logo
ಕನ್ನಡ ಸುದ್ದಿ  /  ಜೀವನಶೈಲಿ  /  Best Recharge Plans: ಮೊಬೈಲ್‌ಗೆ ಅತ್ಯುತ್ತಮ ರಿಚಾರ್ಜ್‌ ಪ್ಲ್ಯಾನ್‌ ಯಾವುದು, ಜಿಯೋ ಏರ್‌ಟೆಲ್‌ ಬಿಎಸ್‌ಎನ್‌ಎಲ್‌ ಪ್ಲ್ಯಾನ್‌ಗಳ ವಿವರ

Best Recharge Plans: ಮೊಬೈಲ್‌ಗೆ ಅತ್ಯುತ್ತಮ ರಿಚಾರ್ಜ್‌ ಪ್ಲ್ಯಾನ್‌ ಯಾವುದು, ಜಿಯೋ ಏರ್‌ಟೆಲ್‌ ಬಿಎಸ್‌ಎನ್‌ಎಲ್‌ ಪ್ಲ್ಯಾನ್‌ಗಳ ವಿವರ

Praveen Chandra B HT Kannada

Aug 31, 2023 12:08 PM IST

google News

Best Recharge Plans: ಮೊಬೈಲ್‌ಗೆ ಅತ್ಯುತ್ತಮ ರಿಚಾರ್ಜ್‌ ಪ್ಲ್ಯಾನ್‌ ಯಾವುದು

    • Best Recharge Plans Today: ಈಗ ಮೊಬೈಲ್‌ ರಿಚಾರ್ಜ್‌ ಪ್ಲಾನ್‌ ಎಂದರೆ ಕಾಲ್‌, ಇಂಟರ್‌ನೆಟ್‌ ಡೇಟಾ ಮಾತ್ರವಲ್ಲದೆ ಡಿಸ್ನಿ ಹಾಟ್‌ಸ್ಟಾರ್‌ ನೆಟ್‌ಫ್ಲಿಕ್ಸ್‌ ಇತ್ಯಾದಿ ಪ್ರಯೋಜನಗಳನ್ನೂ ಜನರು ಹುಡುಕುತ್ತಿದ್ದಾರೆ. ಸೆಪ್ಟೆಂಬರ್‌ 2023ರ ಬೆಸ್ಟ್‌ ಮೊಬೈಲ್‌ ರಿಚಾರ್ಜ್‌ ಪ್ಲ್ಯಾನ್‌ಗಳ ವಿವರ ಇಲ್ಲಿದೆ.
Best Recharge Plans: ಮೊಬೈಲ್‌ಗೆ ಅತ್ಯುತ್ತಮ ರಿಚಾರ್ಜ್‌ ಪ್ಲ್ಯಾನ್‌ ಯಾವುದು
Best Recharge Plans: ಮೊಬೈಲ್‌ಗೆ ಅತ್ಯುತ್ತಮ ರಿಚಾರ್ಜ್‌ ಪ್ಲ್ಯಾನ್‌ ಯಾವುದು

Best Recharge Plans September 2023: ಮೊಬೈಲ್‌ ರಿಚಾರ್ಜ್‌ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಸಿಮ್‌ ಬಳಸದೆ ಇದ್ದರೂ ದೊಡ್ಡ ಮೊತ್ತದ ರಿಚಾರ್ಜ್‌ ಮಾಡುವುದು ಅನಿವಾರ್ಯ. ಈಗ ಏರ್‌ಟೆಲ್‌, ಜಿಯೋ, ವೊಡಾಫೋನ್‌ ಐಡಿಯಾ, ಬಿಎಸ್‌ಎನ್‌ಎಲ್‌ ಇತ್ಯಾದಿಗಳು ಸ್ಪರ್ಧಾತ್ಮಕ ದರದಲ್ಲಿ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ನೀಡುತ್ತವೆ. ಸದ್ಯ ಯಾವ ಮೊಬೈಲ್‌ ರಿಚಾರ್ಜ್‌ ಪ್ಲ್ಯಾನ್‌ ಉತ್ತಮವಾಗಿದೆ ಎಂದು ನೋಡೋಣ.

ಏರ್‌ಟೆಲ್‌ ರಿಚಾರ್ಜ್‌ ಯೋಜನೆಗಳು ( Airtel Best Recharge Plans)

  • ಪ್ರತಿದಿನ 2.5 ಜಿಬಿ ಇಂಟರ್‌ನೆಟ್‌ ಒಂದು ವರ್ಷದ ವ್ಯಾಲಿಡಿಟಿ ಬೇಕು ಎಂದಾದರೆ 3359 ರೂಪಾಯಿ ಪ್ಲ್ಯಾನ್‌ ಹಾಕಿಸಿಕೊಳ್ಳಬಹುದು.
  • ದಿನಕ್ಕೆ 2 ಜಿಬಿ, 365 ದಿನ ವ್ಯಾಲಿಡಿಟಿ: ದರ 2999 ರೂಪಾಯಿ
  • 24 ಜಿಬಿ ಡೇಟಾ, 365 ದಿನ ವ್ಯಾಲಿಡಿಟಿ ಪ್ಲ್ಯಾನ್‌ಗೆ 1799 ರೂಪಾಯಿ ಇದೆ.
  • 84 ದಿನ ವ್ಯಾಲಿಡಿಟಿ, ಪ್ರತಿದಿನ 2.5 ಜಿಬಿ ಡೇಟಾಕ್ಕೆ 999 ರೂಪಾಯಿ ಇದೆ.
  • ಪ್ರತಿದಿನ 1.5 ಜಿಬಿ ಡೇಟಾ, 56 ದಿನ ವ್ಯಾಲಿಡಿಟಿಗೆ 479 ರೂಪಾಯಿ ಇದೆ.
  • 839 ರೂಪಾಯಿಯ ಪ್ಲ್ಯಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಇದ್ದು, 84 ದಿನ ವ್ಯಾಲಿಡಿಟಿ ಹೊಂದಿದೆ. 289 ದಿನದ ಪ್ಲ್ಯಾನ್‌ನಲ್ಲಿ ಉಚಿತವಾಗಿ ಝೀ5 ಪ್ರಿಮಿಯಂ ದೊರಕುತ್ತದೆ.

ಜಿಯೋ ಅತ್ಯುತ್ತಮ ಪ್ಲ್ಯಾನ್‌ಗಳು

1,066 ರೂಪಾಯಿ ಪ್ಲ್ಯಾನ್‌: 84 ದಿನಗಳಿಗೆ ಪ್ರತಿನಿತ್ಯ 2 ಜಿಬಿ ಡೇಟಾ, ಐದು ಜಿಬಿ ಹೆಚ್ಚುವರಿ ಡೇಟಾ ಇರುತ್ತದೆ.

299 ರೂಪಾಯಿ ಪ್ಲ್ಯಾನ್‌: 28 ದಿನಗಳಿಗೆ ಪ್ರತಿನಿತ್ಯ 2 ಜಿಬಿ ಡೇಟಾ

2,879ರ ವಾರ್ಷಿಕ ಪ್ಲ್ಯಾನ್‌: ಪ್ರತಿನಿತ್ಯ 2-4 ಜಿಬಿ ಡೇಟಾ, 365 ದಿನಗಳವರೆಗೆ.

ಜಿಯೋ ನೆಟ್‌ಫ್ಲಿಕ್ಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಕೆಲವು ನೆಟ್‌ಫ್ಲಿಕ್ಸ್‌ ಉಚಿತ ಚಂದಾದಾರಿಕೆ ಇರುವ ಪ್ಲ್ಯಾನ್‌ಗಳನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌ ಅತ್ಯುತ್ತಮ ಪ್ಲ್ಯಾನ್‌ಗಳು

28 ದಿನಗಳಿಗೆ 1 ಜಿಬಿ ಹೈಸ್ಪೀಡ್‌ ಡೇಟಾದ 184 ರೂಪಾಯಿ, 185, 186 ರೂಪಾಯಿ ಪ್ಲ್ಯಾನ್‌ಗಳನ್ನು ಬಿಎಸ್‌ಎನ್‌ಎಲ್‌ ಹೊಂದಿದೆ.

ಇವು ಉದಾಹರಣೆಯಾಗಿ ಕೆಲವು ಪ್ರಮುಖ ಪ್ಲ್ಯಾನ್‌ಗಳ ವಿವರ. ಪ್ರತಿಯೊಂದು ಮೊಬೈಲ್‌ ನೆಟ್‌ವರ್ಕ್‌ ಕಂಪನಿಯು ಹತ್ತು ಹಲವು ಪ್ಲ್ಯಾನ್‌ಗಳನ್ನು ಹೊಂದಿದೆ. ಇವುಗಳಲ್ಲಿ ಈ ಪ್ಲ್ಯಾನ್‌ಗಳು ಹೆಚ್ಚು ಜನಪ್ರಿಯತೆ ಪಡೆದಿದೆ. ನೀವು ಪ್ರತಿನಿತ್ಯ ಬಳಸುವ ಇಂಟರ್‌ನೆಟ್‌, ಕರೆ ಇತ್ಯಾದಿಗಳಿಗೆ ತಕ್ಕಂತೆ ರೀಚಾರ್ಜ್‌ ಮಾಡಿವೆ. ಜಿಯೋ, ಏರ್‌ಟೆಲ್‌ ಇತ್ಯಾದಿಗಳ ಡೇಟಾ ಸ್ಪೀಡ್‌ ಉತ್ತಮವಾಗಿದೆ. ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಸ್ಪೀಡ್‌ ಇನ್ನಷ್ಟು ಉತ್ತಮವಾಗಬೇಕಿದೆ, ಆದರೆ, ಪ್ರತಿನಿತ್ಯದ ಸಾಮಾನ್ಯ ಬಳಕೆಗೆ ಇಷ್ಟು ಇಂಟರ್‌ನೆಟ್‌ ಸ್ಪೀಡ್‌ ಸಾಕು ಎನ್ನುವವರಿಗೆ ಬಿಎಸ್‌ಎನ್‌ಎಲ್‌ ಅಚ್ಚುಮೆಚ್ಚಿನ ಆಯ್ಕೆಯಾಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ