Karnataka News Live October 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ
Oct 10, 2024 05:45 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ಅಂತಿಮಗೊಂಡು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
- ವರದಿ: ಎಚ್.ಮಾರುತಿ,ಬೆಂಗಳೂರು
ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಜಸ್ಟೀಸ್ ಮೈಕಲ್ ಡಿ ಕುನ್ಹಾ ನೀಡಿರುವ ವರದಿ ಆಧರಿಸಿ ಸಂಪುಟ ಉಪಸಮಿತಿ ಹಾಗೂ ಎಸ್‌ಐಟಿ ರಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
- ಕರ್ನಾಟಕ ಸರ್ಕಾರವೂ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಹೊಸ ಅಧಿಕಾರಿಗಳ ನಿಯೋಜನೆಯಾಗಿದೆ.
- Cauvery Water to Bangalore: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಹಾಗೂ ಬೆಂಗಳೂರಿನ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳ್ಳಲಿದೆ.
- ಕರ್ನಾಟಕದಲ್ಲಿ ಅರಣ್ಯ ಒತ್ತುವರಿದಾದರಿಗೆ ಅರಣ್ಯ ಇಲಾಖೆ ಚಾಟಿ ಬೀಸಿದೆ. ಹಾಗೆಂದು ಸಣ್ಣ ಒತ್ತುವರಿದಾರರಿಗೆ ತೊಂದರೆ ಕೊಡೋಲ್ಲ. ದೊಡ್ಡ ಒತ್ತುವರಿದಾರರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
- IRCTC Balaji Darshan Package ಬೆಂಗಳೂರಿನಿಂದ ತಿರುಪತಿ ತಿರುಮಲ ಬಾಲಾಜಿ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ( IRCTC ) ನಿರ್ವಹಿಸುತ್ತಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರಲ್ಲೀಗ ಹಬ್ಬದ ಸಂಭ್ರಮ, ಸಡಗರ. ಆದಾಗ್ಯೂ ಹೂವು, ಹಣ್ಣು, ತರಕಾರಿ ದರ ಏರಿಕೆ ಬೆಂಗಳೂರಿಗರ ಸಡಗರಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ. ಟೊಮೆಟೋ ದರ 100 ರೂಪಾಯಿ ಆಸುಪಾಸಲ್ಲಿದ್ದರೆ ಈರುಳ್ಳಿ, ಬೆಳ್ಳುಳ್ಳಿ ದರವೂ ಹೆಚ್ಚಳವಾಗಿದೆ. ಮಳೆ ಏರುಪೇರಾಗಿರುವ ಕಾರಣ ಇಳುವರಿಗೆ ಪೆಟ್ಟುಬಿದ್ದಿದೆ. ಹಬ್ಬಕ್ಕೆ ಮೊದಲು ತರಕಾರಿ ದರ ಹೇಗಿದೆ ಎಂದು ತಿಳಿಯಲು ಅತ್ತ ನೋಟ ಬೀರೋಣ.
- ಕರಾವಳಿಯ ಮಂಗಳೂರಿನಿಂದ ತಿರುಪತಿ ಮಾರ್ಗವಾಗಿ ಕಾಚಿಗುಡಕ್ಕೆ ತೆರಳುವ ರೈಲು ಇನ್ನು ಮುಂದೆ ಮುರ್ಡೇಶ್ವರ, ಕುಂದಾಪುರ, ಉಡುಪಿಗೂ ವಿಸ್ತರಣೆಯಾಗಲಿದೆ. ಇದರಿಂದ ಈ ಭಾಗದವರು ತಿರುಪತಿಗೆ ಹೋಗಲು ನೆರವಾಗಲಿದೆ.
- ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ನವೆಂಬರ್26ರಿಂದ ಅಗ್ನಿವೀರ್ ನೇಮಕಾತಿ ರ್‍ಯಾಲಿಯು ನಡೆಯಲಿದ್ದು. ಉತ್ತರ ಕರ್ನಾಟಕದ ಆರು ಜಿಲ್ಲೆಯವರು ಭಾಗಿಯಾಗಬಹುದು.
ಆಯುಧ ಪೂಜೆ, ವಿಜಯದಶಮಿ ಆಚರಣೆಗಾಗಿ ಬೆಂಗಳೂರು ಸಜ್ಜಾಗಿದೆ. ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು, ಬೂದುಗುಂಬಳದ ಬೆಲೆ ಏರಿದ್ದು, ಬಡವರಿಗೆ ಇವೆಲ್ಲವೂ ಗಗನಕುಸುಮವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವು, ಹಣ್ಣು, ಬೂದುಗುಂಬಳ ದರ ಈಗ ಹೇಗಿದೆ ನೋಡೋಣ.