Karnataka Reservoirs: ತುಂಗಭದ್ರಾ, ಸೂಪಾ, ಲಿಂಗನಮಕ್ಕಿಯಲ್ಲಿ ಇಳಿದ ನೀರಿನ ಪ್ರಮಾಣ; ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ
Karnataka Dam Level ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು, ಮತ್ತೆ ಜೋರು ಮಳೆಗಾಗಿ ಕಾಯಲಾಗುತ್ತಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ( Karnataka Rains) ಮಳೆ ನಿಧಾನವಾಗಿ ಚುರುಕುಗೊಳ್ಳುತ್ತಿದ್ದು. ಬಹುತೇಕ ತುಂಬಿರುವ ಜಲಾಶಯಗಳಿಗೂ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕೃಷ್ಣರಾಜಸಾಗರ( KRS Reservoir), ಆಲಮಟ್ಟಿ( Almatti KRS Reservoir), ಭದ್ರಾ( Bhadra Dam), ಕಬಿನಿ( Kabini), ತುಂಗಭದ್ರಾ, ಲಿಂಗನಮಕ್ಕಿ, ಹೇಮಾವತಿ, ತುಂಗಾ ಸಹಿತ ಬಹುತೇಕ ಜಲಾಶಯಗಳಲ್ಲಿ ಒಳ ಹರಿವಿನ ಪ್ರಮಾಣದಲ್ಲಿ ನಿಧಾನವಾಗಿ ಏರಿಕೆ ಕಂಡು ಬರುತ್ತಿದೆ. ಈ ವಾರದಲ್ಲಿ ಉತ್ತಮ ಮಳೆ ನಿರೀಕ್ಷೆ ಇರುವುದರಿಂದ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ತುಂಗಭದ್ರಾ ಜಲಾಶಯದಲ್ಲಿ ಮಾತ್ರ ನೀರಿನ ಪ್ರಮಾಣ ಮಾತ್ರ ಗಣನೀಯ ಕುಸಿತ ಕಂಡು ಬಂದಿದ್ದರೆ, ಸೂಪಾ, ಲಿಂಗನಮಕ್ಕ ಕೂಡ ತುಂಬಲು ಇನ್ನಷ್ಟು ನೀರು ಬೇಕು. ಕರ್ನಾಟಕದ ಜಲಾಶಯಗಳಲ್ಲಿ ಶೇ. 90 ಭರ್ತಿಯಾಗಿರುವ ಸ್ಥಿತಿಯಲ್ಲಿದ್ದು, ನಾಲೆಗಳಿಗೂ ನೀರು ಹರಿದು ಕೃಷಿ ಚಟುವಟಿಕೆಯೂ ಚುರುಕುಗೊಂಡಿದೆ.
ಕೃಷ್ಣರಾಜಸಾಗರ ಜಲಾಶಯ
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯಕ್ಕೂ ಹರಿದು ಬರುತ್ತಿರುವ ನೀರಿನ ಪ್ರಮಾಣ ಒಂದು ವಾರದಿಂದ ಯಥಾಸ್ಥಿತಿಯಲ್ಲಿಯೇ ಇದೆ. ಸೋಮವಾರದಂದು ಜಲಾಶಯಕ್ಕೆ 12210 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 10423 ಕ್ಯೂಸೆಕ್ ನೀರನ್ನು ನದಿ ಹಾಗೂ ನಾಲೆಗಳ ಮೂಲಕ ಹರಿಸಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 123.46 ಅಡಿ ನೀರಿದೆ. ಗರಿಷ್ಠ ಮಟ್ಟ124.80 ಅಡಿ. ಜಲಾಶಯದಲ್ಲಿ 47.598 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. ಇಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.
ಆಲಮಟ್ಟಿ ಜಲಾಶಯ
ಮಹಾರಾಷ್ಟ್ರದಲ್ಲಿ ಮಳೆ ತಗ್ಗಿದ್ದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಒಳ ಹರಿವು ಕಡಿಮೆಯಾಗಿದೆ. ಆದರೂ ಜಲಾಶಯ ತುಂಬಿದೆ. ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ ಹೊತ್ತಿಗೆ :519.60 ಮೀಟರ್ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್. ಜಲಾಶಯದಲ್ಲಿ ಈಗ 123.081 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 19,968 ಕ್ಯೂಸೆಕ್ ಇದ್ದು. ಅಷ್ಟೇ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.
ಕಬಿನಿ ಜಲಾಶಯ
ಕೇರಳದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳ ಹರಿವು ತಗ್ಗಿದೆ. ಜಲಾಶಯಕ್ಕೆ ಬುಧವಾರ 2821 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2850 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 2282.25 ಅಡಿ ನೀರಿದ್ದು, 18.39 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ ಹಾಗೂ 19.52 ಅಡಿ ಸಂಗ್ರಹಕ್ಕೆ ಅವಕಾಶವಿದೆ.
ಹೇಮಾವತಿ ಜಲಾಶಯ
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲೂ 2920.90 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 36.040 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 8167 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 9805 ಕ್ಯೂಸೆಕ್ ನೀರು ಹೊರ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟವು 2922 ಅಡಿ.
ಲಿಂಗನಮಕ್ಕಿ ಜಲಾಶಯ
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೂ 6536 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 7670 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 1816.85 ಅಡಿ ಇದೆ.
ಸೂಪಾ ಜಲಾಶಯ
ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯಕ್ಕೂ 3018 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 3018 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 1832.47 ಅಡಿ ಇದೆ.
ಭದ್ರಾ ಜಲಾಶಯ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯಕ್ಕೂ 7030 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 7030 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 2152 ಅಡಿ ಇದೆ.
ತುಂಗಭದ್ರಾ ಜಲಾಶಯ
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ 44038 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 24881 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 1623.85 ಅಡಿ ಇದೆ.
ಹಾರಂಗಿ ಜಲಾಶಯ
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೂ 1737 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 1391 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 2857.63 ಅಡಿ ಇದೆ.
ಕರ್ನಾಟಕದಲ್ಲಿ ಎಷ್ಟಿದೆ
ಇಡೀ ಕರ್ನಾಟಕ ಜಲಾಶಯಗಳಲ್ಲಿ 102478 ಕ್ಯೂಸೆಕ್ ಒಳ ಹರಿವು ಸದ್ಯ ಇದ್ದು ಹೊರ ಹರಿವಿನ ಪ್ರಮಾಣ 78755ಕ್ಯೂಸೆಕ್ ಇದೆ. ಈಗ 797.94 ಟಿಎಂಸಿ ನೀರು ಸಂಗ್ರಹವಿದೆ. ಕರ್ನಾಟಕದಲ್ಲಿ895.62 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.