logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಸತತ 100 ದಿನದಿಂದ ತುಂಬಿರುವ ಕಬಿನಿ; ಆಲಮಟ್ಟಿ, ಕೆಆರ್‌ಎಸ್, ಭದ್ರಾ ಸಹಿತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ

Karnataka Reservoirs: ಸತತ 100 ದಿನದಿಂದ ತುಂಬಿರುವ ಕಬಿನಿ; ಆಲಮಟ್ಟಿ, ಕೆಆರ್‌ಎಸ್, ಭದ್ರಾ ಸಹಿತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ

Umesha Bhatta P H HT Kannada

Oct 16, 2024 12:32 PM IST

google News

ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಈಗಲೂ ಒಳಹರಿವಿನ ಪ್ರಮಾಣ ಚೆನ್ನಾಗಿದೆ.

    • ಕರ್ನಾಟಕದ ಬಹುತೇಕ ಜಲಾಶಯಗಳು ಅಕ್ಟೋಬರ್‌ ಮೂರನೇ ವಾರದಲ್ಲೂ ತುಂಬಿವೆ. ಕಬಿನಿ ಜಲಾಶಯ ಸತತ ನೂರು ದಿನದಿಂದ ತುಂಬಿದ್ದರೆ, ಹಾರಂಗಿ ಜಲಾಶಯದಲ್ಲಿ ಮಾತ್ರ ಹಿಂದಿನ ವರ್ಷಕ್ಕಿಂತ ಕಡಿಮೆ ನೀರಿದೆ.
ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಈಗಲೂ ಒಳಹರಿವಿನ ಪ್ರಮಾಣ ಚೆನ್ನಾಗಿದೆ.
ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಈಗಲೂ ಒಳಹರಿವಿನ ಪ್ರಮಾಣ ಚೆನ್ನಾಗಿದೆ.

ಬೆಂಗಳೂರು: ಈ ಬಾರಿ ಅಕ್ಟೋಬರ್‌ ಆದರೂ ಮಳೆ ನಿಂತಿಲ್ಲ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್‌ ಎರಡು ವಾರಗಳಲ್ಲೂ ಉತ್ತಮ ಮಳೆಯಾಗಿದೆ. ಬೆಂಗಳೂರು ಸಹಿತ ಹಲವು ಭಾಗಗಳಲ್ಲಿ ಮಳೆಯಾಗುತ್ತಲೇ ಇದೆ. ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಕರ್ನಾಟಕದ ಬಹುತೇಕ ಜಲಾಶಯಗಳೂ ಈಗಲೂ ಭರ್ತಿಯಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಾರಂಗಿ, ವಾಣಿವಿಲಾಸ ಜಲಾಶಯ ಹೊರತು ಪಡಿಸಿದರೆ ಎಲ್ಲಾ ಜಲಾಶಯಗಳು ತುಂಬಿದ ಸ್ಥಿತಿಯಲ್ಲಿಯೇ ಇವೆ. ಅದರಲ್ಲೂ ಕೇರಳದಲ್ಲಿ ಉತ್ತಮ ಮಳೆಯಾಗಿ ಬೇಗನೇ ತುಂಬಿದ್ದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಸತತ ನೂರು ದಿನದಿಂದ ತುಂಬಿದ ಸ್ಥಿತಿಯಲ್ಲಿಯೇ ಇರುವುದು ವಿಶೇಷ. ಆಲಮಟ್ಟಿ, ಕೆಆರ್‌ಎಸ್‌ ಜಲಾಶಯಗಳೂ ಎರಡು ತಿಂಗಳಿನಿಂದಲೂ ತುಂಬಿದ ಹಾಗೆಯೇ ಇವೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಿಸಿಡಬಹುದಾದ ಟಿಎಂಸಿ ಪ್ರಮಾಣ 895.62 . ಈವರೆಗೂ ಸಂಗ್ರಹವಾಗಿರುವುದು 866.40 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಟಿಎಂಸಿ ಪ್ರಮಾಣ 538.85.

ಯಾವ ಜಲಾಶಯದಲ್ಲಿ ಎಷ್ಟು?

  • ಅತಿ ದೊಡ್ಡದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 146.08 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 67.62 . ಜಲಾಶಯದ ಒಳ ಹರಿವಿನ ಪ್ರಮಾಣ6809 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 6725 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ1817.30 ಅಡಿ.
  • ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 123.08 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ113.20 ಜಲಾಶಯದ ಒಳ ಹರಿವಿನ ಪ್ರಮಾಣ 23320 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 23320 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 519.60 ಮೀಟರ್‌.
  • ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.ಈಗ ಸಂಗ್ರಹ ಇರುವುದು 139.77 ಟಿಎಂಸಿ . ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 77.60. ಜಲಾಶಯದ ಒಳ ಹರಿವಿನ ಪ್ರಮಾಣ 32594 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದೆ.
  • ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ 105.79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 101.50 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 45. 56 . ಜಲಾಶಯದ ಒಳ ಹರಿವಿನ ಪ್ರಮಾಣ 24465 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 25369 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 1631.93 ಅಡಿ.

    ಇದನ್ನೂ ಓದಿರಿ: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆ ಇದೆ, ಆದರೆ ಕೇಂದ್ರದ ಅಧಿಸೂಚನೆ ಆಗಬೇಕು; ಪ್ಲಾನ್‌ನ ವಿವರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
  • ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 49.45 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 23.80. ಜಲಾಶಯದ ಒಳ ಹರಿವಿನ ಪ್ರಮಾಣ 9043ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 8783 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 124.80 ಅಡಿ.
  • ಬೆಳಗಾವಿ ಜಿಲ್ಲೆ ತಾಲ್ಲೂಕಿನ ಘಟಪ್ರಭಾ ಜಲಾಶಯದಲ್ಲಿ 51 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 51 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 47.05. ಜಲಾಶಯದ ಒಳ ಹರಿವಿನ ಪ್ರಮಾಣ 2409 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 2409 ಕ್ಯೂಸೆಕ್‌ ಇದೆ. 2174.80 ಅಡಿ.
  • ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೇಮಾವತಿ ಜಲಾಶಯದಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 33.83 ಟಿಎಂಸಿ . ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 20.65. ಜಲಾಶಯದ ಒಳ ಹರಿವಿನ ಪ್ರಮಾಣ 3820 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ2850 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2918.56 ಅಡಿ.

    ಇದನ್ನೂ ಓದಿರಿ: Karnataka Reservoirs: ತುಂಗಭದ್ರಾ, ಸೂಪಾ, ಲಿಂಗನಮಕ್ಕಿಯಲ್ಲಿ ಇಳಿದ ನೀರಿನ ಪ್ರಮಾಣ; ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ
  • ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 71.53 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 39.71. ಜಲಾಶಯದ ಒಳ ಹರಿವಿನ ಪ್ರಮಾಣ 6762 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 6762 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2158 ಅಡಿ.
  • ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 19.46 ಟಿಎಂಸಿ . ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 14.52. ಜಲಾಶಯದ ಒಳ ಹರಿವಿನ ಪ್ರಮಾಣ 2552 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 2300 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2283.91 ಅಡಿ.
  • ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ವರಾಹಿ ಜಲಾಶಯದಲ್ಲಿ 31.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 28.78 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 11.04. ಜಲಾಶಯದ ಒಳ ಹರಿವಿನ ಪ್ರಮಾಣ 881 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 1946.16 ಅಡಿ.

    ಇದನ್ನೂ ಓದಿರಿ: Week End Travel: ಕರ್ನಾಟಕದ ಗಡಿಯಲ್ಲಿರುವ ಈ ಜಲಾಶಯವೀಗ ಪ್ರಮುಖ ಪ್ರವಾಸಿ ತಾಣ, ವಾರಾಂತ್ಯಪ್ರವಾಸಕ್ಕೆ ಬೆಸ್ಟ್‌ photos
  • ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 7.37 ಟಿಎಂಸಿ ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 7.73. ಜಲಾಶಯದ ಒಳ ಹರಿವಿನ ಪ್ರಮಾಣ 1938 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 300 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2855.67 ಅಡಿ.
  • ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 24.43 ಟಿಎಂಸಿ . ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 23.82. ಜಲಾಶಯದ ಒಳ ಹರಿವಿನ ಪ್ರಮಾಣ 2426 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 135 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2132.85 ಅಡಿ.
  • ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ 37.73 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 37.73 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 19.92. ಜಲಾಶಯದ ಒಳ ಹರಿವಿನ ಪ್ರಮಾಣ 4819 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ 4819 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 2079.50 ಅಡಿ.
  • ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಪುರ ಜಲಾಶಯದಲ್ಲಿ33.31 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಸಂಗ್ರಹ ಇರುವುದು 32.37 ಟಿಎಂಸಿ . ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಟಿಎಂಸಿ ಪ್ರಮಾಣ 26.62. ಜಲಾಶಯದ ಒಳ ಹರಿವಿನ ಪ್ರಮಾಣ37281 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ37281 ಕ್ಯೂಸೆಕ್‌ ಇದೆ. ಸದ್ಯದ ಜಲಾಶಯದ ಮಟ್ಟ 1614.32 ಅಡಿ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ