Week End Travel: ಕರ್ನಾಟಕದ ಗಡಿಯಲ್ಲಿರುವ ಈ ಜಲಾಶಯವೀಗ ಪ್ರಮುಖ ಪ್ರವಾಸಿ ತಾಣ, ವಾರಾಂತ್ಯಪ್ರವಾಸಕ್ಕೆ ಬೆಸ್ಟ್ photos
- Nugu Reservoir ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ನುಗು ಜಲಾಶಯ ಪ್ರಮುಖ ಪ್ರವಾಸಿ ತಾಣವೂ( Nugu Dam Tourism) ಹೌದು. ಈ ಬಾರಿ ತುಂಬಿರುವ ಜಲಾಶಯ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.
- Nugu Reservoir ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ನುಗು ಜಲಾಶಯ ಪ್ರಮುಖ ಪ್ರವಾಸಿ ತಾಣವೂ( Nugu Dam Tourism) ಹೌದು. ಈ ಬಾರಿ ತುಂಬಿರುವ ಜಲಾಶಯ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.
(1 / 7)
ನುಗು ನದಿಯ ಜಲಾಶಯವೇ ನುಗು ಜಲಾಶಯ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಈ ಜಲಾಶಯ 637 ಮೀಟರ್ ಉದ್ದವಿದ್ದು. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
(2 / 7)
ಮೈಸೂರು ಜಿಲ್ಲೆಯ ಬೀರವಾಳ್ ಗ್ರಾಮದಲ್ಲಿ ಈ ನುಗು ಅಣೆಕಟ್ಟು ನಿರ್ಮಿಸಲಾಗದೆ. ಕಾವೇರಿ ಜಲಾನಯನ ಪ್ರದೇಶದ ಮೂಲಕ ಹರಿಯುವ ನುಗು ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಉದ್ದೇಶದಿಂದ 1959ರಲ್ಲಿ ನಿರ್ಮಿಸಲಾಯಿತು. ಈ ಜಲಾಶಯದ ಹಿಂದೆಯೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನ ಇದ್ದವು
(3 / 7)
ಪಶ್ಚಿಮ ಬೆಟ್ಟಗಳ ಸಾಲಿನ ಹಿನ್ನೋಟದೊಂದಿಗೆ ನೆಲೆಗೊಂಡಿರುವ ನುಗು ಅಣೆಕಟ್ಟು ಸುಂದರವಾದ ದೃಶ್ಯವನ್ನು ನೋಡುಗರಿಗೆ ನೀಡುತ್ತದೆ. ಇಲ್ಲಿನ ಪ್ರಕೃತಿಯ ಸೌಂದರ್ಯ ಮತ್ತು ಎಂಜಿನಿಯರಿಂಗ್ ಅದ್ಭುತಗಳು ಒಟ್ಟಿಗೆ ಸೇರಿ ಜಲಾಶಯದ ರೂಪ ಪಡೆದುಕೊಂಡಿದೆ.
(4 / 7)
ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ಹಾಗೂ ಸರಗೂರು ತಾಲ್ಲೂಕು ನಡುವಿನ ಕಣಿವೆಗಳ ನಡುವೆ ನೀರು ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ.
(5 / 7)
ನುಗು ಜಲಾಶಯ 110 ಅಡಿಯಿದ್ದು, 984 ಚದರ ಮೀ ವಿಸ್ತೀರ್ಣ ಹೊಂದಿದೆ. ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ 5.44 ಟಿಎಂಸಿ ನೀರು ಸಂಗ್ರಹಿಸಬಹುದು ಇದರಲ್ಲಿ 4.89 ಟಿಎಂಸಿ ನೀರನ್ನು ಎಚ್‌ಡಿಕೋಟೆ, ನಂಜನಗೂಡು ತಾಲ್ಲೂಕು ರೈತರ ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.
(6 / 7)
ಮಾನ್ಸೂನ್ ಋತುವಿನಲ್ಲಿ, ನುಗು ಅಣೆಕಟ್ಟು ಮನಮೋಹಕ ನೋಟವನ್ನು ಹುಟ್ಟು ಹಾಕುತ್ತದೆ. ಜಲಾಶಯ ತುಂಬಿದಾಗ ಎರಡು ದ್ವಾರಗಳನ್ನು ತೆರೆಯಲಾಗುತ್ತದೆ. ಧೋ ಎಂದು ಸುರಿಯುವ ನೀರಿನ ವೈಭವ ನೋಡುವುದೇ ಚಂದ.
(7 / 7)
ಮೈಸೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ನುಗು ಜಲಾಶಯ. ಮೈಸೂರಿನಿಂದ ಹ್ಯಾಂಡ್‌ಪೋಸ್ಟ್ ಸರಗೂರು ಮಾರ್ಗವಾಗಿ ಹೊರಟರೆ ಜಲಾಶಯ ನೋಡಬಹುದು.ಮುಖ್ಯ ರಸ್ತೆಯಲ್ಲಿಯೇ ಇರುವುದರಿಂದ ನೀರು ಧುಮ್ಮಿಕ್ಕುವುದನ್ನು ನೋಡಬಹುದು. ಜಲಾಶಯದ ಒಳಗಡೆ ಹೋಗಲು ಪೂರ್ವ ಆನುಮತಿ ಬೇಕು. ಸಮೀಪದಲ್ಲೇ ಕಬಿನಿ, ತಾರಕಾ ಜಲಾಶಯಗಳೂ ಇರುವುದರಿಂದ ನಾಗರಹೊಳೆ ಸಫಾರಿಯೊಂದಿಗೆ ಮೂರು ಜಲಾಶಯ ವೀಕ್ಷಣೆಗೆ ಪ್ರವಾಸ ಹಾಕಿಕೊಳ್ಳಬಹುದು.
ಇತರ ಗ್ಯಾಲರಿಗಳು