Brain Teaser: ನಿಮ್ಮ ಮೆದುಳಿಗೆ ಕಸರತ್ತು, 11 + 11 = 4, 12 + 12 = 9, 13 + 13 = ? ಈ ಅಂಕಗಣಿತದ ಒಗಟು ಬಿಡಿಸಿ ನೋಡೋಣ
Nov 25, 2024 04:37 PM IST
Brain Teaser: ನಿಮ್ಮ ಮೆದುಳಿಗೆ ಕಸರತ್ತು, 11 + 11 = 4, 12 + 12 = 9, 13 + 13 = ?
- Brain Teaser: ಮೆದುಳಿಗೆ ಕಸರತ್ತು ನೀಡುವ, ಬುದ್ದಿವಂತಿಕೆಗೆ ಸವಾಲು ಒಡ್ಡುವ ಗಣಿತದ ಒಗಟುಗಳನ್ನು ಬಿಡಿಸಲು ಆಸಕ್ತಿ ನಿಮಗೆ ಇರಬಹುದು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬ್ರೇನ್ ಟೀಸರ್ ಇಲ್ಲಿದೆ. ಇದನ್ನು ಬಗೆಹರಿಸಲು ಯತ್ನಿಸಿ.
Brain teaser: ಮನಸ್ಸಿನ ಏಕಾಗ್ರತೆ ಹೆಚ್ಚಿಸಿಕೊಳ್ಳಲು, ಬುದ್ಧಿವಂತಿಕೆ, ಯೋಚನಾ ಕೌಶಲ ಹಚ್ಚಿಸಿಕೊಳ್ಳಲು, ಮೆದುಳಿನ ಜ್ಞಾನವನ್ನು ಹರಿತಗೊಳಿಸಲು ಸಾಕಷ್ಟು ಜನರು ಬ್ರೇನ್ ಟೀಸರ್ ಅಥವಾ ಒಗಟುಗಳನ್ನು ಬಿಡಿಸಲಯ ಯತ್ನಿಸುತ್ತಾರೆ. ಇಂತಹ ಸವಾಲುಗಳು ಮನರಂಜನೆ ನೀಡುವುದು ಮಾತ್ರವಲ್ಲದೆ ನಮ್ಮ ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾವು ಜಿಮ್ ಅಥವಾ ಯೋಗದ ಮೂಲಕ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುತ್ತವೆ. ಇದೇ ರೀತಿ ಒಗಟುಗಳು ನಮ್ಮ ಮೆದುಳಿಗೆ ಕಸರತ್ತು ನೀಡುವ ಜನಪ್ರಿಯ ಮಾರ್ಗವಾಗಿದೆ. ಆಗಾಗ, ಬಿಡುವಿದ್ದಾಗ ಒಗಟು, ಸುಡುಕು, ಪದಬಂಧ ಮುಂತಾದವುಗಳನ್ನು ಬಿಡಿಸಲು ಯತ್ನಿಸಿ. ಇತ್ತೀಚೆಗೆ ಎಕ್ಸ್ (ಹಳೆಯ ಟ್ವಿಟ್ಟರ್)ನಲ್ಲಿ ವೈರಲ್ ಆಗಿರುವ ಬ್ರೇನ್ ಟೀಸರ್‌ವೊಂದನ್ನು ಇಲ್ಲಿ ನೀಡಲಾಗಿದೆ. ಇದನ್ನು ಬಿಡಿಸಲು ಯತ್ನಿಸಿ.
ಸೋಷಿಯಲ್ ಮೀಡಿಯಾದಲ್ಲಿ ಬ್ರೇನಿ ಬಿಟ್ಸ್ ಹಬ್ ಪೋಸ್ಟ್ ಮಾಡಿದ ಬ್ರೈನ್ ಟೀಸರ್ ಹೀಗಿದೆ:
"11 + 11 = 4, 12 + 12 = 9, 13 + 13 = ?"
ಸರಳವಾಗಿ ಕಾಣುವ ಈ ಸಮೀಕರಣವು ತಕ್ಷಣವೇ ಗಮನವನ್ನು ಸೆಳೆಯುತ್ತದೆ. ವೀಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತದೆ. ಸಂಖ್ಯೆಗಳು ಮೊದಲ ನೋಟದಲ್ಲಿ ಸಾಮಾನ್ಯ ಒಗಟಿನಂತೆ ಕಾಣಿಸುತ್ತದೆ. ಆದರೆ, ಬಳಿಕ ಇದು ತುಸು ಕಷ್ಟವಿದೆ ಎಂದೆನಿಸಿಬಹುದು. ಬುದ್ಧಿವಂತರು ತಕ್ಷಣ ಉತ್ತರಿಸಿಬಿಡಬಹುದು. ಮೊದಲ ಎರಡು ಉತ್ತರಗಳು 4 ಮತ್ತು 9 ಎಂದಿವೆ. ಹಾಗಾದರೆ, 13 + 13 = ? ಎಷ್ಟು ಎಂಬ ಪ್ರಶ್ನೆ ಯೋಚನೆಗೆ ಹಚ್ಚುತ್ತದೆ. ನೀವು ಪ್ರಯತ್ನಿಸಿ, ಉತ್ತರ ಗೊತ್ತಾಗದೆ ಇದ್ದರೆ ಮುಂದೆ ಓದಿ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬ್ರೇನ್ ಟೀಸರ್
ಈ ಬ್ರೇನ್ ಟೀಸರ್‌ಗೆ ಸಾಕಷ್ಟು ಜನರು ಉತ್ತರಿಸಿದ್ದಾರೆ. ಬಹುತೇಕರು ಭಿನ್ನರಾಶಿಗಳನ್ನು ಸರಳಗೊಳಿಸಿ 16 ಉತ್ತರ ಎಂದಿದ್ದಾರೆ. ಈ ಉತ್ತರ ಸರಿಯೇ ಎಂದು ನೀವು ಆಲೋಚಿಸಿ.
11 + 11 = 4
Simplifying:
= (1+1) x (1+1)
= 2 x 2
= 4
12 + 12 = 9
Simplifying:
= (1+2) x (1+2)
= 3 x 3
= 9
13 + 13 = ?
Simplifying:
= (1+3) x (1+3)
= 4 x 4
= 16
5=15, 7=21 ಆದ್ರೆ 10= ಎಷ್ಟು?
ಇದು ಇನ್ನೊಂದು ಫಜಲ್. ಈ ಬ್ರೈನ್ ಟೀಸರ್‌ನಲ್ಲಿ ಇರುವುದು ಒಂದು ಸಿಂಪಲ್ ಪ್ರಶ್ನೆ. ಒಂದು ವೇಳೆ 5=15, 7=21 ಆದ್ರೆ 10= ಎಷ್ಟು ಎಂದು ನೀವು ಕಂಡು ಹಿಡಿಯಬೇಕು. Brainy Bits Hub ಎನ್ನುವ ಎಕ್ಸ್ ಪುಟದಲ್ಲಿ ಶೇರ್ ಮಾಡ ಬ್ರೈನ್ ಟೀಸರ್ ಇದಾಗಿದೆ. ಈ ಬ್ರೈನ್ ಟೀಸರ್ ಕೊಂಚ ಟ್ರಿಕ್ಕಿಯಾಗಿದೆ. ಆದರೆ ಉತ್ತರ ಕಂಡುಹಿಡಿಯುವುದು ಖಂಡಿತ ಕಷ್ಟವಲ್ಲ. ಗಣಿತದ ಸೂತ್ರಗಳನ್ನ ಅರಿತವರಿಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವುದು ಖಂಡಿತ ಕಷ್ಟ ಎನ್ನಿಸುವುದಿಲ್ಲ. ಈ ಬ್ರೇನ್ ಟೀಸರ್ ಕುರಿತು ತಿಳಿಯಲು ಈ ಲೇಖನ ಓದಿ.