜು ಕೂಡ ಆವರಿಸಿದ್ದು, ದಿನವಿಡೀ ಚಳಿಯಿಂದಲೇ ಕೂಡಿರುವ ಸನ್ನಿವೇಶವಿದೆ. ಬೆಂಗಳೂರು, ಮೈಸೂರು ಭಾಗದಲ್ಲೂ ಚಳಿಯಿದೆ. ಮಂಗಳವಾರದಂದು ಕರಾವಳಿಯ ಮೂರು ಜಿಲ್ಲೆಗಳು, ಮಲೆನಾಡು ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ. ಇನ್ನು ಮೂರು ದಿನ ಅಲ್ಲಲ್ಲಿ ಮಳೆಯಾಗುವ ಸೂಚನೆಯೂ ಇದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಳಿ ಎಲ್ಲಿ ಹೇಗಿದೆ

ಕರ್ನಾಟಕದ ದಟ್ಟ ಮಲೆನಾಡು ಭಾಗವಾದ ಚಿಕ್ಕಮಗಳೂರಿನಲ್ಲಿ ಮಂಗಳವಾರ ಕನಿಷ್ಠ ಉಷ್ಣಾಂಶ 10.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಳಲ್ಲಿ ಇದೇ ರೀತಿಯ ವಾತಾವರಣ ಎರಡು ತಿಂಗಳಿನಿಂದಲೂ ಇದೆ. ಅದೇ ರೀತಿ ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ಧಾರವಾಡ ಹಾಗೂ ಬೆಳಗಾವಿ ಭಾಗದಲ್ಲಿ ಕಂಡು ಬಂದಿದೆ. ಧಾರವಾಡ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 15.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಚಿಂತಾಮಣಿಯಲ್ಲಿ 15.9 ಡಿಗ್ರಿ ಸೆಲ್ಸಿಯಸ್‌

ಮಡಿಕೇರಿಯಲ್ಲಿ 16.1 ಡಿಗ್ರಿ ಸೆಲ್ಸಿಯಸ್‌

ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ 16.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಳಗಾವಿ ನಗರದಲ್ಲಿ ಹಾಗೂ ಬೀದರ್‌ ನಲ್ಲಿ 17.5 ಡಿಗ್ರಿ ಸೆಲ್ಸಿಯಸ್‌

ಗದಗದಲ್ಲಿ 17.9 ಡಿಗ್ರಿ ಸೆಲ್ಸಿಯಸ್‌,

ಹಾವೇರಿ ಹಾಗೂ ದಾವಣಗೆರೆಯಲ್ಲಿ 18.0 ಡಿಗ್ರಿ ಸೆಲ್ಸಿಯಸ್‌,

ಶಿವಮೊಗ್ಗದ ಆಗುಂಬೆ ಹಾಗೂ ರಾಯಚೂರಿನಲ್ಲಿ 18.4 ಡಿಗ್ರಿ ಸೆಲ್ಸಿಯಸ್‌,

ಹಾಸನದಲ್ಲಿ 18.2 ಡಿಗ್ರಿ ಸೆಲ್ಸಿಯಸ್‌

ವಿಜಯಪುರದಲ್ಲಿ 18.1 ಡಿಗ್ರಿ ಸೆಲ್ಸಿಯಸ್‌

ಮಂಡ್ಯದಲ್ಲಿ18.9 ಡಿಗ್ರಿ ಸೆಲ್ಸಿಯಸ್‌

ಶಿವಮೊಗ್ಗದಲ್ಲಿ 18.6 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರಿನ ಜಿಕೆವಿಕೆಯಲ್ಲಿ 17.8 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ನಗರದಲ್ಲಿ 19.4 ಡಿಗ್ರಿ ಸೆಲ್ಸಿಯಸ್‌

ಕಾರವಾರದಲ್ಲಿ 21.4 ಡಿಗ್ರಿ ಸೆಲ್ಸಿಯಸ್‌

ಮಂಗಳೂರಿನಲ್ಲಿ 22.3 ಡಿಗ್ರಿ ಸೆಲ್ಸಿಯಸ್‌

ಮೈಸೂರಿನಲ್ಲಿ 20.0 ಡಿಗ್ರಿ ಸೆಲ್ಸಿಯಸ್‌

ಕಲಬುರಗಿಯಲ್ಲಿ 20.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ನಾಲ್ಕು ದಿನ ಮಳೆ ನಿರೀಕ್ಷೆ

ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಂಗಳವಾರ ಹಗುರ ಮಳೆಯಾಗಬಹುದು. ಉಳಿದಂತೆ ಒಣಹವೆಯೇ ಇರಲಿದೆ. ಒಳನಾಡಿನ ಒಂದೆರಡು ಭಾಗಗಳಲ್ಲಿ ದಟ್ಟ ಮಂಜು ಇರುವ ಸಾಧ್ಯತೆಗಳು ಅಧಿಕ.

ಬುಧವಾರವೂ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು.

ಗುರುವಾರದಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಹಗುರ ಮಳೆಯಾಗಬಹುದು.

ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಕೆಲವು ಭಾಗ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಯ ಒಂದೆರಡು ಕಡೆ, ಹಗುರದಿಂದ ಸಾಧಾರಣ ಮಳೆಯಾಗಬಹುದು, ವಿಜಯಪುರ, ಗದಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗಬಹುದು.

ಬೆಂಗಳೂರು ಹವಾಮಾನ

ಬೆಂಗಳೂರು ನಗರದಲ್ಲಿ ಮಂಗಳವಾರ ಹಾಗೂ ಬುಧವಾರದಂದು ಮೋಡ ಕವಿದ ಆಕಾಶ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಇರುವ ಸಾಧ್ಯತೆಗಳಿವೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಸೆಲ್ಸಿಯಸ್‌ ಹಾಗೂ 19 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ