ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್ಗಳಿಗೆ ಅಡ್ಮಿಷನ್ ಆರಂಭ; ಕೊನೆಯ ದಿನಾಂಕ, ಶುಲ್ಕದ ವಿವರ ಇಲ್ಲಿದೆ
Aug 30, 2024 10:12 AM IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್ಗಳಿಗೆ ಅಡ್ಮಿಷನ್ ಆರಂಭ
- Bengaluru North University: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಇದರ ವ್ಯಾಪ್ತಿಗೆ ಸೇರುವ ಕಾಲೇಜುಗಳಲ್ಲಿ ಪಿಜಿ ಕೋರ್ಸ್ಗಳಿಗೆ ಆರ್ಜಿ ಆಹ್ವಾನಿಸಲಾಗಿದೆ.
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (Bengaluru North University) ಸ್ನಾತಕೋತ್ತರ ಕೇಂದ್ರ ಮತ್ತು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರುವ ಕಾಲೇಜುಗಳಲ್ಲಿ 2024-2025ರ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 9. ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಎಲ್ಲಿಲ್ಲಿ? ಯಾವ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ವಿವರ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕೋರ್ಸ್ಗಳು
ಕಲಾ ವಿಭಾಗ - ಎಂಎ: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಎಸ್ಡಬ್ಲ್ಯೂ.
ವಿಜ್ಞಾನ ವಿಭಾಗ - ಎಂಎಸ್ಸಿ: ಗಣಿತಶಾಸ್ತ್ರ, ಗಣಕ ವಿಜ್ಞಾನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (MLYSc), ಸಸ್ಯಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ.
ವಾಣಿಜ್ಯ ವಿಭಾಗ: ಎಂ.ಕಾಂ.
ಬೆಂ.ಉ.ವಿವಿಗೆ ಒಳಪಡುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸುಗಳ ವಿವರ
ಕಲಾ ವಿಭಾಗ - ಎಂಎ: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಎಸ್ಡಬ್ಲ್ಯೂ.
ವಿಜ್ಞಾನ ವಿಭಾಗ - ಎಂಎಸ್ಸಿ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿ ಶಾಸ್ತ್ರ, ಗಣಕ ವಿಜ್ಞಾನ, ಜೀವ ರಸರಾಯನಶಾಸ್ತ್ರ, ಜೀವತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ, ಆಡಿಯೋಲಜಿ, ಸ್ಫೀಚ್ ಲಾಂಗ್ವೇಜ್ ಪೆಥಾಲಜಿ, ಮನಃಶಾಸ್ತ್ರ, ಕೌನ್ಸೆಲಿಂಗ್ ಸೈಕಾಲಜಿ.
ವಾಣಿಜ್ಯ ವಿಭಾಗ: ಎಂ.ಕಾಂ
ಶಿಕ್ಷಣ ವಿಭಾಗ: ಎಂ.ಎಡಿ
ಅರ್ಜಿಯನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು
1. ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಅರ್ಜಿಗಳನ್ನು ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು UUCMS ವೆಬ್ಸೈಟ್ (https://uucms.karnataka.gov.in/login/index) ಮೂಲಕವೇ ಸಲ್ಲಿಸಬೇಕು.
2. ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ಬಯಸಿದ್ದಲ್ಲಿ, ಪ್ರತಿಯೊಂದು ಕೋರ್ಸಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆಯಾ ಕೋರ್ಸಿನ ಅರ್ಜಿಗಳ ಜೊತೆ ಅರ್ಜಿ ಶುಲ್ಕವನ್ನೂ ಪ್ರತ್ಯೇಕವಾಗಿ ಪಾವತಿಸಬೇಕು.
3. ಅರ್ಜಿ ಶುಲ್ಕ 260 ರೂಪಾಯಿ ಆನ್ಲೈನ್ ಮೂಲಕವೇ uucms Payment linkನಲ್ಲಿ ಪಾವತಿಸಬೇಕು. (ಪರಿಶಿಷ್ಟ ಜಾತಿ/ಪಂಗಡ ಹಾಗೂ ಪ್ರವರ್ಗ-1, ವಿಶೇಷ ಚೇತನ, ತೃತಿಯ ಲಿಂಗಿಗಳಿಗೆ ಶುಲ್ಕ 130 ರೂಪಾಯಿ)
4. ಪ್ರವೇಶಕ್ಕೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ನಿಯಮಗಳು, ಸೀಟ್ ಮ್ಯಾಟ್ರಿಕ್ಸ್, ಶುಲ್ಕದ ಮಾಹಿತಿ ಮತ್ತು ಇತರೆ ಮಾಹಿತಿಗಳನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವೆಬ್ಸೈಟ್ www.bnu.karnataka.gov.in ನಲ್ಲಿ ನೋಡಬಹುದು.
5. 2024-25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಅರ್ಜಿ ಸಲ್ಲಿಕೆ ಈಗಾಗಲೇ (ಆಗಸ್ಟ್ 28ರಿಂದ) ಆರಂಭವಾಗಿದ್ದು, ಯಾವುದೇ ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕೊನೆಯ ದಿನಾಂಕವಾಗಿದೆ. 200 ರೂಪಾಯಿ ದಂಡದ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11ರವರೆಗೂ ಅವಕಾಶ ಇದೆ. ಹಾಗೂ ಮುದ್ರಿತ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನಾಂಕ.
6. UUCMS ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಮಾತ್ರ ಸೀಟುಗಳ ಆಯ್ಕೆಗಾಗಿ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364710762, 8553658762, 9071078023, 7892087298 (UUCMS).