logo
ಕನ್ನಡ ಸುದ್ದಿ  /  ಜೀವನಶೈಲಿ  /  Success Story: ಟಿಸಿಎಸ್‌ ಮಾಜಿ ಉದ್ಯೋಗಿಗೆ ರತನ್‌ ಟಾಟಾ ಸಹಾಯ ಹಸ್ತ, 10 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಮಿತ್‌ ಜೈನ್‌ ಯಶೋಗಾಥೆ ಓದಿ

Success Story: ಟಿಸಿಎಸ್‌ ಮಾಜಿ ಉದ್ಯೋಗಿಗೆ ರತನ್‌ ಟಾಟಾ ಸಹಾಯ ಹಸ್ತ, 10 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಮಿತ್‌ ಜೈನ್‌ ಯಶೋಗಾಥೆ ಓದಿ

Praveen Chandra B HT Kannada

Aug 10, 2023 06:45 AM IST

google News

ಟಿಸಿಎಸ್‌ ಮಾಜಿ ಉದ್ಯೋಗಿಗೆ ರತನ್‌ ಟಾಟಾ ಸಹಾಯ ಹಸ್ತ, 10 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಮಿತ್‌ ಜೈನ್‌ ಯಶೋಗಾಥೆ

    • Success Story of Amit Jain: ಕಾರ್‌ದೇಖೋ ಕಂಪನಿಯು ಈಗ 10 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿ. ಈ ಕಂಪನಿ ಕಟ್ಟಿ ಬೆಳೆಸಿದ ಅಮಿತ್‌ ಜೈನ್‌ಗೆ ಟಾಟಾ ಸನ್ಸ್‌ನ ಮುಖ್ಯಸ್ಥ ರತನ್‌ ಟಾಟಾ ಸಹಾಯ ಮಾಡಿದ್ದರು.
ಟಿಸಿಎಸ್‌ ಮಾಜಿ ಉದ್ಯೋಗಿಗೆ ರತನ್‌ ಟಾಟಾ ಸಹಾಯ ಹಸ್ತ, 10 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಮಿತ್‌ ಜೈನ್‌ ಯಶೋಗಾಥೆ
ಟಿಸಿಎಸ್‌ ಮಾಜಿ ಉದ್ಯೋಗಿಗೆ ರತನ್‌ ಟಾಟಾ ಸಹಾಯ ಹಸ್ತ, 10 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಅಮಿತ್‌ ಜೈನ್‌ ಯಶೋಗಾಥೆ

ಜೀವನದಲ್ಲಿ ಯಶಸ್ಸು ಪಡೆಯಲು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಇರಬೇಕು. ಜಗತ್ತಿನಲ್ಲಿರುವ ಹಲವು ಯಶಸ್ವಿ ಕಂಪನಿಗಳನ್ನು ಅವಲೋಕಿಸಿದರೆ ಆ ಕಂಪನಿಗಳನ್ನು ಕಟ್ಟಿ ಬೆಳೆಸಿದವರ ಕತೆಗಳು ಕಾಣಿಸುತ್ತವೆ. ಬಹುತೇಕ ಕಂಪನಿಗಳು ಸಾಕಷ್ಟು ಪರಿಶ್ರಮ, ವೈಫಲ್ಯ, ಸಂಕಷ್ಟಗಳನ್ನು ಅನುಭವಿಸಿ ಮೇಲೆದ್ದು ಬಂದಿವೆ. ಕರ್ನಾಟಕದಲ್ಲಿಯೂ ಹಲವು ಸ್ಟಾರ್ಟಪ್‌ಗಳು ಈಗ ದೊಡ್ಡ ಮಟ್ಟದ ಉದ್ಯಮವಾಗಿ ಬೆಳೆದಿದೆ. ಕರ್ನಾಟಕದಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್‌ ಈಗ ಭಾರತದ ಪ್ರಮುಖ ಇ-ಕಾಮರ್ಸ್‌ ಕಂಪನಿಯಾಗಿದೆ. ಇದೇ ರೀತಿ ಹಲವು ಸಕ್ಸಸ್‌ ಸ್ಟೋರಿಗಳು ಸಿಗುತ್ತವೆ. ಇಂದು ಈಗ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ನೀವು ಓದುತ್ತಿರುವ ಸಕ್ಸಸ್‌ ಸ್ಟೋರಿ ಅಮಿತ್‌ ಜೈನ್‌ ಎಂಬವರದ್ದು. ಅವರು ಕಟ್ಟಿದ ಬೃಹತ್‌ ಕಂಪನಿಯ ಹೆಸರು ಕಾರ್‌ದೇಖೋ.ಕಾಂ.

CarDekho ಎಂಬ ಕಂಪನಿಯ ಯಶಸ್ಸಿನ ಕತೆ

ದೇಶದಲ್ಲಿ ಬಹುತೇಕರು ಕಾರ್‌ದೇಖೋ ಎಂಬ ಹೆಸರು ಕೇಳಿರಬಹುದು. ಬ್ರಾಂಡೆಡ್‌ ಮತ್ತು ದುಬಾರಿ ಕಾರುಗಳನ್ನು ಅತ್ಯುತ್ತಮ ದರಕ್ಕೆ ಖರೀದಿಸಲು ನೆರವು ನೀಡುವ ಸಂಸ್ಥೆ. ಈ ವೆಬ್‌ಸೈಟ್‌ನಲ್ಲಿ ವಾಹನೋದ್ಯಮಕ್ಕೆ ಸಂಬಂಧಪಟ್ಟ ಹಲವು ಸೇವೆಗಳಿವೆ. ಅಂದಹಾಗೆ, ಈ ಅಮಿತ್‌ ಜೈನ್‌ ಯಶಸ್ಸಿಗೆ ರತನ್‌ ಟಾಟಾ ಕೊಡುಗೆಯೂ ಇದೆ. ರತನ್‌ ಟಾಟಾ ನಾಯಕತ್ವದಡಿ ಇವರು ಕೆಲಸ ಮಾಡಿದ್ದರು. ಬಳಿಕ ರತನ್‌ ಟಾಟಾ ಇವರಿಗೆ ಸಹಾಯ ಹಸ್ತವೂ ನೀಡಿದ್ದರು.

ಅಮಿತ್‌ ಜೈನ್‌ ಅವರು ಕಾರ್‌ ದೇಖೋ ಎಂಬ ಪ್ರಮುಖ ವಾಹನ ಮಾರಾಟ ವೆಬ್‌ಸೈಟ್‌ನ ಸಿಇಒ ಮತ್ತು ಸ್ಥಾಪಕರು. ಇವರು ಐಐಟಿ ದೆಹಲಿ ಅಂದರೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪದವೀಧರ. ಇವರು ಆರಂಭಿಕ ಶಿಕ್ಷಣವನ್ನು ಜೈಪುರದಲ್ಲಿ ಕಲಿತಿದ್ದರು. ಇವರು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌)ನ ಉದ್ಯೋಗಿಯಾಗಿದ್ದರು. ಹಲವು ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಉದ್ಯೋಗ ಮಾಡಿದ ಬಳಿಕ ಇವರು ಬೇರೆ ಕಂಪನಿಗಳಿಗೂ ಸೇರಿದ್ದರು. ಹಲವು ಐಟಿ ಮತ್ತು ಸಾಫ್ಟ್‌ವೇರ್‌ ಕಂಪನಿಗಳಲ್ಲಿ ದುಡಿದರು. ಈ ಸಂದರ್ಭದಲ್ಲಿ ನಾನೇ ಏಕೆ ಸ್ವಂತ ಕಂಪನಿ ಆರಂಭಿಸಬಾರದು ಎಂದೆನಿಸಿದೆ.

ಅಮಿತ್‌ ಜೈನ್‌ ಯಶೋಗಾಥೆ

ತನ್ನ ಸಹೋದರ ಅನುರಾಜ್‌ ಜೈನ್‌ ಜತೆ ಸೇರಿ ಅಮಿತ್‌ ಜೈನ್‌ ಹೊಸ ಸ್ಟಾರ್ಟಪ್‌ ಆರಂಭಿಸಿದರು. ಇವರು ಗಿರ್ನರ್‌ಸಾಫ್ಟ್‌ ಎಂಬ ಐಟಿ ಕಂಪನಿಯನ್ನು ಆರಂಭಿಸಿದರು. ಈ ಕಂಪನಿ ತುಸು ಯಶಸ್ಸು ಕಂಡಿತು. ಬಳಿಕ ಅಮಿತ್‌ ಜೈನ್‌ ಅವರಿಗೆ ಕಾರ್‌ದೇಖೋ ಎಂಬ ಕಂಪನಿ ಸ್ಥಾಪಿಸಬೇಕೆಂದನಿಸಿತು. ಆರಂಭಿಸಿದರು. ಆದರೆ, ಆರಂಭಿಕ ವರ್ಷಗಳಲ್ಲಿಅಂದುಕೊಂಡಂತಹ ಯಶಸ್ಸು ದೊರಕಲಿಲ್ಲ. ಹಲವು ವೈಫಲ್ಯಗಳು ಎದುರಾದವು. 2008ರಲ್ಲಿ ಆರಂಭವಾದ ಈ ಕಂಪನಿಯು ಹೆಚ್ಚು ಪ್ರಚಾರಕ್ಕೆ 2010ರ ಬಳಿಕ ಬಂತು.

2014ರಲ್ಲಿ ಕಾರ್‌ದೇಖೋ ಕಂಪನಿಗೆ ಹಾಂಕಾಂಗ್‌ ಮೂಲದ ಕಂಪನಿಯಿಂದ ಫಂಡ್‌ ದೊರಕಿತು. ಈ ಕಂಪನಿಯು 414 ಕೋಟಿ ರೂಪಾಯಿ ಹೂಡಿಕೆ ಮಾಡಿತು. ಬಳಿಕ ಈ ಕಂಪನಿ ಇನ್ನಷ್ಟು ಫೇಮಸ್‌ ಆಯಿತು. ಇದೇ ಸಂದರ್ಭದಲ್ಲಿ ಟಾಟಾ ಸನ್ಸ್‌ ಚೇರ್ಮನ್‌ ರತನ್‌ ಟಾಟಾ ಅವರ ಗಮನವನ್ನೂ ಈ ಕಂಪನಿ ಸೆಳೆಯಿತು. ರತನ್‌ ಟಾಟಾ ಅವರು ಅಮಿತ್‌ ಜೈನ್‌ ಅವರ ಕಾರ್‌ದೇಖೋ ಕಂಪನಿಗೆ ಹೂಡಿಕೆ ಮಾಡಿದ್ದರು. ಆದರೆ, ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವುದು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ದೊಡ್ಡ ಮೊತ್ತದ ಹೂಡಿಕೆ ಮಾಡಿರುವುದು ಖಾತ್ರಿ. ಬಳಿಕ ಕಾರ್‌ದೇಖೋ ಹೆಚ್ಚು ವೇಗ ಪಡೆಯಿತು. ಹೆಚ್ಚಿನ ಯಶಸ್ಸು ಪಡೆಯಿತು.

ವರದಿಗಳ ಪ್ರಕಾರ ಕಾರ್‌ದೇಖೋ ಕಂಪನಿಯ ಒಟ್ಟು ಮೌಲ್ಯ ಈಗ 120 ಕೋಟಿ ಡಾಲರ್‌ಗೂ ಹೆಚ್ಚು. ಅಂದರೆ, ಈಗ ಇದು ಸುಮಾರು 10 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿ. ಈಗ ಕಾರ್‌ದೇಖೋ ಕಂಪನಿಗೆ ಹಲವು ರೆಕ್ಕೆಗಳಿವೆ. ಅಂದರೆ, ಬೈಕ್‌ದೇಖೋ, ಕಾಲೇಜ್‌ದೇಖೋ ಇತ್ಯಾದಿ ಹಲವು ಕಂಪನಿಗಳನ್ನು ಇದು ಹೊಂದಿದೆ. ಒಟ್ಟಾರೆ, ದೇಶದ ಪ್ರಮುಖ ಉದ್ಯಮಿಗಳ ಸಾಲಿಗೆ ಸೇರಿರುವ ಅಮಿತ್‌ ಜೈನ್‌ ಯಶೋಗಾಥೆಯು ಯಶಸ್ಸು ಪಡೆಯಲು ಬಯಸುವವರಿಗೆ ಸ್ಪೂರ್ತಿದಾಯಕ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ