logo
ಕನ್ನಡ ಸುದ್ದಿ  /  ಜೀವನಶೈಲಿ  /  Sudha Murty: ಶುದ್ಧ ಸಸ್ಯಾಹಾರಿ ಸುಧಾ ಮೂರ್ತಿ; ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನಲ್ಲ ಇನ್‌ಫೋಸಿಸ್ ಮುಖ್ಯಸ್ಥೆ, ಹೀಗಿದೆ ಅವರ ಆಹಾರ ಪದ್ಧತಿ

Sudha Murty: ಶುದ್ಧ ಸಸ್ಯಾಹಾರಿ ಸುಧಾ ಮೂರ್ತಿ; ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನಲ್ಲ ಇನ್‌ಫೋಸಿಸ್ ಮುಖ್ಯಸ್ಥೆ, ಹೀಗಿದೆ ಅವರ ಆಹಾರ ಪದ್ಧತಿ

Meghana B HT Kannada

Jul 25, 2023 08:00 PM IST

google News

ಇನ್‌ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ

    • Infosys chief Sudha Murty: ಫುಡ್​ ಬ್ಲಾಗರ್​ ಕುನಾಲ್ ವಿಜ್ಜಯಕರ್ ನಡೆಸಿಕೊಡುವ ‘ಖಾನೇ ಮೇ ಕ್ಯಾ ಹೈ?’ ಶೋನಲ್ಲಿ ಇತ್ತೀಚೆಗೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು. ಇದರಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡ ಅವರು ತಾವು ಶುದ್ಧ ಸಸ್ಯಾಹಾರಿಯಾಗಿರುವ ಕಾರಣ ವಿದೇಶಗಳಿಗೆ ತೆರಳುವಾಗ ಕೆಲವು ಆಹಾರ ಪದಾರ್ಥಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ ಹೇಳಿದ್ದಾರೆ.
ಇನ್‌ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ
ಇನ್‌ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ

ಲೇಖಕಿ, ಜನೋಪಕಾರಿಯೂ ಆಗಿರುವ ಇನ್‌ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ (72) ಅವರು ಆಹಾರಪ್ರೇಮಿ, ಆದರೆ ಶುದ್ಧ ಸಸ್ಯಾಹಾರಿ. ಅವರು ಮೊಟ್ಟೆ, ಬೆಳ್ಳುಳ್ಳಿ ಕೂಡ ತಿನ್ನಲ್ಲ. ಈ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಖ್ಯಾತ ಫುಡ್​ ಬ್ಲಾಗರ್​ ಕುನಾಲ್ ವಿಜ್ಜಯಕರ್ ನಡೆಸಿಕೊಡುವ ‘ಖಾನೇ ಮೇ ಕ್ಯಾ ಹೈ?’ ಶೋನಲ್ಲಿ ಇತ್ತೀಚೆಗೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು. ಇದರಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡ ಅವರು ತಾವು ಶುದ್ಧ ಸಸ್ಯಾಹಾರಿಯಾಗಿರುವ ಕಾರಣ ವಿದೇಶಗಳಿಗೆ ತೆರಳುವಾಗ ಕೆಲವು ಆಹಾರ ಪದಾರ್ಥಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ ಹೇಳಿದ್ದಾರೆ.

ಭಾರತವು ಒಂದು ದೇಶವಲ್ಲ, ಆಹಾರ ಸೇರಿದಂತೆ ಅದರ ವೈವಿಧ್ಯತೆಯ ಕಾರಣದಿಂದಾಗಿ ಅದೊಂದು ಖಂಡ. ಪ್ರತಿ 150 ಕಿಲೋ ಮೀಟರ್​ಗೆ ಆಹಾರ, ರುಚಿ, ಉಡುಪುಗಳು ಮತ್ತು ಮಾತನಾಡುವ ರೀತಿ ಬದಲಾಗುತ್ತದೆ. ಉದಾಹರಣೆಗೆ ಕರ್ನಾಟಕಕ್ಕೆ ಹೋಲಿಸಿದರೆ ಹುಬ್ಬಳ್ಳಿಯ ರುಚಿಯೇ ಬೇರೆ. ಮೈಸೂರು, ಬೆಂಗಳೂರು, ಕುದುರೆಮುಖ, ಮಡಿಕೇರಿ ಮುಂತಾದೆಡೆ ಅಭಿರುಚಿಗಳು ಒಂದಕ್ಕೊಂದು ವಿಭಿನ್ನವಾಗಿವೆ. ಭಾರತದಲ್ಲಿ, ನಮ್ಮಲ್ಲಿ ಹಲವು ವಿಧಗಳು, ಹಲವು ವಿಧಾನಗಳು, ಹಲವು ಕಾಂಬಿನೇಶನ್​​ಗಳಿವೆ ಎಂದರು.

ನಾನು ಕೆಲಸ ವಿಚಾರದಲ್ಲಿ ರಿಸ್ಕ್​ ತೆಗೆದುಕೊಳ್ಳುತ್ತೇವೆ, ಆದ್ರೆ ಫುಡ್​ ವಿಚಾರದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ. ನಾನು ಮೊಟ್ಟೆ ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ಹೋಟೆಲ್​, ರೆಸ್ಟಾರೆಂಟ್​ಗಳಲ್ಲಿ ನಾನ್​ವೆಜ್​ಗೆ ಬಳಸಿದ ಸೌಟು (ಹುಟ್ಟು) ಬಳಸುತ್ತಾರೆ ಎಂದು ನನಗೆ ಭಯವಾಗುತ್ತದೆ. ಹೀಗಾಗಿ ​​ಹೊರಗಡೆ ಹೋದಾಗ ಸಸ್ಯಹಾರಿ ರೆಸ್ಟಾರೆಂಟ್​ಗೆ ಹೋಗುತ್ತೇನೆ ಎಂದರು.

60 ವರ್ಷಗಳ ಹಿಂದೆ ಹೊರಗಡೆ ಆಹಾರ ತಿನ್ನಲು ಇಷ್ಟಪಡದ ನನ್ನಜ್ಜಿಯನ್ನು ನಾನು ಯಾವಾಗಲೂ ಕಾಲೆಳೆಯುತ್ತಿದ್ದೆ. ಆದರೆ ಈಗ ನಾನೂ ಅವರಂತೆಯೇ ಆಗಿದ್ದೀನಿ. ನಾನು ಆಹಾರಪ್ರೇಮಿ, ಆದರೆ ಒಳ್ಳೆಯ ಶೆಫ್​ ಅಲ್ಲ. ನನಗೆ ಕೇವಲ ಬೇಸಿಕ್ ಕುಕಿಂಗ್​ ಮಾತ್ರ ಗೊತ್ತು. ಹಾಗಂತ ನನಗೆ ಅಡುಗೆ ಮಾಡಲು ಇಷ್ಟ ಇಲ್ಲ ಅಂತ ಅಲ್ಲ, ಆದ್ರೆ ನನಗೆ ಚೆನ್ನಾಗಿ ಮಾಡಲು ತಿಳಿದಿಲ್ಲ ಎಂದು ಹೇಳಿದರು.

ಭಾರತದಲ್ಲಿ ಒಂದೇ ರೀತಿಯ ಆಹಾರವನ್ನು ಇಷ್ಟ ಎಂದು ಆರಿಸುವುದು ತುಂಬಾ ಕಷ್ಟ. ನನಗೆ ಧೋಕ್ಲಾ, ಕೊಹ್ಲಾಪುರದ ಬಾಸುಂಧಿ, ಪುಣೆಯ ಶ್ರೀಖಂಡ್, ಕೋಲ್ಕತ್ತಾದ ಸಂದೇಶ್, ರಾಜಸ್ಥಾನದ ಜಿಲೇಬಿ, ತ್ರಿಪುರಾದ ಅನಾನಸ್​, ಕಾಶ್ಮೀರದ ದಮ್​ ಆಲೂ. ಈ ಪಟ್ಟಿಗೆ ಅಂತ್ಯವಿಲ್ಲ ಎಂದು ಹೇಳಿದರು.

ಬಾಲ್ಯದಿಂದಲೂ ನಾನು ಹೊರಗಿದ್ದೆ, ಆದ್ದರಿಂದ ಅಡುಗೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿಲ್ಲ. ಆದರೆ ನಾನು ಉಪವಾಸ ಮಾಡುವುದಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ನಾನು ಹೋಟೆಲ್‌ಗೆ ಊಟಕ್ಕೆ ಹೋಗುವುದಿಲ್ಲ. ನಾನು ಅನ್ನ, ಪರೋಟಾ, ದಾಲ್, ಮತ್ತು ಸಬ್ಜಿ ಮಾಡುತ್ತೇನೆ ಎಂದು ತಿಳಿಸಿದರು.

ನನ್ನ ಪತಿ ನಾರಾಯಣ ಮೂರ್ತಿ ಅವರು ಸಿಹಿತಿಂಡಿಗಳಿಂದ ದೂರ. ಆದರೆ ನಾನು ಎಲ್ಲಾ ರೀತಿಯ ಸಿಹಿತಿಂಡಿಗಳನ್ನು ಪ್ರೀತಿಸುತ್ತೇನೆ. ಅವರು ಆಹಾರಪ್ರಿಯನಲ್ಲ. ಆದರೆ ಅವರಿಗೆ ಮೈಸೂರು ಶೈಲಿಯ ಬೈಂಗನ್ ಇಷ್ಟ. ನಾನು ತಯಾರಿಸುವ ಬಿಸಿಬೆಳ್ಳೆ ಬಾತ್ ಕೂಡ ಅವರಿಗೆ ಇಷ್ಟ ಎಂದು ಇದೇ ವೇಳೆ ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ