Karnataka News Live November 30, 2024 : 2026ರಲ್ಲಿ ಶುರುವಾಗಲಿದೆ ಬೆಂಗಳೂರು ಏರ್‌ಪೋರ್ಟ್ ಮೆಟ್ರೋ, ಎರಡು ಹಂತಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ಎಂದಿದೆ ವರದಿ
Nov 30, 2024 09:37 AM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Bengaluru Metro: ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಗುಡ್ ನ್ಯೂಸ್! 2026 ಜೂನ್ ವೇಳೆಗೆ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಏರ್‌ಪೋರ್ಟ್ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ನಂತರ ನಮ್ಮ ಮೆಟ್ರೋ ಕೆಆರ್ ಪುರ-ಹೆಬ್ಬಾಳ ಮಾರ್ಗ ಓಪನ್ ಆಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Bellary Hospital: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಇದಲ್ಲದೇ ದಾವಣಗೆರೆ ಮತ್ತು ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವಿನ ವಿಚಾರವೂ ಈಗ ಸಂದೇಹಕ್ಕೆ ಕಾರಣವಾಗಿದೆ. ಬಳ್ಳಾರಿ ಘಟನೆಗೆ ಕಳಪೆ ಐವಿ ಕಾರಣ ಎನ್ನಲಾಗುತ್ತಿದ್ದು, ನೀವು ತಿಳಿಯಬೇಕಾದ 10 ಅಂಶಗಳಿವು
ಹಿಂಗಾರು ಮಳೆಯಿಂದ ಚಿತ್ರದುರ್ಗ, ದಾವಣಗೆರೆ ಸಹಿತ ಹಲವು ಜಿಲ್ಲೆಗಳಲ್ಲಿ ಆದ ಬೆಳೆ ನಷ್ಟದ ಹಣವನ್ನು ರೈತರ ಖಾತೆಗಳಲ್ಲಿ ಮುಂದಿನ ವಾರದಲ್ಲಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.
- Mangalore Pilikula Nisargadhama: ಮಂಗಳೂರಿನ ಹೊರ ವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
Karnataka Weather: ಕರ್ನಾಟಕದಲ್ಲಿ ಇಂದು (ನವೆಂಬರ್ 30) ಮಿಶ್ರ ಹವಾಮಾನ ಇರಲಿದೆ. ಬೆಂಗಳೂರು, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಗುರ ಅಥವಾ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ಮತ್ತು ವಿಪರೀತ ಚಳಿ ದಾಖಲಾಗಿದೆ. ಕರ್ನಾಟಕ ಹವಾಮಾನ ಇಂದು ಹೀಗಿದೆ.