logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 14, 2024 : ಬೆಂಗಳೂರಲ್ಲಿ ಬರಲಿದೆ ಡಬ್ಬಲ್‌ ಡೆಕ್ಕರ್‌ ಮೆಟ್ರೋ ಮಾರ್ಗ, 3ನೇ ಹಂತದ ವಿಸ್ತರಣೆಯಲ್ಲಿ ಹೊಸ ಮಾರ್ಗಕ್ಕೆ ಚಾಲನೆಗೆ ಯೋಜನೆ
ಬೆಂಗಳೂರಲ್ಲಿ ಬರಲಿದೆ ಡಬ್ಬಲ್‌ ಡೆಕ್ಕರ್‌ ಮೆಟ್ರೋ ಮಾರ್ಗ, 3ನೇ ಹಂತದ ವಿಸ್ತರಣೆಯಲ್ಲಿ ಹೊಸ ಮಾರ್ಗಕ್ಕೆ ಚಾಲನೆಗೆ ಯೋಜನೆ

Karnataka News Live November 14, 2024 : ಬೆಂಗಳೂರಲ್ಲಿ ಬರಲಿದೆ ಡಬ್ಬಲ್‌ ಡೆಕ್ಕರ್‌ ಮೆಟ್ರೋ ಮಾರ್ಗ, 3ನೇ ಹಂತದ ವಿಸ್ತರಣೆಯಲ್ಲಿ ಹೊಸ ಮಾರ್ಗಕ್ಕೆ ಚಾಲನೆಗೆ ಯೋಜನೆ

Nov 14, 2024 08:19 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Nov 14, 2024 08:19 PM IST

ಕರ್ನಾಟಕ News Live: ಬೆಂಗಳೂರಲ್ಲಿ ಬರಲಿದೆ ಡಬ್ಬಲ್‌ ಡೆಕ್ಕರ್‌ ಮೆಟ್ರೋ ಮಾರ್ಗ, 3ನೇ ಹಂತದ ವಿಸ್ತರಣೆಯಲ್ಲಿ ಹೊಸ ಮಾರ್ಗಕ್ಕೆ ಚಾಲನೆಗೆ ಯೋಜನೆ

  • Bangalore Namma Metro Updates: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತನ್ನ ನಮ್ಮ ಮೆಟ್ರೋ 3 ನೇ ಹಂತದ ವಿಸ್ತರಣೆಯ ಭಾಗವಾಗಿ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
Read the full story here

Nov 14, 2024 07:41 PM IST

ಕರ್ನಾಟಕ News Live: ಕರ್ನಾಟಕದಲ್ಲಿ ನವೆಂಬರ್‌ 20ರಂದು ಮದ್ಯ ವಹಿವಾಟು ಬಂದ್‌; ಅಬಕಾರಿ ಇಲಾಖೆ ವಿರುದ್ದ ಸಿಡಿದೆದ್ದ ಮದ್ಯ ವ್ಯಾಪಾರಿಗಳಿಂದ ಪ್ರತಿಭಟನೆ

  • ಕರ್ನಾಟಕದ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಕಿರುಕುಳ ಖಂಡಿಸಿ ಮದ್ಯ ವ್ಯಾಪಾರಿಗಳು ನವೆಂಬರ್‌ 20ರಂದು ಸೇವೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
Read the full story here

Nov 14, 2024 07:33 PM IST

ಕರ್ನಾಟಕ News Live: Puttur Temple Dress code: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆ: ಸಭ್ಯ, ಶುಭ್ರ ಉಡುಪು ಧರಿಸಿ ಬರಲು ಸೂಚನೆ

  • ದಕ್ಷಿಣ ಕನ್ನಡದ ಪುತ್ತೂರಿನ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆಯೊಂದಿಗೆ ಬರುವಂತೆ ಭಕ್ತರಿಗೆ ಫಲಕ ಅಳವಡಿಸಿ ಸೂಚಿಸಲಾಗುತ್ತಿದೆ.
  • ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Nov 14, 2024 06:36 PM IST

ಕರ್ನಾಟಕ News Live: ಕರೋನ ಖರೀದಿ ಹಗರಣ, ಗಣಿ ಪ್ರಕರಣ ಎಸ್‌ಐಟಿಗೆ ವಹಿಸಲು ನಿರ್ಧಾರ: ಕರ್ನಾಟಕ ಸಚಿವ ಸಂಪುಟ ಕೈಗೊಂಡ ಪ್ರಮುಖ ನಿರ್ಣಯಗಳೇನು

  • ಕರ್ನಾಟಕ ಸಚಿವ ಸಂಪುಟದ ಸಭೆ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ. ಅದರ ವಿವರಗಳು ಇಲ್ಲಿವೆ. 

Read the full story here

Nov 14, 2024 05:26 PM IST

ಕರ್ನಾಟಕ News Live: ಬೆಂಗಳೂರಲ್ಲಿ ಒಳಚರಂಡಿ ಕೊಳವೆಯನ್ನು ಕಾವೇರಿ ಪೈಪ್ ಲೈನ್ ಗೆ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕ; ನೀರು ಹರಿದ ರಭಸಕ್ಕೆ ಏನೆಲ್ಲಾ ಅನಾಹುತ ಆದವು

  • ಬೆಂಗಳೂರಿನಲ್ಲಿ ಪೈಪ್‌ಲೈನ್‌ ಅಳವಡಿಕೆಗೆ ಇನ್ನಿಲ್ಲದ ಕಸರತ್ತು ಮಾಡಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುವುದು ಆಗಾಗ ನಡೆಯುತ್ತಲೇ ಇರುತ್ತದೆ. ಥಣೀ ಸಂದ್ರದಲ್ಲೂ ಇಂತಹುದೇ ಘಟನೆ ನಡೆದು ಅವ್ಯವಸ್ಥೆಯಾಗಿದೆ.
  • ವರದಿ: ಎಚ್.ಮಾರುತಿ.ಬೆಂಗಳೂರು
Read the full story here

Nov 14, 2024 04:33 PM IST

ಕರ್ನಾಟಕ News Live: ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ

  • ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆ ಕಂದಾಯ ಇಲಾಖೆ ಕಳಪೆ ಕಾರ್ಯಸಾಧನೆಗೆ ಅಸಮಾಧಾನ ಹೊರ ಹಾಕಿದ್ದಾರೆ. 
Read the full story here

Nov 14, 2024 03:47 PM IST

ಕರ್ನಾಟಕ News Live: ಕರ್ನಾಟಕದ ನಗರ ಪ್ರದೇಶ ನಿವಾಸಿಗಳು ನದಿ ನೀರು ಕುಡಿಯುತ್ತೀದ್ದೀರಾ, ಸೆಸ್‌ ಪಾವತಿಸಲು ಅಣಿಯಾಗಿ; ಇದು ಅರಣ್ಯ ಸಚಿವರ ಹೊಸ ಪ್ರಸ್ತಾವನೆ

  •  ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗದಿಂದ ಉಗಮವಾಗುವ ನದಿ ನೀರನ್ನು ಸೇವಿಸುವ ನಗರವಾಸಿಗಳಿಗೆ ಸೆಸ್‌ ವಿಧಿಸಿ ಅದನ್ನು ಪಶ್ಚಿಮಘಟ್ಟಗಳ ಪ್ರಗತಿಗೆ ಬಳಸಲು ಅರಣ್ಯ, ಪರಿಸರ ಇಲಾಖೆ ಮುಂದಾಗಿದೆ. ಹೇಗಿರಲಿದೆ ಸೆಸ್‌ ರೂಪ.

Read the full story here

Nov 14, 2024 03:47 PM IST

ಕರ್ನಾಟಕ News Live: ಇಂದಿನಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ ಆರಂಭವಾದ ಕೃಷಿ ಮೇಳಕ್ಕೆ ಜನಸಾಗರ; ಗಮನ ಸೆಳೆದ ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು

  • Bengaluru Krishi Mela 2024: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಕೃಷಿ ಮೇಳ ಆರಂಭಗೊಂಡಿದೆ. ಡಿಜಿಟಲ್ ಕೃಷಿಯ ಪ್ರ್ಯಾತ್ಯಕ್ಷಿಕೆಗಳು ಗಮನ ಸೆಳೆದವು. ನವೆಂಬರ್ 17ರ ತನಕ ಕೃಷಿ ಜಾತ್ರೆ ಇರಲಿದೆ.
Read the full story here

Nov 14, 2024 03:11 PM IST

ಕರ್ನಾಟಕ News Live: ನಾನು ನಿಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಲಾಭ ಪಡೆಯುವುದೇಕೆ; ರಾಜೀವ ಹೆಗಡೆ ಬರಹ

  • ಕರ್ನಾಟಕದಲ್ಲಿ ಬಿಜೆಪಿಯವರೂ ಗ್ಯಾರೆಂಟಿ ಯೋಜನೆಗಳನ್ನು ಪಡೆಯುತ್ತಿಲ್ಲವೇ? ನಾವು ತೆಗೆದುಕೊಳ್ಳುತ್ತಿಲ್ಲ ಇಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ನಾನು ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಲಾಭ ಪಡೆಯುವುದು ಏಕೆಂದರೆ… ಈ ಕುರಿತು ರಾಜೀವ ಹೆಗಡೆ ಬರಹ ಇಲ್ಲಿದೆ ನೋಡಿ..
Read the full story here

Nov 14, 2024 02:15 PM IST

ಕರ್ನಾಟಕ News Live: ನವೆಂಬರ್​ 16ರ ಶನಿವಾರ ಹೆಬ್ಬಾಳ ಸುತ್ತಮುತ್ತ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಇರಬಹುದು ಚೆಕ್ ಮಾಡಿ

  • Power Cut in Bengaluru: ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ನವೆಂಬರ್​ 16ರ ಶನಿವಾರ ಮಧ್ಯಾಹ್ನ 12 ರಿಂದ ಮಧ್ಯಾಹ್ನ 1.30ಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
Read the full story here

Nov 14, 2024 02:04 PM IST

ಕರ್ನಾಟಕ News Live: ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ; ಒಂದು ದಿನದ ವೇತನ ನೀಡಲಿದ್ದಾರೆ ಸರ್ಕಾರಿ ನೌಕರರು

  • ಮಂಡ್ಯದಲ್ಲಿ ಡಿಸೆಂಬರ್‌ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲೇ ವಿಶಾಲ ಜಾಗ ಗುರುತಿಸಲಾಗಿದೆ.
Read the full story here

Nov 14, 2024 02:02 PM IST

ಕರ್ನಾಟಕ News Live: ಕೋರಮಂಗಲದ 3ನೇ ಬ್ಲಾಕ್​ನಲ್ಲಿ ಚದರ ಅಡಿಗೆ 70 ಸಾವಿರ, ಅಂತಹ ಸವಲತ್ತು- ಸೌಲಭ್ಯಗಳು ಏನಿವೆ? ಇಲ್ಲಿ ವಾಸವಿರೋದು ಯಾರೆಲ್ಲಾ?

  • Bengaluru: ಕೋರಮಂಗಲದ 3ನೇ ಬ್ಲಾಕ್​​ನಲ್ಲಿ ಚದರ ಅಡಿಗೆ 70 ಸಾವಿರ ಇದೆ. ಅಂತಹ ಸವಲತ್ತು ಸೌಲಭ್ಯಗಳು ಏನೇನಿವೆ? ಈ ಪ್ರತಿಷ್ಠಿತ ಬಡಾವಣೆಯಲ್ಲಿ ಯಾರೆಲ್ಲಾ ವಾಸವಾಗಿದ್ದಾರೆ ? ಇಲ್ಲಿದೆ ಮಾಹಿತಿ. (ವರದಿ-ಎಚ್‌. ಮಾರುತಿ)
Read the full story here

Nov 14, 2024 09:15 AM IST

ಕರ್ನಾಟಕ News Live: Rain Alert: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ; ಚಳಿಯ ಜೊತೆಗೆ ವರುಣನೂ ಕಾಟ!

  • Karnataka Rains Today: ಕರ್ನಾಟಕದ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಇಂದು (ನವೆಂಬರ್ 14) ಗುಡುಗು ಸಹಿತ ಮಳೆಯಾಗಲಿದೆ. ಅಲ್ಲದೆ, ಮುಂದಿನ 2 ದಿನಗಳ ಕಾಲ ಇದೇ ಮಳೆ ಮುಂದುವರೆಯಲಿದೆ.
Read the full story here

Nov 14, 2024 08:08 AM IST

ಕರ್ನಾಟಕ News Live: ಸಚಿವ ಜಮೀರ್‌ ನಿಂದಿಸಿದ ಪುನೀತ್‌ ಕೆರೆಹಳ್ಳಿ ಬಂಧನ; ಅತ್ತೆ ಮಗನ ಕಾಟಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

  • ಸಚಿವ ಜಮೀರ್‌ ನಿಂದನೆ, ಪುನೀತ್‌ ಕೆರೆಹಳ್ಳಿ ಬಂಧನವಾಗಿದೆ. ಮತ್ತೊಂದು ಪ್ರಕರಣದಲ್ಲಿ ಅತ್ತೆ ಮಗನ ಕಾಟಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಅತ್ಯಾಚಾರದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. (ವರದಿ-ಎಚ್‌.ಮಾರುತಿ)
Read the full story here

    ಹಂಚಿಕೊಳ್ಳಲು ಲೇಖನಗಳು